Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್ ಬಂಧನ, ಕೊಡಿಗೇಹಳ್ಳಿ ಗಲಾಟೆ ಕೇಸ್ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್ ಬಂಧನ, ಕೊಡಿಗೇಹಳ್ಳಿ ಗಲಾಟೆ ಕೇಸ್ ದಾಖಲು

Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್ ಬಂಧನ, ಕೊಡಿಗೇಹಳ್ಳಿ ಗಲಾಟೆ ಕೇಸ್ ದಾಖಲು

Lawyer Jagadish Arrested: ಬೆಂಗಳೂರು ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ಉತ್ಸವದ ವಿಚಾರವಾಗಿ ಸ್ಥಳೀಯರು ಮತ್ತು ಲಾಯರ್ ಜಗದೀಶ್ ನಡುವೆ ಸಂಘರ್ಷ ಏರ್ಪಟ್ಟಿತ್ತು. ನಿನ್ನೆ ಜಗದೀಶ್ ಅವರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿತ್ತು. ಇಂದು (ಜನವರಿ 25) ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್‌ಗಳನ್ನು ಪೊಲೀಸರು ಬಂಧಿಸಿದ್ಧಾರೆ.

ಬೆಂಗಳೂರು ಕೊಡಿಗೇಹಳ್ಳಿಯಲ್ಲಿ ಬಿಗ್‌ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್‌ ಬಂಧನ. (ಕಡತ ಚಿತ್ರ)
ಬೆಂಗಳೂರು ಕೊಡಿಗೇಹಳ್ಳಿಯಲ್ಲಿ ಬಿಗ್‌ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಮತ್ತು ಅವರ ಗನ್‌ಮ್ಯಾನ್‌ ಬಂಧನ. (ಕಡತ ಚಿತ್ರ)

Lawyer Jagadish: ಬೆಂಗಳೂರು ಕೊಡಿಗೇಹಳ್ಳಿಯಲ್ಲಿ ಬಿಗ್‌ ಬಾಸ್ ಕನ್ನಡ ಸೀಸನ್ 11ರ ಖ್ಯಾತಿಯ ವಕೀಲ ಜಗದೀಶ್ ಮತ್ತು ಅವರ ಗನ್‌ಮ್ಯಾನ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿಯ ಸ್ಥಳೀಯರು ಮತ್ತು ಲಾಯರ್ ಜಗದೀಶ್ ನಡುವೆ ಶುಕ್ರವಾರ (ಜನವರಿ 24) ಗಲಾಟೆ ನಡೆದಿತ್ತು. ಲಾಯರ್ ಜಗದೀಶ್ ಮೇಲೆ ಹಲ್ಲೆಯೂ ನಡೆದು, ರಕ್ತಸಿಕ್ತರಾಗಿಯೆ ಲೈವ್ ಬಂದು ಪ್ರಕರಣದ ವಿವರ ನೀಡಿದ್ದರು ಅವರು. ಇದೀಗ ತೇಜಸ್ ಎಂಬುವವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರು ಆಧರಿಸಿ, ಪೊಲೀಸರು ಲಾಯರ್ ಜಗದೀಶ್, ಅವರ ಪುತ್ರ ಮತ್ತು ಅವರ ಗನ್‌ಮ್ಯಾನ್‌ಗಳನ್ನು ಬಂಧಿಸಿದ್ದಾರೆ.

