Karnataka Rains: ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆ ಎಚ್ಚರಿಕೆ, ಬೆಂಗಳೂರು ಸಹಿತ ಇತರೆಡೆ ಸಾಧಾರಣ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆ ಎಚ್ಚರಿಕೆ, ಬೆಂಗಳೂರು ಸಹಿತ ಇತರೆಡೆ ಸಾಧಾರಣ

Karnataka Rains: ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆ ಎಚ್ಚರಿಕೆ, ಬೆಂಗಳೂರು ಸಹಿತ ಇತರೆಡೆ ಸಾಧಾರಣ

Weather Updates ಭಾನುವಾರದಂದು ಕರಾವಳಿ ಭಾಗದಲ್ಲಿ(Coastal Karnataka Rains) ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

ಕೇರಳದಲ್ಲಿನ  ಉತ್ತಮ  ಮಳೆಯಿಂದ ಕಪಿಲಾ ನದಿ( Kapila River) ಮೈಸೂರು ಭಾಗದಲ್ಲಿ ತುಂಬಿ ಹರಿಯುತ್ತಿದೆ.
ಕೇರಳದಲ್ಲಿನ ಉತ್ತಮ ಮಳೆಯಿಂದ ಕಪಿಲಾ ನದಿ( Kapila River) ಮೈಸೂರು ಭಾಗದಲ್ಲಿ ತುಂಬಿ ಹರಿಯುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರವೂ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು. ಯಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಇತರೆ ಭಾಗಗಳಲ್ಲೂ ಮಳೆಯಾದರೂ ಸಾಧಾರಣ ಮಳೆ ಸುರಿಯಬಹುದು. ಬೆಂಗಳೂರು ನಗರದಲ್ಲೂ ಸಾಧಾರಣ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( imd) ಬೆಂಗಳೂರು ಕೇಂದ್ರವು ತಿಳಿಸಿದೆ. ಭಾನುವಾರದಿಂದ ಸೋಮವಾರ ಬೆಳಗಿನವರೆಗೆ ಮಳೆಯ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರೀ ಮಳೆ ಸುರಿದಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹೇಗಿದೆ ಮಳೆ

ಭಾನುವಾರದಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ಗುಡುಗು ಸಹಿತ ಮಳೆಯೂ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯೂ ಆಗಲಿದೆ.

ಅದೇ ರೀತಿ ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆ ಗುಡುಗು ಸಹಿತ ಆಗಬಹುದು.

ಈ ವೇಳೆ ಗಾಳಿಯ ವೇಗವು 40 ರಿಂದ 50 ಕಿ.ಮಿ. ಆಸು ಪಾಸಿನಲ್ಲಿ ಇರಲಿದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ದಕ್ಷಿಣ ಭಾಗದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ಭಿನ್ನ ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ 40 ರಿಂದ 50 ಕಿ.ಮಿ. ವೇಗದಲ್ಲಿ ಸಂಚರಿಸಲಿದೆ. ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು,ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಬಹುದು, ಬೀದರ್‌. ಗದಗ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಬೆಂಗಳೂರು ನಗರದಲ್ಲೂ ಮಳೆ

ಬೆಂಗಳೂರು ನಗರ( Bangalore Rain) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನ ಮೋಡ ಕವಿದ ಆಕಾಶ ಇರಲಿದೆ. ಹಗುರದಿಂದ ಸಾಧಾರಣ ಮಳೆಯನ್ನು ನಿರೀಕ್ಷಿಸಬಹುದು. ಅಲ್ಲಲ್ಲಿ ಗುಡುಗು ಸಹಿತ ಮಳೆಯೂ ಸುರಿಯಬಹುದು. ಎರಡು ದಿನವೂ ಗರಿಷ್ಠ ಉಷ್ಣಾಂಶವು 32 ಡಿಗ್ರಿ ಸೆಲ್ಸಿಯಸ್‌ ಮತ್ತು 22 ಡಿಗ್ರಿ ಸೆಲ್ಸಿಯಸ್‌ ದಾಖಲಾಗಬಹುದು.

