KPSC Exams: ಕೆಪಿಎಸ್ಸಿ ಪರೀಕ್ಷೆ ಡಿಸೆಂಬರ್‌ 29ರಂದೇ ಪಕ್ಕಾ, ತಡೆಯಾಜ್ಞೆ ತೆರವುಗೊಳಿಸಿ ಪರೀಕ್ಷೆಗೆ ಅನುಮತಿ ನೀಡಿದ ಹೈಕೋರ್ಟ್‌ ಧಾರವಾಡ ಪೀಠ
ಕನ್ನಡ ಸುದ್ದಿ  /  ಕರ್ನಾಟಕ  /  Kpsc Exams: ಕೆಪಿಎಸ್ಸಿ ಪರೀಕ್ಷೆ ಡಿಸೆಂಬರ್‌ 29ರಂದೇ ಪಕ್ಕಾ, ತಡೆಯಾಜ್ಞೆ ತೆರವುಗೊಳಿಸಿ ಪರೀಕ್ಷೆಗೆ ಅನುಮತಿ ನೀಡಿದ ಹೈಕೋರ್ಟ್‌ ಧಾರವಾಡ ಪೀಠ

KPSC Exams: ಕೆಪಿಎಸ್ಸಿ ಪರೀಕ್ಷೆ ಡಿಸೆಂಬರ್‌ 29ರಂದೇ ಪಕ್ಕಾ, ತಡೆಯಾಜ್ಞೆ ತೆರವುಗೊಳಿಸಿ ಪರೀಕ್ಷೆಗೆ ಅನುಮತಿ ನೀಡಿದ ಹೈಕೋರ್ಟ್‌ ಧಾರವಾಡ ಪೀಠ

ಕರ್ನಾಟಕ ಲೋಕಸೇವಾ ಆಯೋಗವು ನಡೆಸಲು ಉದ್ದೇಶಿಸಿರುವ ವಿವಿಧ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರವೇಶ ಪರೀಕ್ಷೆ ದಿನಾಂಕದ ಗೊಂದಲ ಬಗೆಹರಿದಿದ್ದು ಡಿಸೆಂಬರ್‌ 29ರಂದೇ ಪರೀಕ್ಷೆ ನಡೆಯಲಿದೆ.

ಕೆಪಿಎಸ್ಸಿ ಪ್ರೊಬೆಷನರಿ ಅಧಿಕಾರಿಗಳ ಹುದ್ದೆ ಪರೀಕ್ಷೆ ಡಿಸೆಂಬರ್‌ 29ರಂದು ನಡೆಸಲು ಇದ್ದ ಗೊಂದಲ ಬಗೆಹರಿದಿದೆ.
ಕೆಪಿಎಸ್ಸಿ ಪ್ರೊಬೆಷನರಿ ಅಧಿಕಾರಿಗಳ ಹುದ್ದೆ ಪರೀಕ್ಷೆ ಡಿಸೆಂಬರ್‌ 29ರಂದು ನಡೆಸಲು ಇದ್ದ ಗೊಂದಲ ಬಗೆಹರಿದಿದೆ.

ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗ( ಕೆಪಿಎಸ್‌ಸಿ) ನಡೆಸಬೇಕಾಗಿದ್ದ ವಿವಿಧ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಗಳಿಗೆ ಇದ್ದು ಗೊಂದಲ ಬಗೆಹರಿದಿದೆ. ಪರೀಕ್ಷೆ ನಡೆಸಲು ಇದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ತೆರವುಗೊಳಿಸಿದೆ. ಮರು ಪರೀಕ್ಷೆಯನ್ನು ನಡೆಸುವ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗವು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲು ಏರಿದ್ದರು. ಈ ಹಿನ್ನೆಲೆಯಲ್ಲಿ ತಡೆಯಾಜ್ಞೆ ಇತ್ತು. ಈ ಸಂಬಂಧ ಆಯೋಗವು ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ವಿವರಣೆ ನೀಡಿದ ನಂತರ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ. ಈ ಕಾರಣದಿಂದ ಈಗ ಕರ್ನಾಟಕ ಲೋಕಸೇವಾ ಆಯೋಗವು ಡಿಸೆಂಬರ್‌ 29 ರಂದು ನಡೆಸಲು ಉದ್ದೇಶಿಸಿದ್ದ ಪರೀಕ್ಷೆ ನಡೆಸಲು ಇದ್ದ ಗೊಂದಲ ಬಗೆಹರಿದಿದೆ.

