ಕನ್ನಡ ಸುದ್ದಿ  /  ಕರ್ನಾಟಕ  /  Rahul Gandhi Asset: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಸ್ತಿ ಎಷ್ಟಿದೆ? ಎಲ್ಲೆಲ್ಲಿ ಹೂಡಿಕೆ, ಖರೀದಿಸಿರುವ ಷೇರುಗಳ ಮೌಲ್ಯ ಈಗ ಎಷ್ಟಿದೆ

Rahul Gandhi Asset: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಸ್ತಿ ಎಷ್ಟಿದೆ? ಎಲ್ಲೆಲ್ಲಿ ಹೂಡಿಕೆ, ಖರೀದಿಸಿರುವ ಷೇರುಗಳ ಮೌಲ್ಯ ಈಗ ಎಷ್ಟಿದೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರ ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್‌ನಲ್ಲಿ ನಾಮಪತ್ರ ಸಲ್ಲಿಸಿದ್ದು, 20 ಕೋಟಿ ರೂಪಾಯಿಗಳ ಆಸ್ತಿ ಘೋಷಿಸಿಕೊಂಡಿದ್ದಾರೆ. ಹಲವು ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅದರ ವಿವರ ಇಲ್ಲಿದೆ.

ಕಾಂಗ್ರೆಸ್ ನಾಯಕ, ವಯನಾಡ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕ, ವಯನಾಡ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಹುಲ್ ಗಾಂಧಿ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. (Hindustan Times)

ದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ಲೋಕಸಭಾ ಕ್ಷೇತ್ರವಾದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ (Wayanad Lok Sabha Constituency) ಎರಡನೇ ಬಾರಿಗೆ ಕಣಕ್ಕಿಳಿದಿದ್ದು, ನಾಮಪತರ್ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ಎಷ್ಟಿದೆ ಎಂಬುದನ್ನು ರಾಹುಲ್ ಘೋಷಿಸಿಕೊಂಡಿದ್ದಾರೆ. ಚುನಾವಣಾ ನಾಮಪತ್ರದಲ್ಲಿ ತಮ್ಮ ಒಟ್ಟು ಆಸ್ತಿ 20 ಕೋಟಿ ರೂಪಾಯಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. 9.24 ಕೋಟಿ ರೂಪಾಯಿ ಚರಾಸ್ತಿ ಹೊಂದಿದ್ದು, ಇದರಲ್ಲಿ 55,000 ನಗದು, 26.25 ಲಕ್ಷ ಬ್ಯಾಂಕ್ ಠೇವಣಿ, 4.33 ಕೋಟಿ ಬಾಂಡ್‌ಗಳು ಹಾಗೂ ಷೇರುಗಳಿವೆ. 3.81 ಕೋಟಿ ರೂಪಾಯಿಗಳ ಮ್ಯೂಚುವಲ್ ಫಂಡ್‌ಗಳು, 15.21 ಲಕ್ಷ ರೂಪಾಯಿಗಳ ಚಿನ್ನದ ಬಾಂಡ್‌ಗಳು ಹಾಗೂ 4.20 ಲಕ್ಷ ರೂಪಾಯಿಗಳ ಆಭರಣಗಳನ್ನು ಹೊಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರಾಹುಲ್ ಗಾಂಧಿ ಚುನಾವಣಾ ನಾಮಪತ್ರದಲ್ಲಿ ಸಲ್ಲಿಸಿರುವ ಆಸ್ತಿಯ ವಿವರ
ರಾಹುಲ್ ಗಾಂಧಿ ಚುನಾವಣಾ ನಾಮಪತ್ರದಲ್ಲಿ ಸಲ್ಲಿಸಿರುವ ಆಸ್ತಿಯ ವಿವರ

ರಾಹುಲ್ ಗಾಂಧಿ ಗಮನಾರ್ಹವಾಗಿ 3.81 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್‌ಗಳನ್ನು ಹೊಂದಿದ್ದಾರೆ. ಆದರೆ ಷೇರುಗಳು ಮತ್ತು ಬಾಂಡ್‌ಗಳಿಗೆ 4.33 ಕೋಟಿ ರೂಪಾಯಿಗಳಷ್ಟು ಹಂಚಿಕೆ ಮಾಡಿರುವುದನ್ನು ಗಮನಿಸಬಹುದು. ರಾಹುಲ್ ಗಾಂಧಿ ಷೇರುಪೇಟೆಯಲ್ಲಿ ಹೂಡಿಕೆ ಮಾಡಿರುವ ಷೇರು ಕಂಪನಿಗಳ ಹೆಸರು, ಒಟ್ಟು ಷೇರುಗಳು ಹಾಗೂ ಪ್ರಸ್ತುತ ಷೇರಿಗಳ ಮೌಲ್ಯದ ವಿವರ ಇಲ್ಲಿದೆ.

