ಕೆಟ್ಟು ನಿಂತ ಲಾರಿ ಸಿಬ್ಬಂದಿಗೆ ಆಹಾರ ಕೊಟ್ಟು ಕರ್ನಾಟಕ ಸಾರಿಗೆ ಚಾಲಕ ನಿರ್ವಾಹಕರ ಮಾನವೀಯ ಸೇವೆ : ಮನುಜ ಕುಲಂ ತಾನೊಂದು ವಲಂ ಎಂದು ಮೆಚ್ಚುಗೆ
ಕನ್ನಡ ಸುದ್ದಿ  /  ಕರ್ನಾಟಕ  /  ಕೆಟ್ಟು ನಿಂತ ಲಾರಿ ಸಿಬ್ಬಂದಿಗೆ ಆಹಾರ ಕೊಟ್ಟು ಕರ್ನಾಟಕ ಸಾರಿಗೆ ಚಾಲಕ ನಿರ್ವಾಹಕರ ಮಾನವೀಯ ಸೇವೆ : ಮನುಜ ಕುಲಂ ತಾನೊಂದು ವಲಂ ಎಂದು ಮೆಚ್ಚುಗೆ

ಕೆಟ್ಟು ನಿಂತ ಲಾರಿ ಸಿಬ್ಬಂದಿಗೆ ಆಹಾರ ಕೊಟ್ಟು ಕರ್ನಾಟಕ ಸಾರಿಗೆ ಚಾಲಕ ನಿರ್ವಾಹಕರ ಮಾನವೀಯ ಸೇವೆ : ಮನುಜ ಕುಲಂ ತಾನೊಂದು ವಲಂ ಎಂದು ಮೆಚ್ಚುಗೆ

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕ ಕಷ್ಟದಲ್ಲಿರುವವರಿಗೆ ಆಹಾರ ನೀಡಿ ಸ್ಪಂದಿಸಿದ ರೀತಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲೂ ಹಲವಾರು ಮಾನವೀಯ ನೆಲೆಯ ಸಿಬ್ಬಂದಿಯೂ ಇದ್ದಾರೆ. ತಾವು, ತಮ್ಮದಾಯಿತು ಎನ್ನುವವರ ನಡುವೆ ರಸ್ತೆಯಲ್ಲಿ ಸಂಚರಿಸುವವಾಗ ತೊಂದರೆಗೆ ಒಳಗಾದವರಿಗೆ ನೆರವಾಗುವ ಮೂಲಕ ಅವರಂತೆ ನಾವೂ ಮನುಷ್ಯರು. ಕಷ್ಟ ಎನ್ನುವುದು ಎಲ್ಲರಿಗೂ ಬಂದೇ ಬರುತ್ತದೆ. ನಮ್ಮ ಕೈಲಾದ ಸಹಾಯವನ್ನು ಮಾಡಿದರೆ ಅದೇ ಬದುಕಿನ ಸಂತೃಪ್ತಿ ಎಂದು ನಂಬಿದವದವರೂ ಇದ್ದಾರೆ. ಇಂತಹ ಘಟನೆ ಮೂರು ದಿನದ ಹಿಂದೆ ಸಕಲೇಶಪುರ- ಧರ್ಮಸ್ಥಳ ನಡುವಿನ ರಸ್ತೆಯಲ್ಲಿ ನಡೆಯಿತು. ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಾಸನ ಜಿಲ್ಲೆ ಅರಕಲಗೂಡಿನ ಪತ್ರಕರ್ತ ಇಂದ್ರಗೌಡ ಎಂಬುವವರು ಫೇಸ್‌ಬುಕ್‌ನಲ್ಲಿ ದಾಖಲಿಸಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ. : ಮನುಜ ಕುಲಂ ತಾನೊಂದು ವಲಂ ಎಂದು ಕೆಲವರು ವ್ಯಾಖ್ಯಾನಿಸಿದ್ದಾರೆ.

