ಕನ್ನಡ ಸುದ್ದಿ  /  Karnataka  /  Kasaragod News: Karnataka Border Development Authority Pointed Out The Problems Of Kannadigas Of Kasaragod And Gave Memorandum To Kerala Cm

Kasaragod News: ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಕಡೆಗೆ ಕೇರಳ ಸಿಎಂ ಗಮನಸೆಳೆದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ

Kasaragod News: ಡಾ.ಸಿ.ಸೋಮಶೇಖರ್‌ ಅವರು ಇಂದು ತಿರುವನಂತಪುರದಲ್ಲಿ ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ಅವರ ಜತೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿ ಮಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿ ಮಾಡಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌

ಬೆಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಅವರು ಕಾಸರಗೋಡು ಕನ್ನಡಿಗರ ಸಮಸ್ಯೆಗಳ ಕಡೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಗಮನಸೆಳೆದರು.

ಡಾ.ಸಿ.ಸೋಮಶೇಖರ್‌ ಅವರು ಇಂದು ತಿರುವನಂತಪುರದಲ್ಲಿ ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ಅವರ ಜತೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಮಾತುಕತೆ ಸಂದರ್ಭದಲ್ಲಿ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಕುರಿತು ವಿಶೇಷವಾಗಿ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ, ಕಾಸರಗೋಡು ಜಿಲ್ಲೆಯಲ್ಲಿ ಕನ್ನಡದ ಹೆಸರುಗಳ ಸ್ಥಳ ನಾಮಗಳನ್ನು ಮಲೆಯಾಳಂ ಭಾಷೆಗೆ ಬದಲಾಯಿಸಿರುವುದನ್ನು ತಡೆಹಿಡಿಯುವಂತೆ ಮನವಿ ಮಾಡಲಾಗಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಕಾಸರಗೋಡಿನಲ್ಲಿ ಕಯ್ಯಾರ ಕಿಞ್ಞಣ್ಣ ರೈ ಹೆಸರಿನಲ್ಲಿ ಕನ್ನಡ ಭವನ ವನ್ನು ನಿರ್ಮಾಣ ಮಾಡಲು ಕರ್ನಾಟಕದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುದಾನ ಒದಗಿಸಿದ್ದು ಈ ಯೋಜನೆಗೆ ಕೇರಳ ಸರ್ಕಾರ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಕಳೆದ ಬಜೆಟ್‌ನಲ್ಲಿ ಕೇರಳ ಸರ್ಕಾರ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಾರಂಭಿಸುವ ಘೋಷಣೆ ಮಾಡಿದ್ದ ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ನಮ್ಮ ಮನವಿಯನ್ನು ಸ್ವೀಕರಿಸಿದ ಕೇರಳ ಮುಖ್ಯ ಮಂತ್ರಿಗಳು ನಾವು ಸಲ್ಲಿಸಿದ ಕಾಸರಗೋಡು ಕನ್ನಡಿಗರ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು ಹಾಗೂ ಕರ್ನಾಟಕ ಹಾಗೂ ಕೇರಳದ ಮಧ್ಯೆ ಉತ್ತಮ ಬಾಂಧವ್ಯ ಹಾಗೂ ಸಾಮರಸ್ಯವಿರುವುದಾಗಿ ಡಾ.ಸಿ.ಸೋಮಶೇಖರ್‌ ಹೇಳಿದರು.

ಮಂಜೇಶ್ವರದ ಶಾಸಕ ಅಶ್ರಫ್ ಅವರ ಸಹಕಾರದೊಂದಿಗೆ ಮಾನ್ಯ ಮುಖ್ಯಮಂತ್ರಿ ಬೇಟಿ ಸಾಧ್ಯವಾಯಿತು ಎಂದು ಗಡಿ ಪ್ರದೇಶ ಅಭವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ತಿಳಿಸಿದ್ದಾರೆ.

