Karnataka Weather: ವಿಜಯಪುರ, ಚಾಮರಾಜನಗರದಲ್ಲಿ ಅಧಿಕ ಚಳಿ: ಬೆಂಗಳೂರು ಸಹಿತ ಇತರೆ ಜಿಲ್ಲೆಗಳಲ್ಲಿ ಎಷ್ಟಿದೆ ಕನಿಷ್ಠ ತಾಪಮಾನ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ವಿಜಯಪುರ, ಚಾಮರಾಜನಗರದಲ್ಲಿ ಅಧಿಕ ಚಳಿ: ಬೆಂಗಳೂರು ಸಹಿತ ಇತರೆ ಜಿಲ್ಲೆಗಳಲ್ಲಿ ಎಷ್ಟಿದೆ ಕನಿಷ್ಠ ತಾಪಮಾನ

Karnataka Weather: ವಿಜಯಪುರ, ಚಾಮರಾಜನಗರದಲ್ಲಿ ಅಧಿಕ ಚಳಿ: ಬೆಂಗಳೂರು ಸಹಿತ ಇತರೆ ಜಿಲ್ಲೆಗಳಲ್ಲಿ ಎಷ್ಟಿದೆ ಕನಿಷ್ಠ ತಾಪಮಾನ

Weather Updates ಕರ್ನಾಟಕದ ಉತ್ತರ ಭಾಗದ ಜತೆಗೆ ದಕ್ಷಿಣ ಭಾಗದಲ್ಲೂ ಕನಿಷ್ಠ ತಾಪಮಾನದಲ್ಲಿ ಕುಸಿತ ಕಂಡು ಬಂದು ಚಳಿ ಅನುಭವವಾಗುತ್ತಿದೆ.

ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ ನಡುವೆಯೇ ಬೆಳಗಿನ ವಿಹಾರದ ಕ್ಷಣ.
ಬೆಂಗಳೂರಿನಲ್ಲಿ ಮಂಜು ಮುಸುಕಿದ ವಾತಾವರಣ ನಡುವೆಯೇ ಬೆಳಗಿನ ವಿಹಾರದ ಕ್ಷಣ.

ಬೆಂಗಳೂರು: ಚಾಮರಾಜನಗರ, ಬೆಂಗಳೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳಲ್ಲಿ ಚಳಿಯ ಅನುಭವ ಕೊಂಚ ಹೆಚ್ಚೇ ಆಗುತ್ತಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಕ್ಷಿಣ ಒಳನಾಡಿನ ಹಲವು ಭಾಗದ ಕನಿಷ್ಠ ತಾಪಮಾನದಲ್ಲಿ ಬುಧವಾರದಂದು ಕುಸಿತ ಕಂಡು ಬಂದಿರುವುದರಿಂದ ಚಳಿಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಉತ್ತರ ಒಳನಾಡಿನ ವಿಜಯಪುರದಲ್ಲಿ ಕನಿಷ್ಠ ತಾಪಮಾನದ ದಾಖಲೆ ಮುಂದುವರಿದಿದೆ. ಧಾರವಾಡ, ಬಾಗಲಕೋಟೆ, ಬೀದರ್‌, ಕೊಪ್ಪಳ, ಗದಗದಲ್ಲೂ ಚಳಿಯ ಅನುಭವ ದಟ್ಟವಾಗಿಯೇ ಇದೆ. ಸತತ ಒಂದು ವಾರದಿಂದ ಉತ್ತರದ ನಾಲ್ಕೈದು ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಮುಂದುವರಿದಿದೆ.

ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮುಂದಿನ ಎರಡು ದಿನದಲ್ಲಿ ಕರ್ನಾಟಕದಲ್ಲಿ ಮಳೆಯ ವಾತಾವರಣ ಎಲ್ಲಿಯೂ ಇಲ್ಲ. ಉಷ್ಣಾಂಶದಲ್ಲಿ ಏರಳಿತ ಇರಲಿದೆ. ಕನಿಷ್ಠ ತಾಪಮಾನದಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಲಿದೆ.

ವಿಜಯಪುರದಲ್ಲೇ ಕನಿಷ್ಠ

ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಬುಧವಾರವೂ ಅಧಿಕ ಚಳಿ ಬೆಳಗಿನ ಸಮಯದಲ್ಲಿ ಕಂಡು ಬಂದರೆ ಆನಂತರ ಒಣ ಹವೆಯೇ ಇತ್ತು.

ಕರ್ನಾಟಕದ ಸಮತಟ್ಟಾದ ಪ್ರದೇಶಗಳಲ್ಲಿ ವಿಜಯಪುರದಲ್ಲಿಯೇ ಕಡಿಮೆ ಉಷ್ಣಾಂಶ ದಾಖಲಾಯಿತು. ಎರಡು ದಿನದಿಂದ ಕೊಂಚ ಏರಿದ್ದ ತಾಪಮಾನ ಮತ್ತೆ ವಿಜಯಪುರದಲ್ಲಿ ಕುಸಿದು 10 ಡಿಗ್ರಿ ಸೆಲ್ಸಿಯಸ್‌ ಇದ್ದುದು ಕಂಡು ಬಂದಿತು.

ಬಾಗಲಕೋಟೆ ಹಾಗೂ ಧಾರವಾಡದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿ 12.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಬೆಳಗಾವಿ ವಿಮಾನ ನಿಲ್ದಾಣ ಪ್ರದೇಶದಲ್ಲಿ 13.6 ಡಿಗ್ರಿ , ಬೀದರ್‌ ನಲ್ಲಿ 14 ಡಿಗ್ರಿ, ಹಾವೇರಿಯಲ್ಲಿ 14.2 ಡಿಗ್ರಿ, ಗದಗದಲ್ಲಿ 15.2 ಡಿಗ್ರಿ, ಕೊಪ್ಪಳದಲ್ಲಿ15.7 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.

