Karnataka Weather: ಇಂದು, ನಾಳೆ ಕರ್ನಾಟಕದ 5 ಜಿಲ್ಲೆಗಳಲ್ಲಿ, ನ.22,23ರಂದು 9 ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಇಂದು, ನಾಳೆ ಕರ್ನಾಟಕದ 5 ಜಿಲ್ಲೆಗಳಲ್ಲಿ, ನ.22,23ರಂದು 9 ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ

Karnataka Weather: ಇಂದು, ನಾಳೆ ಕರ್ನಾಟಕದ 5 ಜಿಲ್ಲೆಗಳಲ್ಲಿ, ನ.22,23ರಂದು 9 ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ಪ್ರಕಾರ, ಇಂದು ಮತ್ತು ನಾಳೆ ಕರ್ನಾಟಕದ 5 ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಉಳಿದಂತೆ ಒಣಹವೆ ಇರಲಿದೆ.

ಮಳೆ (ಸಾಂಕೇತಿಕ ಚಿತ್ರ)
ಮಳೆ (ಸಾಂಕೇತಿಕ ಚಿತ್ರ) (Pixabay)

ಬೆಂಗಳೂರು: ಕರ್ನಾಟಕದ 5 ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹಗುರ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹವಾಮಾನ ಇಲಾಖೆಯ ವರದಿ ಪ್ರಕಾರ, ಇಂದು (ನ.20) ಬೆಳಗ್ಗೆ 8.30ರಿಂದ ನಾಡಿದ್ದು (ನ.22) ಬೆಳಗ್ಗೆ 8.30ರ ತನಕ 5 ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಉಳಿದಂತೆ ಯಾವುದೇ ಮುನ್ನೆಚ್ಚರಿಕೆ ಇಲ್ಲ.

ಇಂದು ಮತ್ತು ನಾಳೆ ಹಗುರ ಮಳೆ ಬೀಳಲಿರುವ 5 ಜಿಲ್ಲೆಗಳು ಯಾವುವು

1.ಬೆಂಗಳೂರು ನಗರ

2.ಬೆಂಗಳೂರು ಗ್ರಾಮಾಂತರ

3.ಚಾಮರಾಜನಗರ

4.ಮೈಸೂರು

5.ರಾಮನಗರ

ಹಗುರ ಮಳೆ ಎಂದರೆ ಯಾವ ಪ್ರಮಾಣದ ಮಳೆ

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಟಣೆಯಲ್ಲಿ ನೀಡಿದ ಮಾಹಿತಿ ಪ್ರಕಾರ ಹಗುರ ಮಳೆ ಎಂದರೆ 2.5 ಮಿ.ಮೀ.ನಿಂದ 64.5 ಮಿ.ಮೀ. ತನಕ ಬಿದ್ದ ಮಳೆ ಹಗುರ ಮಳೆ.

ಇದರಂತೆ ಕರ್ನಾಟಕದ 5 ಜಿಲ್ಲೆಗಳಲ್ಲಿ ಈ ಪ್ರಮಾಣದ ಮಳೆಯನ್ನು ನಿರೀಕ್ಷಿಸಬಹುದು.

ನ.22 ಮತ್ತು ನ.23ರಂದು 9 ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಕರ್ನಾಟಕದ 9 ಜಿಲ್ಲೆಗಳಲ್ಲಿ ನ.22ರ ಬೆಳಗ್ಗೆ 8.30ರಿಂದ ನ.24 ಬೆಳಗ್ಗೆ 8.30ರ ತನಕ ಹಗುರ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಇಂದು ಮತ್ತು ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಇಲ್ಲ. ಆದರೆ, ನ.22ರ ಬೆಳಗ್ಗೆ 8.30ರಿಂದ ನ.24 ಬೆಳಗ್ಗೆ 8.30ರ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಗುರ ಮಳೆ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ನ.22, 23 ರಂದು ಹಗುರ ಮಳೆ ಬೀಳಲಿರುವ 9 ಜಿಲ್ಲೆಗಳು ಯಾವುವು

1.ಬೆಂಗಳೂರು ನಗರ

2.ಬೆಂಗಳೂರು ಗ್ರಾಮಾಂತರ

3.ಚಾಮರಾಜನಗರ

4.ಮೈಸೂರು

5.ರಾಮನಗರ

6.ದಕ್ಷಿಣ ಕನ್ನಡ

7.ಚಿಕ್ಕಬಳ್ಳಾಪುರ

8.ಕೋಲಾರ

9.ಮಂಡ್ಯ

ಇದಲ್ಲದೆ, ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ನ.23 ಹಾಗೂ 24ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಈ ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆಯನ್ನು ಇಲಾಖೆ ನೀಡಿದೆ.

Whats_app_banner