Karnataka Rains: ಮಲೆನಾಡಲ್ಲಿ ತಗ್ಗಿದ ಮಳೆ ಅಬ್ಬರ, ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಅಲರ್ಟ್‌, ಬೆಂಗಳೂರಲ್ಲಿ ಹವಾಮಾನ ಹೇಗಿದೆ-karnataka weather update bengaluru weather today august5 rain prediction in dakshina kannada uttara kannada udupi ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಮಲೆನಾಡಲ್ಲಿ ತಗ್ಗಿದ ಮಳೆ ಅಬ್ಬರ, ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಅಲರ್ಟ್‌, ಬೆಂಗಳೂರಲ್ಲಿ ಹವಾಮಾನ ಹೇಗಿದೆ

Karnataka Rains: ಮಲೆನಾಡಲ್ಲಿ ತಗ್ಗಿದ ಮಳೆ ಅಬ್ಬರ, ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಅಲರ್ಟ್‌, ಬೆಂಗಳೂರಲ್ಲಿ ಹವಾಮಾನ ಹೇಗಿದೆ

Karnataka Weather Updates ಕರ್ನಾಟಕದ ಬಹುತೇಕ ಕಡೆ ಮಳೆ ಅಬ್ಬರ ಕಡಿಮೆಯಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಮಾತ್ರ ಸೋಮವಾರವೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಕರ್ನಾಟಕದ ಕರಾವಳಿ ಹೊರತುಪಡಿಸಿ ಇತರೆಡೆ ಮಳೆ ಪ್ರಮಾಣ ತಗ್ಗಿದೆ.
ಕರ್ನಾಟಕದ ಕರಾವಳಿ ಹೊರತುಪಡಿಸಿ ಇತರೆಡೆ ಮಳೆ ಪ್ರಮಾಣ ತಗ್ಗಿದೆ.

ಬೆಂಗಳೂರು: ಕಳೆದ ಮೂರ್ನಾಲ್ಕು ವಾರದಿಂದ ಕರ್ನಾಟಕದ ಮಲೆನಾಡು ಭಾಗದಲ್ಲಿ ಇದ್ದ ಮಳೆಯ( Karnataka Rains) ಅಬ್ಬರ ಕಡಿಮೆಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಸೇರಿದಂತೆ ಹಲವು ಭಾಗಗಳಲ್ಲಿ ಎಡಬಿಡದೇ ಸುರಿದ ಮಳೆ ಈಗ ಬಿಡುವು ನೀಡಿದೆ. ಆದರೆ ಕರಾವಳಿಯಲ್ಲಿ ಮಾತ್ರ ಭಾರೀ ಮಳೆ ವಾತಾವರಣ ಮುಂದುವರಿದಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ( IMD) ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ. ಬೆಂಗಳೂರು ನಗರದಲ್ಲೂ ಸಾಧಾರಣಾ ಮಳೆ ಇರುವ ವಾತಾವರಣ ಕಂಡು ಬಂದಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಲ್ಲಿ ಹಗುರ ಮಳೆಯಾಗುತ್ತಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲೆಲ್ಲಿ ಮಳೆ

ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್‌ 5ರಂದು ಭಾರೀ ಮಳೆಯಾಗುವ ಸೂಚನೆಯಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆಯೂ ಈ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಅನ್ನು ಘೋಷಣೆ ಮಾಢಿದೆ. ಮೂರು ಜಿಲ್ಲೆಗಳಲ್ಲಿ ಹಲವಾರು ದಿನಗಳಿಂದ ಮಳೆ ವಾತಾವರಣ ಮುಂದುವರಿದಿದೆ. ಭಾರೀ ಮಳೆಯಿಂದಾಗಿ ಮೂರು ಜಿಲ್ಲೆಗಳಲ್ಲಿ ನದಿ, ತೊರೆಗಳು ಉಕ್ಕಿ ಹರಿದು ಸಾಕಷ್ಟು ಹಾನಿಯೂ ಆಗಿದೆ. ಮಂಗಳವಾರ ಬೆಳಿಗ್ಗೆವರೆಗೂ ಅಲ್ಲಲ್ಲಿ ಭಾರೀ ಮಳೆಯಿರಲಿದೆ ಎಂದು ತಿಳಿಸಲಾಗಿದೆ.

ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಲವು ಕಡೆ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಮೀನುಗಾರರಿಗೆ ಎಚ್ಚರಿಕೆ

ತೀವ್ರ ಬಿರುಗಾಳಿಯಿಂದ ಕೂಡಿದ ಹವಾಮಾನವು ಕರ್ನಾಟಕದ ಕರಾವಳಿ ಭಾಗದಲ್ಲಿ ಕಂಡು ಬರಲಿದೆ. ಗಾಳಿಯ ವೇಗವು ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ಇರಲಿದೆ. ಕರಾವಳಿ ಉದ್ದಕ್ಕೂ ಸೋಮವಾರ ಇಂತಹ ವಾತಾವರಣ ಇರಲಿದೆ. ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಿಂದ ಭಟ್ಕಳದವರೆಗೂ ಎತ್ತರದ ಅಲೆಗಳು ಬೀಸಬಹುದು ಎನ್ನುವ ಮುನ್ಸೂಚನೆಯನ್ನು ನೀಡಲಾಗಿದೆ. ಪ್ರವಾಸಿಗರು ಸಮುದ್ರ ಪ್ರವಾಸದ ವೇಳೆ ಎಚ್ಚರಿಕೆಯಿಂದ ಇರಬೇಕು. ಮೀನುಗಾರರು ಆಳವಾದ ಮೀನುಗಾರಿಕೆಗೆ ಹೋಗಬಾರದು ಎಂದು ಸೂಚನೆ ನೀಡಲಾಗಿದೆ.

