ಕನ್ನಡ ಸುದ್ದಿ / ಕರ್ನಾಟಕ /
ಕನ್ನಡ ರಾಜ್ಯೋತ್ಸವ: 100 ವರ್ಷದ ಹಿಂದೆ ಕುವೆಂಪು ಬರೆದಿದ್ದ ಕವನ ಮುಂದೆ ಕನ್ನಡದ ನಾಡಗೀತೆ ಆಗಿದ್ದು ಹೇಗೆ; ನೀವು ತಿಳಿಯಬೇಕಾದ 10 ವಿಷಯಗಳಿವು
ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ನಾಡಗೀತೆ ಕುರಿತಾದ ಮಾಹಿತಿಯನ್ನು ನೀಡಿದೆ. ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಎನ್ನುವ ನಾಡಗೀತೆ ಮಾನ್ಯತೆ ನಂತರ ಕುವೆಂಪು ಅವರ ಜಯಹೇ ಕರ್ನಾಟಕ ಮಾತೆ ಕಾವ್ಯಕ್ಕೆ ದೊರೆಯಿತು.
ಕರ್ನಾಟಕದಲ್ಲಿ ನಾಡಗೀತೆ ಮೊದಲು ಹಾಡಿದ್ದು, ಆನಂತರ ಹೊಸ ನಾಡಗೀತೆ ಅಳವಡಿಸಿಕೊಂಡ ಇತಿಹಾಸವೇ ಇದೆ.
- ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ಕೆ.ವಿ.ಪುಟ್ಟಪ್ಪ ಅವರು ಶತಮಾನದ ಹಿಂದೆಯೇ ಅಂದರೆ 1924ರಲ್ಲಿ ಬರೆದ ಕವನಗಳ ಸಾಲು. ಆಗ ಅವರು ಕಿಶೋರಚಂದ್ರವಾಣಿ ಎನ್ನುವ ಹೆಸರಿನಲ್ಲಿ ಬರೆಯುತ್ತಿದ್ದರು.
- ನಾಡು, ನುಡಿ, ಕರುನಾಡಿನ ಹಿರಿಮೆಗೆ ಸಂಬಂಧಿಸಿದಂತೆ ನಮ್ಮ ಭಾವನೆಯನ್ನು ಮೀಟುವ ಸಾಲುಗಳಿವು. ಯುವಕ ಪುಟ್ಟಪ್ಪ ಅವರು ಬರೆದ ಸಾಲುಗಳು ಮುಂದೆ 80 ವರ್ಷದ ನಂತರ 2004 ರಲ್ಲಿ ನಾಡಗೀತೆಯ ರೂಪವನ್ನು ಪಡೆಯಿತು.
- 1928ರಲ್ಲಿ ಜಯಹೇ ಕರ್ಣಾಟಕ ಮಾತೆಯಾಗಿ ಈ ಕವನವನ್ನು ಪುಟ್ಟಪ್ಪ ಅವರು ಪೂರ್ಣಗೊಳಿಸಿದರು. ನಾಲ್ಕು ವರ್ಷಕ್ಕೂ ಮುನ್ನ ಇದಕ್ಕೆ ನೀಡಿದ ಹೆಸರು ಕರ್ಣಾಟಕ ರಾಷ್ಟ್ರಗೀತೆ.
ಇದನ್ನೂ ಓದಿರಿ: ಭಾಷೆ ಬದುಕಾಗಬೇಕು, ಮಾತೃಭಾಷೆಯನ್ನು ಪ್ರೀತಿಸುವ ಜೊತೆಗೆ ನಾವಿದ್ದ ನೆಲದ ಭಾಷೆಯನ್ನೂ ಕಲಿಯಬೇಕು; ರಂಗ ನೋಟ ಅಂಕಣ - ಕನ್ನಡ ನಾಡಿನ ಸಂಪೂರ್ಣ ಸ್ವರೂಪವನ್ನು, ನಾಡಿನೊಂದಿಗೆ ಬೆಸೆದವರನ್ನು , ಸೌಹಾರ್ದತೆಯ ತೋಟವನ್ನು ನೆನೆಯುವ ಕವನವಿದು. ಕನ್ನಡ ನುಡಿ ಕುಣಿದಾಡುವ ಗೇಯ ಕನ್ನಡ ತಾಯಿಯ ಮಕ್ಕಳ ಗೇಯ ಎನ್ನುವ ಸಾಲುಗಳು ಎಲ್ಲ ವಯೋಮಾನದವರನ್ನು ಒಳಗೊಂಡಿವೆ. ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎನ್ನುವ ಸಾಲುಗಳು ಇದನ್ನು ಧ್ವನಿಸುತ್ತದೆ.
