Ksrtc Volvo Bus to Sabarimala: ಶಬರಿಮಲೆಗೆ ಬೆಂಗಳೂರಿನಿಂದ ವೋಲ್ವೋ ಬಸ್‌ ಸೇವೆ, ನವೆಂಬರ್ 29ರಿಂದ ಆರಂಭ, ದರ ಎಷ್ಟು
ಕನ್ನಡ ಸುದ್ದಿ  /  ಕರ್ನಾಟಕ  /  Ksrtc Volvo Bus To Sabarimala: ಶಬರಿಮಲೆಗೆ ಬೆಂಗಳೂರಿನಿಂದ ವೋಲ್ವೋ ಬಸ್‌ ಸೇವೆ, ನವೆಂಬರ್ 29ರಿಂದ ಆರಂಭ, ದರ ಎಷ್ಟು

Ksrtc Volvo Bus to Sabarimala: ಶಬರಿಮಲೆಗೆ ಬೆಂಗಳೂರಿನಿಂದ ವೋಲ್ವೋ ಬಸ್‌ ಸೇವೆ, ನವೆಂಬರ್ 29ರಿಂದ ಆರಂಭ, ದರ ಎಷ್ಟು

Ksrtc Volvo Bus to Sabarimala: ಶಬರಿಮಲೆಗೆ ಹೋಗ ಬಯಸುವ ಭಕ್ತರಿಗಾಗಿ ವೋಲ್ವೋ ಬಸ್‌ ಅನ್ನು ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ಆರಂಭಿಸಲಿದೆ. ಅದರ ವಿವರ ಇಲ್ಲಿದೆ.

ಬೆಂಗಳೂರಿನಿಂದ ಕೇರಳದ ಶಬರಿಮಲೆಗೆ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಸಂಚರಿಸಲಿದೆ.
ಬೆಂಗಳೂರಿನಿಂದ ಕೇರಳದ ಶಬರಿಮಲೆಗೆ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ ಸಂಚರಿಸಲಿದೆ.

ಬೆಂಗಳೂರು: ಕೇರಳದ ಪ್ರಸಿದ್ದ ಯಾತ್ರಾಸ್ಥಳವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಬೆಂಗಳೂರಿನಿಂದ ಹೋಗುವುದು ಹೇಗೆ ಎನ್ನುವ ಯೋಚನೆಯೇ. ಸುರಕ್ಷಿತವಾಗಿ ಅಲ್ಲಿಗೆ ಹೋಗಿ ಬರುವ ಕುರಿತಾದ ಯೋಚನೆ ಬಿಡಿ. ಇದಕ್ಕಾಗಿಯೇ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಕೆಎಸ್‌ಆರ್‌ಟಿಸಿಯು ವೋಲ್ವೋ ಸೇವೆಗಳನ್ನು ಬೆಂಗಳೂರಿನಿಂದ ಶಬರಿಮಲೆಗೆ ಆರಂಭಿಸಲಿದೆ. ಅಲ್ಲಿಂದಲೂ ಬೆಂಗಳೂರಿಗೆ ಬಸ್‌ ಸೇವೆ ನಿತ್ಯ ಇದ್ದು ಇದರಿಂದ ಭಕ್ತರು, ಶಬರಿಮಲೆಗೆ ಹೋಗಿ ಬರುವವರು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಕೇರಳದ ಶಬರಿಮಲೆ ಯಾತ್ರೆಗೆ ಬೇಸ್ ಪಾಯಿಂಟ್ ಬೆಂಗಳೂರು ಮತ್ತು ನಿಲಕ್ಕಲ್ ನಡುವೆ ಹೊಸ ವೋಲ್ವೋ ಬಸ್ ಸೇವೆಯನ್ನು ಘೋಷಿಸಿದೆ. ಸೇವೆಗೆ ಶಬರಿಮಲೆಗೆ ಹೋಗುವ ಭಕ್ತರಿಗೆ ಹೆಚ್ಚು ಅನುಕೂಲಕರವಾದ ಪ್ರಯಾಣದ ಆಯ್ಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಯಾವಾಗನಿಂದ ಆರಂಭ

ಅಧಿಕೃತ ಪ್ರಕಟಣೆಯ ಪ್ರಕಾರ, ಸೇವೆಯು 2024ರ ನವೆಂಬರ್ 29 ರಂದು ಪ್ರಾರಂಭವಾಗುತ್ತದೆ. ವೋಲ್ವೋ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಪ್ರತಿನಿತ್ಯ ಮಧ್ಯಾಹ್ನ 1:50 ಕ್ಕೆ ಹೊರಡಲಿದೆ. ಮತ್ತು ಮರುದಿನ ಬೆಳಿಗ್ಗೆ 6:45 ಗಂಟೆಗೆ ನಿಲಕ್ಕಲ್ ತಲುಪುತ್ತದೆ.

