ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕೊಡಗಿನಲ್ಲೊಂದು ಗಾಂಧಿ ಗದ್ದೆ, ಮಹಾತ್ಮನಿಗೆ ಗೌರವ ಸಲ್ಲಿಸಿದ ಪೊನ್ನಂಪೇಟೆ ಕೃಷಿಕ

Kodagu News: ಕೊಡಗಿನಲ್ಲೊಂದು ಗಾಂಧಿ ಗದ್ದೆ, ಮಹಾತ್ಮನಿಗೆ ಗೌರವ ಸಲ್ಲಿಸಿದ ಪೊನ್ನಂಪೇಟೆ ಕೃಷಿಕ

Mahatma Gandhi ಮಹಾತ್ಮಗಾಂಧೀಜಿ ಅವರು ಕೊಡಗಿಗೆ ಭೇಟಿ ನೀಡಿದ ನೆನಪಿನ ಸ್ಥಳ ಗಾಂಧಿ ಗದ್ದೆಯಾಗಿ ಮಾರ್ಪಟ್ಟಿದೆ.

ಕೊಡಗಿನಲ್ಲಿರುವ ಗಾಂಧಿ ಗದ್ದೆ ನೋಟ.
ಕೊಡಗಿನಲ್ಲಿರುವ ಗಾಂಧಿ ಗದ್ದೆ ನೋಟ.

ಮಡಿಕೇರಿ: ಭಾರತದ ಸ್ವಾತಂತ್ರ್ಯದ ರೂವಾರಿ, ಶತಮಾನವಾದರೂ ಭಾರತದ ಪ್ರಬಲ ಆಶಾಕಿರಣದಂತೆಯೇ ಇರುವ ಮಹಾತ್ಮಾಗಾಂಧಿ ಅವರ ನೆನಪು ಅಜರಾಮರ. ಅದು ಹಲವು ರೂಪದಲ್ಲಿ. ಹಲವು ರೀತಿಯಲ್ಲಿದೆ. ಇಡೀ ಭಾರತವನ್ನು ಫಕೀರನಂತೆಯೇ ಸುತ್ತಿದ್ದ ಗಾಂಧೀಜಿ ಅವರು ಜನಮಾನಸದಲ್ಲಿ ಗಟ್ಟಿ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅದು ಈಗಲೂ ಹಲವರಿಗೆ ಚೈತನ್ಯದ ರೂಪ. ಗಾಂಧಿ ಹಾಕಿಕೊಟ್ಟ ಮಾರ್ಗದಲ್ಲಿಯೇ ಹಲವರು ಈಗಲೂ ನಡೆಯುತ್ತಿದ್ದಾರೆ. ಈ ಮೂಲಕ ಮಹಾತ್ಮನಿಗೆ ನಿಜಾರ್ಥದಲ್ಲಿ ಗೌರವ ಸಲ್ಲಿಸುತ್ತಿದ್ದಾರೆ. ತಮ್ಮ ಕಾಯಕದ ಮೂಲಕ ಹಲವರು ಬಾಪುವನ್ನು ತಮ್ಮ ಮಣ್ಣಿನಲ್ಲಿ ಗೌರವ, ಆದರಗಳನ್ನು ಸಮರ್ಪಿಸುತ್ತಿದ್ದಾರೆ. ಅದರಲ್ಲೂ ವೀರ ಸೇನಾನಿಗಳ ನಾಡು, ಕೊಡಗಿನ ಜನರಿಗೂ ಗಾಂಧಿ ಭೇಟಿ ನಂಟು ಉಂಟು. ಸ್ವಾತಂತ್ರ್ಯ ಸಂಗ್ರಾಮದ ಉತ್ತುಂಗದಲ್ಲಿ ಅವರು ಕೊಡಗಿಗೂ ಬಂದಿದ್ದರು. ಅವರು ಭೇಟಿ ನೀಡಿದ ಸ್ಥಳ ಈಗಲೂ ಕಾಯಕ ಭೂಮಿಯಾಗಿ ಉಳಿದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಕೊಡಗಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರ ಪೊನ್ನಂಪೇಟೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಮೆಟ್ಟಿದ ನಾಡು ಎಂಬ ಹೆಮ್ಮೆಗೂ ಪಾತ್ರವಾಗಿದೆ. ದೇಶ ವ್ಯಾಪಿ ಸ್ವಾತಂತ್ರ ಚಳವಳಿ ತೀವ್ರಗೊಂಡಿದ್ದ ಸಂದರ್ಭದಲ್ಲಿ1934ರ ಫೆಬ್ರುವರಿ 22.ರಂದು ಮಹಾತ್ಮ ಗಾಂಧೀಜಿಯವರು ಕೇರಳ ಮಾರ್ಗವಾಗಿ ಕೊಡಗಿನ ಪೊನ್ನಂಪೇಟೆಗೆ ಆಗಮಿಸಿದ್ದರು. ಅಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ಒಂದು ರಾತ್ರಿ ತಂಗಿದ್ದರು. ಅವರಿಗೆ ಸ್ಥಳೀಯವಾಗಿ ಪುತ್ತಾಮನೆ ಪೊನ್ನಮ್ಮ ಅವರು ಸತ್ಕಾರ ನೀಡಿದ್ದರು. ಮರು ದಿವಸ ಗಾಂಧೀಜಿಯವರು ಕೊಡಗಿನ ಜನರನ್ನು ಉದ್ದೇಶಿಸಿ ಗದ್ದೆ ಬಯಲಿನಲ್ಲಿ ಸ್ವಾತಂತ್ರ್ಯ ಚಳವಳಿಯ ಕುರಿತು ಭಾಷಣ ಮಾಡಿದ್ದರು.