ಗಮನಿಸಬಹುದಾದ ಸುದ್ದಿಗಳು

KSP App: ಟ್ರಾಫಿಕ್‌ ದಂಡದಲ್ಲಿ 50% ರಿಯಾಯಿತಿ ಪಡೆಯುವ ಭರದಲ್ಲಿ ಸೈಬರ್‌ ವಂಚಕರ ಗಾಳಕ್ಕೆ ಬೀಳದಿರಿ!; App ಅಪ್ಡೇಟ್‌ ಮಾಡಿಕೊಳ್ಳಿ..

ಸಂಚಾರಿ ನಿಯಮ ಉಲ್ಲಂಘನೆಗೆ ದಂಡ ಪಾವತಿಸುವುದು ಬಾಕಿ ಇದೆಯಾ? ಈಗ 50% ರಿಯಾಯಿತಿ ಇದೆ ಎಂದು ಅನೇಕರು ಈಗಾಗಲೇ ದಂಡ ಬಾಕಿಯನ್ನು ಕಟ್ಟಿದ್ದಾರೆ. ಇನ್ನೂ ಹಲವರು ದಂಡ ಪಾವತಿಸಲು ಹಳೇ ಆಪ್‌ ಬಳಸುತ್ತಿರಬಹುದು. ಆದರೆ ಆಪ್‌ ಅಪ್ಡೇಟ್‌ ಮಾಡಿದರೆ ಈ ಕೆಲಸ ಇನ್ನೂ ಸುಲಭವಾದೀತು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ChatGPT Ban: ಬೆಂಗಳೂರಿನ ಯೂನಿವರ್ಸಿಟಿ ಒಂದರಲ್ಲಿ ಚಾಟ್‌ಜಿಪಿಟಿ ಬ್ಯಾನ್‌; ಯಾಕೆ ಇಲ್ಲಿದೆ ಕಾರಣ

ಚಾಟ್‌ಜಿಪಿಟಿ (ChatGPT) ಯು ಎಲೋನ್ ಮಸ್ಕ್-ಬೆಂಬಲಿತ OpenAI ನ ಉತ್ಪನ್ನವಾಗಿದ್ದು, ಇದು ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸಲು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಬಳಸುವ ಉಚಿತ ಚಾಟ್‌ಬಾಟ್ ಆಗಿದೆ. ಈ ಎಐ ಚಾಟ್‌ಬಾಟ್ ಕಡಿಮೆ ಅವಧಿಯಲ್ಲಿ ಬಹಳ ಜನಪ್ರಿಯತೆಯನ್ನು ಗಳಿಸಿದೆ. ಆದರೆ ಇದು ಈಗ ಕೆಲವರ ಪಾಲಿಗೆ ಆತಂಕದ ಸಮಸ್ಯೆಯಾಗಿ ಬೆಳೆಯುತ್ತಿದೆ. ಯಾಕೆ ಎಂಬುದರ ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

PARAKH: ದೇಶದ ಮೊದಲ ಮೌಲ್ಯಮಾಪನ ನಿಯಂತ್ರಕ ಪಾರಖ್‌; ಎನ್‌ಸಿಇಆರ್‌ಟಿ ಮೂಲಕ ಅನುಷ್ಠಾನಕ್ಕೆ

PARAKH: ಪರಖ್‌ (Performance Assessment, Review and Analysis of Knowledge) ಎಂದರೆ ಕಾರ್ಯಕ್ಷಮತೆಯ ಮೌಲ್ಯಮಾಪನ, ಸಮಗ್ರ ಅಭಿವೃದ್ಧಿಗಾಗಿ ಜ್ಞಾನದ ವಿಮರ್ಶೆ ಮತ್ತು ವಿಶ್ಲೇಷಣೆ. ಇದು ದೇಶದೆಲ್ಲ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಗಳಿಗೆ ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಮೌಲ್ಯಮಾಪನದ ಮಾನದಂಡ, ಮಾರ್ಗಸೂಚಿ ಹೊಂದಿಸುವ ಉನ್ನತ ಸಂಸ್ಥೆಯಾಗಿರಲಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point