ಲೋಕಸಭಾ ಚುನಾವಣೆ 2024: ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ, ಹಾವೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ; ವಾಗ್ದಾಳಿ ಮುಂದುವರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ 2024: ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ, ಹಾವೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ; ವಾಗ್ದಾಳಿ ಮುಂದುವರಿಕೆ

ಲೋಕಸಭಾ ಚುನಾವಣೆ 2024: ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ, ಹಾವೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ; ವಾಗ್ದಾಳಿ ಮುಂದುವರಿಕೆ

Lok Sabha Elections 2024: ಕರ್ನಾಟಕ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಆಡಳಿತ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಪರಸ್ಪರ ವಾಗ್ದಾಳಿ ಮುಂದುವರಿಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು  ಬಿಜೆಪಿ ನಾಯಕರ ಪ್ರಚಾರ, ಮಾತಿನ ಸಮರ ಮುಂದುವರಿದಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಪ್ರಚಾರ, ಮಾತಿನ ಸಮರ ಮುಂದುವರಿದಿದೆ.

ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಇವತ್ತು (ಏಪ್ರಿಲ್ 19, ಶುಕ್ರವಾರ) ಮುಕ್ತಾಯಗೊಂಡಿದೆ. ಎರಡನೇ ಹಂತದ ಮತದಾನ ಇನ್ನೊಂದು ವಾರ (ಏಪ್ರಿಲ್ 28ರ ಶುಕ್ರವಾರ) ಬಾಕಿ ಉಳಿದಿದ್ದು, ರಾಜಕಾಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಅದರಲ್ಲೂ 2ನೇ ಹಂತದ ಚುನಾವಣೆಯಲ್ಲಿ ಕರ್ನಾಟಕದ (Karnataka Lok Sabha Election 2024) 14 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತೆ. ಇಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ (Congress) ಮತ್ತು ವಿಪಕ್ಷವಾಗಿರುವ ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ನಡುವೆ ಪೈಪೋಟಿ ಏರ್ಪಟ್ಟಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲೋಕೆ ತಂತ್ರ, ಪ್ರತಿ ತಂತ್ರಗಳನ್ನು ರೂಪಿಸಿವೆ. ಇದರ ಜೊತೆಗೆ ಪ್ರಚಾರ, ರಾಲಿ ಸಭೆ, ಸಮಾರಂಭಗಳಲ್ಲೂ ಆರೋಪ, ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿವೆ.

ಹಾಸನದ ವಿವಿಧ ತಾಲೂಕುಗಳಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಗಳಲ್ಲಿ ಭಾವಹಿಸಿ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಮತಯಾಚನೆ ಮಾಡಿದ್ದಾರೆ. ಹೊಳೆನರಸೀಪುರ, ಸಕಲೇಶಪುರ, ಅರಕಲಗೋಡು ಹಾಗೂ ಬೇಲೂರಿನಲ್ಲಿ ಪ್ರಚಾರ ನಡೆಸಿದ್ದಾರೆ. ರಾಜ್ಯಕ್ಕೆ ಬಿಜೆಪಿ ಮಾಡುತ್ತಿರುವ ಅನ್ಯಾಯದ ಬಗ್ಗೆ ಪ್ರಜ್ವಲ್ ರೇವಣ್ಣ, ದೇವೇಗೌಡರು ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ನಿರುದ್ಯೋಗಿಗಳಿಗೆ ಪಕೋಡ ಮಾರಾಟ ಮಾಡಿ ಎಂದಿದ್ದು ಮೋದಿ ಮಾಡಿದ ನಂಬಿಕೆ ದ್ರೋಹ ಅಲ್ಲವೇ? ಭಾರತೀಯರಿಗೆ ಮಾಡಿದ ವಂಚನೆ ಅಲ್ಲವೇ. ನಿಮಗಾದ ಮಹಾದ್ರೋಹಕ್ಕೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.

ಬೃಹತ್ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದ ಮೋದಿ ಸರ್ಕಾರ ಪ್ರತಿಭಟನಾನಿರತ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಮಹಾದ್ರೋಹ ಅಲ್ಲವೇ. ನಾವು, ಮೋದಿಯವರಂತೆ ಭಾರತೀಯರನ್ನು ನಂಬಿಸಿ ದ್ರೋಹ ಬಗೆಯಲ್ಲ ಎಂದರು. ಹೊಳೆನರಸೀಪುರದಲ್ಲಿ ಸುರಿಯುವ ಮಳೆಯಲ್ಲಿ ನಡುವೆಯೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಶ್ರೇಯಸ್ ಪಟೇಲ್ ಗೆಲ್ಲಿಸಿಕೊಂಡು ಬನ್ನಿ. ಇದೇ ನೀವು ನನಗೆ ನೀಡುವ ಉಡುಗೊರೆ ಎಂದು ಹೇಳಿದ್ದಾರೆ. ಮಾಜಿ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕೈ ನಾಯಕರು ಉಪಸ್ಥಿತರಿದ್ದರು.

ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ, ಬಿಎಸ್‌ವೈ ಕೈ ನಾಯಕರ ವಿರುದ್ಧ ವಾಗ್ದಾಳಿ

ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಹಾವೇರಿಯಲ್ಲಿ ಇಂದು (ಏಪ್ರಿಲ್ 19, ಶುಕ್ರವಾರ) ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಹಾವೇರಿಯ ಹುಕ್ಕೇರಿ ಮಠಕ್ಕೆ ಭೇಟಿ ನೀಡಿ, ಮಠದ ಪೀಠಾಧ್ಯಕ್ಷರಾದ ಸದಾಶಿವ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ನಂತರ ಬೃಹತ್ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ಚುನಾವಣಾ ಮೆರವಣಿಗೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಒಟ್ಟಾಗಿ ಹೋಗುವ ಸಂಕಲ್ಪ ಮಾಡಿದ್ದಾರೆ. ನಾವೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಬಸವರಾಜ ಬೊಮ್ಮಾಯಿಯವರನ್ನು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರಾಮಮಂದಿರ ಉದ್ಘಾಟನೆ ಬಾಯ್ಕಾಟ್ ಮಾಡಿದವರನ್ನು ಚುನಾವಣೆಯಲ್ಲಿ ಬಾಯ್ಕಾಟ್ ಮಾಡಿ-ಬಿಎಸ್‌ವೈ

ಯಾರು ರಾಮಮಂದಿರ ಉದ್ಘಾಟನೆ ಬಾಯ್ಕಾಟ್ ಮಾಡಿದರೊ ಅವರನ್ನು ಬಾಯ್ಕಾಟ್ ಮಾಡಿ, ಯಾರು ಆರ್ಟಿಕಲ್ 370 ವಾಪಸ್ ತರುತ್ತೇವೆ ಎಂದು ಹೇಳುತ್ತಾರೊ ಅವರನ್ನು ಹೊರಗೆ ಹಾಕಿ, ಯಾರು ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಬೆಂಬಲಿಸುತ್ತಾರೊ ಅವರನ್ನು ಸಮುದ್ರಕ್ಕೆ ಹಾಕಿ, ಹನುಮಾನ್ ಚಾಲೀಸ್ ಪಠಣವನ್ನು ವಿರೋಧಿಸುವವರನ್ನು ಹನುಮಂತನ ರೀತಿ ಸುಟ್ಟು ಹಾಕಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಕರೆ ನೀಡಿದ್ದಾರೆ.

Whats_app_banner