UP CM Yogi In Koppal: ಕೊಪ್ಪಳದಲ್ಲಿ ಕುಳಿತು ಪ್ರಧಾನಿಯ ಮನ್ ಕಿ ಬಾತ್ 100ನೇ ಸಂಚಿಕೆ ಆಲಿಸಿದ ಯುಪಿ ಸಿಎಂ ಯೋಗಿ
UP CM Yogi In Koppal: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರಾಗಿ ರಾಜ್ಯಕ್ಕೆ ಆಗಮಿಸಿರುವ ಯುಪಿ ಸಿಎಂ ಯೋಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ( ಏ 30, ಭಾನುವಾರ) ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಗೂ ಮುನ್ನ ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' 100ನೇ ಸಂಚಿಕೆಯನ್ನು ಆಲಿಸಿದರು.
ಗಂಗಾವತಿ (ಕೊಪ್ಪಳ): ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಮಾಸಿಕ ರೆಡಿಯೋ ಕಾರ್ಯಕ್ರಮವಾದ 'ಮನ್ ಕಿ ಬಾತ್' ಇಂದು 100 ಸಂಚಿಕೆಗಳನ್ನು ಪೂರೈಸಿದೆ. ದೇಶದೆಲ್ಲೆಡೆ ಬಿಜೆಪಿ ನಾಯಕರು 'ಮನ್ ಕಿ ಬಾತ್' 100ನೇ ಸಂಚಿಕೆಯನ್ನು (Mann Ki Baat 100th episode) ಕೇಳಿಸಿಕೊಂಡಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಕರ್ನಾಟಕದಲ್ಲಿ ಕುಳಿತು ಆಲಿಸಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಟಾರ್ ಪ್ರಚಾರಕರಾಗಿ ರಾಜ್ಯಕ್ಕೆ ಆಗಮಿಸಿರುವ ಸಿಎಂ ಯೋಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ( ಏ 30, ಭಾನುವಾರ) ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಗೂ ಮುನ್ನ ಪ್ರಧಾನಿ ಮೋದಿಯವರ 'ಮನ್ ಕಿ ಬಾತ್' 100ನೇ ಸಂಚಿಕೆಯನ್ನು ಆಲಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಸದಾ ಧನಾತ್ಮಕತೆಯನ್ನು ಪ್ರೇರೇಪಿಸುತ್ತದೆ ಮತ್ತು ಉತ್ತೇಜಿಸುತ್ತದೆ. ಈ 'ಮನ್ ಕಿ ಬಾತ್' ಕಾರ್ಯಕ್ರಮವು ದೇಶ ಮತ್ತು ಸಮಾಜವನ್ನು ಒಂದುಗೂಡಿಸಿದೆ ಮತ್ತು ಜನಾಂದೋಲನವಾಗಿ ಮಾರ್ಪಟ್ಟಿದೆ ಎಂದು ಸಿಎಂ ಯೋಗಿ ಹೇಳಿದ್ದಾರೆ.
ಇತ್ತ, ಉತ್ತರ ಪ್ರದೇಶದ ರಾಜಭವನದಲ್ಲಿ ರಾಜ್ಯಪಾಲ ಆನಂದಿ ಬೆನ್ ಪಟೇಲ್ ಅವರು 'ಮನ್ ಕಿ ಬಾತ್' ಕಾರ್ಯಕ್ರಮದ ನೂರನೇ ಸಂಚಿಕೆಯನ್ನು ಆಲಿಸಿದರು. ಈ ಸಂದರ್ಭದಲ್ಲಿ ‘ಮನ್ ಕಿ ಬಾತ್’ ಮತ್ತು ‘ಆಜಾದಿ ಕಾ ಅಮೃತ್ ಮಹೋತ್ಸವ’ ಆಧಾರಿತ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು.
ಇಂದಿನ 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಪೆ ತಯಾರಿಸುವ ಉತ್ತರ ಪ್ರದೇಶ ಗರ್ಮುಕ್ತೇಶ್ವರದ ಸಂತೋಷ್ ಬಗ್ಗೆ ಮಾತನಾಡಿದರು. ಸಂತೋಷ್ ಅವರ ಪ್ರಯತ್ನಗಳನ್ನು 'ಲೋಕಲ್ ಫಾರ್ ವೋಕಲ್'ಗೆ ಶ್ಲಾಘನೀಯ ಉದಾಹರಣೆ ಎಂದು ಪ್ರಧಾನಿ ಬಣ್ಣಿಸಿದರು.
ಮನ್ ಕಿ ಬಾತ್ನಲ್ಲಿ ಮೋದಿ ಮಾತು
ಈ ಕಾರ್ಯಕ್ರಮವು ನನ್ನನ್ನು ನಿಮ್ಮಿಂದ ದೂರ ಹೋಗದಂತೆ ನೋಡಿಕೊಂಡಿದೆ. ನನಗೆ ನೆನಪಿದೆ, ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಜನಸಾಮಾನ್ಯರನ್ನು ಭೇಟಿಯಾಗುವುದು, ಸಂವಾದ ನಡೆಸುವುದು ಸಹಜವಾಗಿತ್ತು . ಮುಖ್ಯಮಂತ್ರಿಗಳ ಕೆಲಸ ಮತ್ತು ಅಧಿಕೃತ ಕಚೇರಿ ಹೀಗಿಯೇ ಇರುತ್ತದೆ, ಭೇಟಿಯಾಗುವ ಹಲವಾರು ಅವಕಾಶಗಳು ಲಭಿಸುತ್ತವೆ. ಆದರೆ 2014ರಲ್ಲಿ ದೆಹಲಿಗೆ ಬಂದ ನಂತರ ಇಲ್ಲಿನ ಜೀವನ ತುಂಬಾ ವಿಭಿನ್ನವಾಗಿದೆ ಎಂಬುದನ್ನು ಕಂಡುಕೊಂಡಿದ್ದೇವೆ ಎಂದು ತಿಳಿಸಿದರು.
ಒಂದು ದಿನ ನನ್ನ ಸ್ವಂತ ದೇಶದ ಜನರನ್ನು ಸಂಪರ್ಕಿಸುವುದು ಕಷ್ಟಕರವೆನಿಸುವ ಸ್ಥಿತಿಯನ್ನು ಎದುರಿಸಲು ನಾನು ಐವತ್ತು ವರ್ಷಗಳ ಹಿಂದೆ ನನ್ನ ಮನೆಯನ್ನು ತೊರೆದಿರಲಿಲ್ಲ. ನನ್ನ ಸರ್ವಸ್ವವೂ ಆಗಿರುವ ದೇಶವಾಸಿಗಳಿಂದ ಬೇರ್ಪಟ್ಟು ಬದುಕಲು ಸಾಧ್ಯವಿರಲಿಲ್ಲ. ಈ ಸವಾಲನ್ನು ಎದುರಿಸಲು ಮನ್ ಕೀ ಬಾತ್ ನನಗೆ ಪರಿಹಾರವನ್ನು ನೀಡಿದೆ ಎಂದು ಹೇಳಿದ್ದಾರೆ.