ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಆರೋಪಿಯ ತಂದೆ ಬಂಧನ, 16 ಕೆಜಿ ಚಿನ್ನ ವಶ; ಮುಂಬೈ, ತಮಿಳುನಾಡು, ಮಂಗಳೂರಿಗೂ ಇದ್ಯಾ ಲಿಂಕ್?
ಕನ್ನಡ ಸುದ್ದಿ  /  ಕರ್ನಾಟಕ  /  ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಆರೋಪಿಯ ತಂದೆ ಬಂಧನ, 16 ಕೆಜಿ ಚಿನ್ನ ವಶ; ಮುಂಬೈ, ತಮಿಳುನಾಡು, ಮಂಗಳೂರಿಗೂ ಇದ್ಯಾ ಲಿಂಕ್?

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಆರೋಪಿಯ ತಂದೆ ಬಂಧನ, 16 ಕೆಜಿ ಚಿನ್ನ ವಶ; ಮುಂಬೈ, ತಮಿಳುನಾಡು, ಮಂಗಳೂರಿಗೂ ಇದ್ಯಾ ಲಿಂಕ್?

ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಅಪ್ಪನನ್ನೂ ಬಂಧಿಸಿರುವ ಮಂಗಳೂರು ಪೊಲೀಸರು, 16 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ ಮುಂಬೈ-ತಮಿಳುನಾಡು-ಮಂಗಳೂರು ಲಿಂಕ್ ಸಿಕ್ಕಿದ್ದು ಹೇಗೆ? (ವರದಿ-ಹರೀಶ್ ಮಾಂಬಾಡಿ)

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಆರೋಪಿಯ ತಂದೆ ಬಂಧನ, 1 ಕೆಜಿ ಚಿನ್ನ ವಶ; ಮುಂಬೈ, ತಮಿಳುನಾಡು, ಮಂಗಳೂರಿಗೂ ಇದ್ಯಾ ಲಿಂಕ್?
ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಆರೋಪಿಯ ತಂದೆ ಬಂಧನ, 1 ಕೆಜಿ ಚಿನ್ನ ವಶ; ಮುಂಬೈ, ತಮಿಳುನಾಡು, ಮಂಗಳೂರಿಗೂ ಇದ್ಯಾ ಲಿಂಕ್?

ಮಂಗಳೂರು: ನಗರದ ಹೊರವಲಯದಲ್ಲಿರುವ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಈತನಿಂದ 16 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕೋಟೇಕಾರು ಸೇವಾ ಸಹಕಾರಿ ಸಂಘದ ಕೆಸಿ ರೋಡ್ ಶಾಖೆಯಲ್ಲಿ ನಡೆದ ದರೋಡೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಚಿನ್ನಾಭರಣ ಅಡಗಿಸಲು ಸಹಕರಿಸಿದ ದರೋಡೆಯ ಕಿಂಗ್ ಪಿನ್ ಎಂದೇ ಹೇಳಲಾದ ಮುರುಗಂಡಿ ಥೇವರ್ ತಂದೆ ಷಣ್ಮುಗ ಸುಂದರಂ (65) ನನ್ನು ಬಂಧಿಸಿದ್ದಾರೆ.

ಆರೋಪಿ ಮತ್ತು ಆತನಿಂದ ವಶಪಡಿಸಿಕೊಳ್ಳಲಾದ ಚಿನ್ನಾಭರಣವನ್ನು ಕೋರ್ಟಿಗೆ ಹಾಜರುಪಡಿಸಲಾಯಿತು. ಮುರುಗಂಡಿ ಥೇವರ್, ಯೋಸುವಾ ರಾಜೇಂದ್ರನ್, ಕಣ್ಣನ್ ಮಣಿಯನ್ನು ತಿರುನಲ್ವೇಲಿಯಲ್ಲಿ ಬಂಧಿಸಿ, ಅವರಿಂದ ಸುಮಾರು 2 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಇದರೊಂದಿಗೆ ದರೋಡೆಯಾದ ಎಲ್ಲ ಚಿನ್ನ ಸಿಕ್ಕಂತಾಗಿದೆ.

