ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಉಡುಪಿ, ಕೊಡಗು, ಗದಗ, ಶಿವಮೊಗ್ಗ ಸಹಿತ 12 ಜಿಲ್ಲೆಗಳಲ್ಲಿಂದು ಭಾರೀ ಮಳೆ ಮುನ್ಸೂಚನೆ, ಬೆಂಗಳೂರಲ್ಲಿ ಸಾಧಾರಣ ಮಳೆ

Karnataka Rains: ಉಡುಪಿ, ಕೊಡಗು, ಗದಗ, ಶಿವಮೊಗ್ಗ ಸಹಿತ 12 ಜಿಲ್ಲೆಗಳಲ್ಲಿಂದು ಭಾರೀ ಮಳೆ ಮುನ್ಸೂಚನೆ, ಬೆಂಗಳೂರಲ್ಲಿ ಸಾಧಾರಣ ಮಳೆ

ಪೂರ್ವ ಮುಂಗಾರು( Pre Monsoon) ಕರ್ನಾಟಕದ ಕರಾವಳಿ. ಮಲೆನಾಡು. ಹಳೆಮೈಸೂರು,ಬೆಂಗಳೂರು,ಉತ್ತರ ಕರ್ನಾಟಕ ಭಾಗದಲ್ಲಿ ಮಂಗಳವಾರವೂ ಚುರುಕಾಗಿರಲಿದೆ.

ಬಳ್ಳಾರಿಯ ಬೆಳಗಿನ ವಾತಾವರಣ ಹೀಗಿದೆ
ಬಳ್ಳಾರಿಯ ಬೆಳಗಿನ ವಾತಾವರಣ ಹೀಗಿದೆ (ravikeerthi gowda)

ಬೆಂಗಳೂರು: ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರ ಮಂಗಳವಾರವೂ ಜೋರಾಗಿ ಇರಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ಪ್ರಾದೇಶಿಕ ಕೇಂದ್ರವು ನೀಡಿದೆ.ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಬಹುದು. ಸೋಮವಾರ ಸಹ ಕರ್ನಾಟಕದ ನಾನಾ ಭಾಗಗಳಲ್ಲಿ ಮಳೆ ಸುರಿದಿದೆ. ಮೈಸೂರು, ಚಿತ್ರದುರ್ಗ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ನೀರು ನುಗ್ಗಿ ಬೆಳೆಯೂ ಹಾನಿಯಾದ ವರದಿಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಎಲ್ಲೆಲ್ಲಿ ಮಳೆಯಾಗಲಿದೆ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯೂ ಆಗಲಿದೆ. ಇದಲ್ಲದೇ ಉತ್ತರ ಕನ್ನಡ ಜಿಲ್ಲೆಗಳ ಹಲವು ಕಡೆ ಗುಡುಗು ಸಹಿತ ಮಳೆ ಸುರಿಯಲಿದೆ.

ಈಗಾಗಲೇ ಒಂದು ವಾರದಿಂದ ಭಾರೀ ಮಳೆಯನ್ನೇ ಕಂಡಿರುವ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರೀ ಗಾಳಿಯೊಂದಿಗೆ ಮಳೆ ಮಂಗಳವಾರ ಬೀಳಲಿದೆ. ಶಿವಮೊಗ್ಗ, ಚಿತ್ರದುರ್ಗ, ಜಿಲ್ಲೆಗಳಲ್ಲೂ ಹೆಚ್ಚಿನ ಮಳೆಯಾಗುವ ಸನ್ನಿವೇಶವಿದೆ.

ಉತ್ತರ ಒಳನಾಡಿನ ಹಾವೇರಿ, ವಿಜಯಪುರ, ಧಾರವಾಡ, ಗದಗ, ದಕ್ಷಿಣ ಒಳನಾಡಿನ ದಾವಣಗೆರೆ, ವಿಜಯನಗರದ ಪ್ರತ್ಯೇಕ ಭಾಗಗಳಲ್ಲಿ ಗಂಟೆಗೆ 40-50 ಕಿ.ಮಿ.ವೇಗದಲ್ಲಿ ಗಾಳಿ ಬೀಸಲಿದ್ದು. ಗುಡುಗು ಸಹಿತ ಭಾರೀ ಮಳೆಯನ್ನೇ ತರಲಿದೆ. ಬಾಗಲಕೋಎ, ಬೆಳಗಾವಿ, ಬೀದರ್‌, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ ಸಾಧಾರಣ ಮಳೆಯಾಗಬಹುದು. ಬಳ್ಳಾರಿ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲೂ ಸಾಧಾರಣ ಮಳೆ ಸುರಿಯುವ ಮುನ್ಸೂಚನೆಯಿದೆ.