ಮುಲ್ಕಿಯಲ್ಲಿ ಭಾರೀ ಮಳೆ

ಈ ನಡುವೆ ಶುಕ್ರವಾರ ರಾತ್ರಿ ಹಾಗೂ ಶನಿವಾರವೂ ಕರ್ನಾಟಕದ ಹಲವೆಡೆ ಭಾರೀ ಮಳೆ ಸುರಿದಿದೆ. ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 19 ಸೆ.ಮೀ, ಉಡುಪಿಯಲ್ಲಿ 13 ಸೆ.ಮೀ ನಷ್ಟು ಮಳೆಯಾದ ವರದಿಯಾಗಿದೆ.

ಕೊಡಗಿನ ಕುಶಾಲನಗರದಲ್ಲಿ 10 ಸೆ.ಮೀ, ಚಿಕ್ಕಮಗಳೂರಿನ ಕಳಸದಲ್ಲಿ 9 ಸೆ.ಮೀ, ಮಂಗಳೂರು ನಗರ, ಮಂಗಳೂರಿನ ಪಣಂಬೂರು, ಉಡುಪಿಯ ಸಿದ್ದಾಪುರದಲ್ಲಿ ತಲಾ 8 ಸೆ.ಮೀ. ಶಿವಮೊಗ್ಗದ ಆಗುಂಬೆ, ಚಿಕ್ಕಮಗಳೂರಿನ ತರೀಕೆರೆ, ಶೃಂಗೇರಿ, ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ತಲಾ 7 ಸೆ. ಮೀ ಮಳೆಯಾಗಿದೆ.

ಇನ್ನು ದಕ್ಷಿಣ ಕನ್ನಡದ ಬೆಳ್ತಂಗಡಿ, ಮೈಸೂರಿನ ನಂಜನಗೂಡು, ತುಮಕೂರಿನ ಮಿಡಿಗೇಶಿ, ಚಿಕ್ಕಮಗಳೂರಿನ ಬಾಳೆ ಹೊನ್ನೂರಿನಲ್ಲಿ ತಲಾ 6, ಮಂಗಳೂರು ವಿಮಾನ ನಿಲ್ದಾಣ, ಉಡುಪಿಯ ಕೋಟ, ಚಿಕ್ಕಮಗಳೂರಿನ ಕೊಪ್ಪ,ಎನ್‌.ಆರ್.ಪುರ, ತುಮಕೂರಿನ ವೈ.ಎನ್‌.ಹೊಸಕೋಟೆ, ಬರಗೂರು, ಕಮ್ಮರಡಿ, ದೊಡ್ಡಬಳ್ಳಾಪುರ, ಚನ್ನಗಿರಿ, ಚನ್ನರಾಯಪಟ್ಟಣ, ಭದ್ರಾವತಿ, ಚಿತ್ರದುರ್ಗದ ವೀಕ್ಷಣಾಲಯದಲ್ಲಿ ತಲಾ 5 ಸೆ.ಮೀ ಮಳೆ ಸುರಿದಿದೆ. ಕುಂದಾಪುರ,ಹಾಸನ, ಚಿತ್ರದುರ್ಗದ ಪರುಶರಾಂಪುರ, ದಾವಣಗೆರೆಯಲ್ಲಿ ತಲಾ 4 ಸೆ.ಮೀ, ದಾವಣಗೆರೆ, ಉಪ್ಪಿನಂಗಡಿ, ಶಿರಾಟಿ, ಪುತ್ತೂರು, ಶ್ರವಣ ಬೆಳಗೊಳ, ಚಿಕ್ಕಬಳ್ಳಾಪುರ, ಪೊನ್ನಂಪೇಟೆ, ವೀರಾಜಪೇಟೆ, ನಾಪೊಕ್ಲು, ಹರಪನಹಳ್ಳಿ, ಶಿವಮೊಗ್ಗ, ಸಿರಾ, ಗುಬ್ಬಿ, ತಿಪಟೂರು, ಪಾವಗಡ, ಶ್ರೀರಂಗಪಟ್ಟಣ, ಬೆಳ್ಳೂರುಮ ಮೈಸೂರು, ಕೊಟ್ಟಿಗೆಹಾರ, ಹೊಸದುರ್ಗ, ಬೇಲೂರು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೆಸರಘಟ್ಟ, ಹುಂಚದಕಟ್ಟೆಯಲ್ಲಿ ತಲಾ 3 ಸೆ.ಮೀ ಮಳೆ ಸುರಿದಿದೆ.

