ಕನ್ನಡ ಸುದ್ದಿ  /  ಕರ್ನಾಟಕ  /  ಈಶ್ವರಪ್ಪ ಯಾರು? ಬಿಜೆಪಿ ಕರ್ನಾಟಕ ಉಸ್ತುವಾರಿ ಲೇವಡಿ ಮಾತು ; ದುರಂಹಕಾರಕ್ಕೆ ಮದ್ದೇನು, ಕಾರ್ಯಕರ್ತೆ ಶಾರದಾ ಡೈಮಂಡ್ ಅಭಿಮತ

ಈಶ್ವರಪ್ಪ ಯಾರು? ಬಿಜೆಪಿ ಕರ್ನಾಟಕ ಉಸ್ತುವಾರಿ ಲೇವಡಿ ಮಾತು ; ದುರಂಹಕಾರಕ್ಕೆ ಮದ್ದೇನು, ಕಾರ್ಯಕರ್ತೆ ಶಾರದಾ ಡೈಮಂಡ್ ಅಭಿಮತ

ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ, ಪಕ್ಷ ಸಂಘಟನೆಗಾಗಿ ದುಡಿದು ರಾಜಕೀಯ ನಿವೃತ್ತಿ ಘೋಷಿಸಿದ್ದ ಕೆಎಸ್‌ ಈಶ್ವರಪ್ಪ ಬಿಎಸ್‌ವೈ ಕುಟುಂಬದ ವಿರುದ್ಧ ಬಂಡಾಯ ಸಾರಿದ್ದಾರೆ. ಈ ನಡುವೆ, ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾಮೋಹನ್ ಅಗರವಾಲ್‌ ಲೇವಡಿ ಕಾರ್ಯಕರ್ತರನ್ನು ಕೆಣಕಿದೆ. ದುರಂಹಕಾರಕ್ಕೆ ಮದ್ದೇನು ಎಂದು ಕಾರ್ಯಕರ್ತೆ ಶಾರದಾ ಡೈಮಂಡ್ ಅಭಿಮತದಲ್ಲಿ ಪ್ರಶ್ನಿಸಿದ್ದಾರೆ.

ಶಾರದಾ ಡೈಮಂಡ್‌ (ಎಡಚಿತ್ರ); ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ತ್ರಿಮೂರ್ತಿಗಳು - ಕೆಎಸ್‌ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ, ಅನಂತ ಕುಮಾರ್ (ಮಧ್ಯ ಚಿತ್ರ), ಬಿಜೆಪಿ ಕರ್ನಾಟಕದ ಈಗಿನ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್‌ (ಬಲಚಿತ್ರ)
ಶಾರದಾ ಡೈಮಂಡ್‌ (ಎಡಚಿತ್ರ); ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ತ್ರಿಮೂರ್ತಿಗಳು - ಕೆಎಸ್‌ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ, ಅನಂತ ಕುಮಾರ್ (ಮಧ್ಯ ಚಿತ್ರ), ಬಿಜೆಪಿ ಕರ್ನಾಟಕದ ಈಗಿನ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್‌ (ಬಲಚಿತ್ರ)

