Karnataka Weather: ತಗ್ಗಿದ ಮಳೆ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮಾತ್ರ ಅಲರ್ಟ್‌, ಕಲಬುರಗಿ, ಬೀದರ್‌, ರಾಯಚೂರಿನಲ್ಲಿ ಹಠಾತ್‌ ಚಳಿ-karnataka weather update bengaluru september 3 rain prediction in dakshina kannada cold weather in north karnataka kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ತಗ್ಗಿದ ಮಳೆ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮಾತ್ರ ಅಲರ್ಟ್‌, ಕಲಬುರಗಿ, ಬೀದರ್‌, ರಾಯಚೂರಿನಲ್ಲಿ ಹಠಾತ್‌ ಚಳಿ

Karnataka Weather: ತಗ್ಗಿದ ಮಳೆ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮಾತ್ರ ಅಲರ್ಟ್‌, ಕಲಬುರಗಿ, ಬೀದರ್‌, ರಾಯಚೂರಿನಲ್ಲಿ ಹಠಾತ್‌ ಚಳಿ

karnataka Rain Updates ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದ್ದು, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಸೂಚನೆಯಿದೆ. ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ತೀವ್ರ ಕುಸಿತ ಕಂಡು ಚಳಿ ವಾತಾವರಣ ಕಂಡು ಬಂದಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಜೋರಾಗಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಜೋರಾಗಿದೆ.

ಬೆಂಗಳೂರು: ಕಳೆದ ಎರಡು ವಾರದಿಂದ ಕರ್ನಾಟಕದ( Karnataka Rains) ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಅಬ್ಬರಿಸಿದ್ದ ಮಳೆ ಪ್ರಮಾಣ ಕಡಿಮೆಯಾಗಿದೆ. ಮಂಗಳವಾರ ಕರಾವಳಿಯ ಎರಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡ( Uttara Kannada Rains) ಹಾಗೂ ದಕ್ಷಿಣ ಕನ್ನಡ( Dakshina Kannada Rains) ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ನೆಚ್ಚರಿಕೆ ನೀಡಿದೆ. ಅದನ್ನು ಹೊರತುಪಡಿಸಿದರೆ ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಮಳೆ ಸಾಧಾರಣ ಇರಲಿದೆ. ಆದರೆ ಕಲಬುರಗಿ, ಬೀದರ್‌, ವಿಜಯಪುರ, ರಾಯಚೂರು ಸಹಿತ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ( Bangalore Weather) ಮಾತ್ರ ಉಷ್ಣಾಂಶದಲ್ಲಿ ಕೊಂಚ ಏರಿಕೆಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಳೆ ಎಲ್ಲೆಲ್ಲಿ

ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ. ಈ ಎರಡು ಜಿಲ್ಲೆಗಳಲ್ಲಿ ಮಂಗಳವಾರದಂದು ಯಲ್ಲೋ ಅಲರ್ಟ್‌ ಅನ್ನು ಭಾರತೀಯ ಹವಾಮಾನ ಇಲಾಖೆಯು ಘೋಷಣೆ ಮಾಡಿದೆ. ಎರಡು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಮೂರ್ನಾಲ್ಕು ದಿನದಿಂದ ಭಾರೀ ಮಳೆ ಕಂಡಿರುವ ಉಡುಪಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆ ಇರಲಿದೆ. ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಾಧಾರಣದಿಂದ ಹಗುರಮಳೆಯಗಬಹುದು ಎಂದು ತಿಳಿಸಲಾಗಿದೆ.

ಕರಾವಳಿ ಭಾಗದ ಜಿಲ್ಲೆಗಳಲ್ಲಿ ಗಾಳಿಯ ವೇಗವು ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವರೆಗೂ ಇರಲಿದೆ. ಇದರಿಂದ ಮುನ್ನೆಚ್ಚರಿಕೆ ವಹಿಸುವಂತೆಯೂ ಸೂಚಿಸಲಾಗಿದೆ.

ಬೆಂಗಳೂರು ಹವಾಮಾನ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡು ದಿನ ಸಾಧಾರಣ ಮಳೆ ಇರಲಿದೆ. ಎರಡು ದಿನವೂ ಮೋಡ ಕವಿದ ವಾತಾವರಣವೇ ಕಂಡು ಬರಲಿದೆ. ಬೆಂಗಳೂರಿನ ಗರಿಷ್ಠ ಉಷ್ಣಾಂಸವು 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್‌ ನಷ್ಟು ಇರಲಿದೆ. ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಉಷ್ಣಾಂಶ ಪ್ರಮಾಣ ಹೆಚ್ಚೇ ಇರಲಿದೆ.

