Karnataka Rains: ಕರ್ನಾಟಕದ 18 ಜಿಲ್ಲೆಗಳಲ್ಲಿ ಇಂದು, ನಾಳೆ ಭಾರೀ ಮಳೆ ಮುನ್ಸೂಚನೆ, ರೆಡ್ ಅಲರ್ಟ್
weather updates ಕರ್ನಾಟಕದ ಬಹುತೇಕ ಎಲ್ಲಾ ಭಾಗಗಳಲ್ಲೂ ಸೋಮವಾರ ಹಾಗೂ ಮಂಗಳವಾರ ಮಳೆ( Karnataka Rain) ಇದೆ. ಬೆಂಗಳೂರು ನಗರದಲ್ಲೂ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಪ್ರವೇಶಿಸಿರುವ ಮುಂಗಾರು ಮಳೆ ಅಬ್ಬರ ಜೋರಾಗಿದೆ.ಎರಡು ಮೂರು ದಿನಗಳಿಂದಲೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆ, ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ. ಕರಾವಳಿ. ಉತ್ತ ಕನ್ನಡ, ಮಲೆನಾಡು ಭಾಗದಲ್ಲಿ ಮಳೆಯಾಗಲಿದೆ. ಅದರಲ್ಲೂ 18 ಜಿಲ್ಲೆಗಳಲ್ಲಿ ಮಳೆ ಗುಡುಗು ಹಾಗೂ ಸಿಡಿಲಿನ ಸಹಿತ ಆಗಬಹುದು ಎಂದು ತಿಳಿಸಲಾಗಿದೆ. ಇದಲ್ಲದೇ ಬೆಂಗಳೂರು ನಗರದಲ್ಲೂ ಎರಡು ದಿನ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು ಎಂದು ಮಾಹಿತಿ ನೀಡಲಾಗಿದೆ.
ಜೂನ್ 10ರ ಸೋಮವಾರದಂದು ಉತ್ತರ ಕನ್ನಡ ಜಿಲ್ಲೆಯ ಮೇಲೆ ಚದುರಿದ ಭಾರೀ ಮಳೆಯಿಂದ ಅತೀ ಭಾರೀ ಮಳೆ ಸುರಿಯಲಿದೆ. ಅದು ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಗಳು ಅಧಿಕವಾಗಿವೆ. ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಿಂದ ಅತೀ ಭಾರೀ ಮಳೆಯಾಗಲಿದ್ದು, ಗುಡುಗಿನ ಮುನ್ನೆಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಭಾರೀ ಮಳೆ ಗುಡುಗು ಸಹಿತ ಆಗಬಹುದು. ಬೆಳಗಾವಿ, ಗದಗ, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ ಚದುರಿನ ಭಾರೀ ಮಳೆಯಿಂದ ಅತೀ ಮಳೆ ಆಗಬಹುದು. ಬಾಗಲಕೋಟೆ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲೂ ಗುಡುಗು ಸಹಿತ ಮಳೆ ಸುರಿಯಲಿದೆ. ರಾಯಚೂರು ಜಿಲ್ಲೆಯಾದ್ಯಂತ ಗಾಳಿಯೊಂದಿಗೆ ಭಾರೀ ಮಳೆ ಗುಡುಗು ಸಹಿತವಾಗಿಯೇ ಇರಲಿದೆ. ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದು. ಅದೇ ರೀತಿ ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯಲ್ಲೂ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ. ಉಳಿದಂತೆ ಚಿತ್ರದುರ್ಗ, ಹಾಸನ, ಮೈಸೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆ, ಗುಡುಗು ಕೂಡ ಆಗಬಹುದು ಎಂದು ತಿಳಿಸಲಾಗಿದೆ.
ಜೂನ್ 11ರ ಮಂಗಳವಾರದಂದು ಬೆಳಗಾವಿ ಜಿಲ್ಲೆಯಾದ್ಯಂತ ಚದುರಿನ ಭಾರೀ ಗಾಳಿಯೊಂದಿಗೆ ಪ್ರತ್ಯೇಕವಾದ ತೀವ್ರ ಮಳೆಯು ಬೀಳಿದೆ. ಗದಗ, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಯಾದ್ಯಂತ ಚದುರಿನ ಭಾರೀ ಗಾಳಿಯೊಂದಿಗೆ ತೀವ್ರ ಮಳೆಯಾಗಲಿದೆ. ಉತ್ತರ ಕನ್ನಡ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳಲ್ಲೂ ಅತಿಯಾದ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಗಳಲ್ಲೂ ಭಾರೀ ಮಳೆ ಸುರಿಯಲಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಅದೇ ರೀತಿ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲ ಕೆಲವು ಸ್ಥಳಗಳಲ್ಲಿ ಹಗುರವಾಗಿ ಮಳೆಯಾಗಬಹುದು ಎಂದು ತಿಳಿಸಲಾಗಿದೆ.
ಸಮುದ್ರ ಅಲೆಯ ಎಚ್ಚರಿಕೆ
ಕರಾವಳಿ ಉದ್ದಕ್ಕೂ ಚಂಡಮಾರುತದ ವಾತಾವರಣವಿದ. ಗಾಳಿಯೂ ಅತೀ ವೇಗವಾಗಿ ಚಲಿಸುವುದರಿಂಧ ಸೋಮವಾರ ಮಧ್ಯಾಹ್ನದಿಂದ ರಾತ್ರಿವರಗೂ ಮೀನುಗಾರರರು ಯಾವುದೇ ಕಾರಣಕ್ಕೂ ಮೀನುಗಾರಿಕೆಗೆ ಇಳಿಯಬಾರದು. ದಕ್ಷಿಣ ಕನ್ನಡದ ಮುಲ್ಕಿಯಿಂದ ಮಂಗಳೂರು, ಉಡುಪಿಯ ಬೈಂದೂರಿನಿಂದ ಕಾಪು, ಉತ್ತರ ಕರ್ನಾಟಕದ ಮಾಜಾಳಿಯಿಂದ ಭಟ್ಕಳದವರೆಗೂ ಎತ್ತರದ ಅಲೆಗಳು ಇರಲಿವೆ ಎಂದು ತಿಳಿಸಲಾಗಿದೆ.
ಬೆಂಗಳೂರು ಮಳೆ
ಬೆಂಗಳೂರು ನಗರದಲ್ಲೂ ಮುಂದಿನ 48 ಗಂಟೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಸಂಜೆ ನಂತರ ಗುಡುಗಿನ ವಾತಾವರಣವೂ ಇರಬಹುದು. ಬೆಂಗಳೂರು ನಗರದ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್ ಮತ್ತು 21 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಬಹುದು ಎಂದು ತಿಳಿಸಲಾಗಿದೆ.