ಕನ್ನಡ ಸುದ್ದಿ  /  ಕರ್ನಾಟಕ  /  ಕೊಡಗು: ಸೋಮವಾರಪೇಟೆ ಸೂರ್ಲಬ್ಬಿಯಲ್ಲಿ 16 ವರ್ಷದ ಬಾಲಕಿಯ ದಾರುಣ ಹತ್ಯೆ, ವಿವಾಹ ಮುಂದೂಡಿದ್ದಕ್ಕೆ 32 ವರ್ಷದ ವ್ಯಕ್ತಿ ಪೈಶಾಚಿಕ ಕೃತ್ಯ

ಕೊಡಗು: ಸೋಮವಾರಪೇಟೆ ಸೂರ್ಲಬ್ಬಿಯಲ್ಲಿ 16 ವರ್ಷದ ಬಾಲಕಿಯ ದಾರುಣ ಹತ್ಯೆ, ವಿವಾಹ ಮುಂದೂಡಿದ್ದಕ್ಕೆ 32 ವರ್ಷದ ವ್ಯಕ್ತಿ ಪೈಶಾಚಿಕ ಕೃತ್ಯ

ಕೊಡಗು: ಸೋಮವಾರಪೇಟೆ ಸೂರ್ಲಬ್ಬಿಯಲ್ಲಿ 16 ವರ್ಷದ ಬಾಲಕಿಯ ದಾರುಣ ಹತ್ಯೆ ನಡೆದಿದ್ದು, ಗುರುವಾರ (ಮೇ 9) ವಿವಾಹ ಮುಂದೂಡಿದ್ದಕ್ಕೆ 32 ವರ್ಷದ ವ್ಯಕ್ತಿ ಪ್ರತೀಕಾರ ತೀರಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪ್ರಕಾಶ್ ಎಂದು ಗುರುತಿಸಲಾಗಿದ್ದು, ಬಾಲಕಿಯ ತಲೆಯನ್ನೂ ಕೊಂಡೊಯ್ದು ಪೈಶಾಚಿಕ ವರ್ತನೆ ತೋರಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಕೊಡಗು: ಸೋಮವಾರಪೇಟೆ ಸೂರ್ಲಬ್ಬಿಯಲ್ಲಿ 16 ವರ್ಷದ ಬಾಲಕಿ ಯು.ಎಸ್‌ ಮೀನಾಳ ದಾರುಣ ಹತ್ಯೆ ನಡೆದಿದೆ. ವಿವಾಹ ಮುಂದೂಡಿದ್ದಕ್ಕೆ 32 ವರ್ಷದ ವ್ಯಕ್ತಿ ಪ್ರತೀಕಾರ ಇದು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಡಗು: ಸೋಮವಾರಪೇಟೆ ಸೂರ್ಲಬ್ಬಿಯಲ್ಲಿ 16 ವರ್ಷದ ಬಾಲಕಿ ಯು.ಎಸ್‌ ಮೀನಾಳ ದಾರುಣ ಹತ್ಯೆ ನಡೆದಿದೆ. ವಿವಾಹ ಮುಂದೂಡಿದ್ದಕ್ಕೆ 32 ವರ್ಷದ ವ್ಯಕ್ತಿ ಪ್ರತೀಕಾರ ಇದು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರಪೇಟೆ: ವಯಸ್ಕಳಲ್ಲದ ಕಾರಣ ಮದುವೆ ಮುಂದೂಡಿದ್ದಕ್ಕೆ 32 ವರ್ಷದ ವ್ಯಕ್ತಿಯೊಬ್ಬ 16 ವರ್ಷದ ಬಾಲಕಿಯ ತಲೆ ಕತ್ತರಿಸಿ ಕೊಂಡೊಯ್ದ ವಿಲಕ್ಷಣ ಘಟನೆ ಸೋಮವಾರ ಪೇಟೆಯ ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕಿ ಸೂರ್ಲಬ್ಬಿ ಗ್ರಾಮದ ಯುಎಸ್ ಮೀನಾ. ಆಕೆಯನ್ನು ಹತ್ಯೆ ಮಾಡಿ ತಲೆ ಕೊಂಡೊಯ್ದ ಆರೋಪಿಯನ್ನು ಪ್ರಕಾಶ್ (ಓಂಕಾರಪ್ಪ) ಎಂದು ಗುರುತಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಆರೋಪಿ ಪ್ರಕಾಶ್ ಬಾಲಕಿಯನನ್ನು ಕೊಲೆ ಮಾಡಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತ ಬಾಲಕಿಯ ತಲೆಯನ್ನು ಕೊಂಡೊಯ್ದಿರುವ ಕಾರಣ, ಬಾಲಕಿಯ ಮುಂಡ ಮಾತ್ರ ಪಾಲಕರಿಗೆ ಸಿಕ್ಕಿದೆ. ಪೊಲೀಸರು ಸ್ಥಳ ಮಹಜರು ನಡೆಸಿ, ಬಾಲಕಿಯ ಶವವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಾಲಕಿ ಪಾಸ್‌; ನಿನ್ನೆಯೇ ಪ್ರಕಾಶ್‌ ಜೊತೆಗೆ ನಿಶ್ಚಿತಾರ್ಥ

