Karnataka Rains: ಕರಾವಳಿಯಲ್ಲೂ ಕಡಿಮೆಯಾಯ್ತು ಮಳೆ, ಬೆಂಗಳೂರು,ಬೀದರ್‌, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಇಂದು ಗುಡುಗು ಸಹಿತ ಮಳೆ-karnataka weather update bengaluru weather today august 7 rain prediction in bengaluru bidar tumkur chikkaballapur ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಕರಾವಳಿಯಲ್ಲೂ ಕಡಿಮೆಯಾಯ್ತು ಮಳೆ, ಬೆಂಗಳೂರು,ಬೀದರ್‌, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಇಂದು ಗುಡುಗು ಸಹಿತ ಮಳೆ

Karnataka Rains: ಕರಾವಳಿಯಲ್ಲೂ ಕಡಿಮೆಯಾಯ್ತು ಮಳೆ, ಬೆಂಗಳೂರು,ಬೀದರ್‌, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಇಂದು ಗುಡುಗು ಸಹಿತ ಮಳೆ

Karnataka Weather Updates ಕರ್ನಾಟಕದಲ್ಲಿ ಮಳೆ( Karnataka Rains) ಪ್ರಮಾಣ ತಗ್ಗಿದ್ದರೂ ಸಾಧಾರಣ ಮಳೆ ಅಲ್ಲಲ್ಲಿ ಆಗಲಿದೆ. ಬೆಂಗಳೂರು,( Bangalore Rains) ತುಮಕೂರು, ಬೀದರ್‌, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುಡುಗಿನ ಸಹಿತ ಮಳೆ ಇರಲಿದೆ.

ಬೆಂಗಳೂರಿನಲ್ಲಿ ಬುಧವಾರ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ.
ಬೆಂಗಳೂರಿನಲ್ಲಿ ಬುಧವಾರ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ.

ಬೆಂಗಳೂರು: ಜುಲೈ ತಿಂಗಳಿನಲ್ಲಿ ಎಡಬಿಡದೇ ಸುರಿದು ಕರ್ನಾಟಕದ ಮಳೆಯ ವಾತಾವರಣವನ್ನು ಸೃಷ್ಟಿಸಿದ್ದ ಮುಂಗಾರು ಈಗ ಕೊಂಚ ಬಿಡುವು ನೀಡಿದೆ. ಆಗಸ್ಟ್‌ ತಿಂಗಳ ಮೊದಲ ವಾರಕ್ಕೂ ಮುಂದುವರೆದಿದ್ದ ಭಾರೀಯಿಂದ ಅತೀ ಭಾರೀ ಮಳೆ ವಾತಾವರಣ ಎರಡನೇ ವಾರಕ್ಕೆ ಕಡಿಮೆಯಾಗಿದೆ. ಕರಾವಳಿ, ಮಲೆನಾಡು ಸೇರಿದಂತೆ ಹಲವು ಭಾಗಗಳಲ್ಲಿ ನಿರಂತರವಾಗಿ ಮಳೆಯಾಗಿತ್ತು. ಈಗ ಕರಾವಳಿ ಹಾಗೂ ಮಲೆನಾಡಿನಲ್ಲೂ ಮಳೆ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಬುಧವಾರದಂದು ಕರ್ನಾಟಕದ ಹಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮಾತ್ರ ಕಂಡು ಬರಲಿದೆ. ಆದರೆ ಬೆಂಗಳೂರು, ಬೀದರ್‌, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎನ್ನು ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಳೆ ಮುನ್ಸೂಚನೆ

ಕರ್ನಾಟಕದಲ್ಲಿ ಬುಧವಾರದಿಂದ ಗುರುವಾರ ಬೆಳಗಿನವರೆಗೆ ಕರಾವಳಿಯ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಬೀದರ್‌, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳು ಅಧಿಕವಾಗಿವೆ. ಅದೇ ರೀತಿ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲೂ ಬುಧವಾರದಿಂದ ಹಗುರದಿಂದ ಸಾಧಾರಣ ಮಳೆ ಸುರಿಯಬಹುದು. ಅಲ್ಲಲ್ಲಿ ಗುಡುಗು ಇರುವ ಮುನ್ಸೂಚನೆಯೂ ಇದೆ.

ಬೆಂಗಳೂರು ಹವಾಮಾನ

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂದಿನ 48 ಗಂಟೆಗಳ ಕಾಲ ಗುಡುಗು ಸಹಿತ ಸಾಧಾರಣಾ ಮಳೆಯಾಗಬಹುದು. ಅಲ್ಲಲ್ಲಿ ಮಳೆ ಪ್ರಮಾಣ ಹೆಚ್ಚಿರಲಿದೆ. ಉಳಿದಂತೆ ಬೆಂಗಳೂರಿನ ಸುತ್ತಮುತ್ತಲ ಭಾಗಗಳಲ್ಲಿ ಎರಡು ದಿನವೂ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಉಷ್ಣಾಂಶವೂ ಸಾಮಾನ್ಯವಾಗಿಯೇ ಇರಲಿದೆ. ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್‌ ನಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