ಹಲವೆಡೆ ಸುರಿದ ಮಳೆ

ಸೋಮವಾರವೂ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅತ್ಯಧಿಕ 10 ಸೆ. ಮೀ ಸುರಿದಿದೆ. ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ಬೆಟ್ಟದ ಭಾಗದಲ್ಲಿ 8 ಸೆ.ಮೀ, ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ, ತುಮಕೂರು ಜಿಲ್ಲೆ ಶಿರಾ, ಚಿಕ್ಕಮಗಳೂರು ಜಿಲ್ಲೆ ಯಗಟಿಯಲ್ಲಿ 7 ಸೆ.ಮೀ ಮಳೆ ಸುರಿದಿದೆ.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ, ಬೆಂಗಳೂರಿನ ದೇವನಹಳ್ಳಿ, ಹಾಸನದ ಶ್ರವಣ ಬೆಳಗೊಳ, ಕೊಡಗಿನ ಭಾಗಮಂಡಲದಲ್ಲಿ ತಲಾ 6, ಸೆ.ಮೀ, ಉತ್ತರ ಕನ್ನಡದ ಕಿರವತ್ತಿ. ಮಂಗಳೂರು, ಬೆಂಗಳೂರಿನ ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್‌, ವಿಜಯನಗರದ ಹಗರಿಬೊಮ್ಮನಹಳ್ಳಿ, ಹಾಸನದ ಚನ್ನರಾಯಪಟ್ಟಣ, ಚಿತ್ರದುರ್ಗದ ಹೊಸದುರ್ಗ, ದಾವಣಗೆರೆಯಲ್ಲಿ ತಲಾ 5ಸೆ.ಮೀ, ಶಿವಮೊಗ್ಗ, ಅರಕಲಗೂಡು, ಬೆಂಗಳೂರು ನಗರದ ಕೆಲ ಭಾಗ, ಸಂತೆಬೆನ್ನೂರು, ಹರಪನಹಳ್ಳಿಯಲ್ಲಿ ತಲಾ 4, ಉತ್ತಡ ಕನ್ನಡದ ಸಿದ್ದಾಪುರ, ಮಂಕಿ, ದಕ್ಷಿಣ ಕನ್ನಡದ ಮಾಣಿ, ಪುತ್ತೂರು, ನಿಪ್ಪಾಣಿ, ಬರಗೂರು, ಸಂಡೂರು, ಹೊಸಕೋಟೆ, ಪರುಶರಾಂಪುರ, ಹಾರಂಗಿ,. ಗುಬ್ಬಿ, ಕೂಡ್ಲಿಗಿ, ಕೆಆರ್‌ಎಸ್‌ದಲ್ಲಿ ತಲಾ 3 ಸೆ.ಮೀ ಮಳೆಯಾಗಿದೆ.

ಸುಳ್ಯ, ಧರ್ಮಸ್ಥಳ, ಕದ್ರಾ, ಗೋಕಾಕ್‌, ಹಾವೇರಿ, ಹೊನ್ನಾಳಿ, ವೈ.ಎನ್‌.ಹೊಸಕೋಟೆ, ಕಳಸ, ಕಡೃು, ಚಾಮರಾಜಗರ, ಕುರಗೋಡು, ಎನ್‌,ಆರ್.ಪುರ. ಮಿಡಿಗೇಶಿ, ಹೊಸಪೇಟೆ, ಮೂಡಿಗೆರೆಯಲ್ಲಿ ತಲಾ ) 2 ಸೆ.ಮೀ, ಉಪ್ಪಿನಂಗಡಿ, ಹಳಿಯಾಳ, ಕುಮಟಾ. ಮುಂಡಗೋಡು, ಬೆಳಗಾವಿಯ ಸುತಗಟ್ಟಿ, ದೇವದುರ್ಗ, ಸಿಂಧನೂರು, ಕಲಬುರಗಿಯ ಮುಧೋಳೆ, ಬಾಗಲಕೋಟೆ, ಸಂಕೇಶ್ವರ, ಪಾವಗಡ, ಕಂಪ್ಲಿ, ಹಿರಿಯೂರು, ಬಳ್ಳಾರಿ, ಹಾಸನದ ಕೊಣನೂರು, ಹುಣಸೂರು, ತಿಪಟೂರು, ಅಜ್ಜಂಪುರ, ಮಧುಗಿರಿ, ಕೆಆರ್‌ಪೇಟೆ, ಕೊಟ್ಟೂರು, ಕೋಣಂದೂರು, ಮೈಸೂರು, ನಾಪೊಕ್ಲು, ಗೌರಿಬಿದನೂರು,ನಾಗಮಂಗಲ. ಕುಶಾಲನಗರ, ಮಾಗಡಿ. ಬೇಲೂರು, ವೀರಾಜಪೇಟೆಯಲ್ಲಿ ತಲಾ 1 ಸೆ.ಮೀ ಮಳೆಯಾಗಿದೆ.

ಮೀನುಗಾರರಿಗೆ ಸೂಚನೆ

ಕರಾವಳಿ ಭಾಗದಲ್ಲಿ ಭಾರೀ ಮಳೆ ಮುನ್ಸೂಚನೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿರುವುದರಿಂದ ಮೀನುಗಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕರ್ನಾಟಕದ ಕರಾವಳಿಯುದ್ದಕ್ಕೂ ಹಾಗೂ ಆಚೆಗೆ ಹೋಗಬಾರದು ಎಂದು ಹವಮಾನ ಇಲಾಖೆಯು ಸೂಚಿಸಿದೆ.

ಬೆಂಗಳೂರಲ್ಲಿ ಹೇಗೆ

ಬೆಂಗಳೂರು ನಗರದಲ್ಲಿ ಮಂಗಳವಾರ ಹಾಗೂ ಬುಧವಾರ ಮೋಡ ಕವಿದ ವಾತಾವರಣವಿರಲಿದೆ. ಹಗುರದಿಂದ ಸಾಧಾರಣ ಮಳೆ ಸುರಿಯುವ ಸೂಚನೆ ಯಿದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯೂ ಆಗಬಹುದು. ಗಾಳಿಯ ವೇಗವೂ ಕೆಲವೊಮ್ಮೆ ಜೋರಾಗಿ ಇರಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿದ್ದು. ಎರಡು ದಿನವೂ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಬಹುದು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024