ಈ ನಡುವೆ ತಂಡಗಳಲ್ಲಿ ತೆರಳಿ ಆರೋಪಿಗಳ ಹುಡುಕಾಟ ನಡೆಸುತ್ತಿರುವ ಪೊಲೀಸರ ಜೊತೆ ಜೈಲಾತಿಥ್ಯ ಪಡೆಯುತ್ತಿರುವ ಆರೋಪಿಗಳ ತೀವ್ರ ವಿಚಾರಣೆ ಸಂದರ್ಭ ಇವರಿಗೆ ಇದ್ದ ಸ್ಥಳೀಯ ಲಿಂಕ್ ಯಾವುದು? ಬ್ಯಾಂಕ್ ದರೋಡೆಗೆ ಇದೇ ಬ್ಯಾಂಕ್ ಆಯ್ಕೆ ಮಾಡಬೇಕು ಎಂದು ಅನಿಸಿದ್ದಾದರೂ ಹೇಗೆ? ಇವರಾಗಿಯೇ ಬಂದರೇ ಅಥವಾ ಯಾರಾದರೂ ಕರೆಸಿಕೊಂಡರೇ? ಇವರಿಗೆ ಇಂಥ ಕ್ರೈಮ್ ಹಿಸ್ಟರಿ ಇದೆಯೇ? ಮುಂಬೈನಲ್ಲಿ ಇವರು ಖತರ್ನಾಕ್ ಕೃತ್ಯಗಳನ್ನು ನಡೆಸುತ್ತಿದ್ದರೇ ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮುಂಬೈ-ತಮಿಳುನಾಡು-ಮಂಗಳೂರಿನ ಲಿಂಕ್ ಹೇಗೆ ಎಂಬುದರ ಕುರಿತು ಮಹತ್ವದ ವಿಚಾರ ಲಭ್ಯವಾಗಿದೆ ಎನ್ನಲಾಗಿದೆ.

ಸ್ಕೆಚ್ ಹಾಕಿದ ಜಾಗ ಮಹಜರು ನಡೆಸಿದ ಪೊಲೀಸರು

ಮುರುಗಂಡಿ ಥೇವರ್, ಯೊಸುವಾ ರಾಜೇಂದ್ರನ್​ನನ್ನು ಪೊಲೀಸರು ಸ್ಥಳ ಮಹಜರಿಗೆ ಕರೆತಂದರು. ಆಲಂಕಾರುಗುಡ್ಡೆ ಎಂಬಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು. ಬುಧವಾರ ಇದೇ ಪ್ರದೇಶದಲ್ಲಿ ಮಹಜರು ಮಾಡುವ ವೇಳೆ ಕಣ್ಣಮಣಿ ಪರಾರಿಯಾಗಲು ಯತ್ನಿಸಿದ್ದ. ಆ ಸಂದರ್ಭ ಗುಂಡೇಟಿಗೆ ಒಳಗಾಗಿದ್ದ. ದರೋಡೆಗೆ ಕೆಲವೇ ನಿಮಿಷ ಮೊದಲು ಈ ಪ್ರದೇಶದಲ್ಲಿ ಆರೋಪಿಗಳು ಕುಳಿತು ಯೋಜನೆ ರೂಪಿಸಿದ್ದರು.

ಸ್ಥಳೀಯ ವಿಚಾರಗಳ ಮಾಹಿತಿ ನೀಡಿದ್ದು ಯಾರು?

ಆರೋಪಿಗಳನ್ನು ‘ವಿಚಾರಣೆ’ ನಡೆಸುತ್ತಿರುವ ಪೊಲೀಸರು ದರೋಡೆಕೋರರಿಗೆ ಸ್ಥಳೀಯ ಮಾಹಿತಿ ನೀಡಿದ ಸೂತ್ರಧಾರ ಯಾರು ಎಂಬ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು, ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ. ಕರಾವಳಿಯಲ್ಲಿ ಕ್ರಿಮಿನಲ್ ಚಟುವಟಿಕೆಯಲ್ಲಿ ಇದ್ದವನೇ ಇಂಥದ್ದೊಂದು ಪ್ಲ್ಯಾನ್ ಮಾಡಿದ್ದಾಗಿ ನಂಬಲಾಗಿದ್ದು, ಯಾವುದಕ್ಕೂ ಪೊಲೀಸರು ತೀವ್ರ ತನಿಖೆ ನಡೆಸಿದ ಬಳಿಕ ಗುಟ್ಟು ಹೊರಬೀಳಬೇಕಷ್ಟೇ. ಪೊಲೀಸರು ಭಾರತದ ವಿವಿಧ ರಾಜ್ಯಗಳಲ್ಲಿ ತಂಡಗಳಾಗಿ ತೆರಳಿ ತನಿಖೆ ನಡೆಸುತ್ತಿದ್ದಾರೆ. ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, 8 ತಂಡಗಳನ್ನು ರಚಿಸಿ, ಮುಂಬೈ, ಕೇರಳ, ತಮಿಳುನಾಡಿಗೆ ತೆರಳಲಾಗಿತ್ತು. ತಮಿಳುನಾಡಿನಲ್ಲಿ 2, ಮುಂಬೈನಲ್ಲಿ ಒಂದು ತಂಡ ತನಿಖೆ ಮುಂದುವರಿಸಿದ್ದು, ಸ್ಥಳೀಯ ಮಾಹಿತಿದಾರನ ಪತ್ತೆಹಚ್ಚುವ ಕಾರ್ಯ ಭರದಿಂದ ಸಾಗಿದೆ.

Whats_app_banner