Madikeri Dasara 2024: ಅರ್ಜುನ್‌ ಜನ್ಯ- ರಾಜೇಶ್‌ ಕೃಷ್ಣನ್ ಸಂಗೀತ ವೈವಿಧ್ಯ; ಮಡಿಕೇರಿ ದಸರಾದ 9 ದಿನಗಳ ಕಾರ್ಯಕ್ರಮಗಳು ಏನೇನು ಇವೆ-kodagu news madikeri dasara 2024 program list arjun janya rajesh krishnan music night coffee dasara first time kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Madikeri Dasara 2024: ಅರ್ಜುನ್‌ ಜನ್ಯ- ರಾಜೇಶ್‌ ಕೃಷ್ಣನ್ ಸಂಗೀತ ವೈವಿಧ್ಯ; ಮಡಿಕೇರಿ ದಸರಾದ 9 ದಿನಗಳ ಕಾರ್ಯಕ್ರಮಗಳು ಏನೇನು ಇವೆ

Madikeri Dasara 2024: ಅರ್ಜುನ್‌ ಜನ್ಯ- ರಾಜೇಶ್‌ ಕೃಷ್ಣನ್ ಸಂಗೀತ ವೈವಿಧ್ಯ; ಮಡಿಕೇರಿ ದಸರಾದ 9 ದಿನಗಳ ಕಾರ್ಯಕ್ರಮಗಳು ಏನೇನು ಇವೆ

ಮಡಿಕೇರಿ ದಸರಾ ಅಂಗವಾಗಿ ಸತತ ಒಂಬತ್ತು ದಿನಗಳೂ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಕೊಡಗು ಜಿಲ್ಲಾಡಳಿತ ಸಿದ್ದತೆಗಳನ್ನೂ ಮಾಡಿಕೊಂಡಿದೆ. ಕಾರ್ಯಕ್ರಮದ ವಿವರ ಇಲ್ಲಿದೆ.

ಮಡಿಕೇರಿ ದಸರಾ ಈ ಬಾರಿ ವೈವಿಧ್ಯಮಯ ಕಾರ್ಯಕ್ರಮಗಳಿಂದ ಗಮನ ಸೆಳೆಯಲಿದೆ.
ಮಡಿಕೇರಿ ದಸರಾ ಈ ಬಾರಿ ವೈವಿಧ್ಯಮಯ ಕಾರ್ಯಕ್ರಮಗಳಿಂದ ಗಮನ ಸೆಳೆಯಲಿದೆ.

ಮಡಿಕೇರಿ: ಮಂಜು ಮುಸುಕಿನ ನಾಡು ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಅಕ್ಟೋಬರ್ 4 ರಂದು 12 ರವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರತೀ ವರ್ಷದಂತೆಯೇ ಈ ಬಾರಿಯೂ ಭಿನ್ನವಾಗಿ ಮಡಿಕೇರಿ ದಸರಾ ಆಚರಿಸುವ ಪ್ರಯತ್ನಗಳು ನಡೆದಿವೆ. ಅರ್ಜುನ್‌ ಜನ್ಯಾ ಹಾಗೂ ರಾಜೇಶ್‌ ಕೃಷ್ಣನ್‌ ಜೋಡಿಯ ಸಂಗೀತ ಸಂಜೆ ವಿಶೇಷ. ಕವಿಗೋಷ್ಠಿ, ಕ್ರೀಡಾಕೂಟಗಳು, ಯುವ ದಸರಾ ಇರಲಿವೆ. ಕಾಫಿ ದಸರಾ ಈ ಬಾರಿ ಹೊಸ ಸೇರ್ಪಡೆ. ಜಿಲ್ಲಾಧಿಕಾರಿ ವೆಂಕಟರಾಜಾ ಅಧ್ಯಕ್ಷತೆಯಲ್ಲಿ ನಡೆದ ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರ ಸಭೆಯಲ್ಲಿ ಈ ಬಾರಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮಗಳ ವಿವರ ಪಟ್ಟಿ

  • ಅ.4 ರಂದು ಸಂಜೆ 6 ಗಂಟೆಗೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ.
  • ಅ. 5 ರಂದು ಬೆಳಗ್ಗೆ 9.30 ಗಂಟೆಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ 11 ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ಮವೇಷ ಕ್ಲೇಮಾಡೆಲಿಂಗ್ ಸ್ಪರ್ಧೆಗಳು ಆಯೋಜಿತವಾಗಿದೆ, ಅಂದು ಸಂಜೆ 6 ಗಂಟೆಯಿಂದ ಮಕ್ಕಳಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.

