Karnataka Rains: ಕರಾವಳಿಯಲ್ಲಿ ಇಂದು ಭಾರೀ ಮಳೆ, ಉಡುಪಿ, ಉತ್ತರ ಕನ್ನಡದಲ್ಲಿ ಅಲರ್ಟ್‌, ಬೆಂಗಳೂರಲ್ಲೂ ಸಾಧಾರಣ ಮಳೆ ಮುನ್ಸೂಚನೆ-karnataka weather update bengaluru weather today august 10 rain prediction udupi uttara kannada bengaluru koppal gadag ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಕರಾವಳಿಯಲ್ಲಿ ಇಂದು ಭಾರೀ ಮಳೆ, ಉಡುಪಿ, ಉತ್ತರ ಕನ್ನಡದಲ್ಲಿ ಅಲರ್ಟ್‌, ಬೆಂಗಳೂರಲ್ಲೂ ಸಾಧಾರಣ ಮಳೆ ಮುನ್ಸೂಚನೆ

Karnataka Rains: ಕರಾವಳಿಯಲ್ಲಿ ಇಂದು ಭಾರೀ ಮಳೆ, ಉಡುಪಿ, ಉತ್ತರ ಕನ್ನಡದಲ್ಲಿ ಅಲರ್ಟ್‌, ಬೆಂಗಳೂರಲ್ಲೂ ಸಾಧಾರಣ ಮಳೆ ಮುನ್ಸೂಚನೆ

Rain Updates ಕರ್ನಾಟಕದಲ್ಲಿ ಆಗಸ್ಟ್‌ 10ರ ಶನಿವಾರದಿಂದ ಭಾನುವಾರ ಬೆಳಗಿನವರೆಗೆ ಮಳೆ( Karnataka Rains) ಪರಿಸ್ಥಿತಿ ಎಲ್ಲಿ ಹೇಗಿರಲಿದೆ. ಇಲ್ಲಿದೆ ವಿವರ.

ಕರ್ನಾಟಕದ ನಾನಾ ಭಾಗಗಳಲ್ಲಿ ಶನಿವಾರವೂ ಮಳೆ ಇದೆ.
ಕರ್ನಾಟಕದ ನಾನಾ ಭಾಗಗಳಲ್ಲಿ ಶನಿವಾರವೂ ಮಳೆ ಇದೆ.

ಬೆಂಗಳೂರು: ಕರ್ನಾಟಕದಲ್ಲಿ ನಾಲ್ಕು ದಿನದ ಬಿಡುವಿನ ಬಳಿಕ ಮತ್ತೆ ಮಳೆ ಅಬ್ಬರ ಜೋರಾಗಿದೆ. ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಆಗಸ್ಟ್‌ 10ರ ಶನಿವಾರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ. ಎರಡೂ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಕೂಡ ಘೋಷಣೆ ಮಾಡಲಾಗಿದೆ. ಇದಲ್ಲದೇ ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲೂ ಮಳೆಯಾಗಬಹುದು ಎಂದು ತಿಳಿಸಲಾಗಿದೆ. ಶುಕ್ರವಾರವೂ ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಉತ್ತರ ಕನ್ನಡ, ಉಡುಪಿ, ವಿಜಯಪುರ, ಬೀದರ್‌, ಹಾವೇರಿ ಸಹಿತ ಹಲವು ಕಡೆಗಳಲ್ಲಿ ಮಳೆಯಾಗಿದೆ.

ಮಳೆ ಮುನ್ಸೂಚನೆ ಎಲ್ಲೆಲ್ಲಿ

ಮುಂದಿನ ಆರು ದಿನಗಳ ಕಾಲ ಕರಾವಳಿ ಭಾಗ ಹಾಗೂ ದಕ್ಷಿಣ ಪಳನಾಡಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಯಿದೆ. ಅದರಲ್ಲೂ ಆಗಸ್ಟ್‌ 10ರ ಶನಿವಾರದಂದು ಕರಾಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ಸಾಧ್ಯತೆಗಳು ಹೆಚ್ಚು. ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲೂ ಹಗುರದಿಂದ ಸಾಧಾರಣ ಮಳೆಯಾಗಬಹುದು. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸೂಚನೆ ನೀಡಲಾಗಿದೆ.