ಬೀದರ್‌ನಲ್ಲಿ ಸುರಿದ ಮಳೆ

ಎರಡು ದಿನಗಳ ಕಾಲ ಬೀದರ್‌ ಜಿಲ್ಲೆಯಲ್ಲಿಯೇ ಭಾರೀ ಮಳೆ ಸುರಿದಿದೆ. ಬೀದರ್‌ ಜಿಲ್ಲೆಯ ಔರಾದ್‌ನಲ್ಲಿ ಅತ್ಯಧಿಕ 10 ಸೆ.ಮೀ. ಬೀದರ್‌ ಜಿಲ್ಲೆ ಭಾಲ್ಕಿಯಲ್ಲಿ 8 ಸೆ.ಮೀ, ಬೀದರ್‌ ನಗರದಲ್ಲಿ 6, ಸೆ.ಮೀ ಮಳೆಯಾಗಿದೆ. ಕೊಡಗಿನ ಸೋಮವಾರಪೇಟೆ, ಭಾಗಮಂಡಲ, ಪೊನ್ನಂಪೇಟೆ, ಕುಶಾಲನಗರ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ, ಬೀದರ್‌ನ ಮಂಠಾಳ, ಹುಮನಾಬಾದ್‌, ಚಿಟಗುಪ್ಪ, ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ ರಾಕ್‌, ಶಿವಮೊಗ್ಗದ ಆಗುಂಬೆ, ಲಿಂಗನಮಕ್ಕಿ, ಉಡುಪಿಯ ಕಾರ್ಕಳ, ಕಲಬುರಗಿ ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಯಡ್ರಾಮಿ, ನೆಲೋಗಿ, ರಾಯಚೂರಿನ ಗಬ್ಬೂರು, ದಕ್ಷಿಣ ಕನ್ನಡದ ಧರ್ಮಸ್ಥಳ, ಮಾಣಿ, ಉಪ್ಪಿನಂಗಡಿ, ಯಾದಗಿರಿಯ ಸೈದಾಪುರ, ಕಕ್ಕೇರಿ, ಶಹಾಪುರ, ವಿಜಯಪುರದ ಝಳಕಿ ಕ್ರಾಸ್‌, ದೇವರಹಿಪ್ಪರಗಿ, ಸಿಂದಗಿ, ಮುದ್ದೆ ಬಿಹಾಳ, ಬೆಳಗಾವಿ ಜಿಲ್ಲೆ ಬೈಲಹೊಂಗಲ, ಹಾಸನ ಜಿಲ್ಲೆ ಅರಕಲಗೂಡಲ್ಲಿ ಉತ್ತಮ ಮಳೆಯಾಗಿದೆ.

ಕುಸಿದ ಉಷ್ಣಾಂಶ

ಇನ್ನು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಉಷ್ಣಾಂಶ ಕುಸಿದು ಚಳಿಯ ವಾತಾವರಣ ಕಂಡು ಬಂದಿದೆ. ಕಲಬುರಗಿಯಲ್ಲಿ 23.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 7.7 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ. ಬೀದರ್‌ನಲ್ಲಿ 22.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 6.6 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ. ವಿಜಯಪುರದಲ್ಲಿ24.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 6.1 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ. ರಾಯಚೂರಿನಲ್ಲಿ 26.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 5.6 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ.

ಗದಗದಲ್ಲಿ25.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 3.2 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ. ಬಾಗಲಕೋಟೆಯಲ್ಲಿ26.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 3.0 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ. ಹಾವೇರಿಯಲ್ಲಿ24.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 2.9 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ.

ಬೆಳಗಾವಿಯಲ್ಲಿ25.0 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 1.2 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ. ಧಾರವಾಡದಲ್ಲಿ26.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 1.5 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ.

ಚಿತ್ರದುರ್ಗದಲ್ಲಿ25.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 2.7 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ. ದಾವಣಗೆರೆಯಲ್ಲಿ26.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 1.9 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ. ಶಿವಮೊಗ್ಗದಲ್ಲಿ25.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿ 3.2 ಸೆಲ್ಸಿಯಸ್‌ ಉಷ್ಣಾಂಶ ಕುಸಿದಿದೆ.

-