- ಮುಂದೆ ಇದು ನಾಡಗೀತೆ ಸ್ವರೂಪವನ್ನು ಅಧಿಕೃತವಾಗಿ ಪಡೆದಿದ್ದು 2004 ರಲ್ಲಿ. ಆಗ ಕುವೆಂಪು ಅವರ ಜನ್ಮಶತಮಾನೋತ್ಸವ. ಇದರ ನೆನಪಿನಲ್ಲಿ ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ನಾಡಗೀತೆಯೆಂದು ಅಧಿಕೃತವಾಗಿ ಘೋಷಣೆಯಾಯಿತು.
ಇದನ್ನೂ ಓದಿರಿ: Deepavali 2024: ಕರ್ನಾಟಕದಲ್ಲಿ ದೀಪಾವಳಿ ಹಬ್ಬ ಹೇಗೆ ಆಚರಿಸಲಾಗುತ್ತದೆ; ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದತೆ ಜೋರು - ಕುವೆಂಪು ಅವರ ಈ ಸಾಲುಗಳಿಗೆ ರಾಗ ಸಂಯೋಜನೆ ಮಾಡಿದವರು ಕರ್ನಾಟಕದ ಖ್ಯಾತ ಸುಗಮ ಸಂಗೀತ ಕಲಾವಿದ ಮೈಸೂರು ಅನಂತಸ್ವಾಮಿ. ಆನಂತರ ಸಿ.ಅಶ್ವಥ್ ಕೂಡ ರಾಗ ಸಂಯೋಜನೆ ಮಾಡಿದರು. ಇದೇ ಮಾದರಿ ಈಗ ನಾಡಗೀತೆಯಾಗಿ ಪ್ರಸಿದ್ದಿಯಾಗಿದೆ.
- ನಾಡಗೀತೆ ಬಳಕೆ ಶುರುವಾದ ನಂತರ ವಿವಾದವನ್ನೂ ಪಡೆಯಿತು. ನಾಡಗೀತೆಯಲ್ಲಿ ಕೆಲವರಿಗೆ ಸ್ಥಾನವಿಲ್ಲ. ಅವರನ್ನು ಸೇರಿಸಿ. ಇವರನ್ನು ಕೈ ಬಿಡಿ ಎನ್ನುವ ಒತ್ತಾಯಗಳು ಕೇಳಿ ಬಂದವು. ಲೇಖಕ ಪಾಟೀಲ ಪುಟ್ಟಪ್ಪ ಅವರು ನಾಡಗೀತೆಯಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಅಕ್ಕಮಹಾದೇವಿ ಹೆಸರು ಸೇರಿ ಎನ್ನುವ ಸಲಹೆ ನೀಡಿದ್ದರು. ಆಗ ಸರ್ಕಾರ ಸಮಿತಿಯೊಂದನ್ನು ರಚಿಸಿತು.
- ಮಧ್ವಾಚಾರ್ಯರ ಹೆಸರು ಸೇರ್ಪಡೆ ಮಾಡಬೇಕು. ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಬಸವೇಶ್ವರರ ಹೆಸರು ಕೈ ಬಿಡಬೇಕೆಂಬ ವಿಚಾರಗಳ ಕುರಿತು ಧರ್ಮ ಗುರುಗಳು, ಸಾಹಿತಿಗಳು ಮತ್ತು ರಾಜಕಾರಣಿಗಳ ಮಧ್ಯೆ ಸಾಕಷ್ಟು ಚರ್ಚೆಗೂ ದಾರಿ ಮಾಡಿಕೊಟ್ಟು ವಿವಾದ ಸ್ವರೂಪ ಪಡೆದಿತ್ತು.
ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ಪ್ರಮುಖ ಕವಿಗಳ ಹೆಸರುಗಳನ್ನು ನೀವು ಚೆನ್ನಾಗಿಯೇ ಬಲ್ಲಿರಿ, ಅವರ ಕಾವ್ಯನಾಮ ಗೊತ್ತೆ? - ಆನಂತರ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕುವೆಂಪು ಅವರ ಗೀತೆಯ ಅಧಿಕೃತ ನಾಡಗೀತೆಯಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಕಡ್ಡಾಯವಾಗಿ ಹಾಡುವ ಕ್ರಮ ಬಳಕೆಯಲ್ಲೂ ಇದೆ.
- ನಮ್ಮ ಮೊದಲ ನಾಡಗೀತೆ ಗದಗದ ಹುಯಿಲಗೋಳ ನಾರಾಯಣರಾವ್ ಅವರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಹಾಡು. ಶತಮಾನದ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಇದನ್ನೇ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಹಾಡಿ ಗಮನ ಸೆಳೆದಿದ್ದರು.