ಬೆಂಗಳೂರು: ಲೋಕಸಭೆ ಚುನಾವಣೆ ಕರ್ನಾಟಕದಲ್ಲಿ ಜಾತಿ ರಾಜಕಾರಣ, ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣಗಳಿಂದ ಗಮನಸೆಳೆಯುತ್ತಿದೆ. ಶಿವಮೊಗ್ಗದಲ್ಲಿ ಬಿಎಸ್‌ ಯಡಿಯೂರಪ್ಪ, ಬಿವೈ ವಿಜಯೇಂದ್ರ ವಿರುದ್ಧ ಸಿಡಿದು ನಿಂತಿರುವ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಈಗ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಒಂದು ಕಾಲದಲ್ಲಿ ಪಕ್ಷ ಸಂಘಟನೆಗಾಗಿ ಬಿಎಸ್ ಯಡಿಯೂರಪ್ಪ ಜೊತೆಗೆ ಹೆಗಲುಕೊಟ್ಟು ದುಡಿದವರು ಈಗ ಶತ್ರುಗಳಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪಕ್ಷ ಮುಖ್ಯ ಎನ್ನುತ್ತ ಬಿಎಸ್ ಯಡಿಯೂರಪ್ಪ ಅವರು ಕೆಲವು ವರ್ಷಗಳಿಂದ ತಮ್ಮ ಮಕ್ಕಳ ರಾಜಕೀಯ ಭವಿಷ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ, ಇತ್ತ ಅವರ ಜೊತೆಗೇ ದುಡಿದ ಕೆಎಸ್ ಈಶರಪ್ಪ ಕೂಡ ತಮ್ಮ ಮಗನ ರಾಜಕೀಯ ಭವಿಷ್ಯದ ಕಡೆಗೆ ತಾನು ಗಮನಹರಿಸಿದರೆ ತಪ್ಪೇನು ಎಂದು ಕೇಳುತ್ತಿದ್ದಾರೆ. ಈ ರಾಜಕೀಯ ಜಿದ್ದಾಜಿದ್ದಿಯಲ್ಲಿ ವಿಧಾನಸಭೆ ಚುನಾವಣೆ ವೇಳೆ ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಿಸಿದರು. ಅವರಿಗೆ ಯಡಿಯೂರಪ್ಪ ಅವರಿಂದ ಸಿಕ್ಕ ಭರವಸೆಗಳು ಈಡೇರದೇ ಇದ್ದ ಕಾರಣ ಈಗ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಈ ವಿದ್ಯಮಾನ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಿದ್ದು, ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು, ಹಿರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಚರ್ಚೆಗೆ ಒಳಗಾಗಿದೆ. ಇದಕ್ಕೆ ಒತ್ತುಕೊಡುವಂತೆ, ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್‌, “ಈಶ್ವರಪ್ಪ ಯಾರು?” ಎಂದು ಲೇವಡಿಮಾಡುವಂತೆ ಪ್ರಶ್ನಿಸಿದ್ದು ಕಾರ್ಯಕರ್ತರ ನಡುವೆ ಪಕ್ಷದ ನಾಯಕತ್ವದ ಬಗ್ಗೆ ಒಂದು ಅಭಿಪ್ರಾಯ ರೂಪುಗೊಳ್ಳುವಂತೆ ಮಾಡಿದೆ. ಅಂತಹ ಒಂದು ಗಮನಸೆಳೆಯುವ ಅಭಿಪ್ರಾಯವನ್ನು ಕಾರ್ಯಕರ್ತೆ ಶಾರದಾ ಡೈಮಂಡ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಾರ್ಯಕರ್ತರನ್ನೇ ಕಡೆಗಣಿಸಿ ಪಕ್ಷದ ವರಿಷ್ಠರು ಮಾತಾಡ್ತಾರೆ ಅಂದ್ರೆ…

ಕಾರ್ಯಕರ್ತೆ ಶಾರದಾ ಡೈಮಂಡ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅಭಿಮತ ಹೀಗಿದೆ -

ದೇವದುರ್ಲಭ ಕಾರ್ಯಕರ್ತರ ಪಕ್ಷ ಬಿಜೆಪಿ!

ಇದನ್ನೇ ಕರ್ನಾಟಕ ಬಿಜೆಪಿ ಅಂತು ಬಂಡವಾಳ ಮಾಡಿಕೊಂಡಿದೆ!

ಪಕ್ಷಕ್ಕಾಗಿ ಹಗಲು ರಾತ್ರಿ ಅಂತ ಕೂಡ ನೋಡದೇ ಕೆಲಸ ಮಾಡೋ ಕಾರ್ಯಕರ್ತರನ್ನೇ ಕಡೆಗಣಿಸಿ ಪಕ್ಷದ ವರಿಷ್ಠರು ಮಾತಾಡ್ತಾರೆ ಅಂದ್ರೆ ಪಕ್ಷದ ಸಿದ್ಧಾಂತ ಎಲ್ಲಿಗೆ ಬಂತು?

