Kannada News  /  Karnataka  /  Let The People Decide Who Gets The Bangalore Mysore Highway Credit Says Cm Basavaraj Bommai
ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ.

Bangalore Mysore highway credit: ಬೆಂ-ಮೈ ಹೆದ್ದಾರಿ ಕ್ರೆಡಿಟ್ ಯಾರಿಗೆ ಎನ್ನುವುದನ್ನ ಜನರೇ ತೀರ್ಮಾನಿಸಲಿ: ಸಿಎಂ ಬೊಮ್ಮಾಯಿ‌

12 March 2023, 12:03 ISTHT Kannada Desk
12 March 2023, 12:03 IST

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕ್ರೆಡಿಟ್ ಯಾರಿಗೆ ಸಿಗಬೇಕು ಎನ್ನುವುದನ್ನ ಜನರೇ ತೀರ್ಮಾನ ಮಾಡಲಿ ಎಂದು ಸಿಎಂ ಬೊಮ್ಮಾಯಿ‌ ಹೇಳಿದ್ದಾರೆ.

ಬೆಂಗಳೂರು: ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ಯಾರಿಗೆ ಸಿಗಬೇಕು ಎನ್ನುವುದನ್ನು ಜನರೇ ತೀರ್ಮಾನ ಮಾಡಲಿ ಎಂದು ಸಿಎಂ ಬೊಮ್ಮಾಯಿ‌ ಹೇಳಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ ದಶಪಥದ ಕ್ರೆಡಿಟ್ ವಾರ್ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ, ಮೈಸೂರು ಹೈವೇ ಮೊದಲು ನಾಲ್ಕು ಪಥದ ರಸ್ತೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಾರಂಭವಾಯಿತು.

2004/2007 ರಲ್ಲಿ ಪ್ರಾರಂಭ ಆದ ಬಳಿಕ ಭಾರತ ಸರ್ಕಾರ ಇದನ್ನು ಅಂತಾರಾಷ್ಟ್ರೀಯ ಹೆದ್ದಾರಿ ಎಂದು 2014 ರಲ್ಲಿ ಘೋಷಣೆ ಮಾಡಿತು. ಘೋಷಣೆ ಮಾಡಿ 10-15 ವರ್ಷವಾದರೂ ಯುಪಿಎ ಸರ್ಕಾರ ಅಂತಾರಾಷ್ಟ್ರೀಯ ಹೆದ್ದಾರಿ ಕೆಲಸವನ್ನು ಪೂರ್ಣ ಮಾಡಲಿಲ್ಲ. ಕೇವಲ ಘೋಷಣೆ ಆಗಿತ್ತು. 2014 ರಲ್ಲಿ ಘೋಷಣೆ ಆಗಿ ಡಿಪಿಆರ್ ಆದ ಬಳಿಕ ಅಲೈನ್ಮೆಂಟ್ ಆಗಿದ್ದು 2015 ರಲ್ಲಿ ಎಂದು ಸಿಎಂ ಬೊಮ್ಮಾಯಿ‌ ಹೇಳಿದ್ದಾರೆ.

2015 ರಲ್ಲಿ ಎನ್ ಡಿಎ ಸರ್ಕಾರವಿತ್ತು‌. ಬೆಂಗಳೂರು ಮೈಸೂರು ಹೆದ್ದಾರಿ 2016 ರಲ್ಲಿ ಅಂತಾರಾಷ್ಟ್ರೀಯ ಹೆದ್ದಾರಿಯ ಅಥಾರಿಟಿ ಹ್ಯಾಂಡ್ ಓವರ್ ಆಯ್ತು‌. ಆಗ ಎನ್‌ಡಿಎ ಸರ್ಕಾರವಿತ್ತು‌. ಅಮೇಲೆ ಟೆಂಡರ್ ಪ್ರೋಸೆಸ್ ಮಾಡಿ ಹಣ ಬಿಡುಗಡೆ ಮಾಡಲಾಗಿದ್ದು, 2023ರಲ್ಲಿ ಇದು ರಸ್ತೆ ಕೆಲಸ ಮುಗಿದಿದೆ ಎಂದಿದ್ದಾರೆ.

ಸಂಪೂರ್ಣ ಕೆಲಸ ಎನ್ ಡಿಎ ಸರ್ಕಾರದ ಅವಧಿಯಲ್ಲೇ ಈ ಯೋಜನೆ ಆಗಿದೆ. ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಈ ಯೋಜನೆಯಾಗಿದೆ. ಜನರಿಗೆ ಈ ಮಾಹಿತಿ ಕೊಡಬೇಕು ಅಂತ ನಾನು ಕೊಟ್ಟಿದ್ದೇನೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಯಾರಿಗೆ ಕ್ರೆಡಿಟ್ ಅನ್ನುವುದನ್ನು ಜನರ ತೀರ್ಮಾನ ಮಾಡಲಿ

ಈ ಮಧ್ಯೆ ನೈಸ್ ರೋಡ್ ಮಾಡ್ತೀವಿ ಅಂತ ನಿಲ್ಲಿಸಿದರು. ನೈಸ್ ರೋಡ್ ಸಹ ಬರಲಿಲ್ಲ ಇದು ಆಗಲಿಲ್ಲ. ಆಗ ವಾಹನ ದಟ್ಟನೆ ಜಾಸ್ತಿ ಆಯ್ತು. ಸಮಸ್ಯೆ ಆಗುತ್ತದೆ ಎಂದಾಗ ನ್ಯಾಷನಲ್ ಹೈವೇ ನವರು ತಗೆದುಕೊಂಡು ಮೋದಿ ನೇತೃತ್ವದ ಸರ್ಕಾರ ಈ ಯೋಜನೆ ಮುಗಿಸಿದ್ದಾರೆ. ಯಾರಿಗೆ ಕ್ರೆಡಿಟ್ ಅನ್ನುವುದನ್ನು ಜನರ ತೀರ್ಮಾನ ಮಾಡಲಿ.

ಮೋದಿ ನೇತೃತ್ವದ ಸರ್ಕಾರವೇ ಹಣ ಬಿಡುಗಡೆ ಮಾಡಿ ಯೋಜನೆ ಮುಗಿಸಿದೆ. ಮೋದಿ ಸರ್ಕಾರವೇ ಈ ಯೋಜನೆ ಮಾಡಿದ್ದು ಅಂತ ಜನರಿಗೂ ಗೊತ್ತಾಗಿದೆ ಅಂತ ನಾನು ಭಾವಿಸುತ್ತೇನೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.