ಕನ್ನಡ ಸುದ್ದಿ  /  Karnataka  /  Karnataka Weather Today For 1st March 2024 Lowest Temperature Recorded In Sakkare Nadu Mandya On Thursday Rsm

Karnataka Weather Today: ಸಕ್ಕರೆ ನಾಡು ಮಂಡ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು; ಮುಂದಿನ 48 ಗಂಟೆಗಳ ಕಾಲ ಹವಾಮಾನ ಸ್ಥಿತಿಗತಿ ಹೀಗಿರಲಿದೆ

Karnataka Weather Today: ಕರ್ನಾಟಕ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ 48 ಗಂಟೆಗಳ ಕಾಲ ರಾಜ್ಯಾದ್ಯಂತ ಒಣ ಹವೆ ಮುಂದುವರೆಯಲಿದೆ. ಕೆಲವೆಡೆ ಮುಂಜಾನೆ ಮಂಜು ಮುಸುಕುವ ವಾತಾವರಣ ಇರಲಿದೆ. ಗುರುವಾರ, ರಾಜ್ಯದಲ್ಲಿ ಅತಿ ಕಡಿಮೆ ಉಷ್ಣಾಂಶ ಮಂಡ್ಯದಲ್ಲಿ ದಾಖಲಾಗಿದೆ.

ಮಾರ್ಚ್‌ 1 ಕರ್ನಾಟಕ ಹವಾಮಾನ ವರದಿ
ಮಾರ್ಚ್‌ 1 ಕರ್ನಾಟಕ ಹವಾಮಾನ ವರದಿ

ಬೆಂಗಳೂರು: ಬೇಸಿಗೆಯ ಬಿಸಿ ಜನರಿಗೆ ಅನುಭವವಾಗುತ್ತಿದೆ. ಚಳಿಗಾಲ ಕಳೆದು ಬೇಸಿಗೆ ಆರಂಭವಾಗಿದ್ದರೂ ಬೆಳ್ಳಂ ಬೆಳಗ್ಗೆ ಬಹಳ ಚಳಿ ಇದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಗುರುವಾರ, ಇಂದು (ಶುಕ್ರವಾರ) ಹಾಗೂ ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಹವಾಮಾನ ಹೀಗಿರಲಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

29 ಫೆಬ್ರವರಿ ಗುರುವಾರ ರಾಜ್ಯಾದ್ಯಂತ ಬಹುತೇಕ ಒಣಹವೆ ಇತ್ತು. ಯಾವುದೇ ಮಳೆಯ ಪ್ರಮಾಣ ವರದಿ ಆಗಿಲ್ಲ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ, ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ತಾಪಮಾನ 2.1 ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತ ಕಡಿಮೆ ಇದ್ದು ಗಮನಾರ್ಹವಾಗಿ ಏರಿಕೆ ಆಗಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 15.8 ಡಿಗ್ರಿ ಸೆಲ್ಸಿಯಸ್‌ ಸಕ್ಕರೆ ನಾಡು ಮಂಡ್ಯದಲ್ಲಿ ದಾಖಲಾಗಿದೆ.

ಮಾರ್ಚ್‌ 2 ರವರೆಗೆ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಮಾರ್ಚ್‌ 2, ಶನಿವಾರದವರೆಗೆ ಯಾವುದೇ ಮಳೆಯ ಮುನ್ಸೂಚನೆ ಇಲ್ಲ. ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ. ಮುಂದಿನ 24 ಗಂಟೆಗಳು ಗುಡುಗು ಮುನ್ನೆಚರಿಕೆ ಇಲ್ಲ. ಮುಂದಿನ 48ವರೆಗೂ ಮಳೆಯ ಮುನ್ನೆಚರಿಕೆ ಇಲ್ಲ. ರಾಜ್ಯಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಲಿಯಸ್ ಹೆಚ್ಚಾಗಿರುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿರುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳು ಮೀನುಗಾರರಿಗೆ ಯಾವುದೇ ಮುನ್ನೆಚರಿಕೆ ನೀಡಿಲ್ಲ.

ಮಾರ್ಚ್‌ 2 ವರೆಗೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಹವಾಮಾನ

ಮುಂದಿನ 24 ಗಂಟೆಗಳು ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜುಮುಸುಕುವ ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ. 3ನೇ ತಾರೀಖು ಭಾನುವಾರ ಕೂಡಾ ಇದೇ ಹವಾಮಾನ ಮುಂದುವರೆಯಲಿದೆ.