ಹೂಡಿಕೆ ಮಾಡಿರುವ ಷೇರು ಕಂಪನಿ ಹೆಸರು, ಒಟ್ಟು ಷೇರುಗಳು ಹಾಗೂ ಪ್ರಸ್ತುತ ಮಾರುಕಟ್ಟೆ ಮೌಲ್ಯದ ವಿವರ

  1. ಆಲ್ಕೈಲ್ ಅಮೈನ್ಸ್ ಕೆಮಿಕಲ್ಸ್ ಲಿಮಿಟೆಡ್ - 373 ಷೇರುಗಳು - 7,39,211 ರೂಪಾಯಿ
  2. ಏಷ್ಯನ್ ಪೇಂಟ್ಸ್ ಲಿಮಿಟೆಡ್ - 1231 - 35,29,954
  3. ಬಜಾಜ್ ಫೈನಾನ್ಸ್ ಲಿಮಿಟೆಡ್ - 551 - 35,89,407
  4. ದೀಪಕ್ ನೈಟ್ರೈಟ್ ಲಿಮಿಟೆಡ್ - 568 - 11,92,033
  5. ದಿವಿಸ್ ಲ್ಯಾಬೋರೇಟರೀಸ್ ಲಿಮಿಟೆಡ್ - 567 - 19,76,222
  6. ಡಾ ಲಾಲ್ ಪಾಥ್ಲ್ಯಾಬ್ಸ್ ಲಿಮಿಟೆಡ್ - 516 - 10,43,075
  7. ಫೈನ್ ಆರ್ಗ್ಯಾನಿಕ್ ಇಂಡಸ್ಟ್ರೀಸ್ ಲಿಮಿಟೆಡ್ - 211 - 8,56,301
  8. ಗಾರ್ವೇರ್ ಟೆಕ್ನಿಕಲ್ ಫೈಬರ್ಸ್ ಲಿಮಿಟೆಡ್ - 508 - 16,43,075
  9. ಜಿಎಂಎಂ ಎಫ್‌ಫೌಡ್ಲರ್ ಲಿಮಿಡೆಟ್ - 1,121 - 14,00,073

10. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ - 1,161 - 27,02,460

11. ಐಸಿಐಸಿಐ ಬ್ಯಾಂಕ್ ಲಿಮಿಟೆಡ್ - 2,299 - 24,83,725

12. ಇನ್ಫೋ ಎಡ್ಜ್ (ಇಂಡಿಯಾ) ಲಿಮಿಟೆಡ್ - 85 - 4,45,502

13. ಇನ್ಫೋಸಿಸ್ ಲಿಮಿಟೆಡ್ - 870 - 14,21,580

14. ಐಟಿಸಿ ಲಿಮಿಡೆಟ್ - 3093 - 12,96,276

15. ಎಲ್‌ಐಟಇ ಮೈಂಡ್‌ಟ್ರೀ ಲಿಮಿಟೆಡ್ - 407 - 21,14,100

16. ನೆಸ್ಲೆ ಇಂಡಿಯಾ ಲಿಮಿಟೆಡ್ - 1,370 - 35,67,001

17. ಮೋಲ್ಡ್-ಟೆಕ್ ಪ್ಯಾಕೇಜಿಂಗ್ ಲಿಮಿಟೆಡ್ - 1,953 - 14,95,510

18. ಪಿಡಿಲೈಟ್ ಇಂಡಸ್ಟ್ರೀಸ್ ಲಿಮಿಟೆಡ್ - 1,474 - 42,27,432

19. ಸುಪ್ರಜಿತ್ ಇಂಜಿನಿಯರಿಂಗ್ ಲಿಮಿಟೆಡ್ - 4,068 - 16,65,434

20. ಟಾಟಾ ಕನ್ಸಲ್ಟೆನ್ಸಿ ಸರ್ವ್. ಲಿಮಿಟೆಡ್ - 234 - 9,87,305

21. ಟೈಟಾನ್ ಕಂಪನಿ ಲಿಮಿಟೆಡ್ - 897 - 32,58,980

22. ಟ್ಯೂಬ್ ಇನ್ಸ್ಟ್ಮೆಂಟ್ಸ್ ಆಫ್ ಇಂಡಿಯಾ ಲಿಮಿಟೆಡ್ - 340 - 12,10,621

23. ವರ್ಟೋಜ್ ಅಡ್ವರ್ಟೈಸಿಂಗ್ ಲಿಮಿಟೆಡ್ - 260 - 1,89,0856

24. ವಿನ್ಲಿ ಕೆಮಿಕಲ್ಸ್ (ಇಂಡಿಯಾ) ಲಿಮಿಟೆಡ್ - 960 - 3,24,240

25. ಬ್ರಿಟಾನಿಯಾ ಇಂಡ್ಸ್ ಲಿಮಿಟೆಡ್ 5.5 NCD 03JU24 - 52 - 1,558

ಒಟ್ಟು 25 ಕಂಪನಿಗಳಲ್ಲಿ ರಾಹುಲ್ ಗಾಂಧಿ ಹೂಡಿಕೆ ಮಾಡಿರುವ ಷೇರುಗಳ ಪ್ರಸ್ತುತ ಮೌಲ್ಯ 4,33,60,519 ರೂಪಾಯಿ ಇದೆ. ಇದರ ಜೊತೆಗೆ ಮೂಚ್ಯುವಲ್ ಫಂಡ್‌ಗಳಲ್ಲೂ 3 ಕೋಟಿ 81 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ.

IPL_Entry_Point