Karnataka Weather Today: ಕರ್ನಾಟಕ ಹವಾಮಾನ: ಮುಂದಿನ ಆರು ದಿನಗಳ ಕಾಲ ಮೈಕೊರೆಯುವ ಚಳಿ, ವಿಪರೀತ ಥಂಡಿ
Karnataka Weather: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದು (ಜನವರಿ 25) ಒಣಹವೆ ಮುಂದುವರೆಯಲಿದೆ. ಆದರೆ ಬೆಳಿಗ್ಗೆ ಮತ್ತು ಸಂಜೆ ವೇಳೆ ಶೀತ ಗಾಳಿ ಹೆಚ್ಚಾಗಲಿದೆ. ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಚಳಿ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಒಣಹವೆ ಮುಂದುವರೆದಿದೆ. ಮಹಾ ಶಿವರಾತ್ರಿ ಹಬ್ಬ (ಫೆಬ್ರವರಿ 26) ಸಮೀಮಿಸುತ್ತಿದ್ದರೂ ಭೀಕರ ಚಳಿ ಮಾತ್ರ ತಗ್ಗಿಲ್ಲ. ಕಳೆದ ವರ್ಷದ ಮತ್ತು ಅದಕ್ಕೂ ಮುನ್ನ ಶಿವರಾತ್ರಿ ಹಬ್ಬಕ್ಕೂ ಮುನ್ನ ಚಳಿಯ ಪ್ರಮಾಣ ಬಹುತೇಕ ತಗ್ಗಿ ಸೆಕೆಯ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ, ಬಿಸಿಲಿನ ಪ್ರಮಾಣವೂ ಹೆಚ್ಚಾಗಿತ್ತು. ಆದರೀಗ ಬೆಳಿಗ್ಗೆ ಮತ್ತು ಸಂಜೆ ವೇಳೆ ಮೈಕೊರೆಯುವ ಚಳಿ ಹೆಚ್ಚಾಗುತ್ತಿದೆ. ಇಂದು (ಜನವರಿ 25) ಸೇರಿದಂತೆ ಮುಂದಿನ 6 ದಿನಗಳ ಕಾಲ ಮೈನಡುಗಿಸುವ ಥಂಡಿಯ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಿಗ್ಗೆ-ಸಂಜೆ ಇಬ್ಬನಿ ಕವಿದ ವಾತಾವರಣದಿಂದಾಗಿ ಚಳಿಗೆ ಜನರು ತತ್ತರಿಸಿದ್ದಾರೆ. ಮುಂಜಾನೆ ಆಗುತ್ತಿದ್ದಂತೆ ಬೆಂಕಿ ಶಾಕ ಮತ್ತು ಬಿಸಿಲಿನ ಮತ್ತು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ.
ಕರಾವಳಿ ಕರ್ನಾಟಕ ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಮುಂದಿನ ಎರಡು ದಿನಗಳ ಕಾಲ ರಾಜಧಾನಿ ಬೆಂಗಳೂರಿನಲ್ಲಿ ಆಕಾಶ ಶುಭ್ರವಾಗಿರಲಿದ್ದು, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಆದರೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗಗಳಲ್ಲಿ ಶೀತ ಗಾಳಿ ಹೆಚ್ಚಾಗಿರಲಿದೆ. ಇಬ್ಬನಿಯೂ ಇರಲಿದೆ. ಆದರೆ ಮಧ್ಯಾಹ್ನದ ವೇಳೆ ಬಿಸಿಲಿನ ವಾತಾವರಣ ನಿರ್ಮಾಣವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಪ್ರಮುಖ ಜಿಲ್ಲೆ, ನಗರಗಳಲ್ಲಿ ತಾಪಮಾನ (ಬೆಳಗ್ಗೆ 6 ಗಂಟೆಗೆ), ಆರ್ದ್ರತೆಯ ಮಟ್ಟ
ಬೆಂಗಳೂರು ನಗರ - ತಾಪಮಾನ 15 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 88
ಮಂಗಳೂರು - ತಾಪಮಾನ 21.5 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 67
ಚಿತ್ರದುರ್ಗ- ತಾಪಮಾನ 13.6 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 89
ಗದಗ - ತಾಪಮಾನ 12.3 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 66
ಹೊನ್ನಾವರ- ತಾಪಮಾನ 18 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 55
ಕಲಬುರಗಿ - ತಾಪಮಾನ 18.4 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 79
ಬೆಳಗಾವಿ - ತಾಪಮಾನ 17 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 68
ಕಾರವಾರ - ತಾಪಮಾನ 19.7 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 76
