Karnataka Eid Ul Fitr: ಭಾನುವಾರವೇ ಕಂಡ ಚಂದ್ರ, ನಾಳೆಯೇ ಕರ್ನಾಟಕದಲ್ಲಿ ಈದ್‌ ಉಲ್‌ ಫಿತ್ರ್‌ ಆಚರಣೆ, ಚಂದ್ರದರ್ಶನ ಸಮಿತಿ ನಿರ್ಧಾರ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Eid Ul Fitr: ಭಾನುವಾರವೇ ಕಂಡ ಚಂದ್ರ, ನಾಳೆಯೇ ಕರ್ನಾಟಕದಲ್ಲಿ ಈದ್‌ ಉಲ್‌ ಫಿತ್ರ್‌ ಆಚರಣೆ, ಚಂದ್ರದರ್ಶನ ಸಮಿತಿ ನಿರ್ಧಾರ

Karnataka Eid Ul Fitr: ಭಾನುವಾರವೇ ಕಂಡ ಚಂದ್ರ, ನಾಳೆಯೇ ಕರ್ನಾಟಕದಲ್ಲಿ ಈದ್‌ ಉಲ್‌ ಫಿತ್ರ್‌ ಆಚರಣೆ, ಚಂದ್ರದರ್ಶನ ಸಮಿತಿ ನಿರ್ಧಾರ

Karnataka Eid Ul Fitr: ಕರ್ನಾಟಕದಾದ್ಯಂತ ರಂಜಾನ್‌ ಹಬ್ಬದ ಈದ್‌ ಉಲ್‌ ಫಿತ್ರ್‌ ಅನ್ನು ಮಾರ್ಚ್‌ 31ರ ಸೋಮವಾರದಂದೇ ಆಚರಿಸಲು ಚಂದ್ರ ದರ್ಶನ ಸಮಿತಿಯು ತೀರ್ಮಾನಿಸಿ ಸಂದೇಶವನ್ನು ರವಾನಿಸಿದೆ.

ಭಾನುವಾರವೇ ಚಂದ್ರದರ್ಶನ ಆಗಿದ್ದರಿಂದ ಸೋಮವಾರದಂದು ಕರ್ನಾಟಕದಲ್ಲೂ ಈದ್‌ ಉಲ್‌ ಫಿತ್ರ್‌ ಇರಲಿದೆ.
ಭಾನುವಾರವೇ ಚಂದ್ರದರ್ಶನ ಆಗಿದ್ದರಿಂದ ಸೋಮವಾರದಂದು ಕರ್ನಾಟಕದಲ್ಲೂ ಈದ್‌ ಉಲ್‌ ಫಿತ್ರ್‌ ಇರಲಿದೆ.

Karnataka Eid Ul Fitr: ಕರ್ನಾಟಕದಾದ್ಯಂತ 2025ನೇ ಸಾಲಿನ ಈದ್ ಉಲ್ ಫಿತ್ರ್ ಅನ್ನು ಮಾರ್ಚ್‌31ರ ಸೋಮವಾರವೇ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಭಾನುವಾರ ಸಂಜೆಯೇ ಕರ್ನಾಟಕದೆಲ್ಲೆಡೆ ಚಂದ್ರ ದರ್ಶನ ಆಗಿದ್ದರಿಂದ ಈದ್ ಉಲ್ ಫಿತ್ರ್ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಮೌಲಾನಾ ಮಕ್ಸೂದ್ ಇಮ್ರಾನ್ ಮಾಹಿತಿ ನೀಡಿದ್ದಾರೆ. ಸೋಮವಾರ ಬೆಳಿಗ್ಗೆಯೇ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳ ಜತೆಗೆ ಮುಸ್ಲೀಂ ಸಮುದಾಯದವರು ಇರುವ ಪ್ರದೇಶಗಳಲ್ಲಿ ರಂಜಾನ್‌ ಹಬ್ಬ ಆಚರಣೆ ಆಗಲಿದೆ. ವಿಶೇಷ ಪ್ರಾರ್ಥನೆಗಳು ಇರಲಿವೆ. ಪ್ರತಿಯೊಬ್ಬರೂ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ರಂಜಾನ್‌ ಅನ್ನು ಸಡಗರದಿಂದ ಆಚರಿಸುವರು. ಈ ಬಾರಿ ಚಂದ್ರದರ್ಶನ ವಿಳಂಬವಾಗಿದ್ದರೆ ಹಬ್ಬವು ಒಂದು ದಿನ ಮುಂದಕ್ಕೆ ಹೋಗುವ ಸಾಧ್ಯತೆಯಿತ್ತು.ಭಾನುವಾರದಂದು ಬೆಂಗೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಅಮೀರ್ ಎ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ರಾಜ್ಯ ಚಂದ್ರ ದರ್ಶನ ಸಮಿತಿ ಸಭೆಯಲ್ಲಿ ಸೋಮವಾರವೇ ಈದ್‌ ಉಲ್‌ ಫಿತ್ರ್‌ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

