KCET 2025: ಕರ್ನಾಟಕ ಸಿಇಟಿ ನೋಂದಣಿ ಇಂದು ಶುರು, ಫೆಬ್ರವರಿ 21 ಅಂತಿಮ ದಿನ; ಅರ್ಜಿ ಸಲ್ಲಿಕೆಗೆ ಹೀಗೆ ಮಾಡಿ
KCET 2025: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದ ವೃತ್ತಿಪರ ಕೋರ್ಸುಗಳ 2025-26ನೇ ಸಾಲಿನ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ನಿನ್ನೆ (ಜನವರಿ 22) ಪ್ರಕಟಿಸಿದೆ .ಕರ್ನಾಟಕ ಸಿಇಟಿ ನೋಂದಣಿ ಇಂದು ಶುರುವಾಗಿದೆ. ಫೆ 21 ಅಂತಿಮ ದಿನ. ಕರ್ನಾಟಕ ಸಿಇಟಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

KCET 2025: ಕರ್ನಾಟಕ ರಾಜ್ಯದ ವೃತ್ತಿಪರ ಕೋರ್ಸುಗಳ 2025-26ನೇ ಸಾಲಿನ ಪ್ರವೇಶಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿನ್ನೆ (ಜನವರಿ 22) ಪ್ರಕಟಿಸಿದೆ. ಇದರ ಪ್ರಕಾರ, ಕರ್ನಾಟಕ ಸಿಇಟಿ ನೋಂದಣಿ ಇಂದು (ಜನವರಿ 23) ಶುರುವಾಗಿದೆ. ನೋಂದಣಿಗೆ ಕೊನೇ ದಿನಾಂಕ ಫೆಬ್ರವರಿ 21. ಅರ್ಹ ಅಭ್ಯರ್ಥಿಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ (Karnataka Common Entrance Test) ಅರ್ಜಿ ಸಲ್ಲಿಸುವುದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಕರ್ನಾಟಕ ಸಿಇಟಿ ನೋಂದಣಿ ಇಂದು ಶುರು, ಫೆ 21 ರ ಅಂತಿಮ ದಿನ
ಕರ್ನಾಟಕ ರಾಜ್ಯದ ವೃತ್ತಿಪರ ಕೋರ್ಸುಗಳ 2025-26ನೇ ಸಾಲಿನ ಪ್ರವೇಶಕ್ಕೆ ಸಂಬಂಧಿಸಿದ ಕರ್ನಾಟಕ ಸಿಇಟಿ ನೋಂದಣಿ ಇಂದು (ಜನವರಿ 23) ಬೆಳಗ್ಗೆ 11 ಗಂಟೆಗೆ ಶುರುವಾಗಿದೆ. ಅರ್ಹ ಅಭ್ಯರ್ಥಿಗಳು ಸಿಟಿಟಿ ನೋಂದಣಿ ಪ್ರಕ್ರಿಯೆಯನ್ನು ಇಂದೇ ಶುರುಮಾಡಿಕೊಳ್ಳಬಹುದು. ಅಂತಿಮ ದಿನಾಂಕ ಫೆಬ್ರವರಿ 21 ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿರಿ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಸಲದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET 2025) ಯನ್ನು ಏಪ್ರಿಲ್ 16, 17 ಮತ್ತು 18, 2025 ರಿಂದ ಮೂರು ದಿನಗಳವರೆಗೆ ನಡೆಸಲಿದೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪತ್ರಿಕೆಗಳು ಏಪ್ರಿಲ್ 16 ರಂದು, ಗಣಿತ ಮತ್ತು ಜೀವಶಾಸ್ತ್ರವನ್ನು ಏಪ್ರಿಲ್ 17 ರಂದು ಮತ್ತು ಕನ್ನಡ ಏಪ್ರಿಲ್ 18 ರಂದು ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕುರಿತು ಟ್ವೀಟ್ ಮಾಡಿದ್ದು “CET-2025ಕ್ಕೆ ಆನ್ ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಈ ಬಾರಿ AI ಆಧಾರಿತ ಅರ್ಜಿಯನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ವಿದ್ಯಾರ್ಥಿ ಸ್ನೇಹಿಯಾಗಿದೆ. ಪ್ರತಿ ಹಂತದಲ್ಲೂ OTP & Facial Recognition ಆಧಾರದ ಮೇಲೆ ಲಾಗಿನ್ ಮಾಡಬೇಕು. ಎಚ್ಚರ ವಹಿಸಿ ಅರ್ಜಿ ಭರ್ತಿ ಮಾಡಿ” ಎಂದು ಅಭ್ಯರ್ಥಿಗಳಿಗೆ ಸೂಚಿಸಿದೆ.