ನಿನ್ನೆ (ಮೇ 9) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಮೀನಾ ಮತ್ತು ಆರೋಪಿ ಪ್ರಕಾಶ್‌ನ ಮದುವೆ ನಿಶ್ಚಿತಾರ್ಥವೂ ನಿನ್ನೆಯೇ ನಡೆದಿತ್ತು. ಬಾಲಕಿಗೆ ಇನ್ನೂ 18 ವರ್ಷ ತುಂಬದ ಕಾರಣ ಈ ನಿಶ್ಚಿತಾರ್ಥದ ವಿಚಾರವನ್ನು ಯಾರೋ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದರು. ಇದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇವರ ಮನೆಗೆ ಬಂದು ಎರಡೂ ಕುಟುಂಬದವರ ಮನವೊಲಿಸಿ ಬಾಲಕಿಗೆ 18 ವರ್ಷ ತುಂಬುವ ತನಕ ಮದುವೆ ಮುಂದೂಡುವಂತೆ ಮಾಡಿದ್ದರು. ಇದಕ್ಕೆ ಎರಡೂ ಕುಟುಂಬದವರು ಒಪ್ಪಿಕೊಂಡಿದ್ದರು.

ಈಗ ಮದುವೆಯಾದರೆ ಪೋಕ್ಸೋ ಕಾಯಿದೆ ಪ್ರಕಾರ ಪ್ರಕಾಶ್ ಬಂಧನಕ್ಕೆ ಒಳಗಾಗಬೇಕಾಗುತ್ತದೆ. ಮದುವೆ ಮಾಡಿಸಿದವರೂ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಅಧಿಕಾರಿಗಳು ಎರಡೂ ಕುಟುಂಬದವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಇಷ್ಟಾದ ಬಳಿಕ ಬಾಲಕಿ ಮೀನಾಗೆ 18 ವರ್ಷ ತುಂಬಿದ ಬಳಿಕ ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದರು ಎಲ್ಲರೂ. ಇಷ್ಟಾದ ಬಳಿಕ ಅಧಿಕಾರಿಗಳು ಅಲ್ಲಿಂದ ತೆರಳಿದ್ದರು.

ಸಂಜೆ ಬಾಲಕಿಯ ಮನೆಯವರ ಮೇಲೆ ದಾಳಿ, ಪೈಶಾಚಿಕ ವರ್ತನೆ ತೋರಿದ ಯುವಕ

ಬದುಕಿನಲ್ಲಿ ತನ್ನಿಚ್ಛೆಗೆ ವಿರುದ್ಧವಾಗಿ ನಡೆದ ವಿದ್ಯಮಾನದಿಂದ ಕೋಪಗೊಂಡಿದ್ದ ಯುವಕ ಪ್ರಕಾಶ್‌, ಸಂಜೆ 5.30ಕ್ಕೆ ಮತ್ತೆ ಬಾಲಕಿಯ ಮನೆಗೆ ಬಂದಿದ್ದ. ಮಾರಕಾಸ್ತ್ರ ಹಿಡಿದು ಬಂದ್ದಿದ್ದ ಆತ ಬಾಲಕಿಯ ಪಾಲಕರ ಮೇಲೆ ಹಲ್ಲೆ ನಡೆಸಿದ. ಬಳಿಕ ಬಾಲಕಿಯನ್ನು ಮನೆಯಿಂದ ಎಳೆದುಕೊಂಡು ಹೊರತಂದು ಸ್ವಲ್ಪ ದೂರದ ತನಕ ಹಾಗೆಯೇ ಎಳೆದೊಯ್ದಿದ್ದಾನೆ. ಅಲ್ಲಿ ಬಾಲಕಿಯ ತಲೆ ಕಡಿದು, ದೇಹವನ್ನು ಅಲ್ಲೇ ಬಿಟ್ಟು ತಲೆಯನ್ನು ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಬಾಲಕಿಯ ಪಾಲಕರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕಿಯ ತಾಯಿಗೆ ಗಂಭೀರ ಗಾಯವಾಗಿದ್ದು, ತಂದೆಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಬಾಲಕಿಯ ತಲೆ ಎಲ್ಲಿದೆ ಎಂಬುದರ ಹುಡುಕಾಟವೂ ಮುಂದುವರಿದಿದೆ. ಆರೋಪಿ ವಿರುದ್ಧ ಪೋಕ್ಸೋ ಕೇಸ್ ಮತ್ತು ಕೊಲೆ ಕೇಸ್‌ ದಾಖಲಿಸಿದ್ದು, ಬಂಧನಕ್ಕಾಗಿ ಶೋಧ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

IPL_Entry_Point