ಕೊಡಿಗೇಹಳ್ಳಿ ಅಣ್ಣಮ್ಮ ಉತ್ಸವ ಸಂಬಂಧ ಗಲಾಟೆ

ಕೊಡಿಗೇಹಳ್ಳಿ ಅಣ್ಣಮ್ಮ ಉತ್ಸವ ಸಂಬಂಧ ಲಾಯರ್ ಜಗದೀಶ್ ಅವರು ಸ್ಥಳೀಯರೊಂದಿಗೆ ಸಂಘರ್ಷಕ್ಕೆ ಇಳಿದಿದ್ದರು. ರಸ್ತೆ ಬಂದ್ ಮಾಡಿ ಉತ್ಸವ ಆಚರಿಸಬೇಡಿ ಎಂದು ಆಗ್ರಹಿಸಿದ್ದರು. ಸ್ಥಳೀಯರು ಸ್ಪಂದಿಸದ ಕಾರಣ ಪೊಲೀಸ್ ಠಾಣೆ ಮತ್ತು ಬಿಬಿಎಂಪಿಗೆ ದೂರು ನೀಡಿದ್ದರು. ಇದನ್ನು ಪ್ರಶ್ನಿಸಿ ಗುರುವಾರವಷ್ಟೇ (ಜನವರಿ 23) ಕೊಡಿಗೇಹಳ್ಳಿಯಲ್ಲಿ ಕೆಲವರ ಗುಂಪು ಲಾಯರ್ ಜಗದೀಶ್ ಅವರಿದ್ದ ಕಾರು ನಿಲ್ಲಿಸಿ ಮಾರಣಾಂತಿಕ ಹಲ್ಲೆ ನಡೆಸಿತ್ತು. ಆ ಸಂದರ್ಭದಲ್ಲಿ ಅದನ್ನೂ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ಜಗದೀಶ್‌, ಪ್ರಕರಣ ವಿವರವನ್ನು ನೇರ ಪ್ರಸಾರದಲ್ಲೇ ನೀಡಿದ್ದರು. ಅಲ್ಲದೆ, ಅದೇ ಸ್ಥಿತಿಯಲ್ಲಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಪೊಲೀಸ್ ಜೀಪ್‌ನಲ್ಲೇ ಹೋಗಿ ದೂರು ನೀಡಿದ್ದರು.

ಪೊಲೀಸ್‌ ಜೀಪ್‌ನಲ್ಲಿಯೇ ಕುಳಿತು ಫೇಸ್‌ಬುಕ್‌ ಲೈವ್‌ ಬಂದ ಲಾಯರ್‌ ಜಗದೀಶ್‌, ತಮ್ಮ ಮೇಲಾದ ಹಲ್ಲೆಯನ್ನು ಎಳೆ ಎಳೆಯಾಗಿ ವಿವರಿಸಿದ್ದು ಹೀಗೆ- "ಇವತ್ತು ಅದೇ ಜಾಗದಲ್ಲಿ (ಕೊಡಿಗೇಹಳ್ಳಿ), ಅದೇ ಡ್ರಗ್‌ ಅಡಿಕ್ಟ್‌ಗಳು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಸುಮಾರು 200ಕ್ಕೂ ಅಧಿಕ ಪುಂಡರು ಬಂದು ಹಲ್ಲೆ ಮಾಡಿದ್ದಾರೆ. 500ಕ್ಕೂ ಅಧಿಕ ಮಂದಿ ಶಸ್ತ್ರಾಸ್ತ್ರಗಳನ್ನು ತಂದಿದ್ದರು. ಎಲ್ಲಿದೆ ಲಾ ಅಂಡ್‌ ಆರ್ಡರ್‌? ಇದೊಂದು ವ್ಯವಸ್ಥಿತಿ ದಾಳಿ. ಇದು ಟೆರರಿಸ್ಟ್‌ ರಾಜ್ಯವಾಗಿದೆ. ಗನ್‌ ಮ್ಯಾನ್‌ಗೆ ದೊಣ್ಣೆ, ಮಚ್ಚಿನಿಂದ ಹೊಡೆದರು. ನಾವು ಸತ್ತರೂ ಪರವಾಗಿಲ್ಲ. ಇದನ್ನು ವಿರೋಧಿಸುತ್ತೇವೆ" ಎಂದು ಹೇಳಿದ್ದರು.

