ಬೆಂಗಳೂರು, ಕಲಬುರಗಿ ನಗರ ಸಹಿತ 10 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ; ಚಿಕ್ಕಮಗಳೂರು, ಚಾಮರಾಜನಗರದಲ್ಲಿ ಭಾರೀ ಚಳಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು, ಕಲಬುರಗಿ ನಗರ ಸಹಿತ 10 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ; ಚಿಕ್ಕಮಗಳೂರು, ಚಾಮರಾಜನಗರದಲ್ಲಿ ಭಾರೀ ಚಳಿ

ಬೆಂಗಳೂರು, ಕಲಬುರಗಿ ನಗರ ಸಹಿತ 10 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ; ಚಿಕ್ಕಮಗಳೂರು, ಚಾಮರಾಜನಗರದಲ್ಲಿ ಭಾರೀ ಚಳಿ

Karnataka Weather: ಕರ್ನಾಟಕದ ಬೆಂಗಳೂರು ನಗರ,ಕೋಲಾರ, ಕಲಬುರಗಿ, ರಾಯಚೂರು ಸಹಿತ ಹತ್ತು ಜಿಲ್ಲೆಗಳಲ್ಲಿ ಕೆಲ ಭಾಗದಲ್ಲಿ ಬುಧವಾರ ಹಗುರ ಮಳೆಯಾಗುವ ಮುನ್ಸೂಚನೆಯಿದೆ.

ಬೆಂಗಳೂರು ನಗರದಲ್ಲಿ ಬುಧವಾರ ಹಗುರ ಮಳೆಯಾಗುವ ಮುನ್ಸೂಚನೆಯಿದೆ
ಬೆಂಗಳೂರು ನಗರದಲ್ಲಿ ಬುಧವಾರ ಹಗುರ ಮಳೆಯಾಗುವ ಮುನ್ಸೂಚನೆಯಿದೆ

ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕಲಬುರಗಿ, ರಾಯಚೂರು ಸೇರಿದಂತೆ ಬೆಂಗಳೂರು ಭಾಗ ಹಾಗೂ ಕಲ್ಯಾಣ ಕರ್ನಾಟಕ ಭಾಗವೂ ಸೇರಿದಂತೆ ಒಟ್ಟು 10 ಜಿಲ್ಲೆಗಳಲ್ಲಿ ಡಿಸೆಂಬರ್‌ 25ರಂದು ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನೀಡಿದೆ. ಈ 10 ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಬುಧವಾರದಂದು ಹೆಚ್ಚಿನ ಭಾಗದಲ್ಲಿ ಬೆಳಿಗ್ಗೆ ಚಳಿಯ ವಾತಾವರಣ ಇದ್ದು ಆನಂತರ ಒಣಹವೆ ಮುಂದುವರಿಯಲಿದೆ. ಕರ್ನಾಟಕದಲ್ಲಿ ಚಿಕ್ಕಮಗಳೂರಿನಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದ್ದರೆ, ಸಮತಟ್ಟಾದ ಪ್ರದೇಶದಲ್ಲಿನ ಕಡಿಮೆ ಉಷ್ಣಾಂಶ ಚಾಮರಾಜನಗರದಲ್ಲಿ ದಾಖಲಾಗಿದೆ. ಮಲೆನಾಡು ಭಾಗದಲ್ಲಿ ಮುಂದಿನ ಮೂರು ದಿನ ಉಷ್ಣಾಂಶದಲ್ಲಿ ಮತ್ತಷ್ಟು ಕುಸಿತವಾಗಿ ಚಳಿ ಅಧಿಕವಾಗಲಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಳೆ ಎಲ್ಲೆಲ್ಲಿ

ಕರ್ನಾಟಕದ ಕೆಲವು ಭಾಗಗಳಲ್ಲಿ ಬುಧವಾರವೂ ಸೇರಿದಂತೆ ಮೂರು ದಿನ ಮಳೆಯಾಗುವ ಮುನ್ಸೂಚನೆಯಿದೆ. ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ, ಬುಧವಾರದಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಕಲಬುರಗಿ, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಬಹುದು. ಅದು ಸೀಮಿತ ಪ್ರದೇಶದಲ್ಲಿ ಮಳೆಯಾಗಬಹುದು ಎಂದು ತಿಳಿಸಲಾಗಿದೆ.

ಈ ಭಾಗಗಳನ್ನು ಹೊರತುಪಡಿಸಿದರೆ ಮಲೆನಾಡು, ಕರಾವಳಿ ಹಾಗೂ ಹಳೆ ಮೈಸೂರು ಭಾಗ ಸಹಿತ ಎಲ್ಲೆಡೆ ಒಣ ಹವೆಯ ವಾತಾವರಣ ಕಂಡು ಬರಲಿದೆ.

ಗುರುವಾರದಂದು ಮೈಸೂರು, ಚಾಮರಾಜನಗರ, ರಾಮನಗರ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಗದಗ, ವಿಜಯಪುರ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್‌ ಜಿಲ್ಲೆಗಳ ಒಂದೆರಡು ಕಡೆಗಳಲ್ಲೊ ಹಗುರ ಮಳೆಯಾಗಬಹುದು.

ಶುಕ್ರವಾರದಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆ ಬೀಳುವ ಮುನ್ಸೂಚನೆಯಿದೆ.

