Karnataka School Guide 2025: ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ಶಾಲಾ ಖರ್ಚು ವೆಚ್ಚ ನಿಭಾಯಿಸುವುದು ಹೇಗೆ; ಇಲ್ಲಿವೆ ಮಾರ್ಗೋಪಾಯಗಳು
ಕನ್ನಡ ಸುದ್ದಿ  /  ಕರ್ನಾಟಕ  /  Karnataka School Guide 2025: ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ಶಾಲಾ ಖರ್ಚು ವೆಚ್ಚ ನಿಭಾಯಿಸುವುದು ಹೇಗೆ; ಇಲ್ಲಿವೆ ಮಾರ್ಗೋಪಾಯಗಳು

Karnataka School Guide 2025: ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ಶಾಲಾ ಖರ್ಚು ವೆಚ್ಚ ನಿಭಾಯಿಸುವುದು ಹೇಗೆ; ಇಲ್ಲಿವೆ ಮಾರ್ಗೋಪಾಯಗಳು

Karnataka School Guide 2025: ಮಕ್ಕಳ ಮುಂದಿನ ಶೈಕ್ಷಣಿಕ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಈಗನಿಂದಲೇ ಆರ್ಥಿಕ ಲೆಕ್ಕಾಚಾರ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೆಲವು ಟಿಪ್ಸ್‌ಗಳು ಇಲ್ಲಿವೆ.

ಶಾಲಾ ಮಕ್ಕಳ ಶೈಕ್ಷಣಿಕ ಖರ್ಚು ವೆಚ್ಚ ಹೊಂದಾಣಿಕೆಯೂ ಪೋಷಕರಿಗೆ ಒಂದು ಸವಾಲೇ
ಶಾಲಾ ಮಕ್ಕಳ ಶೈಕ್ಷಣಿಕ ಖರ್ಚು ವೆಚ್ಚ ಹೊಂದಾಣಿಕೆಯೂ ಪೋಷಕರಿಗೆ ಒಂದು ಸವಾಲೇ

Karnataka School Guide 2025: ಶಾಲಾ ಮಕ್ಕಳ ಶಿಕ್ಷಣಕ್ಕೆ ಈಗ ಹಣ ಹೊಂದಿಸುವುದು ಸವಾಲೇ. ಒಂದೇ ಮಗುವಿದ್ದರೆ ವಾರ್ಷಿಕ ಖರ್ಚಿನ ಪ್ರಮಾಣ ಕಡಿಮೆ ಇರಬಹುದು. ಎರಡು ಹಾಗೂ ಅದಕ್ಕಿಂತ ಹೆಚ್ಚು ಮಕ್ಕಳಿದ್ದರೆ ಶೈಕ್ಷಣಿಕ ವೆಚ್ಚ ಕೊಂಚ ಹೆಚ್ಚೇ ಇರುತ್ತದೆ. ಇದಕ್ಕಾಗಿ ಆರ್ಥಿಕ ನಿರ್ವಹಣೆ ಅತಿಮುಖ್ಯವೂ ಹೌದು. ವೇತನದಾರರೇ ಆಗಿರಬಹುದು, ವ್ಯಾಪಾರದಲ್ಲಿ ನಿರತರಾಗಿರಬಹುದು. ಇಲ್ಲವೇ ನಿತ್ಯ ಆದಾಯ ಗಳಿಸುವವರೂ ಇರಬಹುದು. ಎಲ್ಲರೂ ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ಒಂದು ವರ್ಷಕ್ಕೆ ಎಷ್ಟು ವೆಚ್ಚವಾಗಬಹುದು ಎಂದು ಒಟ್ಟು ಅಂದಾಜು ತಯಾರಿಸಿಕೊಂಡು ಅದಕ್ಕೆ ಪೂರಕವಾಗಿ ಹಣವನ್ನು ತೆಗೆದಿಡಬೇಕಾಗುತ್ತದೆ. ಈ ರೀತಿ ಒಂದು ವರ್ಷಕ್ಕೆ ಮಕ್ಕಳಿಗೆ ಅನುಗುಣವಾಗಿ ಹೇಗೆ ಹಣ ಹೊಂದಿಕೊಳ್ಳಿಸಬೇಕು ಎನ್ನುವ ಮಾರ್ಗೋಪಾಯಗಳು ಇಲ್ಲಿವೆ.