ಶಿರಾಲಿಯಲ್ಲಿ ಅತ್ಯಧಿಕ

ಮಂಗಳವಾರದಂದು ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಅತ್ಯಧಿಕ 9 ಸೆ.ಮೀ ಮಳೆಯಾಗಿದೆ. ಕ್ಯಾಸಲ್‌ ರಾಕ್‌ ಹಾಗೂ ರಾಯಚೂರಿನ ಗಬ್ಬೂರಿನಲ್ಲಿ ತಲಾ 7 ಸೆ.ಮೀ ಮಳೆಯಾದ ವರದಿಯಾಗಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿ 5 ಸೆ.ಮೀ ಮಳೆ ಸುರಿದಿದೆ. ತುಮಕೂರಿನ ಹೆಬ್ಬೂರು, ಕುಣಿಗಲ್‌, ಉತ್ತರ ಕನ್ನಡದ ಮಂಕಿ, ಕದ್ರಾ, ಶಿವಮೊಗ್ಗದ ಲಿಂಗನಮಕ್ಕಿ, ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಭಾರತಿ ಕ್ಯಾಂಪಸ್‌ನ್ಲೂ ಮಳೆಯಾಗಿದೆ.

ಉಡುಪಿ ನಗರ, ರಾಯಚೂರು, ದೊಡ್ಡಬಳ್ಳಾಪುರ, ಹೊಸಕೋಟೆ, ಮಂಗಳೂರು, ಬಾಗಲಕೋಟೆಯ ಮಹಾಲಿಂಗಾಪುರ, ಹಾವೇರಿ, ವಿಜಯಪುರದ ಇಂಡಿ, ಬೆಳಗಾವಿಯ ಲೋಂಡಾ, ಯಾದಗಿರಿ, ಕಲಬುರಗಿಯ ಖಜೂರಿ, ಧಾರವಾಡ ಜಿಲ್ಲೆ ಕಲಘಟಗಿ, ಕೊಡಗಿನ ವೀರಾಜಪೇಟೆ, ಸೋಮವಾರಪೇಟೆ, ಮಂಡ್ಯದ ಬೆಳ್ಳೂರು, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ,ಕಳಸ, ಕಮ್ಮರಡಿ, ರಾಮನಗರ, ಕೋಲಾರ ದಲ್ಲೂ ಮಳೆಯಾಗಿದೆ.

ಹಾವೇರಿ, ಬೆಳಗಾವಿ ಕೂಲ್‌

ಕರ್ನಾಟಕದ ಹಲವು ಭಾಗಗಳಲ್ಲಿ ಚಳಿಯ ವಾತಾವರಣವಿದೆ. ಬೆಳಗಾವಿ ನಗರ, ಹಾವೇರಿ, ಧಾರವಾಡದಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಬೆಳಗಾವಿಯಲ್ಲಿ 25.5 ಡಿಗ್ರಿ ಸೆಲ್ಸಿಯಸ್‌, ಹಾವೇರಿಯಲ್ಲಿ 26.6 ಡಿಗ್ರಿ ಸೆಲ್ಸಿಯಸ್‌, ಧಾರವಾಡದಲ್ಲಿ 27.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಚಿಕ್ಕಮಗಳೂರಿನಲ್ಲಿ 24.4 ಡಿಗ್ರಿ, ಆಗುಂಬೆಯಲ್ಲಿ 25.5 ಡಿಗ್ರಿ, ಮಡಿಕೇರಿಯಲ್ಲಿ 28. .1 ಡಿಗ್ರಿ, ಚಿತ್ರದುರ್ಗದಲ್ಲಿ 28.9 ಡಿಗ್ರಿ, ದಾವಣಗೆರೆಯಲ್ಲಿ 29 ಡಿಗ್ರಿ, ದಾಖಲಾಗಿದೆ. ಅತ್ಯಧಿಕ ರಾಯಚೂರಿನಲ್ಲಿ 35.6 ಡಿಗ್ರಿ, ಬಾಗಲಕೋಟೆಯಲ್ಲಿ 33.3 ಡಿಗ್ರಿ, ಕಲಬುರಗಿಯಲ್ಲಿ 32.1 ಡಿಗ್ರಿ. ವಿಜಯಪುರದಲ್ಲಿ 31.6 ಡಿಗ್ರಿ ಸೆಲ್ಸಿಯಸ್‌, ಮಂಡ್ಯ ಹಾಗೂ ಕಾರವಾರದಲ್ಲಿ 31.2 ಡಿಗ್ರಿ,. ಗದಗದಲ್ಲಿ 30.9 ಡಿಗ್ರಿ, ಹಾಸನ ಹಾಗೂ ಚಾಮರಾಜನಗರದಲ್ಲಿ 30.6 ಡಿಗ್ರಿ ಸೆಲ್ಸಿಯಸ್‌, ಮೈಸೂರು ಹಾಗೂ ಮಂಗಳೂರಿನ ಪಣಂಬೂರಿನಲ್ಲಿ 30.3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಂಡು ಬಂದಿದೆ.