ನಿಲಕ್ಕಲ್‌ನಿಂದ ಹಿಂತಿರುಗುವ ಬಸ್‌ ಪ್ರತಿ ದಿನ ಸಂಜೆ ಸಂಜೆ 6 ಗಂಟೆಗೆ ಹೊರಡಲಿದೆ. ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಏಕಮುಖ ಪ್ರಯಾಣದ ಟಿಕೆಟ್ ದರವನ್ನು ಪ್ರತಿ ಪ್ರಯಾಣಿಕರಿಗೆ 1,750 ರೂ. ನಿಗದಿಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.

ದರ್ಶನ ಆರಂಭ

ಈಗಾಗಲೇ ಈ ಬಾರಿಯ ಶಬರಿಮಲೆ ದರ್ಶನ ಕಳೆದ ವಾರವೇ ಶುರುವಾಗಿದೆ. ಕರ್ನಾಟಕದ ನಾನಾ ಭಾಗಗಳಿಂದ ಭಕ್ತರು ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಹೊರಟಿದ್ದಾರೆ.ಕೆಲವರು ಮುಗಿಸಿಕೊಂಡು ಬಂದಿದ್ದಾರೆ.

ಜನವರಿವರೆಗೂ ಭಕ್ತರ ಸಂಖ್ಯೆ ಹೆಚ್ಚು ಇರುವ ಕಾರಣದಿಂದ ಕೆಎಸ್‌ಆರ್‌ಟಿಸಿಯು ಬೆಂಗಳೂರಿನಿಂದ ಬಸ್‌ ಸೇವೆಯನ್ನು ಆರಂಭಿಸುತ್ತಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗದಿಂದ ಹೆಚ್ಚಿನ ಬೇಡಿಕೆ ಇರುವ ಕಾರಣದಿಂದ ಬಸ್‌ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ಧಾರೆ.

ಹೆಚ್ಚಿನ ಭಕ್ತರು ಸ್ವಂತ ವಾಹನದಲ್ಲಿಯೇ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಹೋಗುತ್ತಾರೆ. ಅದರಲ್ಲೂ ಗುಂಪಾಗಿ ಹೋಗುವವರ ಸಂಖ್ಯೆಯೇ ಅಧಿಕ. ಆದರೂ ಕೆಲವರು ವೈಯಕ್ತಿಕವಾಗಿಯೂ ಭೇಟಿ ನೀಡಬಹುದು. ಸ್ನೇಹಿತರು ಹೋಗುವವರೂ ಇರುವುದರಿಂದ ಸುರಕ್ಷಿತ ಪ್ರಯಾಣದ ಕಾರಣಕ್ಕೆ ವೋಲ್ವೋ ಬಸ್‌ ಸೇವೆ ಒದಗಿಸಲಾಗುತ್ತಿದೆ. ಬುಕ್ಕಿಂಗ್‌ ಕೂಡ ಶುರುವಾಗಿದೆ.

ಬುಕ್ಕಿಂಗ್‌ ಹೇಗೆ

https://ksrtc.in/ ವೆಬ್‌ಸೈಟ್‌ ಮೂಲಕ ವೋಲ್ವೋ ಬಸ್ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಈ ವೆಬ್‌ಸೈಟ್‌ ಕ್ಲಿಕ್‌ ಮಾಡಿ ಎಲ್ಲಿಂದ ಎಲ್ಲಿಗೆ ಎನ್ನುವ ಕಡೆ ಮಾರ್ಗ ತಿಳಿಸಬೇಕು. ದಿನಾಂಕವನ್ನು ನಮೂದಿಸಿದರೆ ಟಿಕೆಟ್‌ ಬುಕ್ಕಿಂಗ್‌ ಆಗಲಿದೆ.

Whats_app_banner