ಹೀಗಿರಲಿದೆ ಖರ್ಚು ವೆಚ್ಚ

ಸಹಜವಾಗಿ ಶಾಲೆಗಳಲ್ಲಿ ಇರುವುದು ನಾಲ್ಕೈದು ರೀತಿಯ ಶುಲ್ಕ. ಅದು ವಾರ್ಷಿಕ ಶಾಲಾ ಶುಲ್ಕ. ಒಂದು ವರ್ಷ ಪೂರ್ತಿ ಎಷ್ಟು ಖರ್ಚು ಬರಬಹುದು ಎನ್ನುವ ಮೊತ್ತವನ್ನು ಒಂದೇ ಬಾರಿ ಪಡೆಯುವ ಇಲ್ಲವೇ ಕಂತುಗಳಲ್ಲಿ ಪಡೆಯುವ ವ್ಯವಸ್ಥೆಯೂ ಶಾಲೆಗಳಲ್ಲಿದೆ. ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿರಬರಲು ಶಾಲಾ ವಾಹನದ ವ್ಯವಸ್ಥೆಗೆ ಇಲ್ಲವೇ ಖಾಸಗಿ ವಾಹನ ವ್ಯವಸ್ಥೆಗೂ ಇಂತಿಷ್ಟು ಎಂದು ಮೀಸಲಿಡಬೇಕಾಗುತ್ತದೆ.

ಮಕ್ಕಳ ಪುಸ್ತಕ, ಯೂನಿಫಾರಂ, ಪರೀಕ್ಷಾ ಶುಲ್ಕ, ಶಾಲಾ ದಿನೋತ್ಸವ ಇಲ್ಲವೇ ವಾರ್ಷಿಕ ಚಟುವಟಿಕೆ, ವಾರ್ಷಿಕ ಪ್ರವಾಸ, ಇತರೆ ಕಾರ್ಯಕ್ರಮಗಳ ಖರ್ಚು ಎಂತಲೂ ಇಂತಿಷ್ಟನ್ನು ತೆಗೆದಿಡಬೇಕಾಗುತ್ತದೆ. ಕೆಲವು ಶಾಲೆಗಳಲ್ಲಿ ವಾರ್ಷಿಕ ಶುಲ್ಕದಲ್ಲಿಯೇ ಯೂನಿಫಾರಂ ಹಾಗೂ ಪುಸ್ತಕದ ಮೊತ್ತ ಪಡೆಯಬಹುದು.

ಕೆಲವು ಕಡೆ ಪೋಷಕರೇ ತರಲು ಹೇಳಬಹುದು. ಇದರಿಂದ ವಾರ್ಷಿಕ ಶುಲ್ಕ ಎಷ್ಟು, ಶಾಲಾ ವಾಹನ ಅಥವಾ ಖಾಸಗಿ ವಾಹನ ಶುಲ್ಕ ಎಷ್ಟು, ಯೂನಿಫಾರಂ ಮತ್ತು ಇತರೆ ಖರ್ಚು ಎಷ್ಟು ಬರಬಹುದು ಎಂದು ಒಂದು ಅಂದಾಜಿನಲ್ಲಿ ಲೆಕ್ಕ ಹಾಕಿಕೊಂಡು ಅದಕ್ಕೆ ಪೂರಕವಾಗಿ ಯೋಜಿಸಿಕೊಳ್ಳುವುದು ಒಳ್ಳೆಯದು.

ಹೊರೆ ಹೀಗೆ ತಪ್ಪಿಸಿಕೊಳ್ಳಿ

ಕಂತಿನ ರೂಪದಲ್ಲಿ ಅವಕಾಶ ನೀಡಿದರೂ ನಿಗದಿತ ಅವಧಿಗೆ ಪಾವತಿಸಬೇಕಾಗಿರುವುದರಿಂದ ಅದಕ್ಕೆ ಪೂರಕವಾಗಿಯೂ ಯೋಜಿಸಿಕೊಳ್ಳಲು ಅವಕಾಶವಿದೆ. ವಾರ್ಷಿಕ ಶುಲ್ಕ ಕಂತಿನಲ್ಲಿ ಪಾವತಿಸಬಹುದಾ, ಶಾಲಾ ವಾಹನ ಶುಲ್ಕವನ್ನು ತಿಂಗಳಿಗೊಮ್ಮೆ ಭರಿಸಬೇಕಾ ಅಥವಾ ಒಂದೇ ಕಂತಿನಲ್ಲಿ ಪಾವತಿಸಬೇಕಾ ಎಂಬ ಅಂಶವನ್ನು ಆಧರಿಸಿಯೇ ಲೆಕ್ಕ ಹಾಕಿಕೊಳ್ಳಬಹುದು. ಇದರಿಂದ ಹೊರೆಯಾಗುವುದು ತಪ್ಪಲಿದೆ.

