Nandini Milk Rate: ಹೊಸ ವರ್ಷಕ್ಕೆ ನಂದಿನಿ ಹಾಲಿನ ಏರಿಕೆ, ಲೀಟರ್‌ಗೆ 5 ರೂ. ಏರಿಕೆ ಸುಳಿವು ನೀಡಿದ ಕೆಎಂಎಫ್ ಅಧ್ಯಕ್ಷ
ಕರ್ನಾಟಕದಲ್ಲಿ ಕೆಎಂಎಫ್ ನಂದಿನಿ ಹಾಲಿನ ಬೆಲೆಯನ್ನು ಏರಿಕೆ ಮಾಡುವ ಮುನ್ಸೂಚನೆಯನ್ನು ಹಾಲು ಮಹಾಮಂಡಳ ಅಧ್ಯಕ್ಷ ಭೀಮಾನಾಯ್ಕ ನೀಡಿದ್ದಾರೆ.
ಬೆಂಗಳೂರು: ಆರು ತಿಂಗಳ ಹಿಂದೆಯಷ್ಟೇ ಕರ್ನಾಟಕದಲ್ಲಿ ನಂದಿನಿ ಹಾಲುದರ ಏರಿಕೆಯಾಗಿತ್ತಾದರೂ ಈಗ ದರ ಹೊಸ ವರ್ಷದಲ್ಲಿ ಏರಿಕೆವಾಗುವ ಸಾಧ್ಯತೆಗಳು ಅಧಿಕವಾಗಿವೆ. ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಏರಿಸುವ ಕುರಿತು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಲ್. ಭೀಮಾನಾಯ್ಕ ಅವರು ಗುರುವಾರ ಮುನ್ಸೂಚನೆ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಹೋಗಿದೆ. ಸರ್ಕಾರದ ಹಂತದಲ್ಲಿ ದರ ಏರಿಕೆ ಕುರಿತಾಗಿ ತೀರ್ಮಾನ ಕೈಗೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ವ್ಯಕ್ತಪಡಿಸಿದ್ದಾರೆ. ಇದರಿಂದ ಹೊಸ ವರ್ಷದಲ್ಲಿ ಅದರಲ್ಲೂ ಸಂಕ್ರಾಂತಿ ಹೊತ್ತಿಗೆ ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆಯಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಹಿಂದೆ 2 ರೂ ಹಾಲಿನ ದರ ಹೆಚ್ಚಿಸಿ 50 ಎಂಎಲ್ ಹಾಲು ಹೆಚ್ಚಿಗೆ ಕೊಡಲಾಗುತ್ತಿತ್ತು. ಹೊಸದಾಗಿ ದರ ಏರಿಕೆಯಾದರೆ ಈಗಾಗಲೇ ಹೆಚ್ಚುವರಿಯಾಗಿ ನೀಡಲಾಗುತ್ತಿದ್ದ 50 ಎಂಎಲ್ ಹಾಲು ವಾಪಸ್ ಪಡೆಯಲಾಗುತ್ತದೆ. ಸರ್ಕಾರ ಅನುಮತಿ ನೀಡುವ ದರವನ್ನು ಜಾರಿಗೊಳಿಸಲಾಗುತ್ತದೆ ಎನ್ನುವುದು ಅವರ ವಿವರಣೆ.
ಆರು ತಿಂಗಳ ಹಿಂದೆ 1000 ಮಿ.ಲೀ ಹಾಲಿಗೆ 50 ಮಿಲಿ ಲೀಟರ್ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ ದರ ಏರಿಕೆ ಮಾಡಲಾಗಿತ್ತು. ಲೀಟರ್‌ಗೆ 44 ರೂ ಇರುವ ಒಂದು ಲೀ ಹಾಲಿನ ಬೆಲೆಯು 46 ರೂ ಆಗಿತ್ತು. ಒಂದು ಲೀಟರ್ ಬದಲು 1050 ಮಿಲೀ ಹಾಲಿನ ಪ್ಯಾಕೆಟ್ ಅನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಹಾಗೆಯೇ 22 ರೂ ದರವಿರುವ 500 ಮಿ.ಲೀ ಪ್ಯಾಕೆಟ್ ಹಾಲಿಗೂ 50 ಎಂಎಲ್ ಹೆಚ್ಚುವರಿ ಸೇರಿಸಿ 550 ಮಿಲೀ ಹಾಲು ನೀಡಿ 24 ರೂ. ಪಡೆಯಲಾಗುತ್ತಿತ್ತು.
ದಕ್ಷಿಣ ಭಾರತದ ಇತರೆ ರಾಜ್ಯಗಳು. ಅಮುಲ್ ಹಾಲಿಗೆ ಹೋಲಿಸಿದರೆ ಕರ್ನಾಟಕದ ನಂದಿನಿ ಹಾಲಿನದರ ಕಡಿಮೆಯೇ ಇದೆ. ದರ ಏರಿಕೆ ಮಾಡಿದ ನಂತರವೂ ನಮ್ಮ ರಾಜ್ಯದ ಹಾಲಿನ ಬೆಲೆಯು ಲೀಟರ್ ಗೆ ಇತರೆ ರಾಜ್ಯಗಳಿಗಿಂತ 14 ರೂ. ಕಡಿಮೆ ಇದೆ. ಗುಣಮಟ್ಟದ ಹಾಲನ್ನೂ ಕರ್ನಾಟಕ ಹಾಲು ಮಹಾಮಂಡಳ ನೀಡುತ್ತಿದೆ ಎಂದು ಆರು ತಿಂಗಳ ದರ ಏರಿಕೆ ಮಾಡಿದಾಗ ಭೀಮಾನಾಯ್ಕ ಹೇಳಿದ್ದರು.
ಅಂದರೆ ಪ್ರತಿ ಲೀಟರ್‌ಗೆ ಸುಮಾರು ಹಾಲಿನ ದರವನ್ನ ಹೆಚ್ಚಳ ಮಾಡಲಾಗಿದೆ. 96 ರಿಂದ 98 ಲಕ್ಷ ಲೀಟರ್ ಹಾಲನ್ನು ಕರ್ನಾಟಕದಾದ್ಯಂತ ಕೆಎಂಎಫ್ ಸಂಗ್ರಹಿಸುತ್ತಿದೆ. ಈ ಮಾಸಾಂತ್ಯಕ್ಕೆ ಇದು ಒಂದು ಕೋಟಿ ಲೀಟರ್‌ಗೆ ತಲುಪಿದೆ. ಇದರಲ್ಲಿ ಹಾಲಿನ ಪುಡಿ ತಯಾರಿಕೆಗೆ ಸ್ವಲ್ಪ ಬಳಸಿ ಉಳಿಕೆ ಹಾಲನ್ನು ಉಪ ಉತ್ಪನ್ನ ಹಾಗೂ ಮಾರಾಟಕ್ಕೆ ಬಳಕೆ ಮಾಡಲಾಗುತ್ತಿದೆ ಎನ್ನುವುದು ಕೆಎಂಎಫ್ ಅಧ್ಯಕ್ಷರ ವಿವರಣೆಯಾಗಿತ್ತು.
ವಿಭಾಗ