ಲಾಯರ್‌ ಜಗದೀಶ್‌ ಫೇಸ್‌ಬುಕ್ ಲೈವ್‌ ವಿಡಿಯೋ

ಜಗದೀಶ್ ಮತ್ತು ಅವರ ಗನ್‌ಮ್ಯಾನ್ ಅವರ ಬಂಧನ ಯಾಕೆ

ಲಾಯರ್ ಜಗದೀಶ್ ಅವರ ಮೇಲೆ ಗುಂಪು ದಾಳಿ ನಡೆಸಿದ ವೇಳೆ, ಜಗದೀಶ್ ಅವರ ಗನ್‌ಮ್ಯಾನ್ ಗುಂಪು ಚದುರಿಸುವುದಕ್ಕಾಗಿ ಗಾಳಿಯಲ್ಲಿ ಗುಂಡುಹಾರಿಸಿದ್ದ. ಗನ್‌ಮ್ಯಾನ್ ಬಳಿ ಇದ್ದ ಗನ್‌ಗೆ ಉತ್ತರ ಪ್ರದೇಶದ ಗನ್‌ಲೈಸನ್ಸ್ ಇತ್ತು. ಹಾಗಾಗಿ, ಆ ಗನ್‌ ಅನ್ನು ಅವರು ಅಲ್ಲಿ ಮಾತ್ರ ಬಳಸುವುದಕ್ಕೆ ಅವಕಾಶ ಇತ್ತು. ಆ ಗನ್ ಬಳಸಿಕೊಂಡು ಕರ್ನಾಟಕದಲ್ಲಿ ಪೈರಿಂಗ್ ಮಾಡಿದ ಕಾರಣ ಪೊಲೀಸರು ಅವರನ್ನು ಬಂಧಿಸಿರುವುದಾಗಿ ಮೂಲಗಳು ಹೇಳಿವೆ.

ಎರಡು ದಿನಗಳ ಹಿಂದೆಯೂ ಲಾಯರ್ ಜಗದೀಶ್ ಹಲ್ಲೆ ವಿಡಿಯೋ ವೈರಲ್‌

ಎರಡು ದಿನಗಳ ಹಿಂದೆ ಕೂಡ ಲಾಯರ್‌ ಜಗದೀಶ್ ಮೇಲೆ ಅಪರಿಚಿತ ಗುಂಪು ಹಲ್ಲೆ ನಡೆಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಆಗ, ದರ್ಶನ್ ಅಭಿಮಾನಿಗಳು ಹಲ್ಲೆ ನಡೆಸಿದ್ದು ಎಂಬ ವದಂತಿ ಹರಡಿತ್ತು. ಆದರೆ, ವೈರಲ್ ಆಗಿರುವ ಹಲ್ಲೆ ವಿಡಿಯೋದ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ಲಾಯರ್ ಜಗದೀಶ್ "ವೈರಲ್ ಆಗಿರುವ ವಿಡಿಯೋ ನಮ್ಮ ಕಾಂಪ್ಲೆಕ್ಸ್ ಮುಂಭಾಗದ್ದು. ಅಲ್ಲಿ ರಸ್ತೆ ಬಂದ್ ಮಾಡಿ ಅಣ್ಣಮ್ಮದೇವಿಯನ್ನು ಕೂರಿಸಿದ್ದಾರೆ. ಪೊಲೀಸರಿಗೆ ಈ ವಿಚಾರ ತಿಳಿಸಿದ್ದೆ. ಅಲ್ಲದೆ ರಸ್ತೆ ಬಂದ್ ಮಾಡಿದ ಬಗ್ಗೆ ಪ್ರಶ್ನಿಸಿದ್ದಕ್ಕೆ 40 ಜನ ದಾಂಡಿಗರು ನನ್ನ ಮೇಲೆ ದಾಳಿ ನಡೆಸಿದರು. ನಾನು ವಾಕಿಂಗ್ ಹೋಗಿದ್ದ ಕಾರಣ, ಜತೆಗೆ ಗನ್‌ಮ್ಯಾನ್ ಇರಲಿಲ್ಲ. ಹಲ್ಲೆ ಮಾಡುವುದಕ್ಕೆ ಕಾರಣ ಇಷ್ಟೆ ಎಂದು ವಿವರಿಸಿದ್ದರು.

Whats_app_banner