ಕರ್ನಾಟಕ ಹವಾಮಾನ: ಬಾಗಲಕೋಟೆ, ಕಲಬುರಗಿಯಲ್ಲಿ ಉಷ್ಣಾಂಶದಲ್ಲಿ ಏರಿಕೆ, ಹಿನ್ನೀರ ಊರಲ್ಲಿ ಫೆಬ್ರವರಿ ಮೊದಲ ವಾರದಲ್ಲೇ ಪ್ರಖರ ಬಿಸಿಲು
Karnataka Weather: ಕರ್ನಾಟಕದಲ್ಲಿ ಫೆಬ್ರವರಿಯಲ್ಲಿ ಬಿಸಿಲ ಪ್ರಮಾಣ ಏರುತ್ತಿದೆ. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯ ಮುನ್ಸೂಚನೆಯಂತೂ ಕಾಣುತ್ತಿದೆ.

Karnataka Weather: ಕರ್ನಾಟಕದಲ್ಲಿ ಬೇಸಿಗೆಯ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಬಿಸಿಲು ಕಂಡು ಬಂದಿದೆ. ಒಂದೇ ದಿನದಲ್ಲಿ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಬಾಗಲಕೋಟೆಯಲ್ಲಿ ಏರಿಕೆಯಾಗಿದೆ. ಆಲಮಟ್ಟಿ ಜಲಾಶಯ ಹಿನ್ನೀರಿನ ಬಾಗಲಕೋಟೆ ನಗರದಲ್ಲಿ ಈ ಬಾರಿ ಬಿಸಿಲು ಮತ್ತಷ್ಟು ಹೆಚ್ಚುವ ಸೂಚನೆಯಂತೂ ಇದೆ. ಅದೇ ರೀತಿ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲೂ ಉಷ್ಣಾಂಶದಲ್ಲಿ ಇನ್ನಷ್ಟು ಹೆಚ್ಚಳವಾಗಿ ಆ ಜಿಲ್ಲೆಯಲ್ಲೂ ಬಿಸಿಲಿನ ಪ್ರಮಾಣ ಎರಡು ದಿನದಲ್ಲಿಯೇ ಸಾಮಾನ್ಯಕ್ಕಿಂತ ಕೊಂಚ ಹೆಚ್ಚು ಇರುವುದು ಕಂಡು ಬಂದಿದೆ. ಕರಾವಳಿ, ಮಧ್ಯ ಕರ್ನಾಟಕ, ದಕ್ಷಿಣ ಕರ್ನಾಟಕದ ಹಲವು ಭಾಗದಲ್ಲೂ ಬಿಸಿಲ ಪ್ರಖರತೆ ನಿಧಾನವಾಗಿ ಏರಿಕೆ ಕಾಣುತ್ತಿದೆ. ಬೆಂಗಳೂರಿನಲ್ಲೂ ಚಳಿ ಪ್ರಮಾಣ ತಗ್ಗಿ ಬಿಸಿಲ ಅನುಭವ ಆಗುತ್ತಿದೆ.
ಎಲ್ಲೆಲ್ಲಿ ಹೆಚ್ಚುತಿದೆ ಉಷ್ಣಾಂಶ
ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿಯೇ ಸಾಮಾನ್ಯಕ್ಕಿಂತ ಸುಮಾರು 6.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾಗಿದೆ. ಭಾನುವಾರದಂದು ಬಾಗಲಕೋಟೆಯಲ್ಲಿ 36.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅದೇ ರೀತಿ ಕಲಬುರಗಿಯಲ್ಲೂ ಒಂದೇ ದಿನದಲ್ಲಿ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ. ಇಲ್ಲಿಯೂ ಸಾಮಾನ್ಯಕ್ಕಿಂತ 3.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಿದೆ.