    ಇದನ್ನೂ ಓದಿರಿ: ಈ ಬಾರಿ ಮೈಸೂರು ದಸರಾ ಜಂಬೂಸವಾರಿ ದಿನ ಹವಾಮಾನ ಹೇಗಿರಲಿದೆ; ವಿಜಯದಶಮಿ ದಿನ ಮಳೆ ಬರುತ್ತಾ ಹೇಗೆ ?
  • ಅಕ್ಟೋಬರ್ 6 ರಂದು ಬೆಳಗ್ಗೆ 10 ಗಂಟೆಗೆ ಮೊದಲ ವರ್ಷದ ಕಾಫಿ ದಸರಾ ಚಾಲನೆಗೊಳ್ಳಲಿದೆ. ಕಾಫಿ ಮಂಡಳಿ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಫಿ ದಸರಾ ಆಯೋಜಿತವಾಗಿದೆ,
  • ಕಾಫಿ ದಸರಾ ಪ್ರಯುಕ್ತ ನಿರ್ಮಾಣಗೊಳ್ಳುವ 31 ಮಳಿಗೆಗಳಲ್ಲಿ ಕಾಫಿ, ಕೃಷಿ ಸಂಬಂಧಿತ ಪ್ರದರ್ಶನ, ಮಾರಾಟ ಮೇಳ ಇರಲಿದೆ, 11 ಗಂಟೆಯಿಂದ ಕಲಾ ಸಂಭ್ರಮ ವೇದಿಕೆಯಲ್ಲಿ ಕಾಫಿ ಮತ್ತು ಕೃಷಿ ಸಂಬಂಧಿತ ಪರಿಣಿತರಿಂದ ವಿಚಾರಸಂಕಿರಣ ಆಯೋಜಿತವಾಗಿದೆ, ಸಂಜೆ 5 ಗಂಟೆಯವರೆಗೆ ಮಳಿಗೆಗಳು ಸಾರ್ವಜನಿಕರ ಭೇಟಿಗೆ ತೆರೆದಿರುತ್ತದೆ, ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
  • ಅಕ್ಟೋಬರ್ 7 ರಂದು ಬೆಳಗ್ಗೆ 10 ಗಂಟೆಯಿಂದ ಕಾಫಿ ದಸರಾ ಅಂಗವಾಗಿ ವಿವಿಧ ಮಳಿಗೆಗಳು ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ, ಬೆಳಗ್ಗೆ 10 ಗಂಟೆಯಿಂದ ಕಾಫಿ ಕೃಷಿ ಸಂಬಂಧಿತ ವಿಚಾರಸಂಕಿರಣಗಳು ಆಯೋಜಿಸಲ್ಪಟ್ಟಿದೆ, ಕಾಫಿ ದಸರಾವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿದೆ ಎಂದು ಅನಿಲ್ ಸಭೆಗೆ ಮಾಹಿತಿ ನೀಡಿದರು. ಅಂದು ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.