ದಕ್ಷಿಣ ಕನ್ನಡದ ಮಾಣಿ, ಧರ್ಮಸ್ಥಳ, ಸಿಂಧನೂರು, ಜೇವರ್ಗಿ, ರಾಯಚೂರು ಜಾಲಹಳ್ಳಿ, ರಾಣೆಬೆನ್ನೂರು, ಶೋರಾಪುರ, ನೆಲೋಗಿ, ಮಂಠಾಳ, ಹಿರಿಯೂರು, ಹೊನ್ನಳಿ, ಕೆಆರ್‌ಪೇಟೆ, ಚಾಮರಾಜನಗರದ ಬೇಗೂರು, ಮಾಗಡಿ, ಮೂರ್ನಾಡು, ಬಿ.ದುರ್ಗ, ಅಜ್ಜಂಪುರ, ಎಚ್‌ ಡಿಕೋಟೆ, ಹುಣಸೂರು, ಕೆ.ಆರ್.ನಗರ, ಚಿಕ್ಕನಹಳ್ಳಿಯಲ್ಲಿ ತಲಾ 2 ಸೆ.ಮೀ, ಉತ್ತರ ಕನ್ನಡದ ಮಂಕಿ, ಮಾನ್ವಿ, ಕಲಬುರಗಿ, ಗುತ್ತಲ, ನಾರಾಯಣಪುರ, ಮಹಾಗೋವಾ, ಮುನಿರಾಬಾದ್‌, ಗಂಗಾವತಿ, ತೊಂಡೆಬಾವಿ, ಮದ್ದೂರು, ಭಾಗಮಂಡಲ, ಸಂತೇಬೆನ್ನೂರು, ಯಗಟಿ, ಮಂಡ್ಯ, ಅರಕಲಗೂಡು, ನಾಗಮಂಗಲ, ಕುಡುತಿನಿ, ಹಾಸನದ ಕೊಣನೂರಿನಲ್ಲಿ ತಲಾ 1 ಸೆ. ಮೀ ಮಳೆ ಯಾದ ವರದಿಯಾಗಿದೆ.

ರಾಯಚೂರಲ್ಲಿ ಬಿರು ಬಿಸಿಲು

ಮಳೆಯಿಂದಾಗಿ ಉತ್ತರ ಕನ್ನಡವೂ ಸೇರಿದಂತೆ ಹಲವು ಭಾಗದಲ್ಲಿ ಉಷ್ಣಾಂಶದ ಪ್ರಮಾಣ ಕುಸಿದಿದೆ. ಆದರೂ ರಾಯಚೂರಿನಲ್ಲಿ ಶನಿವಾರ 40 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಕಲಬುರಗಿ, ವಿಜಯಪುರ 38 ಡಿಗ್ರಿ ಸೆಲ್ಸಿಯಸ್‌

ಬಾಗಲಕೋಟೆ 37.6 ಡಿಗ್ರಿ ಸೆಲ್ಸಿಯಸ್‌

ಬೀದರ್‌ 36.5

ಗದಗ 36.2

ಕೊಪ್ಪಳ 36. 1

ಧಾರವಾಡ 32.6

ಹಾವೇರಿ 32

ಬೆಳಗಾವಿ 31

ಕಾರವಾರ 36.5

ಹೊನ್ನಾವರ 33.4

ಮಂಗಳೂರು ವಿಮಾನ ನಿಲ್ದಾಣ 30

ಆಗುಂಬೆ 27.9

ದಾವಣಗೆರೆ 35.5

ಚಿತ್ರದುರ್ಗ33

ಚಾಮರಾಜನಗರ 31.9

ಚಿಕ್ಕಮಗಳೂರು 27.4

ಶಿವಮೊಗ್ಗ 31.6

ಮಂಡ್ಯ 33

ಮೈಸೂರು 31.5

ಮಡಿಕೇರಿ 28.4.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner