Karnataka Rains: ಗೌರಿ ಗಣೇಶ ಹಬ್ಬಕ್ಕೆ ಬೆಂಗಳೂರಲ್ಲಿ ಮಳೆ ಬಿಡುವು, ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ, ಇತರೆಡೆ ಹೇಗಿದೆ ಹವಾಮಾನ-karnataka weather update bengaluru weather today septmeber5 rain prediction dakshina kannada belagavi udupi shimoga kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಗೌರಿ ಗಣೇಶ ಹಬ್ಬಕ್ಕೆ ಬೆಂಗಳೂರಲ್ಲಿ ಮಳೆ ಬಿಡುವು, ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ, ಇತರೆಡೆ ಹೇಗಿದೆ ಹವಾಮಾನ

Karnataka Rains: ಗೌರಿ ಗಣೇಶ ಹಬ್ಬಕ್ಕೆ ಬೆಂಗಳೂರಲ್ಲಿ ಮಳೆ ಬಿಡುವು, ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ, ಇತರೆಡೆ ಹೇಗಿದೆ ಹವಾಮಾನ

Karnataka Weather ಕರ್ನಾಟಕದಲ್ಲಿ ಗೌರಿ ಗಣೇಶನ ಹಬ್ಬಕ್ಕೆ( Gowri Ganesha Festival) ಮಳೆ ಹೇಗಿರಬಹುದು.ಎಲ್ಲೆಲ್ಲಿ ಬಿಡುವು ಇದೆ. ಇಲ್ಲಿದೆ ವರದಿ

ಕರ್ನಾಟಕದಲ್ಲಿ ಗೌರಿ ಗಣೇಶನ ಹಬ್ಬಕ್ಕೆ ಮಳೆ ಬರಬಹುದೇ?
ಕರ್ನಾಟಕದಲ್ಲಿ ಗೌರಿ ಗಣೇಶನ ಹಬ್ಬಕ್ಕೆ ಮಳೆ ಬರಬಹುದೇ? (Shutter Stock)

ಬೆಂಗಳೂರು: ಕರ್ನಾಟಕದಲ್ಲಿ ಗೌರಿ ಗಣೇಶದ( Gowri Ganesha Festival) ಸಂಭ್ರಮಾಚರಣೆಗೆ ಈ ಬಾರಿ ಮಳೆ ಸಾಥ್‌ ಕೊಡಬಹುದು. ಅಂದರೆ ಕರ್ನಾಟಕದ( Karnataka Rains) ಕರಾವಳಿ, ಮಲೆನಾಡು ಸೇರಿ ಕೆಲವು ಭಾಗಗಳಲ್ಲಿ ಮಾತ್ರ ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯ ಸನ್ನಿವೇಶವಿದೆ. ಉಳಿದಂತೆ ಬೆಂಗಳೂರು( Bangalore Rains), ಮೈಸೂರು( Mysore Rains), ಹುಬ್ಬಳ್ಳಿ(Hubli Rains) ಸಹಿತ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗೌರಿ ಹಾಗೂ ಗಣೇಶ ಹಬ್ಬದಂದು ಹಗುರದಿಂದ ಸಾಧಾರಣ ಮಳೆ ಅಲ್ಲಲ್ಲಿ ಆಗಬಹುದು. ಮಳೆ ಬಹುತೇಕ ಭಾಗಗಳಲ್ಲಿ ಬಿಡುವು ನೀಡಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು( IMD Bangalore Center) ಹೇಳಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹಬ್ಬದ ದಿನ ಮಳೆ ಹೇಗಿದೆ

ಗೌರಿ ಹಾಗೂ ಗಣೇಶ ಹಬ್ಬ ಇರುವ ಶುಕ್ರವಾರ ಹಾಗೂ ಶನಿವಾರದಂದು ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗಬಹುದು. ಗೌರಿ ಹಬ್ಬದ ದಿನವಾದ ಶುಕ್ರವಾರ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಳೂರು, ಹಾಸನ ಹಾಗೂ ಕೊಡಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಈ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉಳಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.

ಶನಿವಾರದಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಬೆಳಗಾವಿ, ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಗಳಿವೆ. ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಇರಲಿದೆ. ಇನ್ನು ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ತಿಳಿಸಲಾಗಿದೆ.