ಚಳಿ ವಾತಾವರಣ ಹೇಗಿದೆ

ಕರ್ನಾಟಕದ ಉತ್ತರ ಭಾಗದಲ್ಲಿ ಚಳಿಯ ಪ್ರಮಾಣ ಯಥಾರೀತಿ ಮುಂದುವರಿದಿದೆ. ಮಲೆನಾಡಿನ ಚಿಕ್ಕಮಗಳೂರಿನ ಅತಿ ಕಡಿಮೆ ಉಷ್ಣಾಂಶ ದಾಖಲಾದರೆ, ಸಮತಟ್ಟು ಪ್ರದೇಶದಲ್ಲಿ ಚಾಮರಾಜನಗರದಲ್ಲಿ ಕಡಿಮೆ ಉಷ್ಣಾಂಶ ಕಂಡು ಬಂದಿದೆ.

ಬೆಳಗಾವಿ ವಿಮಾನ ನಿಲ್ದಾಣ 17.5 ಡಿಗ್ರಿ ಸೆಲ್ಸಿಯಸ್‌

ಬೆಳಗಾವಿ ನಗರ 16.2 ಡಿಗ್ರಿ ಸೆಲ್ಸಿಯಸ್‌

ಬೀದರ್‌ 17.5 ಡಿಗ್ರಿ ಸೆಲ್ಸಿಯಸ್‌

ವಿಜಯಪುರ 16 ಡಿಗ್ರಿ ಸೆಲ್ಸಿಯಸ್‌

ಬಾಗಲಕೋಟೆ 17.8 ಡಿಗ್ರಿ ಸೆಲ್ಸಿಯಸ್‌

ಧಾರವಾಡ 16.5 ಡಿಗ್ರಿ ಸೆಲ್ಸಿಯಸ್‌

ಗದಗ 17.9 ಡಿಗ್ರಿ ಸೆಲ್ಸಿಯಸ್‌

ಕಲಬುರಗಿ 19 ಡಿಗ್ರಿ ಸೆಲ್ಸಿಯಸ್‌

ಹಾವೇರಿ 18 ಡಿಗ್ರಿ ಸೆಲ್ಸಿಯಸ್‌

ಕೊಪ್ಪಳ 18.3 ಡಿಗ್ರಿ ಸೆಲ್ಸಿಯಸ್‌

ರಾಯಚೂರು 17 ಡಿಗ್ರಿ ಸೆಲ್ಸಿಯಸ್‌

ಆಗುಂಬೆ 17.5 ಡಿಗ್ರಿ ಸೆಲ್ಸಿಯಸ್‌

ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣ 16.5 ಡಿಗ್ರಿ ಸೆಲ್ಸಿಯಸ್‌

ಬೆಂಗಳೂರು ನಗರ 17.1 ಡಿಗ್ರಿ ಸೆಲ್ಸಿಯಸ್‌

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 18.6 ಡಿಗ್ರಿ ಸೆಲ್ಸಿಯಸ್‌

ಚಾಮರಾಜನಗರ 15.5 ಡಿಗ್ರಿ ಸೆಲ್ಸಿಯಸ್‌

ಚಿಕ್ಕಮಗಳೂರು 10.2 ಡಿಗ್ರಿ ಸೆಲ್ಸಿಯಸ್‌

ಚಿತ್ರದುರ್ಗ 16.9 ಡಿಗ್ರಿ ಸೆಲ್ಸಿಯಸ್‌

ದಾವಣಗೆರೆ 16 ಡಿಗ್ರಿ ಸೆಲ್ಸಿಯಸ್‌

ಹಾಸನ 17.4 ಡಿಗ್ರಿ ಸೆಲ್ಸಿಯಸ್‌

ಚಿಂತಾಮಣಿ 18.7 ಡಿಗ್ರಿ ಸೆಲ್ಸಿಯಸ್‌

ಮಂಡ್ಯ 18.7 ಡಿಗ್ರಿ ಸೆಲ್ಸಿಯಸ್‌

ಮಡಿಕೇರಿ 17.1 ಡಿಗ್ರಿ ಸೆಲ್ಸಿಯಸ್‌

ಮೈಸೂರು17.2 ಡಿಗ್ರಿ ಸೆಲ್ಸಿಯಸ್‌

ಶಿವಮೊಗ್ಗ 17 ಡಿಗ್ರಿ ಸೆಲ್ಸಿಯಸ್‌

ಹೊನ್ನಾವರ 19.5 ಡಿಗ್ರಿ ಸೆಲ್ಸಿಯಸ್‌

ಕಾರವಾರ 21.2 ಡಿಗ್ರಿ ಸೆಲ್ಸಿಯಸ್‌

ಶಿರಾಲಿ 16.6 ಡಿಗ್ರಿ ಸೆಲ್ಸಿಯಸ್‌

ಮಂಗಳೂರು 22 ವಿಮಾನ ನಿಲ್ದಾಣ ಡಿಗ್ರಿ ಸೆಲ್ಸಿಯಸ್‌

ಪಣಂಬೂರು 22 ಡಿಗ್ರಿ ಸೆಲ್ಸಿಯಸ್‌

ಬೆಂಗಳೂರು ಹವಾಮಾನ

ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಹಗುರ ಮಳೆ ಆಗಬಹುದು. ಕೆಲವು ಕಡೆಗಳಲ್ಲಿ ಬೆಳಗಿನ ಜಾವವೇ ದಟ್ಟ ಮಂಜು ಇರಲಿದೆ. ನಂತರ ಒಣಹವೆಯ ವಾತಾವರಣ ಕಂಡು ಬರಲಿದೆ. ಬೆಂಗಳೂರಿನಲ್ಲಿ ಬುಧವಾರ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಗುರುವಾರ ಗರಿಷ್ಠ ಉಷ್ಣಾಂಶ ಕೊಂಚ ಇಳಿಕೆಯಾಗುವ ಸೂಚನೆಯಿದೆ.

Whats_app_banner