Karnataka Weather Today: ಮಾಘ ಮಾಸದ ಚಳಿಯೊಂದಿಗೆ ಹಲವೆಡೆ ಹೆಚ್ಚಿದ ತಾಪಮಾನ; ಕರ್ನಾಟಕದ ಇಂದಿನ ಹವಾಮಾನ ಹೀಗಿದೆ
Karnataka Weather Today: ರಾಜ್ಯದಲ್ಲಿ ಮಾಘ ಮಾಸದ ಚಳಿಯೊಂದಿಗೆ ಕೆಲವೆಡೆ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಹಾಗೂ ಒಣಹವೆ ಮುಂದುವರೆದಿದೆ. ರಾಜ್ಯದ ಸಮತಟ್ಟಾದ ಪ್ರದೆೇಶಗಳಲ್ಲಿಅತಿ ಕಡಿಮೆ ಕನಿಷ್ಠ ಉಷ್ಣಾಂಶ 13.2 ಡಿಗ್ರಿ ಸೆಲ್ಸಿಯಸ್ ಚಾಮರಾಜನಗರದಲ್ಲಿ ದಾಖಲಾಗಿದೆ.
ಬೆಂಗಳೂರು: ರಾಜ್ಯಾದ್ಯಂತ ಸೆಕೆಯ ಛಾಯೆ ಆವರಿಸುತ್ತಿದೆ. ಈ ನಡುವೆ ಮಾಘ ಮಾಸದ ಚಳಿ ಕೂಡಾ ಕಾಡುತ್ತಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 3ವರೆಗೆ ಬಿಸಿಲು ಹೆಚ್ಚಾಗಿದ್ದರೆ ಬೆಳಗ್ಗೆ ಹಾಗೂ ರಾತ್ರಿ ಮೈ ನಡುಗುವಷ್ಟು ಚಳಿಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಕಡೆಯೂ ಇದೇ ವಾತಾವರಣ ಇದೆ. ಫೆ 8, 9 ಹಾಗೂ ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಹವಾಮಾನ ಹೇಗಿರಲಿದೆ ನೋಡೋಣ.
ರಾಜ್ಯಾದ್ಯಂತ ಒಣಹವೆ
ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಫೆ 8 ಗುರುವಾರ ರಾಜ್ಯಾದ್ಯಂತ ಒಣ ಹವೆ ಇತ್ತು. ಯಾವುದೇ ಮಳೆಯ ಪ್ರಮಾಣ ವರದಿ ಆಗಿಲ್ಲ. ದಕ್ಷಿಣ ನಾಡಿನ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶ 2.1 ಡಿಸೆ ನಿಂದ 4.0 ಡಿಗ್ರಿ ಸೆಲ್ಸಿಯಸ್‌ಗೆ ಗಮನಾರ್ಹವಾಗಿ ಇಳಿಕೆ ಆಗಿದೆ. ಕರಾವಳಿಯ ಒಳನಾಡಿನ ಬಹುತೇಕ ಕಡೆಗಳಲ್ಲಿ -2.0 ಡಿಗ್ರಿ ಸೆಲ್ಸಿಯಸ್‌ನಿಂದ +2.0 ಡಿಗ್ರಿ ಸೆಲ್ಸಿಯಸ್ ಇದ್ದು ಹೆಚ್ಚಿನ ಬದಲಾವಣೆ ಆಗಿಲ್ಲ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ 4.1 ಡಿಗ್ರಿ ಸೆಲ್ಸಿಯಸ್ ಅಥವಾ ಕಡಿಮೆ ಇದ್ದು ಅತ್ಯಂತ ಗಮನಾರ್ಹವಾಗಿ ಏರಿಕೆ ಆಗಿದೆ. ರಾಜ್ಯದ ಸಮತಟ್ಟಾದ ಪ್ರದೆೇಶಗಳಲ್ಲಿಅತಿ ಕಡಿಮೆ ಕನಿಷ್ಠ ಉಷ್ಣಾಂಶ 13.2 ಡಿಗ್ರಿ ಸೆಲ್ಸಿಯಸ್ ಚಾಮರಾಜನಗರದಲ್ಲಿ ದಾಖಲಾಗಿದೆ.
ಮಳೆಯ ಮುನ್ಸೂಚನೆ
ಮುಂದಿನ 24 ಗಂಟೆಗಳು ಹಾಗೂ ಶನಿವಾರದವರೆಗೂ ಹವಾಮಾನ ಇಲಾಖೆಯು ರಾಜ್ಯದಲ್ಲಿ ಮಳೆಯ ಮುನ್ಸೂಚನೆ ನೀಡಿಲ್ಲ. ಗುಡುಗು ಮುನ್ನೆಚ್ಚರಿಕೆ ಕೂಡಾ ನೀಡಿಲ್ಲ. ಮೀನುಗಾರರಿಗೆ ಕೂಡಾ ಎಚ್ಚರಿಕೆ ನೀಡಿಲ್ಲ. ಮುಂದಿನ 48 ಗಂಟೆಗಳು ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂದ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಇಂದು ( ಫೆ 10) ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ
ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿದೆ.