Karnataka Rains: ಬೆಂಗಳೂರಿನಲ್ಲಿ ಇಂದೂ ಭಾರೀ ಮಳೆ ನಿರೀಕ್ಷೆ, ಕರಾವಳಿ, ಮಧ್ಯ ಕರ್ನಾಟಕದಲ್ಲೂ ಮಳೆ ಮುನ್ಸೂಚನೆ, 8 ಜಿಲ್ಲೆಗಳಲ್ಲಿ ಅಲರ್ಟ್‌-karnataka weather update bengaluru weather today august 20 rain prediction dakshina kannada tumkur davangere udupi kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಬೆಂಗಳೂರಿನಲ್ಲಿ ಇಂದೂ ಭಾರೀ ಮಳೆ ನಿರೀಕ್ಷೆ, ಕರಾವಳಿ, ಮಧ್ಯ ಕರ್ನಾಟಕದಲ್ಲೂ ಮಳೆ ಮುನ್ಸೂಚನೆ, 8 ಜಿಲ್ಲೆಗಳಲ್ಲಿ ಅಲರ್ಟ್‌

Karnataka Rains: ಬೆಂಗಳೂರಿನಲ್ಲಿ ಇಂದೂ ಭಾರೀ ಮಳೆ ನಿರೀಕ್ಷೆ, ಕರಾವಳಿ, ಮಧ್ಯ ಕರ್ನಾಟಕದಲ್ಲೂ ಮಳೆ ಮುನ್ಸೂಚನೆ, 8 ಜಿಲ್ಲೆಗಳಲ್ಲಿ ಅಲರ್ಟ್‌

Weather Updates ಕರ್ನಾಟಕದ ಹಲವು ಭಾಗಗಳಲ್ಲಿ ( Karnataka Rains) ಮಂಗಳವಾರವೂ ಮಳೆಯಿದ್ದು, ಎಂಟು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಇದೆ. ಬೆಂಗಳೂರಲ್ಲೂ ಭಾರೀ ಮಳೆಯಾಗುವ( Bangalore Rains) ಮುನ್ಸೂಚನೆಯಿದೆ.

Rain in Bangalore ಕರ್ನಾಟಕದಲ್ಲಿ ಸೋಮವಾರ ಸುರಿದಂತೆ ಮಂಗಳವಾರವೂ ಮಳೆಯಾಗುವ ಸೂಚನೆಯಿದೆ.
Rain in Bangalore ಕರ್ನಾಟಕದಲ್ಲಿ ಸೋಮವಾರ ಸುರಿದಂತೆ ಮಂಗಳವಾರವೂ ಮಳೆಯಾಗುವ ಸೂಚನೆಯಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರವೂ( Bangalore Rains) ಭಾರೀ ಮಳೆ ಬರುವ ಮುನ್ಸೂಚನೆಯಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಹಲವು ಕಡೆಗಳಲ್ಲಿ ಸೋಮವಾರ ಮಳೆಯಾದಂತೆ ಇಂದೂ ಕೂಡ ( ಆಗಸ್ಟ್‌ 20) ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು( IMD) ಯಲ್ಲೋ ಅಲರ್ಟ್‌ ( Yellow Alert) ಅನ್ನು ಘೋಷಿಸಿದೆ. ಇದಲ್ಲದೇ ಕರ್ನಾಟಕದ ಕರಾವಳಿ ಜಿಲ್ಲೆಗಳು, ಮಧ್ಯಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಸಹಿತ ಒಟ್ಟು 8 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಅನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ. ಉಳಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ತಿಳಿಸಲಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲೆಲ್ಲಿ ಮಳೆ ಸೂಚನೆ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಒಂದು ಅಥವಾ ಎರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಮಧ್ಯ ಕರ್ನಾಟಕದ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳು, ತುಮಕೂರು, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಗುಡುಗು ಸಹಿತ ಮಳೆಯೂ ಇರಲಿದೆ ಎಂದು ತಿಳಿಸಲಾಗಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.

ಮುಂದಿನ ಆರು ದಿನಗಳವರೆಗೂ ಕರಾವಳಿ ಭಾಗದಲ್ಲಿ ಮಳೆ ಇರಲಿದೆ. ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲೂ ಮಳೆಯಾಗಬಹುದು ಎಂದು ತಿಳಿಸಲಾಗಿದೆ.

ಕರಾವಳಿ ಭಾಗದಲ್ಲಿ ಮಳೆಯ ಜತೆಗೆ ಗಾಳಿಯ ವೇಗವೂ ಹೆಚ್ಚು ಇರಲಿದೆ. ತೀವ್ರ ಬಿರುಗಾಳಿಯೂ ಗಂಟೆಗೆ 55 ಕಿಮಿ ವೇಗದಲ್ಲಿಯೂ ಸಂಚರಿಸುವುದರಿಂದ ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

ಬೆಂಗಳೂರು ಮಳೆ

ಬೆಂಗಳೂರಿನ ಹೆಬ್ಬಾಳ ಸಹಿತ ಹಲವು ಪ್ರದೇಶಗಳಲ್ಲಿ ಸೋಮವಾರವೂ ಮಳೆಯಾಗಿದೆ. ಮಧ್ಯಾಹ್ನ ನಂತರ ಏಕಾಏಕಿ ಮಳೆ ಸುರಿದು ಕೆಲವು ಭಾಗಗಳಲ್ಲಿ ಸಂಚಾರಕ್ಕೂ ಅಡಚಣೆಯಾಯಿತು. ಮಂಗಳವಾರ ಹಾಗೂ ಬುಧವಾರವೂ ಬೆಂಗಳೂರಿನಲ್ಲಿ ಭಾರೀ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವೂ ತಿಳಿಸಿದೆ.

ಬೆಂಗಳೂರಿನಲ್ಲಿ ಎರಡೂ ದಿನವೂ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಬಹುದು. ಗುಡುಗು ಸಹಿತ ಮಳೆ ಸುರಿಯುವ ಮುನ್ಸೂಚನೆಯಿದೆ. ಬೆಂಗಳೂರಿನ ತಾಪಮಾನವು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ಇರಬಹುದು.

ಮಳೆ ಪ್ರಮಾಣ

ಸೋಮವಾರವೂ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗಿದೆ. ಚಿಕ್ಕಮಗಳೂರು,ಯಾದಗಿರಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಶಿವಮೊಗ್ಗ, ಬೀದ್‌, ಕೊಡಗು, ಚಿತ್ರದುರ್ಗ, ತುಮಕೂರು ಸಹಿತ ಹಲವು ಭಾಗಗಳಲ್ಲಿ ಮಳೆಯಾಗಿದೆ.ಚಿಕ್ಕಮಗಳೂರಿನಲ್ಲಿ 6 ಸೆ.ಮೀ, ಯಾದಗಿರಿ ಜಿಲ್ಲೆ ಹುಣಸಗಿ ಹಾಗೂ ಕೊಪ್ಪಳದ ಮುನಿರಾಬಾದ್‌ನಲ್ಲಿ ತಲಾ 5 ಸೆ.ಮೀ ಮಳೆ ಸುರಿದಿದೆ.ಬೆಂಗಳೂರು ನಗರದಲ್ಲಿ 4 ಸೆ.ಮೀ, ಬಾಗಲಕೋಟೆ ಜಿಲ್ಲೆ ರಬಕವಿ,ಲೋಕಾಪುರ, ಮಹಾಲಿಂಗಪುರ, ಕೊಡಗಿನ ಕುಶಾಲನಗರ, ಸೋಮವಾರಪೇಟೆ, ಚಿತ್ರದುರ್ಗದ ನಾಯಕನಹಟ್ಟಿ. ವಿಜಯಪುರ ಜಿಲ್ಲೆ ಝಳಕಿ ಕ್ರಾಸ್‌, ಮುದ್ದೆಬಿಹಾಳ, ಆಲಮಟ್ಟಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಹಾಸನ ಜಿಲ್ಲೆಯ ಶ್ರವಣ ಬೆಳಗೊಳ, ಬೀದರ್‌ನ ಹುಮ್ನಾಬಾದ್‌, ಚಿಕ್ಕಬಳ್ಳಾಪುರದ ಚಿಂತಾಮಣಿ, ಶಿವಮೊಗ್ಗ ಜಿಲ್ಲೆ ಹುಂಚದಕಟ್ಟೆ, ಬೆಳಗಾವಿ ಜಿಲ್ಲೆಯ ರಾಯಭಾಗ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ, ಕಮ್ಮರಡಿಯಲ್ಲೂ ಉತ್ತಮ ಮಳೆಯಾಗಿದೆ.

Bangalore Rains  ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮಳೆ ಮುನ್ಸೂಚನೆ
Bangalore Rains ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮಳೆ ಮುನ್ಸೂಚನೆ