Karnataka Weather: ಬೀದರ್‌, ದಾವಣಗೆರೆಯಲ್ಲಿ ಅತಿ ಕಡಿಮೆ ಉಷ್ಣಾಂಶ; ಬೆಂಗಳೂರಿನಲ್ಲಿ ಮುಂದುವರೆದ ಒಣಹವೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಬೀದರ್‌, ದಾವಣಗೆರೆಯಲ್ಲಿ ಅತಿ ಕಡಿಮೆ ಉಷ್ಣಾಂಶ; ಬೆಂಗಳೂರಿನಲ್ಲಿ ಮುಂದುವರೆದ ಒಣಹವೆ

Karnataka Weather: ಬೀದರ್‌, ದಾವಣಗೆರೆಯಲ್ಲಿ ಅತಿ ಕಡಿಮೆ ಉಷ್ಣಾಂಶ; ಬೆಂಗಳೂರಿನಲ್ಲಿ ಮುಂದುವರೆದ ಒಣಹವೆ

Karnataka Weather: ರಾಜ್ಯದಲ್ಲಿ ಕಳೆದ 2 ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಮುಂದಿನ 24 ಗಂಟೆಗಳ ಕಾಲ ಒಣ ಹವೆ ಇರಲಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ದಾವಣಗೆರೆ ಹಾಗೂ ಬೀದರ್‌ನಲ್ಲಿ ಅತಿ ಕಡಿಮೆ ಉಷ್ಣಾಂಶ 15.0 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಜನವರಿ 27, ಕರ್ನಾಟಕ ಹವಾಮಾನ ವರದಿ
ಜನವರಿ 27, ಕರ್ನಾಟಕ ಹವಾಮಾನ ವರದಿ

Karnataka Weather: ಜನರು ವೀಕೆಂಡ್‌ ಖುಷಿಯಲ್ಲಿದ್ದಾರೆ. ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಎರಡು ದಿನಗಳ ಕಾಲ ಜಾಲಿ ಟ್ರಿಪ್‌ ಮಾಡಲು ಕಾಯುತ್ತಿದ್ದಾರೆ. ಕೆಲವರಿಗೆ ಜನವರಿ 26 ರಿಂದ ಸತತವಾಗಿ 3 ದಿನಗಳ ಕಾಲ ರಜೆ ಇದೆ. ಹೊರಗೆ ಹೋಗಬೇಕು ಅಂತ ಪ್ಲ್ಯಾನ್‌ ಮಾಡುವವರು ಒಮ್ಮೆ ರಾಜ್ಯಾದ್ಯಂತ ಹವಾಮಾನ ಹೇಗಿದೆ ಅಂತ ತಿಳಿದುಕೊಳ್ಳಿ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮುಂದುವರೆದ ಒಣ ಹವೆ

ಬೆಂಗಳೂರಿನ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ ಒಣ ಹವೆ ಇತ್ತು. ಎಲ್ಲಿಯೂ ಮುಖ್ಯ ಮಳೆಯ ಪ್ರಮಾಣ ವರದಿಯಾಗಿಲ್ಲ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶದಲ್ಲಿ ಗಮನಾರ್ಹ ಇಳಿಕೆ ಕಂಡಿದೆ 2.1 ಡಿಗ್ರಿ ಸೆಲ್ಸಿಯಸ್‌ನಿಂದ 4.0 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿದಿದೆ. ಕರಾವಳಿ, ದಕ್ಷಿ, ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ 2.1 ಡಿಗ್ರಿ ಸೆಲ್ಸಿಯಸ್‌ನಿಂದ 4.0 ಡಿಗ್ರಿ ಸೆಲ್ಸಿಯಸ್‌ಗೆ ಗಮನಾರ್ಹವಾಗಿ ಏರಿಕೆ ಕಂಡಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 15.0 ಡಿಗ್ರಿ ಸೆಲ್ಸಿಯಸ್‌ ದಾವಣಗೆರೆ ಹಾಗೂ ಬೀದರ್‌ನಲ್ಲಿ ದಾಖಲಾಗಿದೆ.

ಮಳೆಯ ಮುನ್ಸೂಚನೆ ಇಲ್ಲ

ಮುಂದಿನ 48 ಗಂಟೆಗಳ ಕಾಲ ರಾಜ್ಯಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ಎಲ್ಲಿಯೂ ಗುಡುಗು ಮುನ್ನೆಚರಿಕೆ ಆಗಲೀ ಮಳೆಯಾಗಲೀ ಇಲ್ಲ. ಜೊತೆಗೆ ತಾಪಾಮಾನ ಮುನ್ಸೂಚನೆ ಕೂಡಾ ಇಲ್ಲ. ಭಾರತೀಯ ಹವಾಮಾನ ಇಲಾಖೆಯು ಮೀನುಗಾರರಿಗೆ ಕೂಡಾ ಮುನ್ನೆಚರಿಕೆ ನೀಡಿಲ್ಲ.

ಬೆಂಗಳೂರಿನಲ್ಲಿ ಹವಾಮಾನ ಹೇಗಿದೆ?

ಸಿಲಿಕಾನ್‌ ಸಿಟಿಯಲ್ಲಿ ಮುಂದಿನ 24 ಗಂಟೆಗಳು ನಿರ್ಮಲ ಆಕಾಶವಿರುತ್ತದೆ. ಕೆಲವೆಡೆ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಹೆಚ್ಚಾಗಿದೆ. ಗರಿಷ್ಠ ಉಷ್ಣಾಂಶ 30 ಹಾಗೂ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಹಾಗೇ ಮುಂದಿನ 48 ಗಂಟೆಯೂ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ.

(This copy first appeared in Hindustan Times Kannada website. To read more like this please logon to kannada.hindustantime.com)

Whats_app_banner