ಕನ್ನಡ ಸುದ್ದಿ  /  ಕರ್ನಾಟಕ  /  Vande Bharath Train: ತಿರುವನಂತಪುರಂ ಮಂಗಳೂರು ವಂದೇ ಭಾರತ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ

Vande Bharath Train: ತಿರುವನಂತಪುರಂ ಮಂಗಳೂರು ವಂದೇ ಭಾರತ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ

ಕೇರಳ- ಕರ್ನಾಟಕ ಸಂಪರ್ಕ ಕಲ್ಪಿಸುವ ತಿರುವನಂತಪುರಂ ಮಂಗಳೂರು ರೈಲಿನ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅದರ ವಿವರ ಇಲ್ಲಿದೆ.

ತಿರುವನಂತಪುರಂ ಮಂಗಳೂರು ವಂದೇ ಭಾರತ್‌ ರೈಲು
ತಿರುವನಂತಪುರಂ ಮಂಗಳೂರು ವಂದೇ ಭಾರತ್‌ ರೈಲು

ಮಂಗಳೂರು: ಭಾರತೀಯ ರೈಲ್ವೆಯ( Indian Railway) ಪ್ರಮುಖ ಮಾರ್ಗಗಳಲ್ಲಿ ಒಂದಾದ ತಿರುವನಂತಪುರಂ- ಮಂಗಳೂರು ವಂದೇ ಭಾರತ್‌( Vande Bharat) ರೈಲಿನ ( ಗಾಡಿ ಸಂಖ್ಯೆ20632) ಸಂಚಾರ ಸಮಯದಲ್ಲಿ ಕೊಂಚ ಬದಲಾವಣೆ ಆಗಿದೆ. ಸೋಮವಾರದಿಂದಲೇ ಹೊಸ ಸಮಯ ಜಾರಿಗೆ ಬಂದಿದೆ. ತಿರುವನಂತಪುರಂ- ಕಾಸರಗೋಡು ನಡುವೆ ಒಂದೂವರೆ ವರ್ಷದಿಂದ ಸಂಚರಿಸುತ್ತಿರುವ ವಂದೇ ಭಾರತ್‌ ರೈಲು ಸೇವೆಯನ್ನು ಕೆಲ ದಿನಗಳ ಹಿಂದೆಯಷ್ಟೇ ಮಂಗಳೂರು ವರೆಗೂ ವಿಸ್ತರಣೆ ಮಾಡಲಾಗಿದೆ. ಈ ರೈಲು ಕೇರಳ ಹಾಗೂ ಕರ್ನಾಟಕ ನಡುವೆ ಸಂಪರ್ಕ ಕಲ್ಪಿಸಲಿದ್ದು. ಕೇರಳದ ಹಲವು ನಗರಗಳನ್ನು ಬೇಗನೇ ತಲುಪಲು ಸಹಕಾರಿಯಾಗಲಿದೆ. ಈಗಾಗಲೇ ಇರುವ ರೈಲುಗಳ ಸಂಚಾರದ ಸಮಯ ಗಮನದಲ್ಲಿಟ್ಟುಕೊಂಡು ತಿರುವನಂತಪುರಂ ಹಾಗೂ ಮಂಗಳೂರು ನಡುವಿನ ರೈಲಿನ ಸಂಚಾರದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ಇರುವಂತೆ ತಿರುವನಂತಪುರಂ ಸೆಂಟ್ರಲ್‌ನಿಂದ( Thiruvananthapuram) ಹೊರಡುವ ಸಮಯ ಹಾಗೂ ಮಂಗಳೂರು( Mangalore) ಸೆಂಟ್ರಲ್‌ ತಲುಪುವ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬೆಳಗ್ಗೆ 4. 05ಕ್ಕೆ ತಿರುವನಂತಪುರನಿಂದ ಹೊರಡಲಿದೆ. ಮಂಗಳೂರು ಸೆಂಟ್ರಲ್‌ ಅನ್ನು ಮಧ್ಯಾಹ್ನ 12.40 ಕ್ಕೆ ತಲುಪಲಿದೆ.

ಈ ರೈಲು ಇನ್ನು ಮುಂದೆ ಎರ್ನಾಕುಲಂ( Ernakulam) ನಗರವನ್ನು ಬೆಳಿಗ್ಗೆ 6.42 ಕ್ಕೆ ತಲುಪಿ 6.45ಕ್ಕೆ ಹೊರಡಲಿದೆ. ಇದೇ ರೀತಿ ತ್ರಿಶ್ಯೂರ್‌( Thrissur) ನಗರವನ್ನು ಬೆಳಿಗ್ಗೆ7.56 ಕ್ಕೆ ತಲುಪಿ 7.58ಕ್ಕೆ ಹೊರಡಲಿದೆ. ಮುಂದೆ ಶೋರನೂರು ಜಂಕ್ಷನ್‌( Shoranur) ಅನ್ನು ಬೆಳಿಗ್ಗೆ 8.30ಕ್ಕೆ ತಲುಪಿ 8.32ಕ್ಕೆ ಹೊರಡಲಿದೆ. ತಿರೂರು( Tirur) ನಿಲ್ದಾಣಕ್ಕೆ ಬೆಳಿಗ್ಗೆ9.02 ಕ್ಕೆ ತಲುಪಿ 9.04ಕ್ಕೆ ಹೊರಡಲಿದೆ. ಅಲ್ಲಿಂದ ಕೊಜಿಕ್ಕೋಡ್‌( Kozhikode) ನಗರವನ್ನು ಬೆಳಿಗ್ಗೆ 9.32ಕ್ಕೆ ತಲುಪಿ ನಂತರ 9.34ಕ್ಕೆ ಕ್ಕೆ ಹೊರಡಲಿದೆ. ಕಣ್ಣೂರು ( Kannur) ನಗರವನ್ನು ಬೆಳಿಗ್ಗೆ10.36 ಕ್ಕೆ ತಲುಪಿ 10.38 ಕ್ಕೆ ಹೊರಡಲಿದೆ. ಕಾಸರಗೋಡು( Kasaragod) ನಗರವನ್ನು ಬೆಳಿಗ್ಗೆ11.46 ಕ್ಕೆ ತಲುಪಿ ಅಲ್ಲಿಂದ ಬೆಳಿಗ್ಗೆ 11.48ಕ್ಕೆ ಹೊರಡಲಿದೆ.

ಉಳಿದಂತೆ ಮಂಗಳೂರಿನಿಂದ ತಿರುವನಂತಪುರಂಗೆ ಹೊರಡುವ ವಂದೇ ಭಾರತ್‌ ರೈಲು ಸಂಚಾರ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point

ವಿಭಾಗ