ಇಂದ್ರಗೌಡ ಅವರ ಪೋಸ್ಟ್‌ ಹೀಗಿದೆ: ಸಾರಿಗೆ ಸಂಸ್ಥೆಯಲ್ಲಿ ಇಂತಹ ಹೃದಯ ಶ್ರೀಮಂತರು ಇದ್ದಾರೆ. ಇದು ಮೂರು ದಿನದ ಹಿಂದೆ ನಡೆದ ಪ್ರಸಂಗ, ಹಾಸನದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್( ಕೆ ಎ 21 ಎಫ್ 0134) ಸಕಲೇಶಪುರದಿಂದ ಸುಮಾರು 30 ಕಿಲೋಮೀಟರ್ ಮುಂದೆ ಒಂದು ಲಾರಿ ಕೆಟ್ಟು ನಿಂತಿತ್ತು, ಡ್ರೈವರ್ ಕಂಡಕ್ಟರ್ ಉಪಹಾರದ ಒಂದು ಪಟ್ಟಣವನ್ನು ಬಸ್ ನಲ್ಲಿಸಿ ಆ ಲಾರಿ ಚಾಲಕನಿಗೆ ನೀಡಿ, ದೊಡ್ಡ ಬಾಟಲಲ್ಲಿದ್ದ ಸ್ವಲ್ಪ ಕುಡಿಯುವ ನೀರನ್ನು ಇನ್ನೊಂದು ಬಾಟಲಿಗೆ ಹಾಕಿ ಕೊಟ್ಟರು. ಇದಕ್ಕೆ ತೆಗೆದುಕೊಂಡ ಸಮಯ ಕೇವಲ 3 ನಿಮಿಷ. ಬಸ್ ಧರ್ಮಸ್ಥಳ ತಲುಪಿತು. ಚಾಲಕರನ್ನು ಮಾತನಾಡಿಸಿದೆ. ನೀವು ತಿಂಡಿ ಮತ್ತು ನೀರನ್ನು ಆ ಚಾಲಕನಿಗೆ ನೀಡಿದಿರಿ. ಈ ತಿಂಡಿ ಯಾರಿಗಾಗಿ ತೆಗೆದುಕೊಂಡು ಹೋಗುತ್ತಿದ್ದಿರಿ? ಎಂದೆ, ಅದಕ್ಕೆ ಡ್ರೈವರ್ ಈ ಲಾರಿ ಒಂದು ವಾರದಿಂದ ನಿಂತಿದೆ. ನೆರ ರಾಜ್ಯದ ಲಾರಿ ಓನರ್ ಆಗ್ಲಿ ಯಾರು ಇತ್ತ ಸುಳಿದಿಲ್ಲ, ನಮ್ಮಂತೆ ಅವರು ಒಬ್ಬ ಚಾಲಕರು ಮತ್ತು ಮನುಷ್ಯರು ಅಲ್ಲವೇ ನೃತ್ಯ ನಾವು ಬರುವಾಗ ಅವರಿಗಾಗಿ ಸಕಲೇಶಪುರದಲ್ಲಿ ಊಟಕ್ಕೆ ಬಸ್ ನಿಲ್ಲಿಸಿದಾಗ ಅವರಿಗೂ ಒಂದು ಪ್ಯಾಕೆಟ್ ಕಟ್ಟಿಸಿಕೊಳ್ಳುತ್ತೇವೆ, ಸರ್ ನಾವು ಏನನ್ನು ಹೊತ್ತುಕೊಂಡು ಹೋಗುವುದಿಲ್ಲ ಯಾರಿಗಾದರೂ ಒಳ್ಳೆಯದನ್ನು ಮಾಡಿದರೆ ಅದು ಮಾತ್ರ ಉಳಿಯುತ್ತದೆ. ಎಂದರು. ಒಳ್ಳೆಯ ಕೆಲಸ ಮಾಡಿದ್ದೀರಿ, ಒಂದು ಫೋಟೋ ತೆಗೆದುಕೊಳ್ಳುತ್ತೇನೆ ಎಂದೆ ಓಕೆ ಎಂದರು. ನಿಜಕ್ಕೂ ಚಾಲಕರು ಮತ್ತು ನಿರ್ವಾಹಕರು ಅವರಿಬ್ಬರಲ್ಲಿ ಇರುವ ಹೃದಯ ಮಾನವೀಯ ಶ್ರೀಮಂತಿಕೆ ನಿಜಕ್ಕೂ ಸಂತೋಷವಾಯಿತು. ಸಾರ್ವಜನಿಕರಿಂದ ಸಂಸ್ಥೆಗೆ ಹೆಸರು ತರುವ ಇಂತಹ ಚಾಲಕರು ನಿರ್ವಾಹಕರನ್ನು ಅಧಿಕಾರಿಗಳು ಗುರುತಿಸಬೇಕು.