ಸುರಿದ ಮಳೆ

ಭಾನುವಾರವೂ ಕರಾವಳಿಯಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಉತ್ತರ ಕನ್ನಡದ ಮಂಕಿಯಲ್ಲಿ ಅತಿ ಹೆಚ್ಚು 11 ಸೆ.ಮೀ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಹಾಗೂ ಆಗುಂಬೆಯಲ್ಲಿ ತಲಾ ) 10 ಸೆ.ಮೀ, ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ ರಾಕ್‌, ಗೇರುಸೊಪ್ಪ, ಕದ್ರಾ, ಜಗಲ್‌ಬೆಟ್‌ ನಲ್ಲಿ ಉತ್ತಮ ಮಳೆ ಸುರಿದಿದೆ. ಉಡುಪಿಯ ಕೋಟ, ಚಿಕ್ಕಮಗಳೂರಿನ ಕಮ್ಮರಡಿ, ಶೃಂಗೇರಿ, ಉತ್ತರ ಕನ್ನಡದ ಕುಮಟಾ,ಸಿದ್ದಾಪು, ದಕ್ಷಿಣ ಕನ್ನಡದ ಮುಲ್ಕಿ, ಮಾಣಿ, ಪುತ್ತೂರು, ಬೆಳಗಾವಿ, ಕೊಡಗಿನ ಭಾಗಮಂಡಲ, ಹಾರಂಗಿ ಭಾಗದಲ್ಲೂ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ 1 ಸೆ. ಮೀ ನಷ್ಟು ಮಳೆಯಾದ ಮಾಹಿತಿ ನೀಡಲಾಗಿದೆ.

ಬೆಂಗಳೂರು ಹವಾಮಾನ

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಹಾಗೂ ಮಂಗಳವಾರ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡ ಬರಲಿದೆ. ಹಗುರವಾಗಿ ಅಲ್ಲಲ್ಲಿ ಮಳೆಯಾಗಬಹುದು. ನಿರಂತರ ಗಾಳಿಯ ವೇಗವು 30 ರಿಂದ 40 ಕಿ.ಮೀ ರಷ್ಟು ಇರಲಿದೆ. ಬೆಂಗಳೂರಿನ ಗರಿಷ್ಠ ತಾಪಮಾನವು 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಮಾಹಿತಿ ನೀಡಿದೆ.

ಶಿವಮೊಗ್ಗ, ಚಿಕ್ಕಮಗಳೂರಲ್ಲಿ ಚಳಿ

ಕರ್ನಾಟಕದ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಹಲವೆಡೆ ಉಷ್ಣಾಂಶ ಕುಸಿದಿದೆ.ಶಿವಮೊಗ್ಗದಲ್ಲಿ 22.8 ಡಿಗ್ರಿ ಉಷ್ಣಾಂಶ ಕಂಡು ಬಂದರೆ, ಚಿಕ್ಕಮಗಳೂರಿನಲ್ಲಿ 23 ಡಿಗ್ರಿ ಸೆಲ್ಸಿಯಿಸ್‌ ದಾಖಲಾಯಿತು. ಕೊಡಗಿನ ಮಡಿಕೇರಿಯಲ್ಲಿ 25 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು. ಉಳಿದಂತೆ ಆಗುಂಬೆಯಲ್ಲೂ 22.8 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರಲ್ಲಿ 26.7 ಡಿಗ್ರಿ ಸೆಲ್ಸಿಯಸ್‌, ಚಾಮರಾಜನಗರದಲ್ಲಿ 29 ಡಿಗ್ರಿ, ಚಿತ್ರದುರ್ಗದಲ್ಲಿ 26.1 ಡಿಗ್ರಿ, ದಾವಣಗೆರೆಯಲ್ಲಿ 27.5 ಡಿಗ್ರಿ. ಹಾಸನದಲ್ಲಿ 28.8 ಡಿಗ್ರಿ, ಚಿಂತಾಮಣಿಯಲ್ಲಿ 31.1 ಡಿಗ್ರಿ, ಮಂಡ್ಯದಲ್ಲಿ 29 ಡಿಗ್ರಿ, ಮೈಸೂರಿನಲ್ಲಿ 28.8 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.

ಉತ್ತರ ಒಳನಾಡಿನ ರಾಯಚೂರಿನಲ್ಲಿ ಅತ್ಯಧಿಕ 34 ಡಿಗ್ರಿ, ಕೊಪ್ಪಳದಲ್ಲಿ 29.9 ಡಿಗ್ರಿ,. ಹಾವೇರಿಯಲ್ಲಿ 24.8 ಡಿಗ್ರಿ, ಕಲಬುರಗಿಯಲ್ಲಿ31.5 ಡಿಗ್ರಿ, ಗದಗದಲ್ಲಿ 28.1 ಡಿಗ್ರಿ. ಧಾರವಾಡದಲ್ಲಿ 26.4 ಡಿಗ್ರಿ, ಬಾಗಲಕೋಟೆಯಲ್ಲಿ 30.3 ಡಿಗ್ರಿ, ವಿಜಯಪುರದಲ್ಲಿ 29.6 ಡಿಗ್ರಿ, ಬೀದರ್‌ನಲ್ಲಿ 28.6 ಡಿಗ್ರಿ, ಬೆಳಗಾವಿಯಲ್ಲಿ 24 ಡಿಗ್ರಿ, ಹೊನ್ನಾವರದಲ್ಲಿ 27.3 ಡಿಗ್ರಿ, ಕಾರವಾರದಲ್ಲಿ 27.9 ಡಿಗ್ರಿ, ಮಂಗಳೂರಿನಲ್ಲಿ 27.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.