Nandini Idli Dosa: ಬೆಂಗಳೂರು ಮಾರುಕಟ್ಟೆಗೆ ಶೀಘ್ರ ಬರಲಿದೆ ನಂದಿನಿ ಇಡ್ಲಿ, ದೋಸೆ ಹಿಟ್ಟು; ಹೇಗಿರಲಿದೆ ಈ ಪ್ಯಾಕ್
ಕರ್ನಾಟಕದ ಜತೆಗೆ ಇತರೆ ರಾಜ್ಯಗಳಿಗೂ ಕಾಲಿಟ್ಟಿರುವ ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಈಗ ಹೊಸ ಉತ್ಪನ್ನಗಳ ರೂಪದಲ್ಲಿ ಬರಲಿದೆ. ಅದೂ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆ ಪ್ರವೇಶಿಸಲಿದೆ.

ಬೆಂಗಳೂರು; ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ರುಚಿ ನೀವು ಬಲ್ಲಿರಿ. ಹಾಲು, ಮೊಸರು ಮಾತ್ರವಲ್ಲದೇ ಇದರಿಂದ ತಯಾರಿಸಿದ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಬ್ರಾಂಡ್ ಅಡಿ ನೀಡುತ್ತಾ ಬಂದಿದೆ. ಅದರಲ್ಲೂ ಕಾಲಕಾಲಕ್ಕೆ ಹೊಸ ಉತ್ಪನ್ನಗಳನ್ನು ನಂದಿನಿ ಮೂಲಕ ಪರಿಚಯಿಸಲಾಗುತ್ತಿದೆ. ಈಗ ಹಾಲು ಮಹಾಮಂಡಳವು ಹೊಸ ಉತ್ಪನ್ನವೊಂದನ್ನು ಪರಿಚಯಿಸಲು ಮುಂದಾಗಿದೆ. ಅದು ತನ್ನ ನಂದಿನಿ ಬ್ರಾಂಡ್ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬೆಂಗಳೂರಿನಲ್ಲಿ ಪರಿಚಯಿಸಲು ಸಜ್ಜಾಗಿದೆ. ಸದ್ಯವೇ ಬೆಂಗಳೂರು ಮಾರುಕಟ್ಟೆಯಲ್ಲಿ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟು ಸಿಗಲಿದೆ.
ಮನಿಕಂಟ್ರೋಲ್ ವರದಿಯ ಪ್ರಕಾರ, ಹಿಟ್ಟು 450-ಗ್ರಾಂ ಮತ್ತು 900-ಗ್ರಾಂ ಪ್ಯಾಕ್‌ಗಳಲ್ಲಿ ಲಭ್ಯವಿರಲಿದೆ. ಅದರ ಹಾಲೊಡಕು ಪ್ರೋಟೀನ್ ಬೇಸ್‌ಗಿತ ವಿಶಿಷ್ಟವಾಗಿರುತ್ತದೆ. ಇದು ರುಚಿ ಮತ್ತು ವಿನ್ಯಾಸ ಎರಡನ್ನೂ ಹೆಚ್ಚಿಸಲಿದೆ ಎನ್ನುವುದು ಕೆಎಂಎಫ್ ನೀಡಿರುವ ಅಭಯ.́
ಹೇಗಿರಲಿದೆ ಹೊಸ ಪ್ಯಾಕ್
ನಾವು ಹೊಸ ಉತ್ಪನ್ನಗಳನ್ನು ಬಳಕೆಗೆ ಒದಗಿಸಲು ಸಿದ್ಧರಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ದಿನಾಂಕವನ್ನು ಕೋರಿದ್ದೇವೆ. ಇದು ಶೀಘ್ರದಲ್ಲೇ ಸಿಗಲಿದೆ. ಮುಂದಿನ ವಾರದೊಳಗೆ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ. ನಾವು ಅದನ್ನು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸುತ್ತೇವೆ, ಅದನ್ನು ನಮ್ಮ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಇಡುತ್ತೇವೆ ಎನ್ನುವುದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ನೀಡುವ ವಿವರಣೆ.