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ , ರಾಜ್ಯ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್ "ಈಶ್ವರಪ್ಪನವರು ಯಾರೂ ಅಂತಾನೇ ನನಗೆ ಗೊತ್ತಿಲ್ಲಾ" ಅಂತ ಹೇಳಿಕೆ ಕೊಡ್ತಾರೆ ಅಂದ್ರೆ ನಿಜವಾಗಲೂ ಇವರೆಲ್ಲಾ ಹೊಟ್ಟೆಗೆ ಅನ್ನನೇ ತಿಂತಾರಾ?😂

ಸಾಮಾನ್ಯ ಕಾರ್ಯಕರ್ತನಾಗಿ ಕಷ್ಟಪಟ್ಟು ಪಕ್ಷಕ್ಕಾಗಿ ದುಡಿದ ಹಿರಿಜೀವ ಈಶ್ವರಪ್ಪನವರ ಬಗ್ಗೆನೇ ಇಷ್ಟು ಕೇವಲವಾಗಿ ಮಾತಾಡ್ತಾರೆ ಅಂದ್ರೆ ರಾಜಕೀಯ ಇನ್ನೆಷ್ಟು ಹೊಲಸು !

ಈಶ್ವರಪ್ಪ ವಿರುದ್ಧ ಬರೆದಾಗೆಲ್ಲ ಅಪ್ಪ ಹೇಳ್ತಿದ್ರು…

ಸತ್ಯ ಹೇಳ್ತೀನಿ ಈಶ್ವರಪ್ಪನವರದ್ದು ಹೊಲಸು ಬಾಯಿ ಅಂತ ಆ ಮನುಷ್ಯನನ್ನು ಕಂಡರೆ ನನಗೆ ಆಗ್ತಾ ಇರಲಿಲ್ಲ. ಆ ಮನುಷ್ಯನಿಗೆ ಫೇಸ್ಬುಕ್ ಅಲ್ಲಿ ಉಗಿದು ಪೋಸ್ಟ್ ಹಾಕಿದ್ದಿದೆ !

ಪ್ರತೀ ಬಾರಿ ನಾನು ಆ ರೀತಿ ಈಶ್ವರಪ್ಪನವರ ವಿರುದ್ಧ ಪೋಸ್ಟ್ ಹಾಕಿದಾಗ ನಮ್ಮಪ್ಪ ಮಾತ್ರ "ಹಿಂದುತ್ವ, ಬಿಜೆಪಿ ಪಕ್ಷ ಅಂತ ಬಹಳ ದುಡಿದಿರೋ ಮನುಷ್ಯ ಆ ಈಶ್ವರಪ್ಪ. ಒಂದು ಕಾಲದಲ್ಲಿ ಅನಂತಕುಮಾರ್ , ಯಡಿಯೂರಪ್ಪ, ಈಶ್ವರಪ್ಪ ಈ ಮೂವರನ್ನೂ ತ್ರಿಮೂರ್ತಿ ಸೆಟ್ ದೋಸೆ ಅಂತಿದ್ರು" ಹೀಗೆ ಅವರ ಹಳೆ ಕಥೆಗಳನ್ನು ಹೇಳ್ತಾ ಇದ್ರು ! 🙂

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಇಲ್ಲ ಅಂದಕೂಡಲೇ ರಂಪ ರಾಮಾಯಣ ಮಾಡಿ ಕಾಂಗ್ರೆಸ್ ಪಕ್ಷ ಸೇರಿದ್ದ ಜಗದೀಶ್ ಶೆಟ್ಟರ್ ನೀಚತನವನ್ನು ನೋಡಿದ ಜನರಿಗೆ ಈಶ್ವರಪ್ಪನವರಿಗೆ ಟಿಕೆಟ್ ಇಲ್ಲ ಅಂದಾಗ ಅವರು ಗೌರವಯುತವಾಗಿ ಪತ್ರ ಬರೆದು ಹೊರಗೆ ಬಂದಿದ್ದು ನೋಡಿ ಬಿಜೆಪಿ ಬೆಂಬಲಿಗರೆಲ್ಲರಿಗೂ ಈಶ್ವರಪ್ಪನವರ ನಡೆ ತುಂಬಾ ಇಷ್ಟ ಆಗಿತ್ತು ! 😍

