Karnataka Weather: ದಾವಣಗೆರೆ, ಕಲಬುರಗಿ, ರಾಯಚೂರಿನಲ್ಲಿ ಹೆಚ್ಚಾಯ್ತು ಬಿಸಿಲಿನ ಪ್ರಮಾಣ: ಬೆಂಗಳೂರಿನ ಉಷ್ಣಾಂಶದಲ್ಲೂ ಏರಿಕೆ
Karnataka Weather: ಕರ್ನಾಟಕದಲ್ಲಿ ಈ ಬಾರಿ ಫೆಬ್ರವರಿ ಮೂರನೇ ವಾರದ ಹೊತ್ತಿಗೆ ಬಿಸಿಲಿನ ಪ್ರಮಾಣ ಏರಿದೆ. ಅದರಲ್ಲೂ ಕಲಬುರಗಿ, ರಾಯಚೂರು, ದಾವಣಗೆರೆ ಭಾಗದಲ್ಲಿ ಉಷ್ಣಾಂಶ ಏರಿಕೆ ಕಂಡಿದೆ.

Karnataka Weather: ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗುತ್ತಿದೆ. ಮಾರ್ಚ್‌ಗೂ ಮುನ್ನವೇ ಫೆಬ್ರವರಿಯಲ್ಲಿಯೇ ಕಲಬುರಗಿ, ದಾವಣಗೆರೆ, ರಾಯಚೂರು ಸಹಿತ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳ ಜತೆಗೆ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲೂ ಬಿಸಿಲ ಕಾವು ಜೋರಾಗತೊಡಗಿದೆ. ಚಾಮರಾಜನಗರ ಸಹಿತ ಕೆಲವು ಕಡೆಗಳಲ್ಲಿ ಚಳಿಯ ಜತೆಗೆ ಉಷ್ಣಾಂಶದಲ್ಲಿ ಏರಿಕೆಯಾಗಿರುವ ಸನ್ನಿವೇಶ ಮುಂದುವರಿದಿದೆ. ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರುತ್ತಿದ್ದು, ಮುಂದಿನ ವಾರಗಳಲ್ಲಿ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, 34 ಡಿಗ್ರಿ ಸೆಲ್ಸಿಯಸ್ ತಲುಪಿದೆ.
ಕರ್ನಾಟಕದ ಹಲವು ಭಾಗಗಳ ಉಷ್ಣಾಂಶದಲ್ಲಿ ಏರಿಕೆಯಾಗಿದೆ. ಕರಾವಳಿಯ ಹೊನ್ನಾವರ, ಕಾರವಾರದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಚಿಂತಾಮಣಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ. ಮೈಸೂರು, ಹಾಸನ, ಬೆಂಗಳೂರಿನಲ್ಲಿ ಸಾಮಾನ್ಯಕ್ಕಿಂತ ಉಷ್ಣಾಂಶ ಹೆಚ್ಚಿದೆ. ಕಲಬುರಗಿ, ದಾವಣಗೆರೆ, ರಾಯಚೂರು ಭಾಗದಲ್ಲೂ ಹೆಚ್ಚಳ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಉಷ್ಣಾಂಶದಲ್ಲಿ ಕೊಂಚ ಏರಿಕೆಯಾಗಬಹುದು. ಮುಖ್ಯವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡವಿಲ್ಲದ ಆಕಾಶವಿರಲಿದೆ. ಕೆಲವು ಪ್ರದೇಶಗಳಲ್ಲಿ ಮಂಜು ಇರಬಹುದು. ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶವು ಕ್ರಮವಾಗಿ 34 ಮತ್ತು 18 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಬಹುದು.
ಎಲ್ಲೆಲ್ಲಿ ಉಷ್ಣಾಂಶ ಹೇಗಿದೆ.
ಕರ್ನಾಟಕದ ಹಲವು ಕಡೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದ ಪ್ರಮಾಣ ಹೀಗಿದೆ.
ಬೆಳಗಾವಿಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಉಷ್ಣಾಂಶ ಡಿಗ್ರಿ ಸೆಲ್ಸಿಯಸ್
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಗರಿಷ್ಠ33.2 ಉಷ್ಣಾಂಶ ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 15.4 ಡಿಗ್ರಿ ಸೆಲ್ಸಿಯಸ್
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 36.6 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18.6 ಡಿಗ್ರಿ ಸೆಲ್ಸಿಯಸ್
ಧಾರವಾಡದಲ್ಲಿ ಗರಿಷ್ಠ ಉಷ್ಣಾಂಶ 34.6 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 15.5 ಡಿಗ್ರಿ ಸೆಲ್ಸಿಯಸ್
ಬೀದರ್‌ನಲ್ಲಿ ಗರಿಷ್ಠ ಉಷ್ಣಾಂಶ 32.2 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್
ವಿಜಯಪುರದಲ್ಲಿ ಗರಿಷ್ಠ ಉಷ್ಣಾಂಶ 33.5 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್
ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್
ಹಾವೇರಿಯಲ್ಲಿ ಗರಿಷ್ಠ ಉಷ್ಣಾಂಶ 34.4 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18.8 ಡಿಗ್ರಿ ಸೆಲ್ಸಿಯಸ್
ಗದಗದಲ್ಲಿ ಗರಿಷ್ಠ ಉಷ್ಣಾಂಶ 34.6 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 16.8 ಡಿಗ್ರಿ ಸೆಲ್ಸಿಯಸ್
ಕೊಪ್ಪಳದಲ್ಲಿ ಗರಿಷ್ಠ ಉಷ್ಣಾಂಶ 33.5 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 19.1 ಡಿಗ್ರಿ ಸೆಲ್ಸಿಯಸ್
ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 34.4 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 23.3 ಡಿಗ್ರಿ ಸೆಲ್ಸಿಯಸ್
ಹೊನ್ನಾವರದಲ್ಲಿ ಗರಿಷ್ಠ ಉಷ್ಣಾಂಶ 33.2 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22.9 ಡಿಗ್ರಿ ಸೆಲ್ಸಿಯಸ್
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗರಿಷ್ಠ ಉಷ್ಣಾಂಶ 32.5 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 23.4 ಡಿಗ್ರಿ ಸೆಲ್ಸಿಯಸ್
ಪಣಂಬೂರಿನಲ್ಲಿ ಗರಿಷ್ಠ ಉಷ್ಣಾಂಶ 32.5 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 23.6 ಡಿಗ್ರಿ ಸೆಲ್ಸಿಯಸ್
ಶಿವಮೊಗ್ಗದ ಆಗುಂಬೆಯಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18.8 ಡಿಗ್ರಿ ಸೆಲ್ಸಿಯಸ್
ಚಾಮರಾಜನಗರದಲ್ಲಿ ಗರಿಷ್ಠ ಉಷ್ಣಾಂಶ 34.5 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 13.2 ಡಿಗ್ರಿ ಸೆಲ್ಸಿಯಸ್
ಚಿತ್ರದುರ್ಗದಲ್ಲಿ ಗರಿಷ್ಠ ಉಷ್ಣಾಂಶ 34.3 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್
ದಾವಣಗೆರೆಯಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್
ಹಾಸನದಲ್ಲಿ ಗರಿಷ್ಠ ಉಷ್ಣಾಂಶ 31.8 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 17.6 ಡಿಗ್ರಿ ಸೆಲ್ಸಿಯಸ್
ಚಿಂತಾಮಣಿಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 13.3 ಡಿಗ್ರಿ ಸೆಲ್ಸಿಯಸ್
ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 34.6 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 16.7 ಡಿಗ್ರಿ ಸೆಲ್ಸಿಯಸ್
ಮಡಿಕೇರಿಯಲ್ಲಿ ಗರಿಷ್ಠ ಉಷ್ಣಾಂಶ 33.6 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್
ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 34.1 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 19.4 ಡಿಗ್ರಿ ಸೆಲ್ಸಿಯಸ್