ಶನಿವಾರದಿಂದ ಭಾನುವಾರದವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಬಹುದು. ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಿದೆ, ಉತ್ತರ ಒಳನಾಡಿನ ಗದಗ, ಕೊಪ್ಪಳ, ವಿಜಯಪುರ, ಕಲಬುರಗಿ, ಬೀದರ್‌, ಹಾವೇರಿ ಭಾಗಗಳಲ್ಲೂ ಅಲ್ಲಲ್ಲಿ ಸಾಧರಣ ಮಳೆಯಾಗಬಹದು ಎಂದು ಮುನ್ಸೂಚನೆಯಿದೆ.

ಎಲ್ಲೆಲ್ಲಿ ಮಳೆಯಾಗಿದೆ

ಶುಕ್ರವಾರದಂದು ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 10 ಸೆ.ಮೀ ಮಳೆ ಸುರಿದಿದೆ. ಮಂಕಿ, ಕುಮಟಾ,ಹೊನ್ನಾವರ, ಕಾರವಾರ, ಅಂಕೋಲಾ, ಗೇರುಸೊಪ್ಪಾ, ಶಿರಾಲಿ, ಬನವಾಸಿಯಲ್ಲೂ ಮಳೆ ಸುರಿದಿದೆ. ಉಡುಪಿ ನಗರ, ಉಡುಪಿ ಜಿಲ್ಲೆಯ ಕುಂದಾಪುರ, ಕೊಲ್ಲೂರು, ದಕ್ಷಿಣ ಕನ್ನಡದ, ಪಣಂಬೂರು, ಮಂಗಳೂರು ನಗರ, ಧರ್ಮಸ್ಥಳ, ಮುಲ್ಕಿ, ಬೆಳ್ತಂಗಡಿ, ಮಾಣಿ, ಉಪ್ಪಿನಂಗಡಿ, ಹಾವೇರಿ ನಗರ, ಹಾವೇರಿ ಜಿಲ್ಲೆ ಸವಣೂರು, ಕೊಪ್ಪಳ ಜಿಲ್ಲೆ ಗಂಗಾವತಿ, ಕಲಬುರಗಿಯ ಚಿತ್ತಾಪೂರ, ಬೆಳಗಾವಿಯ ಬೈಲಹೊಂಗಲ, ತುಮಕೂರು ಜಿಲ್ಲೆಯ ಬರಗೂರು, ತಿಪಟೂರು. ಚಿಕ್ಕಬಳ್ಳಾಪುರ ಜಿಲ್ಲೆ ತೊಂಡೆಭಾವಿ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ, ದಾವಣಗೆರೆ, ಗದಗ, ಕೊಡಗಿನ ಭಾಗಮಂಡಲ, ರಾಮನಗರ. ಶಿವಮೊಗ್ಗದ ಆನವಟ್ಟಿ, ಹುಂಚದಕಟ್ಟೆ, ಶಿವಮೊಗ್ಗ ಜಿಲ್ಲೆಯ ಎಚ್‌ಡಿಕೋಟೆ, ವಿಜಯಪುರ ಜಿಲ್ಲೆಯ ತಿಕೋಟಾ, ನಾಲತವಾಡ, ತಾಳಿಕೋಟೆ, ಬಸವನಬಾಗೇವಾಡಿ, ರಾಯಚೂರು ಜಿಲ್ಲೆ ಸಿಂಧನೂರು, ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ಉತ್ತಮ ಮಳೆ ಸುರಿದಿದೆ.

ಬೆಂಗಳೂರು ಹವಾಮಾನ

ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣಾ ಮಳೆ ಸುರಿಯಬಹುದು. ಎರಡು ದಿನದಿಂದ ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಮಳೆಯಾದ ವರದಿಯೂ ಆಗಿದೆ. ಸಾಮಾನ್ಯವಾಗಿ ಎರಡೂ ದಿನವೂ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಉಷ್ಣಾಂಶದ ಪ್ರಮಾಣವು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.