ಪರೀಕ್ಷೆ ನಡೆಸುವುದನ್ನು ಆಕ್ಷೇಪಿಸಿ ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರು. ಧಾರವಾಡ ಹೈಕೋರ್ಟ್‌ ಏಕ ಸದಸ್ಯ ಪೀಠವು ಈ ಹಿಂದೆ ಪರೀಕ್ಷೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಅಗತ್ಯ ಬಿದ್ದರೆ ಪರೀಕ್ಷೆ ದಿನಾಂಕ ಪ್ರಶ್ನಿಸಿ ಕೆಎಟಿ ಮೊರೆ ಹೋಗಬಹುದು ಎನ್ನುವ ಸೂಚನೆಯನ್ನು ನ್ಯಾಯಾಲಯ ನೀಡಿದೆ.

ಈ ನಡುವೆ ಹೈಕೋರ್ಟ್‌ ನೀಡಿರುವ ಸೂಚನೆ ಆಧರಿಸಿ ಮೊದಲೇ ಘೋಷಿಸಿದಂತೆ ಡಿಸೆಂಬರ್‌ 29 ರಂದೇ ಪರೀಕ್ಷೆ ನಡಸಲು ಕೆಪಿಎಸ್ಸಿ ಸಿದ್ದತೆ ಮಾಡಿಕೊಳ್ಳುತ್ತಿದೆ.

ಕೆಪಿಎಸ್ಸಿಯು ಗೆಜೆಟೆಡ್‌ ಪ್ರೊಬೆಷನರಿ ಎ ಹಾಗೂ ಬಿ ಗ್ರೂಪ್‌ 384 ಹುದ್ದೆಗಳ ನೇಮಕಕ್ಕೆ ಕಳೆದ ಆಗಸ್ಟ್‌ನಲ್ಲಿ ಪರೀಕ್ಷೆ ನಡೆಸಿತ್ತು. ಕನ್ನಡ ಭಾಷಾ ಪ್ರಶ್ನೆ ಪತ್ರಿಕೆಯಲ್ಲಿ ಗೊಂದಲ ಇದ್ದ ಕಾರಣದಿಂದ ಮರು ಪರೀಕ್ಷೆ ನಡೆಸಲು ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದರು. ಆನಂತರ ಮರು ಪರೀಕ್ಷೆಗೆ ಕೆಪಿಎಸ್ಸಿ ದಿನಾಂಕ ನಿಗದಿಪಡಿಸಿತ್ತು.

ಹಳೆಯ ಪರೀಕ್ಷೆಯಲ್ಲಿನ ಆಗಿರುವ ತಪ್ಪು ಸರಿಪಡಿಸಿ ಅಂಕ ನೀಡಬೇಕು. ಮರು ಪರೀಕ್ಷೆ ಬೇಡ ಎನ್ನುವುದು ಅಭ್ಯರ್ಥಿಗಳ ವಾದವಾಗಿತ್ತು. ಕೆಲವರು ಕೋರ್ಟ್‌ ಮೆಟ್ಟಲು ಏರಿದ್ದರಿಂದ ಗೊಂದಲವಾಗಿತ್ತು.ಪರೀಕ್ಷೆಗೆ ಎರಡು ವಾರ ಇರುವಾಗ ಗೊಂದಲ ಬಗೆಹರಿದಿದೆ.

ಈ ಕುರಿತು ಕೆಪಿಎಸ್ಸಿ ಇನ್ನಷ್ಟೆ ಅಧಿಕೃತ ಆದೇಶ ಹೊರಡಿಸಬೇಕಿದೆ.

Whats_app_banner