ಮೆಚ್ಚುಗೆಯ ಮಹಾಪೂರ

ಇಬ್ಬರ ಮಾನವೀಯ ನಡೆಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ., ಸುಬ್ರಹ್ಮಣ್ಯ ಎಂಬುವವರು ಪ್ರತಿಕ್ರಿಯಿಸಿ, ಸರಿಯಾಗಿ ಸಂಬಳ ಕೂಡ ನಮ್ಮ ಸಾರಿಗೆ ನೌಕರರಿಗೆ ಸಿಗ್ತಾ ಇಲ್ಲ. ಹಾಗಿರುವಾಗ ಇನ್ನೊಬ್ಬರಿಗೆ ಆಹಾರ ಕೊಟ್ಟ ಚಾಲಕ ನಿರ್ವಾಹಕ ರಿಗೆ ಧನ್ಯವಾದಗಳು

ನೀವು ಕೊಟ್ಟ ಬುತ್ತಿ. ನಿಮ್ಮ ಮಕ್ಕಳಿಗೆ ಆ ಭಗವಂತ ಇನ್ನು ಹೆಚ್ಚಾಗಿ ಕೊಡುತ್ತಾನೆ. ಮನುಜ ಕುಲಂ ತಾನೊಂದು ವಲಂ ಎಂದು ತಿಪ್ಪೇಸ್ವಾಮಿ ಎಂಬುವವರು ಮೆಚ್ಚುಗೆ ನುಡಿ ಆಡಿದ್ದಾರೆ.

ಹೃತ್ಪೂರ್ವಕ ಧನ್ಯವಾದಗಳು ನಿಮಗೆ ಆಯುರಾರೋಗ್ಯ ಸಕಲವು ಲಭಿಸಲಿ ನೂರಾರು ಕಾಲ ಸುಖವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ವತ್ಸಲ ಎಂಬುವವರು ಹೇಳಿದರೆ, ಹೃದಯವಂತಿಕೆ ಮೆರೆಯಲು ಮುಕ್ಕೋಟಿ ದೇವರಿಗೆ ವಜ್ರ ಕವಚ ತೊಡಿಸ ಬೇಕಿಲ್ಲ. ಸಣ್ಣ ಸಣ್ಣ ಸಹಾಯ ಮಾಡಿದರೆ ಸಾಕು ಮನಸ್ಸಿಗೆ ಎಷ್ಟೋ ನೆಮ್ಮದಿ ಸಿಗುತ್ತದೆ ಎಂದು ಶಶಿ ಎಂಬುವವರು ಸಂತಸ ವ್ಯಕ್ತಪಡಿಸಿದ್ದಾರೆ.

ಮಾನವೀಯತೆ ಅಂದ್ರೆ ಇದೇ ಇದನ್ನು ಕಲಿಯಲು ಯಾವ ಯೂನಿವರ್ಸಿಟಿ ಗೆ ಹೋಗೋದು ಬೇಡ.ಯಾವ ಸಿಲಬಸ್ ನಲ್ಲೂ ಇಲ್ಲ . ಸಂಸ್ಕಾರ, ಅನುಭವ, ಸಾಮಾನ್ಯ ಪ್ರಜ್ಞೆಯಿಂದ ಬರೋದು .ಚಾಲಕ ಹಾಗೂ ನಿರ್ವಾಹಕರಿಗೆ ಅಭಿನಂದನೆಗಳು. ಇದನ್ನು ಗಮನಕ್ಕೆ ತಂದ ಇಂದ್ರಗೌಡರಿಗೂ ಧನ್ಯವಾದ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾದ್ದಾರೆ.

ಇನ್ನೊಬ್ಬರಿಗೆ ನಿಸ್ವಾರ್ಥವಾಗಿ ಸಹಾಯ ಮಾಡುವವರು ಬಹಳ ವಿರಳ..., ಆದರೆ ಅಂತಹ ಸಹಾಯ ನೋಡಿ ಗುರುತಿಸಿ ಈ ರೀತಿ ಮೆಚ್ಚುಗೆ ಸೂಚಿಸುವವರು ಅದಕ್ಕಿಂತ ವಿರಳ. ನಿಮ್ಮ ಈ ಕಾರ್ಯ ಕೂಡ ಆದರ್ಶನೀಯ, ಅಭಿನಂದನೀಯ ಎನ್ನುವ ಮೆಚ್ಚುಗೆ ಮಾತುಗಳೂ ಕೇಳಿ ಬಂದಿವೆ.

 

 

Whats_app_banner