ಕನ್ನಡ ಸುದ್ದಿ  /  Karnataka  /  Kvafsu Recruitment 2022 Get Ready To Apply Teaching And Non Teaching Posts In Bidar Aicrp

KVAFSU Recruitment 2022: ಬೀದರ್‌ ಪಶು ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಶೀಘ್ರ ನೇಮಕ

KVAFSU Recruitment 2022: ಬೀದರ್‌ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶೀಘ್ರದಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ನಡೆಯುವ ಸೂಚನೆ ದೊರಕಿದೆ.

KVAFSU Recruitment 2022: ಬೀದರ್‌ ಪಶು ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆ
KVAFSU Recruitment 2022: ಬೀದರ್‌ ಪಶು ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆ

KVAFSU Recruitment 2022: ಬೀದರ್‌ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶೀಘ್ರದಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ನಡೆಯುವ ಸೂಚನೆ ದೊರಕಿದೆ. ಈ ವಿಷಯಗಳಿಗೆ ಸಂಬಂಧಪಟ್ಟ ವಿದ್ಯಾರ್ಹತೆ ಹೊಂದಿರುವವರು ಸರಕಾರಿ ಹುದ್ದೆ ಪಡೆಯಲು ಕಾಯುತ್ತಿದ್ದರೆ ಅರ್ಜಿ ಸಲ್ಲಿಸಲು ಸಿದ್ಧರಾಗಬಹುದು. ಬೋಧಕೇತರ ಹುದ್ದೆಗಳಿಗೂ ನೇಮಕ ನಡೆಯುವುದರಿಂದ ಇತರೆ ವಿದ್ಯಾರ್ಹತೆಯವರಿಗೂ ಅವಕಾಶಗಳು ದೊರಕಲಿದೆ.

ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 217 ಬೋಧಕ ಮತ್ತು 220 ಬೋಧಕೇತರ ಹುದ್ದೆಗಳಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಸರಕಾರ ಮಂಜೂರಾತಿ ನೀಡಿದೆ. ಶೀಘ್ರದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ಆರಂಭಿಸಲಾಗುವುದು ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಬಿ. ಚವ್ಹಾಣ್‌ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ 371ಜೆ ಮೀಸಲಾತಿ ಅಡಿಯಲ್ಲಿ ಸುಮಾರು 104 ಬೋಧಕ ಮತ್ತು 122 ಬೋಧಕೇತರ ಹುದ್ದೆಗಳ ನೇಮಕಾತಿ ನಡೆಯಲಿದೆ. ಉಳಿದ ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಹೊರತುಪಡಿಸಿದ ಇತರೆ ವೃಂದಗಳಲ್ಲಿ ನೇಮಕ ಮಾಡಲಾಗುತ್ತದೆ. ಬೆಳಗಾವಿ ಜಿಲ್ಲೆಯ ಅಥಣಿ ವೈದ್ಯಕೀಯ ಮಹಾವಿದ್ಯಾಲಯ ಆರಂಭಕ್ಕಾಗಿ 77 ಬೋಧಕರು ಮತ್ತು 98 ಬೋಧಕೇತರ ಹುದ್ದೆಗಳು ಮಂಜೂರಾಗಿವೆ ಎಂದು ಅವರು ಹೇಳಿದ್ದಾರೆ.

ಈ ಹುದ್ದೆಗಳಿಗೆ ಶೀಘ್ರದಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಕರ್ನಾಟಕ ಪಶು ವೈದ್ಯಕೀಯ ವಿಜ್ಞಾನಗಳ ವಿವಿಯಲ್ಲಿ ಖಾಲಿಯಿದ್ದ 36 ಬ್ಯಾಕ್‌ಲಾಗ್‌ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಹುದ್ದೆಗಳ ಕುರಿತು ಅಪ್‌ಡೇಟ್‌ ಪಡೆಯಲು ಮತ್ತು ಅಧಿಸೂಚನೆ ಹೊರಬಿದ್ದ ಸಂದರ್ಭದಲ್ಲಿ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: https://www.kvafsu.edu.in/

ಎಚ್‌ಟಿ ಕನ್ನಡ ಜಾಬ್‌ ಅಲರ್ಟ್‌

- ದೇಶದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ಮಾಝಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ (Mazagon Dock Shipbuilders Limited)ನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಹೆಚ್ಚಿನ ವಿವರಕ್ಕೆ ಲಿಂಕ್‌

- ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯಲಿಂಗ) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 3064 ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಇಲ್ಲಿದೆ ವಿವರ

- ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಕೆಲವೊಂದು ಹುದ್ದೆಗಳ ನೇಮಕವಾಗದೆ ಸುಮಾರು ಹತ್ತು ವರ್ಷಗಳಾಗುತ್ತ ಬಂದಿದೆ. ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರು, ಸಹ-ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಗೊಳ್ಳಲು ಬಯಸುವ ಆಕಾಂಕ್ಷಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ‌ ಸಚಿವರಾದ ಬಿ.ಸಿ. ನಾಗೇಶ್‌ ಸಿಹಿ ಸುದ್ದಿ ನೀಡಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ

- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ಲೆರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ ( ಕಸ್ಟಮರ್‌ ಸಪೋರ್ಟ್‌ ಮತ್ತು ಸೇಲ್ಸ್) ಹುದ್ದೆಗಳಿಗೆ ಅರ್ಜಿ‌ ಸ್ವೀಕರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಎಸ್‌ಬಿಐ ವೆಬ್‌ಸೈಟ್‌ನ ಕರಿಯರ್ಸ್‌ ಪೋರ್ಟಲ್, sbi.co.in ಅಥವಾ ibpsonline.ibps.in ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 27. ಇಲ್ಲಿದೆ ವಿವರ

IPL_Entry_Point

ವಿಭಾಗ