    ಇದನ್ನೂ ಓದಿರಿ: ಫಿರಂಗಿ ಸದ್ದಿಗೂ ಜಗ್ಗದ, ಬಗ್ಗದ ಮೈಸೂರು ಗಜಪಡೆ; ಕುಶಾಲುತೋಪು ಸಿಡಿಸುವ ಮೊದಲ ತಾಲೀಮು ಯಶಸ್ವಿ
  • ಅ.8 ರಂದು ಮಂಗಳವಾರ 7 ನೇ ವರ್ಷದ ಮಹಿಳಾ ದಸರಾ ನಡೆಯಲಿದ್ದು, ವೈವಿಧ್ಯಮಯ ಮನರಂಜನಾ ಸ್ಪರ್ಧೆಗಳು ಮಹಿಳೆಯರಿಗಾಗಿ ಆಯೋಜಿತವಾಗಿದ್ದು, ಮಡಿಕೇರಿ ನಗರಸಭಾ ಸದಸ್ಯೆಯರು, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳಾ ದಸರಾ ಆಯೋಜಿಸಲ್ಪಟ್ಟಿದೆ. ಸಂಜೆ 6 ಗಂಟೆಗೆ ಮಹಿಳೆಯರಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.
  • ಅ.9 ರಂದು ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅ 10 ರಂದು ಬೆಳಗ್ಗೆ 9 ಗಂಟೆಗೆ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ ಜಾನಪದ ದಸರಾ ಆಯೋಜಿಸಲಾಗಿದ್ದು, ಕಲಾಜಾಥಾ, ವೈವಿಧ್ಯಮಯ ಜಾನಪದ ಕಲಾ ತಂಡಗಳ ಪ್ರದರ್ಶನ ಆಯೋಜಿತವಾಗಿದೆ, ಸಂಜೆ 6 ಗಂಟೆಗೆ ಸೋಮು ಮತ್ತು ಅಜ್ಜೇಟಿರ ಲೋಕೇಶ್ ಸಂಚಾಲಕತ್ವದಲ್ಲಿ ಯುವ ದಸರಾ ಆಯೋಜನೆಗೊಂಡಿದೆ.
  • ಅ.11 ರಂದು ಆಯುಧಪೂಜಾ ಪ್ರಯುಕ್ತ ಸಂಜೆ 7 ಗಂಟೆಗೆ ರಾಜ್ಯದ ಹೆಸರಾಂತ ಗಾಯಕರಾದ ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಇರಲಿದೆ.
  • ಅ.12 ರಂದು ವಿಜಯದಶಮಿ ಹಿನ್ನೆಲೆಯಲ್ಲಿ 7 ಗಂಟೆಯಿಂದ 10 ಗಂಟೆಯವರೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ, ರಾತ್ರಿ 10 ಗಂಟೆಯಿಂದ ಮರುದಿನ ಬೆಳಗ್ಗಿನ ಜಾವದವರೆಗೆ ರಾಜ್ಯದ ಹೆಸರಾಂತ ಸಂಗೀತ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ.

    ಇದನ್ನೂ ಓದಿರಿ: ಮಡಿಕೇರಿ ದಸರಾ ಗೊತ್ತು, ಕೊಡಗು ಕಾಫಿ ದಸರಾ ಗೊತ್ತೆ, ಮೊದಲ ಬಾರಿ ಅಕ್ಟೋಬರ್‌ 6ರಿಂದ ಆಯೋಜನೆ, ಏನಿದರ ವಿಶೇಷ

ದಸರಾ ಕವಿಗೋಷ್ಠಿ

ಅ.9 ರಂದು ನಡೆಯಲಿದೆ. ಅಂದು 60 ಕವಿಗಳು ಕವನ ವಾಚಿಸಲಿರುವ ದಸರಾ ಬಹುಭಾಷಾ ಕವಿಗೋಷ್ಠಿ ಗಾಂಧಿ ಮೈದಾನದಲ್ಲಿ ನಡೆಯಲಿದೆ

ದಸರಾ ಕ್ರೀಡಾಕೂಟ

ಅ.5 ರಂದು ಬೆಳಗ್ಗೆ 7 ಗಂಟೆಗೆ ರಸ್ತೆ ಓಟ, ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಕ್ರೀಡೆಗಳು ಆಯೋಜಿತವಾಗಿದೆ, ಅ.6 ರಂದು ಬೆಳಗ್ಗೆ 7 ಗಂಟೆಗೆ ನಗರದ ಬನ್ನಿಮಂಟಪದಿಂದ ಕ್ರೀಡಾಜ್ಯೋತಿಯನ್ನು ತಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ತರಲಾಗುತ್ತದೆ, ಅಂದು ಇಡೀ ದಿನ ವಾಲಿಬಾಲ್, ಮಕ್ಕಳ ಕ್ರೀಡಾಕೂಟ ಆಯೋಜಿತವಾಗಿದೆ. ಅ.9 ರಂದು ಹೋಟೆಲ್ ರಾಜದರ್ಶನ್ ನಲ್ಲಿ ಚೆಸ್ ಮತ್ತು ಕೇರಂಬೋರ್ಡ್ ಸ್ಪರ್ಧೆಗಳು ಆಯೋಜಿತವಾಗಿದೆ. ಅ.10 ರಂದು ನಗರದ ಗಾಂಧಿ ಮೈದಾನದಲ್ಲಿ ಕಬ್ಬಡ್ಡಿ ಸ್ಪರ್ಧೆ ಆಯೋಜನೆಗೊಂಡಿವೆ.

mysore-dasara_Entry_Point