ತನ್ನ ಹೊಸ ಇಡ್ಲಿ ಮತ್ತು ದೋಸೆ ಹಿಟ್ಟಿನ ಬಿಡುಗಡೆಯೊಂದಿಗೆ, ನಂದಿನಿ ಎಂಟಿಆರ್ ಮತ್ತು ಐಡಿಯಂತಹ ಪ್ರಮುಖ ಸ್ಪರ್ಧಿಗಳ ಪ್ರಾಬಲ್ಯದ ಮಾರುಕಟ್ಟೆಗೆ ಕಾಲಿಡುತ್ತಿದೆ. ಈ ವರ್ಷದ ದಸರಾಗೂ ಮುನ್ನವಾಗಿಯೇ ಅಂದರೆ ಆಗಸ್ಟ್‌ನಯೇಲ್ಲಿ ಯೋಜಿಸಲಾಗಿದ್ದ ಉದ್ಘಾಟನೆಯು ವಿವಿಧ ಕಾರಣಗಳಿಂದಾಗಿ ವಿಳಂಬವಾಯಿತು. ಇನ್ನು ವಿಳಂಬವಾಗುವುದಿಲ್ಲ. ಈಗ ಶೀಘ್ರದಲ್ಲೇ ನಡೆಯಲಿದೆ ಎಂದು ವರದಿ ತಿಳಿಸಿದೆ.
ಬೆಂಗಳೂರಿನ ದೊಡ್ಡ ದುಡಿಯುವ ಜನಸಂಖ್ಯೆ, ವಿಶೇಷವಾಗಿ ಟೆಕ್ ವೃತ್ತಿಪರರು ತ್ವರಿತ ಉಪಾಹಾರ ಆಯ್ಕೆಗಳನ್ನು ಹುಡುಕುತ್ತಿರುವುದರಿಂದ, ನಗರವು ನಂದಿನಿಯ ಹೊಸ ಬಗೆಯ ಉತ್ಪನ್ನಕ್ಕೆ ಪ್ರಮುಖ ಮಾರುಕಟ್ಟೆಯನ್ನು ಒದಗಿಸುತ್ತದೆ.
ಇದರ ಭಾಗವಾಗಿಯೇ ಹೊಸ ಬಗೆಯ ರೆಡಿ ಟು ಯೂಸ್ ಅಡಿ ಹಿಟ್ಟುಗಳನ್ನು ರೂಪಿಸಲಾಗಿದೆ. ಮುಖ್ಯವಾಗಿ ಬಹುಜನರ ಬೆಳಗಿನ ಉಪಾಹಾರವಾಗಿರುವ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಪರಿಚಯಿಸಲಾಗುತ್ತಿದೆ.
ನಂದಿನಿ: ಬೆಳೆಯುತ್ತಿರುವ ಬ್ರಾಂಡ್
ತನ್ನ ಹೊಸ ಬಗೆಯ ಉತ್ಪನ್ನದ ಜೊತೆಗೆ, ಕರ್ನಾಟಕದ ಪ್ರೀತಿಯ ಬ್ರಾಂಡ್ ನಂದಿನಿ ವ್ಯಾಪಕ ಶ್ರೇಣಿಯ ಡೈರಿ ಮತ್ತು ಆಹಾರ ಉತ್ಪನ್ನಗಳನ್ನು ನೀಡುತ್ತದೆ. ಇವುಗಳಲ್ಲಿ ಹಾಲು, ಬ್ರೆಡ್, ತುಪ್ಪ, ಬೆಣ್ಣೆ, ಮೊಸರು, ಚೀಸ್, ಮಜ್ಜಿಗೆ, ಐಸ್ ಕ್ರೀಮ್ ಗಳು, ಪರಿಮಳಯುಕ್ತ ಹಾಲು ಮತ್ತು ಹೆಚ್ಚಿನವು ಸೇರಿವೆ. 'ನಂದಿನಿ ಸ್ಪ್ಲಾಶ್' ಎಂಬ ಹಾಲೊಡಕು ಆಧಾರಿತ ಎನರ್ಜಿ ಡ್ರಿಂಕ್ ಪಾನೀಯದೊಂದಿಗೆ ನಂದಿನಿ ಯುನೈಟೆಡ್ ಸ್ಟೇಟ್ಸ್‌ನ ಎನರ್ಜಿ-ಡ್ರಿಂಕ್ ಮಾರುಕಟ್ಟೆಯನ್ನು ಪ್ರವೇಶಿಸಿದೆ.
ಏತನ್ಮಧ್ಯೆ, ಕೆಎಂಎಫ್ ನೇತೃತ್ವದ ನಂದಿನಿ ಡೈರಿ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪದಂತಹ ಡೈರಿ ಉತ್ಪನ್ನಗಳೊಂದಿಗೆ ದೆಹಲಿ ಮಾರುಕಟ್ಟೆಯನ್ನು ಪ್ರವೇಶಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಕೇರಳ,ತಮಿಳುನಾಡು, ಆಂಧ್ರ, ಮಹಾರಾಷ್ಟ್ರದಲ್ಲಿ ಸೇವೆಯನ್ನು ವಿಸ್ತರಿಸಿದೆ.
ವಿಭಾಗ