ಆ ಗದ್ದೆ ಈಗ ಚೆಪ್ಪುಡೀರ ಪೊನ್ನಪ್ಪ ಅವರ ವಶದಲ್ಲಿದ್ದು ‘ಗಾಂಧಿ ಗದ್ದೆ’ ಎಂದೇ ಪ್ರಸಿದ್ಧಿ ಪಡೆದಿದೆ. ಪೊನ್ನಂಪೇಟೆ ಬಸ್ ನಿಲ್ದಾಣದಿಂದ ಹುದಿಕೇರಿ ಮಾರ್ಗದಲ್ಲಿ 1 ಕಿ.ಮೀ. ದೂರದಲ್ಲಿದ್ದು, ಪೊನ್ನಪ್ಪ ಅವರು ಈ ಗದ್ದೆಯಲ್ಲಿ ಪ್ರತಿವರ್ಷ ಭತ್ತದ ಕೃಷಿ ಮಾಡುತ್ತಿದ್ದಾರೆ ಎಂದು ಗಾಂಧಿ ಕುರಿತು ಅಧ್ಯಯನ ನಡೆಸುವ ಹಿರಿಯ ಪತ್ರಕರ್ತರೂ ಆಗಿರುವ ವಿಜಯಪುರದ ನಿಲೇಶ ಬೇನಾಳ ಹೇಳುತ್ತಾರೆ.

ಬಾಪೂಜಿ ಬಂದ ನೆನಪಿಗಾಗಿ ಪಟ್ಟಣದ ಹಿರಿಯರುಅಲ್ಲೊಂದು ಗಾಂಧಿ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದಾರೆ. ಆದರೆ, ಪಟ್ಟಣದಿಂದ ದೂರವಿದ್ದುದರಿಂದ ಸಂರಕ್ಷಣೆ ಕಷ್ಟವೆಂದು ತಿಳಿದು, ಕಳೆದ 20 ವರ್ಷಗಳ ಹಿಂದೆ ಬಾಪೂ ಪತ್ರಿಮೆಯನ್ನು ಸ್ಥಳೀಯ ಗ್ರಾಮ ಪಂಚಾಯತಿಯ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಪ್ರತಿ ವರ್ಷ ಅದೇ ಪ್ರತಿಮೆಯ ಮುಂದೆ ರಾಷ್ಟ್ರೀಯ ಹಬ್ಬಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ಪೊನ್ನಂಪೇಟೆಗೆ ಬಾಪೂಜಿ ಬಂದ ಸುದ್ದಿಯನ್ನು ತಿಳಿದ ಮೈಸೂರು, ಹಾಸನ ಹಾಗೂ ಕೊಡಗಿನ ಜನರು ಎತ್ತಿನ ಗಾಡಿಗಳ ಮೂಲಕ ಸಾಗರೋಪಾದಿಯಲ್ಲಿ ಬಂದು ಮಹಾತ್ಮನ ದರುಶನ ಪಡೆದು ಭಾಷಣ ಕೇಳಿದ್ದರು. ಬಳಿಕ ಬಾಪೂ ಪೊನ್ನಂಪೇಟೆಯಿಂದ ಗೋಣಿಕೊಪ್ಪಲು ಮಾರ್ಗವಾಗಿ ಕೈಕೇರಿಗೆ ತೆರಳಿ ಅಲ್ಲಿನ ಹರಿಜನ ವೃದ್ಧೆಯೊಬ್ಬರ ಕಷ್ಟ ಸುಖವನ್ನು ವಿಚಾರಿಸಿದ್ದರು.

ಗಾಂಧಿ ಭೇಟಿ ನೀಡಿದ್ದ ಪ್ರದೇಶಗಳು ಭಾರತದಲ್ಲಿ ಹಲವು ಇವೆ. ಗಾಂಧೀಜಿ ಅವರು ಭೇಟಿ ನೀಡಿದ ಊರುಗಳಿಲ್ಲ. ಪ್ರೇರಣೆ ನೀಡಿದ ಜನರಿಲ್ಲ. ಸ್ವಾತಂತ್ರ್ಯ ಸಿಗಬೇಕು. ಬ್ರಿಟೀಷರನ್ನು ದೇಶದಿಂದ ಓಡಿಸಬೇಕು ಎಂದು ಗಾಂಧೀಜಿ ಊರು ಊರು ಸುತ್ತಿದರು. ಜನರಲ್ಲಿ ಸ್ವಾತಂತ್ರ್ಯದ ಕನಸನ್ನು ಬಿತ್ತಿದರು. ಹಾಗೆ ಬಂದವರು ಕೊಡಗಿನಲ್ಲೂ ಗಾಂಧೀಜಿ ಭೇಟಿ ಕೊಟ್ಟ ಕುರುಹುಗಳಿವೆ. ಅದರಲ್ಲಿ ಪೊನ್ನಂಪೇಟೆ ಭೇಟಿಗೆ ತೊಂಬತ್ತು ವರ್ಷಗಳು ತುಂಬಿವೆ. ಇದರ ನೆನಪಿನಲ್ಲಿ ಅವರ ಭಾಷಣ ಮಾಡಿದ್ದ ಸ್ಥಳ ಈಗ ಗಾಂಧಿಗದ್ದೆಯಾಗಿ ಅವರ ನೆನಪಿಯಲ್ಲಿಯೇ ಉಳಿದುಕೊಂಡಿದೆ. ಈಗಲೂ ಭತ್ತ ಬೆಳೆದು ಗೌರವ ಸಲ್ಲಿಸಲಾಗುತ್ತದೆ ಎಂದು ಸ್ಥಳೀಯರು ಅಭಿಮಾನದಿಂದ ಹೇಳುತ್ತಾರೆ.

ವಿಭಾಗ