ಬೆಳಗಾವಿ ನಗರದಲ್ಲಿ ಉಷ್ಣಾಂಶ ಪ್ರಮಾಣ32.5 ಡಿಗ್ರಿ ಸೆಲ್ಸಿಯಸ್,
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಉಷ್ಣಾಂಶ ಪ್ರಮಾಣ 34 ಡಿಗ್ರಿ ಸೆಲ್ಸಿಯಸ್,
ಬೀದರ್‌ನಲ್ಲಿ ಉಷ್ಣಾಂಶ ಪ್ರಮಾಣ 33.4 ಡಿಗ್ರಿ ಸೆಲ್ಸಿಯಸ್,
ವಿಜಯಪುರದಲ್ಲಿ ಉಷ್ಣಾಂಶ ಪ್ರಮಾಣ 34.2 ಡಿಗ್ರಿ ಸೆಲ್ಸಿಯಸ್,
ಧಾರವಾಡ ನಗರದಲ್ಲಿ ಉಷ್ಣಾಂಶ ಪ್ರಮಾಣ 33.4 ಡಿಗ್ರಿ ಸೆಲ್ಸಿಯಸ್,
ಗದಗ ನಗರದಲ್ಲಿ ಉಷ್ಣಾಂಶ ಪ್ರಮಾಣ 34.4 ಡಿಗ್ರಿ ಸೆಲ್ಸಿಯಸ್,
ಹಾವೇರಿಯಲ್ಲಿ ಉಷ್ಣಾಂಶ ಪ್ರಮಾಣ 34 ಡಿಗ್ರಿ ಸೆಲ್ಸಿಯಸ್,
ಕಲಬುರಗಿ ನಗರದಲ್ಲಿ ಉಷ್ಣಾಂಶ ಪ್ರಮಾಣ 36.4 ಡಿಗ್ರಿ ಸೆಲ್ಸಿಯಸ್,
ಕೊಪ್ಪಳ ನಗರದಲ್ಲಿ ಉಷ್ಣಾಂಶ ಪ್ರಮಾಣ 33.4 ಡಿಗ್ರಿ ಸೆಲ್ಸಿಯಸ್,
ರಾಯಚೂರಿನಲ್ಲಿ ಉಷ್ಣಾಂಶ ಪ್ರಮಾಣ 34.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದಕ್ಷಿಣದಲ್ಲೂ ಏರಿಕೆ
ಕರ್ನಾಟಕದ ಕರಾವಳಿ ಭಾಗ, ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಕೆಲವು ಕಡೆಗಳಲ್ಲಿ ಉಷ್ಣಾಂಶ ಹೆಚ್ಚಿದೆ
ಚಾಮರಾಜನಗರದಲ್ಲಿ ಉಷ್ಣಾಂಶ ಪ್ರಮಾಣ 32.9 ಡಿಗ್ರಿ ಸೆಲ್ಸಿಯಸ್,
ಚಿಕ್ಕಮಗಳೂರು ನಗರದಲ್ಲಿ ಉಷ್ಣಾಂಶ ಪ್ರಮಾಣ 29.4 ಡಿಗ್ರಿ ಸೆಲ್ಸಿಯಸ್,
ಚಿತ್ರದುರ್ಗದಲ್ಲಿ ಉಷ್ಣಾಂಶ ಪ್ರಮಾಣ 33.5 ಡಿಗ್ರಿ ಸೆಲ್ಸಿಯಸ್,
ದಾವಣಗೆರೆ ನಗರದಲ್ಲಿ ಉಷ್ಣಾಂಶ ಪ್ರಮಾಣ 34.2 ಡಿಗ್ರಿ ಸೆಲ್ಸಿಯಸ್,
ಹಾಸನ ನಗರದಲ್ಲಿ ಉಷ್ಣಾಂಶ ಪ್ರಮಾಣ 31.8 ಡಿಗ್ರಿ ಸೆಲ್ಸಿಯಸ್,
ಚಿಂತಾಮಣಿ ನಗರದಲ್ಲಿ ಉಷ್ಣಾಂಶ ಪ್ರಮಾಣ 31.6 ಡಿಗ್ರಿ ಸೆಲ್ಸಿಯಸ್,
ಮಂಡ್ಯದಲ್ಲಿ ಉಷ್ಣಾಂಶ ಪ್ರಮಾಣ 32.6 ಡಿಗ್ರಿ ಸೆಲ್ಸಿಯಸ್,
ಮಡಿಕೇರಿಯಲ್ಲಿ ಉಷ್ಣಾಂಶ ಪ್ರಮಾಣ 32.2 ಡಿಗ್ರಿ ಸೆಲ್ಸಿಯಸ್,
ಮೈಸೂರು ನಗರದಲ್ಲಿ ಉಷ್ಣಾಂಶ ಪ್ರಮಾಣ 32.6 ಡಿಗ್ರಿ ಸೆಲ್ಸಿಯಸ್,
ಶಿವಮೊಗ್ಗದ ಆಗುಂಬೆಯಲ್ಲಿ ಉಷ್ಣಾಂಶ ಪ್ರಮಾಣ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕರಾವಳಿಯ ಕಾರವಾರದಲ್ಲಿ ಉಷ್ಣಾಂಶ ಪ್ರಮಾಣ 34.6 ಡಿಗ್ರಿ ಸೆಲ್ಸಿಯಸ್,
ಹೊನ್ನಾವರದಲ್ಲಿ 34.3 ಡಿಗ್ರಿ ಸೆಲ್ಸಿಯಸ್
ಮಂಗಳೂರು ವಿಮಾನ ನಿಲ್ದಾಣದಲ್ಲಿ 34.5 ಡಿಗ್ರಿ ಸೆಲ್ಸಿಯಸ್
ಮಂಗಳೂರಿನ ಪಣಂಬೂರಿನಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರು ಹವಾಮಾನ
ಬೆಂಗಳೂರು ನಗರದಲ್ಲೂ ಉಷ್ಣಾಂಶದಲ್ಲಿ ಏರಿಳಿತವಿದೆ. ಬೆಂಗಳೂರಿನಲ್ಲಿ ಮುಖ್ಯವಾಗಿ ಶುಭ್ರ ಆಕಾಶ ಕಂಡು ಬರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜಿನ ವಾತಾವರಣ ಇರಲಿದೆ. ಎರಡು ದಿನಗಳವರೆಗೆ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವು 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
