ಕನ್ನಡ ಸುದ್ದಿ  /  ಕರ್ನಾಟಕ  /  ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಶೀಘ್ರ ಪ್ರಕಟ; ರಿಸಲ್ಟ್ ತಿಳಿಯಲು ಹೀಗೆ ಮಾಡಿ

ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಶೀಘ್ರ ಪ್ರಕಟ; ರಿಸಲ್ಟ್ ತಿಳಿಯಲು ಹೀಗೆ ಮಾಡಿ

Karnataka SSLC Supplementary Results 2024: ಕರ್ನಾಟಕ ರಾಜ್ಯ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಜುಲೈ 11ರಂದು ಪ್ರಕಟವಾಗಲಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು karresults.nic.in ವೆಬ್‌ಸೈಟ್‌ ಮೂಲಕ ಫಲಿತಾಂಶ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ರಿಸಲ್ಟ್ ಪರಿಶೀಲಿಸುವುದು‌ ಹೇಗೆ ಎಂದು ತಿಳಿಯಿರಿ.

ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಇಂದು ಪ್ರಕಟ; ರಿಸಲ್ಟ್ ತಿಳಿಯಲು ಹೀಗೆ ಮಾಡಿ
ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಇಂದು ಪ್ರಕಟ; ರಿಸಲ್ಟ್ ತಿಳಿಯಲು ಹೀಗೆ ಮಾಡಿ

ಕರ್ನಾಟಕ ರಾಜ್ಯ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಜುಲೈ 10ರಂದು ಪ್ರಕಟವಾಗಲಿದೆ. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಪೂರಕ ಪರೀಕ್ಷೆ ಬರೆದು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿರುವ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನಾಳೆ ನೋಡಬಹುದು. ಬುಧವಾರ ಬೆಳಗ್ಗೆ 11.30ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗಿದ್ದರೆ ಫಲಿತಾಂಶ ನೋಡುವುದು ಹೇಗೆ? ಅಂಕಪಟ್ಟಿ ಡೌನ್‌ಲೋಡ್‌ ಮಾಡುವ ವಿಧಾನವೇನು ಎಂಬುದನ್ನ ತಿಳಿಯೋಣ ಬನ್ನಿ.

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಕೆಎಸ್ಇಬಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. kseab.karnataka.gov.in ಮತ್ತು karresults.nic.inನಲ್ಲಿ ರಿಸಲ್ಟ್‌ ನೋಡಬಹುದು.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ 2024 ಪರಿಶೀಲಿಸುವ ವಿಧಾನ

  • ಕರ್ನಾಟಕ ಪರೀಕ್ಷ ಮಂಡಳಿಯ ಅಧಿಕೃತ ವೆಬ್‌ಸೈಟ್‌ kseab.karnataka.gov.in ಓಪನ್‌ ಮಾಡಿ
  • ವೆಬ್‌ಸೈಟ್‌ ಮುಖಪುಟದಲ್ಲಿ ಕರ್ನಾಟಕ ಎಸ್ಎಸ್ಎಲ್‌ಸಿ ಪೂರಕ ಫಲಿತಾಂಶ 2024 ಲಿಂಕ್ ಕಾಣುತ್ತದೆ. ಆ ಲಿಂಕ್ ಕ್ಲಿಕ್‌ ಮಾಡಿ.
  • ಲಾಗ್ ಇನ್ ಮಾಡಲು ಕೇಳುವ ವಿವರಗಳನ್ನು ನಮೂದಿಸಿ.
  • ವಿವರಗಳನ್ನು ಸಬ್ಮಿಟ್‌ ಮಾಡಲು ಎಂಟರ್ ಒತ್ತಿ.
  • ಫಲಿತಾಂಶ ಪರದೆಯಲ್ಲಿ ಕಾಣುತ್ತದೆ.
  • ಫಲಿತಾಂಶ ಪರಿಶೀಲಿಸಿ ಮತ್ತು ಅದನ್ನು ಡೌನ್ಲೋಡ್ ಮಾಡಿಕೊಳ್ಳಿ

ಫಲಿತಾಂಶ ಪರಿಶೀಲಿಸಲು ಬೇಕಾದ ವಿವರಗಳು

ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಪರಿಶೀಲಿಸಲು ಮೇಲೆ ತಿಳಿಸಿದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಫಲಿತಾಂಶದ ಲಿಂಕ್ ತೆರೆದ ನಂತರ, ವಿದ್ಯಾರ್ಥಿಗಳು ತಮ್ಮ ಹುಟ್ಟಿದ ದಿನಾಂಕ (DoB) ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.

ಕರ್ನಾಟಕದಲ್ಲಿ 2024ರ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆಯು ಜೂನ್ 14ರಿಂದ ಜೂನ್ 21ರವರೆಗೆ ನಡೆಯಿತು. ಪೂರಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಥವಾ ಕೆಎಸ್ಇಎಬಿ, kseab.karnataka.gov.in ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು. ಹೆಚ್ಚುವರಿಯಾಗಿ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು karresults.nic.in ನಲ್ಲಿಯೂ ಪರಿಶೀಲಿಸಬಹುದು.

ಹೊಸ ವ್ಯವಸ್ಥೆಯ ಪ್ರಕಾರ, ಪೂರಕ ಪರೀಕ್ಷೆಯನ್ನು ಪರೀಕ್ಷೆ 2 (exam 2) ಎಂದು ಮರುನಾಮಕರಣ ಮಾಡಲಾಗಿದೆ. ಇದರಲ್ಲಿ ಪ್ರತಿ ವರ್ಷ ಮೂರು ಪರೀಕ್ಷೆಗಳು ಇರುತ್ತವೆ. ಅಂದರೆ ಪರೀಕ್ಷೆ 1, 2 ಮತ್ತು 3. ಕರ್ನಾಟಕ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಪರೀಕ್ಷೆಯ ಮುಖ್ಯ ಫಲಿತಾಂಶವು ಮೇ 9ರಂದು ಹೊರಬಿದ್ದಿದೆ. ಈ ವರ್ಷ ಒಟ್ಟು 73.40 ಶೇಕಡಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಂದರೆ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 859967 ವಿದ್ಯಾರ್ಥಿಗಳ ಪೈಕಿ 631204 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.