KCET 2025: ಕರ್ನಾಟಕ ಸಿಇಟಿ ನೋಂದಣಿ ಮಾಡುವುದು ಹೇಗೆ
ಕರ್ನಾಟಕ ಸಿಇಟಿ (KCET 2025) ನೋಂದಣಿ ಮಾಡುವುದಕ್ಕಾಗಿ ಅರ್ಹ ಅಭ್ಯರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದಿನಿಂದ KCET 2025ಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ಮಾಡಬೇಕಾದ್ದು ಇಷ್ಟು-
1) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ kea.kar.nic.in ಗೆ ಭೇಟಿಕೊಡಿ
2) ಕೆಇಎ ವೆಬ್‌ಸೈಟ್‌ನ ಹೋಮ್‌ಪೇಜ್‌ನಲ್ಲಿ “KCET 2025” ಲಿಂಕ್ ಕ್ಲಿಕ್ ಮಾಡಿ
3) ಹೊಸದಾಗಿ ತೆರೆದುಕೊಳ್ಳುವ ಪುಟದಲ್ಲಿ KCET 2025 ನೋಂದಣಿಗೆ ಅಗತ್ಯವಾದ ನಿಮ್ಮ ಖಾತೆ ತೆರೆಯಲು ವಿವರಗಳನ್ನು ಭರ್ತಿ ಮಾಡಿ, ಸಬ್‌ಮಿಟ್ ಮಾಡಿ. ಲಾಗಿನ್ ಮತ್ತು ಪಾಸವರ್ಡ್ ನೆನಪಿಟ್ಟುಕೊಳ್ಳಿ.
4) KCET 2025 ನೋಂದಣಿಗಾಗಿ ಕೆಇಎ ವೆಬ್‌ಸೈಟ್‌ಗೆ ಈಗಾಗಲೇ ರಚಿಸಿರುವ ಲಾಗಿನ್ ಮತ್ತು ಪಾಸವರ್ಡ್ ಬಳಸಿಕೊಂಡು ಲಾಗಿನ್ ಆಗಬೇಕು
5) ಬಳಿಕ KCET 2025ಗೆ ಸಂಬಂಧಿಸಿದ ಅರ್ಜಿಯನ್ನು ಆನ್‌ಲೈನ್‌ನಲ್ಲೇ ಭರ್ತಿ ಮಾಡಬೇಕು.
6) ಅರ್ಜಿ ಶುಲ್ಕ ಪಾವತಿಸಬೇಕು. ನಂತರ ಅರ್ಜಿಗೆ ಸಂಬಂಧಿಸಿದ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಬೇಕು.
7) ಕನ್‌ಫರ್ಮೇಶನ್ ಪೇಜ್ ಅನ್ನು ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್ ಔಟ್ ತೆಗೆದು ಭವಿಷ್ಯದ ಅಗತ್ಯಗಳಿಗಾಗಿ ತೆಗೆದಿಟ್ಟುಕೊಳ್ಳಿ
ಇದಕ್ಕೂ ಮೊದಲು, ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ ಅವರು KCET 2025 ನೋಂದಣಿ ಮತ್ತು ಪರೀಕ್ಷಾ ದಿನಾಂಕಕ್ಕೆ ಸಂಬಂಧಿಸಿದ ಟ್ವೀಟ್ ಮಾಡಿದ್ದರು. ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಇಟಿ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೊದಲ ಬಾರಿಗೆ, ವರ್ಷದಲ್ಲಿ ನಡೆಯುವ ಎಲ್ಲಾ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆಗಳ ಬಗ್ಗೆ ಒಮ್ಮೆಗೆ ಮಾಹಿತಿಯನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಯಾ ಕಾಲೇಜುಗಳಲ್ಲಿ ದಾಖಲೆ ಪರಿಶೀಲನೆ ನಡೆಸುವುದಕ್ಕೆ ಅಗತ್ಯ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ’ ಎಂದು ಡಾ ಎಂಸಿ ಸುಧಾಕರ್ ಟ್ವೀಟ್ ಮಾಡಿದ್ದರು. ಹೆಚ್ಚಿನ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