ರಾಜಕಾರಣದಿಂದ ನಿವೃತ್ತಿಯಾಗುವಾಗ ಮಗನಿಗೆ ಪಕ್ಷದಲ್ಲಿ ಹೊಣೆಗಾರಿಕೆ ಕೊಡಿ ಅಂದ್ರೆ ತಪ್ಪೇನು

ಪಕ್ಷಕ್ಕಾಗಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಮಂತ್ರಿಯಾಗಿ ರಾಜಕೀಯದಿಂದ ನಿವೃತ್ತಿ ಆದವನೊಬ್ಬ ಪಕ್ಷದಲ್ಲಿ ತನ್ನ ಮಗನಿಗೊಂದು ಜವಾಬ್ದಾರಿ ಕೊಡಿ ಅಂತ ಕೇಳೋದ್ರಲ್ಲಿ ತಪ್ಪೇನಿದೆ?

ವಿಧಾನಸಭೆಗೆ ನಿಂತು ಸೋತು ಸುಣ್ಣ ಆದವರಿಗೆಲ್ಲಾ ಬಿಜೆಪಿ ಲೋಕಸಭೆಗೆ ಟಿಕೆಟ್ ಕೊಟ್ಟಿದೆ ಅಂದಮೇಲೆ ಈಶ್ವರಪ್ಪನವರಿಗೆ ಯಾಕೆ ಕೊಡಲಿಲ್ಲ ? 😄

ಬಿಜೆಪಿಯಲ್ಲೂ ಜಾತಿ ರಾಜಕೀಯ, ಕುಟುಂಬ ರಾಜಕಾರಣ, ಅಡ್ಜಸ್ಟ್ಮೆಂಟ್ ರಾಜಕೀಯ ನಡೀತಾ ಇದೇನಾ? ಪಕ್ಷದೊಳಗಿರುವವರನ್ನೂ ನಾಯಕರನ್ನಾಗಿ ಬೆಳೆಯೋಕೆ ಬಿಡಲ್ಲ, ಕಾರ್ಯಕರ್ತರನ್ನೂ ಬೆಳೆಸಲ್ಲ ಅಂದ್ರೆ ಬಿಜೆಪಿ ಹೇಗೆ ಉದ್ಧಾರ ಆಗೋಕೆ ಸಾಧ್ಯ? ಕುಟುಂಬ ರಾಜಕಾರಣ ಅಂತ ಕುಮಾರಸ್ವಾಮಿಯವರ ಕಾಲು ಎಳೀತಾ ಇದ್ವಿ.. ಈಗ ಬಿಜೆಪಿಯಲ್ಲಿ ಆಗ್ತಾ ಇರೋದೇನು?

ನಾನು ಶಿವಮೊಗ್ಗ ಜಿಲ್ಲೆಯವಳಲ್ಲ.. ಆದ್ರೆ ಇಷ್ಟು ದುರಹಂಕಾರ ತೋರಿಸ್ತಾ ಇರೋ ಪಾರ್ಟಿಯವರಿಗೆಲ್ಲಾ ಬುದ್ಧಿ ಕಲಿಸೋದು ಯಾರು? ನಾನು ಗೆದ್ರೆ ನನ್ನ ಬೆಂಬಲ ಮೋದಿಯವರಿಗೆ ಅಂತ ಹೇಳಿರೋ ಕೆಎಸ್‌ ಈಶ್ವರಪ್ಪ ಅವರಿಗೆ ವೋಟ್ ಹಾಕಿದ್ರೆ ಅದು ಮೋದೀಜಿಗೇ ಸೇರುತ್ತೆ. ಹಾಗಾಗಿ #IsupportEshwarappa !

ಯಾವುದೇ ಪಕ್ಷವಾಗಿರಲಿ .‌ರಾಜಕೀಯವನ್ನು ತೀರಾ ಪರ್ಸನಲ್ ಆಗಿ ತಗೊಂಡು ಕೆಟ್ಟದಾಗಿ ಬಯ್ದಾಡ್ಕೊಂಡು ಕೆಲಸ ಮಾಡೋ ಸ್ನೇಹಿತರಿಗೆಲ್ಲಾ ಇದೊಂದು ಪಾಠ !

~ಶಾರದಾ ಡೈಮಂಡ್

IPL_Entry_Point