ಶಾಲೆಗಳ ಅವಧಿ ಇನ್ನೇನು ಮಾರ್ಚ್‌ ಅಂತ್ಯದ ಹೊತ್ತಿಗೆ ಮುಗಿಯಲಿದೆ. ಆನಂತರ ಒಂದೂವರೆ ತಿಂಗಳು ಬೇಸಿಗೆ ರಜೆ ಮುಗಿದರೆ ಮೇ ಅಂತ್ಯಕ್ಕೆ ತರಗತಿಗಳು ಶುರುವಾಗಿಬಿಡುತ್ತವೆ. ಮಕ್ಕಳು ತರಗತಿಗೆ ಹೋಗುವ ಮುನ್ನವೇ ಶುಲ್ಕವನ್ನು ಪಾವತಿಸುವಂತೆ ಶಾಲಾ ಆಡಳಿತ ಮಂಡಳಿಗಳು ಸೂಚನೆ ನೀಡುವುದರಿಂದ ಈಗಿನಿಂದಲೇ ಪರ್ಯಾಯ ವ್ಯವಸ್ಥೆಗೆ ತಯಾರಿ ಮಾಡಿಕೊಳ್ಳಬಹುದು

ಶಾಲಾ ಖರ್ಚು ವೆಚ್ಚ ನಿಭಾಯಿಸಲು ಸಿಂಪಲ್ ಟಿಪ್ಸ್

- ಒಂದು ವರ್ಷಕ್ಕೆ ಎಷ್ಟು ಖರ್ಚು ಆಗಲಿದೆ ಎನ್ನುವುದನ್ನು ಅಂದಾಜು ಮಾಡಿಕೊಳ್ಳಿ

- ಮಾಸಿಕವಾಗಿ ನಿಮ್ಮ ವೇತನ ಇಲ್ಲವೇ ಆದಾಯದಲ್ಲಿ ಇಂತಿಷ್ಟು ಮೊತ್ತವನ್ನು ಉಳಿತಾಯ ಮಾಡಿಕೊಳ್ಳಿ

- ಅಂದಾಜು ಖರ್ಚು ವೆಚ್ಚ ಲೆಕ್ಕ ಹಾಕಿ ಶುಲ್ಕ ಪಾವತಿ ಮಾಡಬೇಕಾದ ತಿಂಗಳಲ್ಲಿ ಕೈಗೆ ಬರುವಂತೆ ವಾರ್ಷಿಕ ಆರ್‌ಡಿ ಕಟ್ಟಬಹುದು.

- ಬ್ಯಾಂಕ್‌ ಇಲ್ಲವೇ ಅಂಚೆ ಇಲಾಖೆಯಲ್ಲಿ ಮಾಸಿಕವಾಗಿ ಇಂತಿಷ್ಟು ಮಕ್ಕಳ ಖಾತೆಯನ್ನೇ ಆರಂಭಿಸಿ ತೆಗೆದಿಡಬಹುದು

- ಶೈಕ್ಷಣಿಕ ಸಾಲದ ರೂಪದಲ್ಲಿ ಹಣ ಪಡೆದುಕೊಂಡಿದ್ದರೆ ಅದಕ್ಕೂ ಮಾಸಿಕವಾಗಿ ಹಣ ಉಳಿತಾಯ ಯೋಜನೆ ಮಾಡಿಕೊಳ್ಬಹುದು

- ಪುಸ್ತಕ, ಯೂನಿಫಾರಂಗಳನ್ನು ಅಂಗಡಿಗಳಲ್ಲಿ ಪಡೆದುಕೊಂಡು ಮಾಸಿಕ ಲೆಕ್ಕದಲ್ಲಿ ಹಣ ಹಿಂದುಗಿರಿಸಲು ಕೇಳಿಕೊಳ್ಳಬಹುದು

- ಶಾಲಾ ವಾಹನಗಳಿಗೆ ಕೆಲ ಮಕ್ಕಳನ್ನು ಸೇರಿಸಿ ವಾಹನ ರೂಪಿಸಿಕೊಂಡು ವೆಚ್ಚವನ್ನು ಹಂಚಿಕೆ ಮಾಡಿಕೊಳ್ಳಬಹುದು.

 

-

Whats_app_banner