ಕನ್ನಡ ಸುದ್ದಿ  /  Karnataka  /  Kodagu News Gram Panchayat Former President Murder Near Ponnampet In Kodagu By Brother Police Investigating Kub

Kodagu Crime:ಕೊಡಗಿನಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಗುಂಡೇಟಿನಿಂದ ಹತ್ಯೆ, ಸಹೋದರನಿಂದಲೇ ಕೃತ್ಯ

ಕೊಡಗಿನಲ್ಲಿ ಗುಂಡಿಕ್ಕಿ ಸಹೋದರನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಕೊಲೆಯಾದ ಮಲ್ಲಂಡ ಪ್ರಕಾಶ್‌.
ಕೊಲೆಯಾದ ಮಲ್ಲಂಡ ಪ್ರಕಾಶ್‌.

ಮಡಿಕೇರಿ: ಕೊಡಗಿನಲ್ಲಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರನ್ನು ಹತ್ಯೆ ಮಾಡಲಾಗಿದೆ. ಕೊಡಗು ಜಿಲ್ಲೆಯ ಅರ್ವತ್ತೊಕ್ಲು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿದ್ದ ಮಲ್ಲಂಡ ಪ್ರಕಾಶ್‌ ಅವರು ಕೊಲೆಯಾದವರು. ಅವರ ಸಹೋದರ ಸುಬ್ರಮಣಿ ಅವರೇ ಸಹೋದರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದೇ ವೇಳೆ ಮಲ್ಲಂಡ ಪ್ರಕಾಶ್‌ ಅವರ ಪುತ್ರನಿಗೂ ಗುಂಡೇಟು ತಗುಲಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಪೊನ್ನಂಪೇಟೆ ಸಮೀಪದ ಬೇಗೂರು ತೋಟದ ಮನೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅರ್ವತ್ತೊಕ್ಲು ಪಂಚಾಯಿತಿ ಸದಸ್ಯರಾಗಿ ನಂತರ ಅಧ್ಯಕ್ಷರೂ ಆಗಿದ್ದ ಮಲ್ಲಂಡ ಪ್ರಕಾಶ್‌ ಈ ಭಾಗದಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ಧಾರೆ. ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದವರು.

ಆದರೆ ಕುಟುಂಬದ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಕಲಹ ನಡೆದಿತ್ತು. ಈ ಕುರಿತು ಹಲವಾರು ಬಾರಿ ಜಗಳಗಳೂ ಆಗಿ ಕುಟುಂಬದವರು, ಪರಿಚಯಸ್ಥರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದವು.

ಇದೇ ವಿಚಾರದಲ್ಲಿ ಮತ್ತೆ ಜಗಳ ನಡೆದಿದೆ. ಈ ವೇಳೆ ಸಹೋದರ ಸುಬ್ರಮಣಿ ಪೊನ್ನಂಪೇಟೆಯ ಬೇಗೂರು ತೋಟದಲ್ಲಿ ತಮ್ಮ ಮಲ್ಲಂಡ ಪ್ರಕಾಶ್‌ ಜತೆಗೆ ಜಗಳವಾಡಿದ್ದು. ಮಾತಿಗೆ ಮಾತು ಬೆಳೆದು ಸುಬ್ರಮಣಿ ಗುಂಡು ಹಾರಿಸಿದ್ದಾರೆ. ಗುಂಡು ಹಾರಿಸಿದ ರಭಸಕ್ಕೆ ಕುಸಿದು ಬಿದ್ದು ಮೃತಪಟ್ಟಿದ್ಧಾರೆ. ಇದೇ ವೇಳೆ ತಂದೆಗೆ ಗುಂಡೇಟು ತಡೆಯಲು ಬಂದ ಪ್ರಕಾಶ್‌ ಪುತ್ರನಿಗೂ ತೀವ್ರವಾಗಿ ಗಾಯವಾಗಿದೆ. ಕೂಡಲೇ ಅವರನ್ನು ಮೈಸೂರಿನ ಖಾಸಗಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಸಹೋದರನ್ನು ಗುಂಡೇಟಿನಿಂದ ಸಹೋದರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುಂಡೇಟಿನ ಘಟನೆ ನಂತರ ನೆರೆಹೊರೆಯವರು ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಘಟನೆ ಕುರಿತು ಮೊಕದ್ದಮೆ ದಾಖಲಿಸಿಕೊಂಡಿದ್ದೇವೆ. ಮಲ್ಲಂಡ ಪ್ರಕಾಶ್‌ ಎಂಬುವವರನ್ನು ಸಹೋದರನೇ ಹತ್ಯೆ ಮಾಡಿರುವ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಕೌಟುಂಬಿಕ ಕಲಹದಿಂದ ಘಟನೆ ನಡೆದಿದೆ ಎನ್ನುವ ಮಾಹಿತಿಯಿದ್ದು, ಕುಟುಂಬದವರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ಧೇವೆ ಎಂದು ಪೊನ್ನಂಪೇಟೆ ಪೊಲೀಸರು ತಿಳಿಸಿದ್ದಾರೆ.

IPL_Entry_Point

ವಿಭಾಗ