ಬೆಂಗಳೂರು ಮಳೆ

ಬೆಂಗಳೂರಿನಲ್ಲೂ ಮುಂದಿನ 48 ಗಂಟೆಯವರೆಗೂ ಭಾರೀ ಮಳೆಯ ಆತಂಕವಿಲ್ಲ. ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಡು ಬರಲಿದೆ. ಅಲ್ಲಲ್ಲಿ ಹಗುರವಾಗಿ ಮಳೆಯಾಗಬಹುದು ಎನ್ನುವ ಸೂಚನೆಗಳಿವೆ. ತಾಪಮಾನವು ಕ್ರಮವಾಗಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗಬಹುದು.

ಗುರುವಾರದ ಮಳೆ

ಗುರುವಾರದಂದು ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗಲಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸೂಚನೆಗಳಿವೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯಾಗುವ ಸೂಚನೆಯಿದೆ.

ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರೀ ಮಳೆಯಾಗಬಹುದು. ಬೆಳಗಾವಿ ಜಿಲ್ಲೆಯಲ್ಲೂ ಕೆಲವು ದಿನಗಳ ಬಿಡುವಿನ ಬಳಿಕ ಹೆಚ್ಚಿನ ಮಳೆಯಾಗಬಹುದು. ಆರೂ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಅನ್ನು ಘೋಷಿಸಲಾಗಿದೆ.

ಉಳಿದಂತೆ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸೂಚನೆಗಳಿವೆ.

ಎಲ್ಲೆಲ್ಲಿ ಮಳೆಯಾಗಿದೆ

ಮಂಗಳವಾರ ಹಾಗೂ ಬುಧವಾರದಂದು ಕರ್ನಾಟಕದ ಹಲವು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ ರಾಕ್‌, ಬೀದರ್‌ ನಗರ, ಭಾಲ್ಕಿಯಲ್ಲಿ ತಲಾ 9 ಸೆ.ಮೀ, ಶಿವಮೊಗ್ಗದ ಆಗುಂಬೆಯಲ್ಲಿ 7 ಸೆ.ಮೀ ಉತ್ತಮ ಮಳೆಯಾಗಿದೆ.

ರಾಯಚೂರು ಜಿಲ್ಲೆಯ ಗಬ್ಬೂರು, ರಾಯಚೂರು, ಸಿಂದನೂರು, ದೇವದುರ್ಗ, ಮಾನ್ವಿ, ಯಾದಗಿರಿ ಜಿಲ್ಲೆ ಸುರಪುರ, ಶಹಾಪುರ, ಕವಡಿಮಟ್ಟಿ, ಉತ್ತರ ಕನ್ನಡ ಜಿಲ್ಲೆ ಗೇರುಸೊಪ್ಪ, ಮಂಕಿ, ಶಿರಾಲಿ, ಹೊನ್ನಾವರ, ಯಲ್ಲಾಪುರ, ಗೋಕರ್ಣ, ಕಾರವಾರ, ಸಿದ್ದಾಪುರ, ಬೆಳಗಾವಿ ಜಿಲ್ಲೆಯ ಲೋಂಡಾ, ಬೀದರ್‌ ಜಿಲ್ಲೆಯ ಮನ್ನಳ್ಳಿ, ಔರಾದ್‌, ಚಿಟಗುಪ್ಪ, ಉಡುಪಿ ಜಿಲ್ಲೆ ಸಿದ್ದಾಪುರ, ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಪಣಂಬೂರು, ಬೆಳ್ತಂಗಡಿ, ಧಾರವಾಡ ಜಿಲ್ಲೆಯ ಕಲಘಟಗಿ, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ಇಂಡಿ, ಝಳಕಿ ಕ್ರಾಸ್‌, ಸಿಂದಗಿ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಕಮ್ಮರಡಿ, ಕಳಸ, ಜಯಪುರ, ಕೊಟ್ಟಿಗೆಹಾರ, ಎನ್‌ಆರ್‌ ಪುರ, ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ, ಹುಬ್ಬಳ್ಳಿ ನಗರ, ತುಮಕೂರು ಜಿಲ್ಲೆಯ ವೈ.ಎನ್‌.ಹೊಸಕೋಟೆ, ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿಯಲ್ಲೂ ಮಳೆಯಾಗಿದೆ.