ಕನ್ನಡ ಸುದ್ದಿ  /  Karnataka  /  Karnataka Weather Today Cyclone Mocha Effect Thunderstorms Light Rain Imd Bengaluru May 7 Alert Pcp

Karnataka Rain: ಚುನಾವಣೆ ಬಿಸಿಯ ನಡುವೆ ಕರ್ನಾಟಕದ ವಿವಿಧೆಡೆ ಇಂದು ಗುಡುಗು ಮಿಂಚು ಸಹಿತ ಮಳೆ, ಓದಿ ಇಂದಿನ ಹವಾಮಾನ ವರದಿ

ಹವಾಮಾನ ಇಲಾಖೆ (IMD)ಯ ಬೆಂಗಳೂರು ವಿಭಾಗವು (Met Centre Bengaluru) ಇಂದಿನ ಹವಾಮಾನ ವರದಿ (IMD weather forecast karnataka) ಪ್ರಕಟಿಸಿದೆ. ಇಂದು ರಾಜ್ಯದ ಬಹುತೇಕ ಕಡೆಗಳಲ್ಲಿ ಹಗುರ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇಂದಿನ ಹವಾಮಾನ ವರದಿ
ಇಂದಿನ ಹವಾಮಾನ ವರದಿ

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಅಬ್ಬರ(Karnataka Election) ಜೋರಾಗಿದ್ದು, ಇದೇ ಸಮಯದಲ್ಲಿ ಬಂಗಾಳಕೊಳ್ಳಿಯಲ್ಲಿ ಮೋಚಾ ಚಂಡಮಾರುತದ ಅಬ್ಬರವೂ ಹೆಚ್ಚಾಗಿದೆ. ಚುನಾವಣಾ ಬಿಸಿಯ ನಡುವೆ ಇಂದು ಕೂಡ ರಾಜ್ಯದ ವಿವಿಧೆಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಭಾರತದ ಹವಾಮಾನ ಇಲಾಖೆ (IMD)ಯ ಬೆಂಗಳೂರು ವಿಭಾಗವು (Met Centre Bengaluru) ಇಂದಿನ ಹವಾಮಾನ ವರದಿ (IMD weather forecast karnataka) ಪ್ರಕಟಿಸಿದ್ದು, ರಾಜ್ಯದ ಬಹುತೇಕ ಕಡೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕಳೆದ ಕೆಲವು ದಿನಗಳಿಂದ ಬೆಂಗಳೂರು (Bengaluru Rain) ಸೇರಿದಂತೆ ವಿವಿಧೆಡೆ ಸತತ ಮಳೆಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಒಣಹವೆ ಇದ್ದ ಕರಾವಳಿ ಪ್ರದೇಶಗಳಲ್ಲಿಯೂ ಒಂದೆರಡು ಮಳೆಯಾಗಿದ್ದು, ಕಾದ ನೆಲ ತುಸು ತಂಪಾಗಿದೆ. ಹವಾಮಾನ ಇಲಾಖೆಯ ಇಂದಿನ ಮುನ್ಸೂಚನೆ ಪ್ರಕಾರ ಇಂದು ಬಿಸಿಲ ಬೇಗೆಯಲ್ಲಿರುವ ರಾಜ್ಯದ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿ ಹವಾಮಾನ ವರದಿ (Mangaluru Rain)

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆಯಾಗಲಿದೆ. ಮೇ 10ರವರೆಗೆ ಕರಾವಳಿಯ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ ಪ್ರಕಾರ, ಉತ್ತರ ಒಳನಾಡಿನ ಅಲ್ಲಲ್ಲಿ ಹಗುರ/ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೀದರ್‌, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ರಾಯಚೂರು, ಕೊಪ್ಪಳ ಸೇರಿದಂತೆ ಉತ್ತರ ಒಳನಾಡಿನ ಉಳಿದೆಡೆ ಹಗುರ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನಲ್ಲಿ ಮಳೆ ನಿರೀಕ್ಷೆ

ಇಂದು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಹಗುರ/ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರಗಳಲ್ಲಿ ಗುಡುಗು ಮಿಂಚು ಸಹಿತ ಹಗುರ ಸಾಧಾರಣ ಮಳೆಯಾಗಲಿದೆ.

ಮೇ 7 ರವರೆಗೆ ಪಂಜಾಬ್ ಮತ್ತು ಹರಿಯಾಣದ ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮೇ 7 ಮತ್ತು 8 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ. ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಮೋಚಾ - ಸೈಕ್ಲೋನಿಕ್ ಚಂಡಮಾರುತದ ರಚನೆಯ ಬಗ್ಗೆ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ. ಇದರಿಂದ ಮೇ 7 ಮತ್ತು ಮೇ 9 ರ ನಡುವೆ ದೇಶದ ಪೂರ್ವ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

IPL_Entry_Point