ರಂಜಾನ್ ಮಾಸದ ಕೊನೆಯ ದಿನ, ಈದ್ ಉಲ್ ಫಿತರ್ ಹಬ್ಬವನ್ನು ಯಾವಾಗ ಆಚರಿಸುತ್ತಾರೆ ಎಂಬುದನ್ನು ನೋಡುವುದಾದರೆ, ಗ್ರೆಗೋರಿಯನ್ ಕ್ಯಾಲೆಂಡರ್ ಗಿಂತ ಇಸ್ಲಾಮಿಕ್ ಕ್ಯಾಲೆಂಡರ್ ಭಿನ್ನವಾಗಿರುತ್ತೆ. ಹೀಗಾಗಿ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಚಂದ್ರನ ಚಕ್ರವನ್ನು ಅನುಸರಿ ಈದ್-ಉಲ್-ಫಿತರ್ ಆಚರಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ವರ್ಷದ ಹೊಸ ತಿಂಗಳ ಪ್ರಾರಂಭವನ್ನು ನಿರ್ಧರಿಸುವಲ್ಲಿ ಅಮಾವಾಸ್ಯೆ ವೀಕ್ಷಣೆಯನ್ನು ನಿರ್ಣಾಯಕ ಘಟನೆಯನ್ನಾಗಿ ಮಾಡುತ್ತದೆ. ಆದ್ದರಿಂದ, ಹಬ್ಬದ ದಿನಾಂಕವನ್ನು ತೀರ್ಮಾನಿಸಲು ಚಂದ್ರ ದರ್ಶನ ಸಮಿತಿಗಳಿವೆ. ಭಾರತದಲ್ಲಿ ಅಷ್ಟೇ ಅಲ್ಲದೆ, ಪ್ರಪಂಚದಾದ್ಯಂತದ ಇದೇ ರೀತಿಯ ಸಂಸ್ಥೆಗಳಿದ್ದು, ಪ್ರತಿ ವರ್ಷ ರಂಜಾನ್ ಅಂತ್ಯದ ಮೊದಲು ದಿನಾಂಕವನ್ನು ಅಧಿಕೃತವಾಗಿ ದೃಢಪಡಿಸುತ್ತವೆ.

ರಂಜಾನ್ ಮಾಸ ಆರಂಭವಾದಾಗಿನಿಂದ ಮುಗಿಯುವವರಿಗೆ ಮುಸ್ಲಿಂ ಬಾಂಧವರಿಗೆ ಹಬ್ಬದ ವಾತಾವರಣ ಇರುತ್ತದೆ. ನಿತ್ಯ ಉಪವಾಸ, ವಿಶೇಷ ಪ್ರಾರ್ಥನೆ, ಬಗೆ ಬಗೆಯ ಖಾದ್ಯಗಳು, ಹಬ್ಬಕ್ಕಾಗಿ ಶಾಪಿಂಗ್ ಹೀಗೆ ರಂಜಾನ್ ಮಾಸ ಮುಗಿಯುವುದೇ ಗೊತ್ತಾಗುವುದಿಲ್ಲ. ಚಂದ್ರ ದರ್ಶನದ ಮರು ದಿನವೇ ರಂಜಾನ್‌ ಆಚರಣೆ ನಡೆಯುತ್ತದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.