ಬೆಳಗಾವಿ ನಗರದಲ್ಲಿ 16.5 ಡಿಗ್ರಿ, ಕಲಬುರಗಿಯಲ್ಲಿ18.2 ಡಿಗ್ರಿ, ರಾಯಚೂರಿನಲ್ಲಿ 19.4 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ಕಂಡು ಬಂದಿತು.

ಚಾಮರಾಜನಗರದಲ್ಲಿ ಕುಸಿತ

ದಕ್ಷಿಣ ಒಳನಾಡಿನ ಹಲವು ಕಡೆ ಕನಿಷ್ಠ ಉಷ್ಣಾಂಶ ಕುಸಿತ ಕಂಡಿತು. ಚಾಮರಾಜನಗರದಲ್ಲಿ 11.4 ಡಿಗ್ರಿ ಅತಿ ಕಡಿಮೆ ಉಷ್ಣಾಂಶ ದಾಖಲಾಯಿತು. ಕೋಲಾರ ಜಿಲ್ಲೆ ಚಿಕ್ಕನಹಳ್ಳಿಯಲ್ಲಿ12.5 ಡಿಗ್ರಿ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ 12.8 ಡಿಗ್ರಿ, ಮಂಡ್ಯದಲ್ಲಿ 13 ಡಿಗ್ರಿ ಹಾಗೂ ದಾವಣಗೆಯಲ್ಲಿ13.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನವು ದಾಖಲಾಗಿತ್ತು.

ಚಿಕ್ಕಮಗಳೂರು ಹಾಗೂ ಶಿವಮೊಗ್ಗದಲ್ಲಿ 14 ಡಿಗ್ರಿ, ಹಾಸನದಲ್ಲಿ 15.2 ಡಿಗ್ರಿ. ಚಿತ್ರದುರ್ಗದಲ್ಲಿ 15.6 ಡಿಗ್ರಿ, ಮೈಸೂರಲ್ಲಿ17 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶವು ಕಂಡು ಬಂದಿತು.

ಕರಾವಳಿಯಲ್ಲಿ ಬಿಸಿಲು-ಚಳಿ

ಕರಾವಳಿ ಭಾಗದಲ್ಲಿ ಚಳಿಯ ಪ್ರಮಾಣ ಅಷ್ಟಾಗಿ ಇರಲಿಲ್ಲ. ಕಾರವಾರದಲ್ಲಿ 20 ಡಿಗ್ರಿ ಸೆಲ್ಸಿಯಸ್‌, ಹೊನ್ನಾವರದಲ್ಲಿ 20.8 ಡಿಗ್ರಿ, ಮಂಗಳೂರಿನ ಪಣಂಬೂರಿನಲ್ಲಿ 20.2 ಡಿಗ್ರಿ ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ 21.2 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಯಿತು.

ಬೆಂಗಳೂರು ಹವಾಮಾನ

ಬೆಂಗಳೂರಿನಲ್ಲಿ ಈಗಾಗಲೇ ಬೆಳಗಿನ ಜಾವದ ವೇಳೆ ದಟ್ಟ ಮಂಜು ಮುಸುಕಿದ ವಾತಾವರಣ ಅಲ್ಲಲ್ಲಿ ಕಂಡು ಬಂದಿದೆ. ಇದು ಮುಂದಿನ ಕೆಲವು ದಿನವೂ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಅಂದರೆ ಶುಕ್ರವಾರ ಬೆಳಗಿನವರೆಗೂ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಹೊತ್ತಿಗೆ ಮಂಜು ಇಲ್ಲವೇ ದಟ್ಟವಾದ ಮಂಜು ಮುಸುಕಿದ ಸನ್ನಿವೇಶ ಕಾಣಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ತಾಪಮಾನವು 15 ಡಿಗ್ರಿ ಸೆಲ್ಸಿಯಸ್‌ ನಷ್ಟು ಇರಲಿದೆ.

ಮುಂದಿನ 48 ಗಂಟೆಗಳಲ್ಲಿ ಅಂದರೆ ಶನಿವಾರ ಬೆಳಗಿನವರೆಗೆ ಕೆಲವು ಭಾಗಗಳಲ್ಲಿ ಮಂಜು ಮುಸುಕಿದ ಇಲ್ಲವೇ ದಟ್ಟ ಮಂಜು ಆವರಿಸಿದ ವಾತಾವರಣ ಕಂಡು ಬರಲಿದೆ. ಭಾಗಶಃ ಮೋಡ ಕವಿದ ವಾತಾವರಣ ಶುಕ್ರವಾರವೂ ಇರಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಹಾಗೂ ಕನಿಷ್ಠ ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು ತಿಳಿಸಿದೆ.

ಬುಧವಾರವೂ ಬೆಂಗಳೂರಿನಲ್ಲಿ ಚಳಿಯ ವಾತಾವರಣವೇ ಇತ್ತು. ಬೆಂಗಳೂರು ನಗರದಲ್ಲಿ ಕನಿಷ್ಠ ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ ಪ್ರದೇಶದಲ್ಲಿ 15.4 ಡಿಗ್ರಿ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ15.6 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ ದಾಖಲಾಯಿತು.

===

Whats_app_banner