ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ, ರಾಜ್ಯದಲ್ಲಿ ಒಣಹವೆ, ಬೆಂಗಳೂರಲ್ಲಿ ಭಾಗಶಃ ಮೋಡ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ, ರಾಜ್ಯದಲ್ಲಿ ಒಣಹವೆ, ಬೆಂಗಳೂರಲ್ಲಿ ಭಾಗಶಃ ಮೋಡ

ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ, ರಾಜ್ಯದಲ್ಲಿ ಒಣಹವೆ, ಬೆಂಗಳೂರಲ್ಲಿ ಭಾಗಶಃ ಮೋಡ

Karnataka Weather: ಕರ್ನಾಟಕದಲ್ಲಿ ಮತ್ತೆ ಚಳಿಯ ಮುನ್ಸೂಚನೆ ಲಭಿಸಿದೆ. ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ ಇದ್ದು, ರಾಜ್ಯದಲ್ಲಿ ಒಣಹವೆ ಕಾಡಲಿದೆ. ಬೆಂಗಳೂರಲ್ಲಿ ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಕರ್ನಾಟಕ ಹವಾಮಾನ ಜನವರಿ 16ರಂದು ಹೀಗಿರಲಿದೆ ಎಂದು ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ತಿಳಿಸಿದೆ.

ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ ಕಂಡುಬಂದಿದ್ದು ರಾಜ್ಯದಲ್ಲಿ ಒಣಹವೆ ಇರಲಿದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ ಕಂಡುಬಂದಿದ್ದು ರಾಜ್ಯದಲ್ಲಿ ಒಣಹವೆ ಇರಲಿದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ) (Pixabay)

Karnataka Weather: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಕಳೆದ ಎರಡು ದಿನ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿ ಐದಾರು ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆಯಾಗಿತ್ತು. ಇಂದು ಯಾವುದೇ ಮಳೆ ಮುನ್ಸೂಚನೆ ಇಲ್ಲ. ಆದರೆ, ಕರ್ನಾಟಕದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಇಳಿಕೆಯಾಗುವ ಸಾಧ್ಯತೆ ಇದೆ. ಸರಳವಾಗಿ ಹೇಳಬೇಕು ಎಂದರೆ ಚಳಿ ಹೆಚ್ಚಾಗಬಹುದು ಎಂಬ ಸುಳಿವನ್ನು ಭಾರತೀಯ ಹವಾಮಾನ ಇಲಾಖೆ ತನ್ನ ಹವಾಮಾನ ಮುನ್ಸೂಚನೆ ವರದಿಯಲ್ಲಿ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ

ಕರ್ನಾಟಕದಲ್ಲಿ ಇಂದು ಒಣಹವೆ ಇರಲಿದೆ. ಯಾವುದೇ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಂದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಹವಾಮಾನದಲ್ಲಿ ಯಾವುದೇ ವ್ಯತ್ಯಾಸ ಇರಲ್ಲ. ಸಹಜ ವಾತಾವರಣ ಇರಲಿದೆ. ತಾಪಮಾನವೂ ಚಳಿಗಾಲದ ವಾಡಿಕೆಯಂತೆ ಇರಲಿದೆ. ಇನ್ನು ಉತ್ತರ ಒಳನಾಡಿನಲ್ಲಿ ಜನವರಿ 18 ರಿಂದ 21ರ ಅವಧಿಯಲ್ಲಿ ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ ಇಳಿಕೆಯಾಗಲಿದೆ. ಜನವರಿ 19ರ ತನಕ ಒಳನಾಡು ಪ್ರದೇಶಗಳಲ್ಲಿ ದಟ್ಟ ಮಂಜು, ಇಬ್ಬನಿ ನಿರೀಕ್ಷಿಸಬಹುದು ಎಂದು

ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಜನವರಿ 18 ರಿಂದ 21ರ ತನಕ ಕನಿಷ್ಠ ತಾಪಮಾನ 2 ರಿಂದ 3 ರ ತನಕ ಇಳಿಕೆಯಾಗಲಿದೆ. ಇದೇ ಅವಧಿಯಲ್ಲಿ ಕೆಲವು ಪ್ರದೇಶಗಳಲ್ಲಿ ದಟ್ಟ ಮತ್ತು ಇಬ್ಬನಿ ಬೀಳುವುದನ್ನು ನಿರೀಕ್ಷಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.

ಬೆಂಗಳೂರು ಸೇರಿ ನಗರಗಳಲ್ಲಿ ಇಂದಿನ ತಾಪಮಾನ (ಬೆಳಗ್ಗೆ 7 ಗಂಟೆಗೆ) ಮತ್ತು ಆರ್ದ್ರತೆಯ ಮಟ್ಟ

ಬೆಂಗಳೂರು ನಗರ - ತಾಪಮಾನ 17.4 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 88

ಮಂಗಳೂರು - ತಾಪಮಾನ 25 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 83

ಚಿತ್ರದುರ್ಗ- ತಾಪಮಾನ 25.4 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 43

ಗದಗ - ತಾಪಮಾನ 18.4 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 81

ಹೊನ್ನಾವರ- ತಾಪಮಾನ 27.6 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 80

ಕಲಬುರಗಿ - ತಾಪಮಾನ 18.8 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 83

ಬೆಳಗಾವಿ - ತಾಪಮಾನ 24 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 61

ಕಾರವಾರ -ತಾಪಮಾನ 31.6 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 69

ಬೆಂಗಳೂರು ಹವಾಮಾನ ಇಂದು; ಭಾಗಶಃ ಮೋಡ ಕವಿದ ವಾತಾವರಣ, ಚಳಿ ಹೆಚ್ಚಳ ಸಾಧ್ಯತೆ

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮುಂಜಾನೆ ಸಹಜವಾಗಿಯೆ ಸ್ವಲ್ಪ ಚಳಿ ಇರಲಿದ್ದು, ಕೆಲವು ಕಡೆ ದಟ್ಟ ಮಂಜು, ಇಬ್ಬನಿ ಕಾಡಬಹುದು. ಜನವರಿ 18 ರಿಂದ 21ರ ಅವಧಿಯಲ್ಲಿ ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್‌ ಇಳಿಕೆಯಾಗಬಹುದಾದ ಕಾರಣ ಹೆಚ್ಚಿನ ಚಳಿ ನಿರೀಕ್ಷಿಸಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಂ ತಿಳಿಸಿದ್ದಾರೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಇಂದು (ಜನವರಿ 16) ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಶಿಯಸ್ ಇರಬಹುದು. ನಿನ್ನೆ (ಜನವರಿ 15) ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 27.4 ಡಿಗ್ರಿ ಸೆಲ್ಶಿಯಸ್‌ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 27.2 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 16.8 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.

Whats_app_banner