ಬೆಳಿಗ್ಗೆ ಮದುವೆಯಾಗಿ ಸಂಜೆ ಕಿತ್ತಾಡಿಕೊಂಡ ವಧು-ವರ: ಮಚ್ಚಿನೇಟಿಗೆ ವಧು ಸಾವು, ವರನ ಸ್ಥಿತಿ ಗಂಭೀರ -Kolar Crime-kolar news newly married couple fights in kgf bride died on the spot bridegroom in hospital ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಳಿಗ್ಗೆ ಮದುವೆಯಾಗಿ ಸಂಜೆ ಕಿತ್ತಾಡಿಕೊಂಡ ವಧು-ವರ: ಮಚ್ಚಿನೇಟಿಗೆ ವಧು ಸಾವು, ವರನ ಸ್ಥಿತಿ ಗಂಭೀರ -Kolar Crime

ಬೆಳಿಗ್ಗೆ ಮದುವೆಯಾಗಿ ಸಂಜೆ ಕಿತ್ತಾಡಿಕೊಂಡ ವಧು-ವರ: ಮಚ್ಚಿನೇಟಿಗೆ ವಧು ಸಾವು, ವರನ ಸ್ಥಿತಿ ಗಂಭೀರ -Kolar Crime

ಇಂದು (ಆಗಸ್ಟ್ 7) ಬೆಳಿಗ್ಗೆಯಷ್ಟೇ ಮದುವೆಯಾಗಿದ್ದ ದಂಪತಿ ಸಂಜೆಯ ಹೊತ್ತಿಗೆ ಜಗಳ ಶುರು ಮಾಡಿಕೊಂಡರು. ಜಗಳ ವಿಕೋಪಕ್ಕೆ ಹೋಗಿ, ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಬೆಳಿಗ್ಗೆ ಮದುವೆಯಾಗಿ ಸಂಜೆ ಕಿತ್ತಾಡಿಕೊಂಡ ವಧು-ವರ: ಮಚ್ಚಿನೇಟಿಗೆ ವಧು ಸಾವು, ವರನ ಸ್ಥಿತಿ ಗಂಭೀರ
ಬೆಳಿಗ್ಗೆ ಮದುವೆಯಾಗಿ ಸಂಜೆ ಕಿತ್ತಾಡಿಕೊಂಡ ವಧು-ವರ: ಮಚ್ಚಿನೇಟಿಗೆ ವಧು ಸಾವು, ವರನ ಸ್ಥಿತಿ ಗಂಭೀರ

ಕೋಲಾರ: ನವದಂಪತಿಗಳು ಪರಸ್ಪರ ಮಚ್ಚಿನಲ್ಲಿ ಹೊಡೆದಾಡಿಕೊಂಡು, ವಧು ದುರಂತ ಸಾವನ್ನಪ್ಪಿರುವ ಘಟನೆ ಕೆಜಿಎಫ್‌ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಾಂತಿಪುರಂನ ನವೀನ್ ಕುಮಾರ್ ಮತ್ತು ಬೈರನಹಳ್ಳಿಯ ನಿಖಿತಾ ಬುಧವಾರ (ಆಗಸ್ಟ್ 7) ಮದುವೆಯಾಗಿದ್ದರು. ಸಂಜೆ ಕೊಠಡಿಗೆ ತೆರಳಿ ಜಗಳ ಶುರು ಮಾಡಿದರು. ನಂತರ ಏಕಾಏಕಿ ವಧು ನಿಖಿತಾ ಕುಸಿದುಬಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರ ಜೀವ ಉಳಿಯಲಿಲ್ಲ. ಘಟನೆಯಲ್ಲಿ ವರ ನವೀನ್‌ ಕುಮಾರ್ ಸಹ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೆಜಿಎಫ್ ಡಿವೈಎಸ್‌ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲಿಸಿದರು. ಯಾವ ಕಾರಣಕ್ಕೆ ಇವರಿಬ್ಬರ ನಡುವೆ ಜಗಳವಾಯಿತು ಎನ್ನುವ ಮಾಹಿತಿ ತಿಳಿದುಬಂದಿಲ್ಲ.

ನಿಖಿತಾ ಅವರು ಮೂಲತಃ ಆಂಧ್ರಪ್ರದೇಶದ ಬೈನಪಲ್ಲಿ ಗ್ರಾಮದವರು. ಇವರಿಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯ ಹಿರಿಯರನ್ನು ಒಪ್ಪಿಸಿದ ನಂತರವೇ ಮದುವೆ ಮಾಡಿಕೊಂಡಿದ್ದರು. ಪರಸ್ಪರ ಮಾತನಾಡಿಕೊಳ್ಳಲೆಂದು ಕೋಣೆಗೆ ಹೋದವರು ಅಲ್ಲಿಯೇ ಹೊಡೆದಾಡಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಎರಡೂ ಕುಟುಂಬಗಳ ಸದಸ್ಯರು ಈ ಬೆಳವಣಿಗೆ ಕಂಡು ಆವಕ್ಕಾದರು. ದುಃಖದಲ್ಲಿ ಮುಳುಗಿದರು. ಪೂರ್ಣ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.