ಕರ್ನಾಟಕ ಹವಾಮಾನ; ಜನವರಿ 30ರಿಂದ ಮೂರು ದಿನಗಳ ಕಾಲ ಮಳೆ ಆರಂಭ, ಈ 20 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ; ಜನವರಿ 30ರಿಂದ ಮೂರು ದಿನಗಳ ಕಾಲ ಮಳೆ ಆರಂಭ, ಈ 20 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

ಕರ್ನಾಟಕ ಹವಾಮಾನ; ಜನವರಿ 30ರಿಂದ ಮೂರು ದಿನಗಳ ಕಾಲ ಮಳೆ ಆರಂಭ, ಈ 20 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

ಬೇಸಿಗೆ ಆರಂಭಕ್ಕೆ ಇನ್ನೂ ಸಮಯವಿದ್ದರೂ ಕರ್ನಾಟಕದಲ್ಲಿ ಜನವರಿ 30ರಿಂದಲೇ ಮೂರು ದಿನಗಳ ಕಾಲ 20 ಜಿಲ್ಲೆಗಳಲ್ಲಿ ಸಾಧಾರಣ ಅಥವಾ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ.

ಕರ್ನಾಟಕ ಹವಾಮಾನ; ಜನವರಿ 30ರಿಂದ ಮೂರು ದಿನಗಳ ಕಾಲ ಮಳೆ ಆರಂಭ, ಈ 20 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
ಕರ್ನಾಟಕ ಹವಾಮಾನ; ಜನವರಿ 30ರಿಂದ ಮೂರು ದಿನಗಳ ಕಾಲ ಮಳೆ ಆರಂಭ, ಈ 20 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಪರೀತ ಥಂಡಿ, ಶೀತ ಗಾಳಿ ತಗ್ಗಿ ಬಿಸಿಲಿನ ಪ್ರಮಾಣ ಏರುತ್ತಿರುವುದರ ನಡುವೆ ಭಾರತೀಯ ಹವಾಮಾನ ಇಲಾಖೆ, ಜನವರಿ 30ರಿಂದ 3 ದಿನಗಳ ಕಾಲ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ. ಅಲ್ಲದೆ, 29ರ ತನಕ ಒಣಹವೆ ಮುಂದುವರೆಯಲಿದೆ ಎಂದು ಸೂಚಿಸಿದೆ. ಬೇಸಿಗೆ ಆರಂಭಕ್ಕೆ ಇನ್ನೂ ಸಮಯವಿದ್ದರೂ ಅದಾಗಲೇ 20 ಜಿಲ್ಲೆಗಳಲ್ಲಿ ಸಾಧಾರಣ ಅಥವಾ ವ್ಯಾಪಕ ಮಳೆಯಾಗಬಹುದು ಎಂದು ಸೂಚಿಸಿದೆ.

ಇಂದು (ಜ.27) ಸೇರಿ ಜನವರಿ 29ರವರೆಗೂ ರಾಜ್ಯಾದ್ಯಂತ ಒಣ ಹವೆ ಮತ್ತು ಬೆಳಿಗ್ಗೆ ಮತ್ತು ಸಂಜೆ ವೇಳೆ ದಟ್ಟವಾದ ಮಂಜು ಮತ್ತು ಇಬ್ಬನಿ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಆದರೆ ಜನವರಿ 30ರಿಂದ ಫೆಬ್ರವರಿ 1 ತನಕ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. 7 ದಿನಗಳ ಕಾಲ ಮುನ್ಸೂಚನೆ ನೀಡುವ ಹವಾಮಾನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎಲ್ಲಿಲ್ಲೆ ಮಳೆಯಾಗಲಿದೆ? ಇಲ್ಲಿದೆ ನೋಡಿ ವಿವರ.

ಜನವರಿ 30ರಂದು ಎಲ್ಲೆಲ್ಲಿ ಮಳೆ

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ರಾಮನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಆದರೆ ಕರಾವಳಿ ಭಾಗ, ಉತ್ತರ ಕರ್ನಾಟಕ, ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವಮಾನ ಮತ್ತು ಮಂಜು ಬೀಳುವ ಸಾಧ್ಯತೆ ಇದೆ.

ಜನವರಿ 31ರಂದು ಎಲ್ಲೆಲ್ಲಿ ಮಳೆ

ಜನವರಿ 31ರ ಶುಕ್ರವಾರ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಗದಗ, ಧಾರವಾಡ, ವಿಜಯಪುರ, ಹಾವೇರಿ, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೊರು, ಕೊಡಗು, ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

ಫೆಬ್ರವರಿ 1ರಂದು ಎಲ್ಲೆಲ್ಲಿ ಮಳೆ

ಫೆಬ್ರವರಿ 1ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಕೊಡಗು, ಕೋಲಾರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಬೆಂಗಳೂರು ಸುತ್ತಮುತ್ತಲಿನ ವಾತಾವರಣ

ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಯಾವುದೇ ಮಳೆಯಾಗುವುದಿಲ್ಲ. ಶುಭ್ರವಾದ ಆಕಾಶ ಇರಲಿದ್ದು, ಬೆಳಗಿನ ಜಾವ ಮತ್ತು ದಟ್ಟ ಮಂಜು ಕಾಣಿಸಿಕೊಳ್ಳಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿಗ್ರಿ ಸೆಲ್ಸಿಯಸ್ ಮತ್ತು 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಆದರೆ 29ರ ನಂತರ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿ ಹವಾಮಾನ ವೈಪರಿತ್ಯ ಮತ್ತು ಚಂಡಮಾರುತ ಪರಿಚಲನೆಯ ತೀವ್ರತೆ ಇಳಿಕೆ ಕಂಡಿದೆ. ಒಂದು ವೇಳೆ ಅರಬ್ಬಿ ಸಮುದ್ರ ಅಥವಾ ಬಂಗಾಳಕೊಲ್ಲಿ ವಾಯುಭಾರ ಕುಸಿತ ಕಂಡು ತೀವ್ರ ಸ್ವರೂಪ ಪಡೆದರೆ ಕರ್ನಾಟಕದಲ್ಲಿ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆ ಇದೆ. ಇದು ನೆರೆಯ ಆಂಧ್ರ ಪ್ರದೇಶ, ಒಡಿಶಾ, ತಮಿಳುನಾಡು ಸೇರಿ ಕರಾವಳಿ ರಾಜ್ಯಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Whats_app_banner