ಕನ್ನಡ ಸುದ್ದಿ  /  Karnataka  /  Kpsc Recrutiement Apply For Various Group C Posts Before August 30

KPSC Recruitment: ಕೆಪಿಎಸ್‌ಸಿಯಿಂದ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿವಿಧ ಹುದ್ದೆಗಳ ಅರ್ಹತಾ ಪಟ್ಟಿ, ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ಲೋಕ ಸೇವಾ ಆಯೋಗವು (KPSC) ಹೈದರಾಬಾದ್‌ ಕರ್ನಾಟಕ ವೃಂದದಲ್ಲಿನ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಇದೇ ಸಮಯದಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟ ಅರ್ಹತಾ ಪಟ್ಟಿ, ಅಂತಿಮ ಆಯ್ಕೆಪಟ್ಟಿ, ಕಟ್‌ಆಫ್‌ ಅಂಕಗಳ ಮಾಹಿತಿ ಇತ್ಯಾದಿಗಳನ್ನು ಪ್ರಕಟಿಸಲಾಗಿದ್ದು, ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

ಕೆಪಿಎಸ್‌ಸಿಯಿಂದ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೆಪಿಎಸ್‌ಸಿಯಿಂದ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (KPSC) ಹೈದರಾಬಾದ್‌ ಕರ್ನಾಟಕ ವೃಂದದಲ್ಲಿನ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಇದೇ ಸಮಯದಲ್ಲಿ ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟ ಅರ್ಹತಾ ಪಟ್ಟಿ, ಅಂತಿಮ ಆಯ್ಕೆಪಟ್ಟಿ, ಕಟ್‌ಆಫ್‌ ಅಂಕಗಳ ಮಾಹಿತಿ ಇತ್ಯಾದಿಗಳನ್ನು ಪ್ರಕಟಿಸಲಾಗಿದ್ದು, ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ.

ಕೆಪಿಎಸ್‌ಸಿಯು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿ (ಐದು ಹುದ್ದೆಗಳು) ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಹೈದರಾಬಾದ್‌-ಕರ್ನಾಟಕ ವೃಂದದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್‌ 30, 2022 ಆರಂಭಿಕ ದಿನವಾಗಿದ್ದು, ಅರ್ಜಿಸಲ್ಲಿಸಲು ಆಗಸ್ಟ್‌ 08, 2022 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ ಪಾವತಿಸಲು 31-08-2022 ಕೊನೆಯ ದಿನವಾಗಿದೆ.

ಅರ್ಜಿಯನ್ನು ಆನ್‌ಲೈನ್‌ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ. ಬೇರೆ ಯಾವುದೇ ವಿಧಾನದಲ್ಲಿ ಸಲ್ಲಿಸುವಂತಿಲ್ಲ. ಹೆಚ್ಚಿನ ಮಾಹಿತಿಯನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ನೀಡಲಾದ ಅಧಿಸೂಚನೆ ಮೂಲಕ ಪಡೆದುಕೊಳ್ಳಬಹುದು.

KPSC Recruitment: ಅರ್ಹತಾ ಪಟ್ಟಿ ಪ್ರಕಟ

2027-18 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌-ಸಿ ಮತ್ತು ಗ್ರೂಪ್‌-ಬಿ ವೃಂದದ 106 ಹುದ್ದೆಗಳಿಗೆ ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆಗೆ ಅರ್ಹತಾ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕೆಪಿಎಸ್‌ಸಿ ಆಯ್ಕೆಪಟ್ಟಿ ಪ್ರಕಟ

ಕರ್ನಾಟಕ ಲೋಕ ಸೇವಾ ಆಯೋಗವು 04-02-2016ನೇ ಸಾಲಿನ ನೇಮಕ ಪ್ರಕ್ರಿಯೆಯಾದ ಸಾರಿಗೆ ಇಲಾಖೆಯಲ್ಲಿನ ಗ್ರೂಪ್‌ ಸಿ ವೃಂದದ ಮೋಟಾರು ವಾಹನ ನಿರೀಕ್ಷಕರು 127+23 ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಮತ್ತು ಕಟ್‌ಆಫ್‌ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕೆಪಿಎಸ್‌ಸಿ 30 ಸಹಾಯಕ ವಿದ್ಯುತ್‌ ಪರಿವೀಕ್ಷಕರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕ ಸೇವಾ ಆಯೋಗವು ಮುಖ್ಯ ವಿದ್ಯುತ್‌ ಪರಿವೀಕ್ಷಣಾಲಯದಲ್ಲಿ ಖಾಲಿ ಇರುವ 30 ಸಹಾಯಕ ವಿದ್ಯುತ್‌ ಪರಿವೀಕ್ಷಕರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೆಪಿಎಸ್‌ಸಿ ಗ್ರೂಪ್‌ ಸಿ ಉಳಿಕೆ ಮೂಲವೃಂದದ ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ನಲ್ಲಿ ಭಾವಚಿತ್ರ, ಸಹಿ, ವಯೋಮಿತಿ, ವಿದ್ಯಾರ್ಹತೆಗೆ ಸಂಬಂಧಪಟ್ಟ ದಾಖಲೆಗಳನ್ನು ಅಪ್ಲೋಡ್‌ ಮಾಡಿದ ನಂತರ ಅರ್ಜಿ ಶುಲ್ಕವನ್ನು ಯಾವುದೇ ಕಾಮನ್‌ ಸರ್ವೀಸ್‌ ಸೆಂಟರ್‌ಗಳಲ್ಲಿ, ನೆಟ್‌ಬ್ಯಾಂಕಿಂಗ್‌, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ಕೆಪಿಎಸ್‌ಸಿಯ ಈ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಒಬಿಸಿ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಮಾಜಿ ಸೈನಿಕ ಅಭ್ಯರ್ಥಿಗಳಾಗಿದ್ದಲ್ಲಿ ೫೦ ರೂ. ಅರ್ಜಿ ಶುಲ್ಕ ಪಾವತಿಸಿದರೆ ಸಾಕು. ಎಸ್‌ಸಿ/ಎಸ್‌ಟಿ, ಪ್ರವರ್ಗ ೧ ಮತ್ತು ಒಬಿಸಿ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಆದರೆ, ಎಲ್ಲಾ ಅಭ್ಯರ್ಥಿಗಳು ಪ್ರೊಸೆಸಿಂಗ್‌ ಶುಲ್ಕ ೩೫ ರೂಪಾಯಿಯನ್ನು ಕಡ್ಡಾಯವಾಗಿ ಪಾವತಿಸಬೇಕು.

ಮುಖ್ಯ ವಿದ್ಯುತ್‌ ಪರಿವೀಕ್ಷಣಾಲಯದಲ್ಲಿ (ಚೀಫ್‌ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟ್ರೊರೇಟ್‌)ನಲ್ಲಿ ಸಹಾಯಕ ವಿದ್ಯುತ್‌ ಪರಿವೀಕ್ಷಕರು (ಅಸಿಸ್ಟೆಂಟ್‌ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಅಥವಾ ಎಲೆಕ್ಟ್ರಿಕಲ್‌ ಆಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: https://kpsc.kar.nic.in/

IPL_Entry_Point

ವಿಭಾಗ