KPSC Exams 2023: ಕೆಪಿಎಸ್‌ಸಿ ಉದ್ಯೋಗ ಮಾಹಿತಿ, ಗ್ರೂಪ್‌ ಸಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಕನ್ನಡ ಸುದ್ದಿ  /  ಕರ್ನಾಟಕ  /  Kpsc Exams 2023: ಕೆಪಿಎಸ್‌ಸಿ ಉದ್ಯೋಗ ಮಾಹಿತಿ, ಗ್ರೂಪ್‌ ಸಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

KPSC Exams 2023: ಕೆಪಿಎಸ್‌ಸಿ ಉದ್ಯೋಗ ಮಾಹಿತಿ, ಗ್ರೂಪ್‌ ಸಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ಕರ್ನಾಟಕ ಲೋಕ ಸೇವಾ ಆಯೋಗವು (KPSC Jobs) ರಾಜ್ಯ ಸರಕಾರದ ವಿವಿಧ ಗ್ರೂಪ್‌ ಸಿ ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟಂತೆ ಈ ವರ್ಷ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಸಂಭಾವ್ಯ ದಿನಾಂಕಗಳ ಪಟ್ಟಿಯನ್ನು ಪ್ರಕಟಿಸಿದೆ. ಕೆಪಿಎಸ್‌ಸಿ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳಬಹುದು.

KPSC Exams 2023: ಕೆಪಿಎಸ್‌ಸಿ ಉದ್ಯೋಗ ಮಾಹಿತಿ, ಗ್ರೂಪ್‌ ಸಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
KPSC Exams 2023: ಕೆಪಿಎಸ್‌ಸಿ ಉದ್ಯೋಗ ಮಾಹಿತಿ, ಗ್ರೂಪ್‌ ಸಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (KPSC Jobs) ರಾಜ್ಯ ಸರಕಾರದ ವಿವಿಧ ಗ್ರೂಪ್‌ ಸಿ ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟಂತೆ ಈ ವರ್ಷ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಸಂಭಾವ್ಯ ದಿನಾಂಕಗಳ ಪಟ್ಟಿಯನ್ನು ಪ್ರಕಟಿಸಿದೆ. ಕೆಪಿಎಸ್‌ಸಿ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳಬಹುದು.

KPSC ಕನ್ನಡ ಭಾಷಾ ಪರೀಕ್ಷೆ ಯಾವಾಗ?

ಗ್ರೂಪ್‌ ಸಿ ಹುದ್ದೆಗಳಿಗೆ ಈ ವರ್ಷ ನವೆಂಬರ್‌ 4ರಂದು ಕನ್ನಡ ಭಾಷಾ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು - 242 ಹುದ್ದೆಗಳು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರು-67 ಹುದ್ದೆಗಳು, ಸಹಕಾರ ಸಂಘಗಳ ನಿರೀಕ್ಷಕರು-47 ಹುದ್ದೆಗಳಿಗೆ (ಇವೆಲ್ಲ ಉಳಿಕೆ ಮೂಲ ವೃಂದ) ಮತ್ತು ಸಹಕಾರ ಸಂಘಗಳ ನಿರೀಕ್ಷಕರು (ಕಲ್ಯಾಣ ಕರ್ನಾಟಕ ವೃಂದ) - 53 ಹುದ್ದೆಗಳಿಗೆ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ. ನಾಲ್ಕು ಅಧಿಸೂಚನೆಗಳನ್ನು ಒಟ್ಟು ಗೂಡಿಸಿ ಒಂದೇ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆ ಯಾವಾಗ?

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು ಮತ್ತು ಸಹಕಾರ ಸಂಘಗಳ ನಿರೀಕ್ಷಕರು (ಉಳಿಕೆ ವೃಂದ) ಹುದ್ದೆಗಳಿಗೆ ನವೆಂಬರ್‌ 5,2023ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಅಂದರೆ, ಅಂದು ಬೆಳಗ್ಗೆ ಸ್ಪರ್ಧಾತ್ಮಕ ಪರೀಕ್ಷೆ 1 ಮತ್ತು ಅಪರಾಹ್ನ ಪತ್ರಿಕೆ 2 ಪರೀಕ್ಷೆ ನಡೆಯಲಿದೆ.

ಕಲ್ಯಾಣನ ಕರ್ನಾಟಕ ವೃಂದದ ಸಹಕಾರ ಸಂಘಗಳ ನಿರೀಕ್ಷಕರು ಹುದ್ದೆಗಳಿಗೆ ಡಿಸೆಂಬರ್‌ 3, 2023ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಬೆಳಗ್ಗೆ ಸ್ಪರ್ಧಾತ್ಮಕ ಪರೀಕ್ಷೆ 1 ಮತ್ತು ಅಪರಾಹ್ನ ಪತ್ರಿಕೆ 2 ಪರೀಕ್ಷೆ ನಡೆಯಲಿದೆ.

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರು (ಉಳಿಕೆ) ಹುದ್ದೆಗಳಿಗೆ ಡಿಸೆಂಬರ್‌ 17ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಅಂದು ಬೆಳಗ್ಗೆ ಸ್ಪರ್ಧಾತ್ಮಕ ಪರೀಕ್ಷೆ 1 ಮತ್ತು ಅಪರಾಹ್ನ ಪತ್ರಿಕೆ 2 ಪರೀಕ್ಷೆ ನಡೆಯಲಿದೆ.

ಕೆಪಿಎಸ್‌ಸಿ ಟೈಂಟೇಬಲ್‌ ಪಿಡಿಎಫ್‌ ಈ ಕೆಳಗಿದೆ ನೋಡಿ

ಐದನೇ ತರಗತಿ ಗ್ರೂಪ್‌ ಡಿ ಹುದ್ದೆಗೆ ಅರ್ಜಿ ಸಲ್ಲಿಸಿದ ಎಂಬಿಎ ಎಂಟೆಕ್‌ ಸ್ನಾತಕ ಪದವೀಧರರು

ಭಾರತದಲ್ಲಿ ಯುವ ಜನತೆ ಉದ್ಯೋಗಕ್ಕಾಗಿ ಪರಿತಪಿಸುತ್ತಿದ್ದಾರೆ. ವಿಶೇಷವಾಗಿ ಯಾವ ಕೆಲಸವಾದರೂ ಸರಿ ಸರಕಾರಿ ಕೆಲಸ ಸಿಕ್ಕರೆ ಓಕೆ ಎಂಬ ಮನಸ್ಥಿತಿಯೂ ಇದೆ. ಇದೇ ಕಾರಣಕ್ಕೆ ಪೌರ ಕಾರ್ಮಿಕ ಇತ್ಯಾದಿ ಗ್ರೂಪ್‌ ಡಿ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಿದ ಘಟನೆಗಳು ಈಗಾಗಲೇ ಹಲವು ಬಾರಿ ನಡೆದಿವೆ. ಇದೀಗ ಇದೇ ರೀತಿಯ ಸುದ್ದಿಯೊಂದು ವರದಿಯಾಗಿದೆ. ಅದನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8611 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜೂನ್‌ 21 ಕೊನೆಯ ದಿನ

ಬ್ಯಾಂಕ್‌ ಸಿಬ್ಬಂದಿ ನೇಮಕಾರಿ ಸಂಸ್ಥೆ (ಐಬಿಪಿಎಸ್‌)ಯು ಆಫೀಸರ್‌ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಫೀಸರ್‌, ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ವಿಧಾನ, ಪ್ರಮುಖ ದಿನಾಂಕಗಳು, ವಿದ್ಯಾರ್ಹತೆ ಸೇರಿದಂತೆ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.

Whats_app_banner