ಕನ್ನಡ ಸುದ್ದಿ  /  Karnataka  /  Lok Sabha Elections 2024 Karnataka Constituency Wise Candidates List Of Bjp Jds Congress And Others Uks

ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಪೂರ್ಣ ಪಟ್ಟಿ

ಲೋಕಸಭಾ ಚುನಾವಣೆ 2024ರ ಕಣ ಸಿದ್ಧವಾಗಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ+ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳ ಪೂರ್ಣ ಪಟ್ಟಿ ಒಟ್ಟಿಗೆ ಒಂದೇ ಕಡೆ ಜೋಡಿಸಿ ಕೊಡಲಾಗಿದೆ. ಪೂರ್ಣ ವಿವರಕ್ಕೆ ಈ ವರದಿ ಓದಿ

ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ+ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ವಿವರ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಕ್ಷೇತ್ರಗಳಲ್ಲಿ ಎದುರಾಳಿಗಳಾರು, ಬಿಜೆಪಿ+ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ವಿವರ. (ಸಾಂಕೇತಿಕ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆ 2024ರ ದಿನಾಂಕಗಳು ಘೋ‍ಷಣೆಯಾಗಿವೆ. ಪಕ್ಷಗಳು ಕೂಡ ಹಂತ ಹಂತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪ್ರಚಾರದ ಕಾವು ನಿಧಾನವಾಗಿ ಏರತೊಡಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮೊದಲ ಪಟ್ಟಿಯನ್ನು ಬೇಗನೆ ಘೋ‍ಷಿಸಿತು. ಬಿಜೆಪಿ ಸ್ವಲ್ಪ ವಿಳಂಬವಾಗಿ ತನ್ನ ಮೊದಲ ಪಟ್ಟಿ ಪ್ರಕಟಿಸಿದೆ. ಎರಡನೇ ಪಟ್ಟಿ ಬಿಡುಗಡೆಗೆ ಸ್ವಲ್ಪ ಸಮಯ ತೆಗೆದುಕೊಂಡಿತು. ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಮಾಡಿಕೊಂಡಿದ್ದು, ಲೋಕಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಸಜ್ಜಾಗಿವೆ.

ಕಳೆದ ಲೋಕಸಭಾ ಚುನಾವಣೆ (2019)ಯಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 25ರಲ್ಲಿ ಗೆಲುವು ಸಾಧಿಸಿದರೆ, ಒಂದು ಕಾಂಗ್ರೆಸ್, ಒಂದು ಜೆಡಿಎಸ್ ಮತ್ತು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲುವಿನ ನಗೆ ಬೀರಿದ್ದರು. ಈ ಬಾರಿ ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಸೇರಿ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಕಣಕ್ಕೆ ಇಳಿದಿದ್ದಾರೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದ 28 ಕ್ಷೇತ್ರಗಳ ಅಭ್ಯರ್ಥಿಗಳು ಯಾರು

ಲೋಕಸಭಾ ಚುನಾವಣೆ 2024; ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಯಾರು

ಕ್ರ.ಸಂ.ಕ್ಷೇತ್ರಬಿಜೆಪಿ+ಜೆಡಿಎಸ್‌ಕಾಂಗ್ರೆಸ್‌ಪಕ್ಷೇತರ/ಇತರೆ
01ಚಿಕ್ಕೋಡಿಅಣ್ಣಾ ಸಾಹೇಬ್ ಜೊಲ್ಲೆಪ್ರಿಯಾಂಕಾ ಜಾರಕಿಹೊಳಿ 
02ಬೆಳಗಾವಿ ಜಗದೀಶ್‌ ಶೆಟ್ಟರ್‌ಮೃಣಾಳ್ ಹೆಬ್ಬಾಳ್ಕರ್ 
03ಬಾಗಲಕೋಟೆಪಿಸಿ ಗದ್ದಿಗೌಡರ್‌ಸಂಯುಕ್ತಾ ಪಾಟೀಲ್ 
04ವಿಜಯಪುರ (ಎಸ್‌ಸಿ)ರಮೇಶ್ ಜಿಗಜಿಣಗಿರಾಜು ಅಲಗೂರು 
05ಕಲುಬರಗಿ (ಎಸ್‌ಸಿ)ಉಮೇಶ್ ಜಾಧವ್ರಾಧಾಕೃಷ್ಣ ದೊಡ್ಮನಿ 
06ರಾಯಚೂರು (ಎಸ್‌ಟಿ)ರಾಜಾ ಅಮರೇಶ್ವರ ನಾಯಕ್‌ಜಿ. ಕುಮಾರ ನಾಯ್ಕ್ 
07ಬೀದರ್ಭಗವಂತ್ ಖೂಬಾಸಾಗರ್ ಖಂಡ್ರೆ 
08ಕೊಪ್ಪಳ ಡಾ. ಬಸವರಾಜ್ ಕ್ಯಾವಟೂರುರಾಜಶೇಖರ್ ಹಿಟ್ನಾಳ್ 
09ಬಳ್ಳಾರಿ (ಎಸ್‌ಟಿ)ಶ್ರೀರಾಮುಲುಇ ತುಕಾರಾಂ 
10ಹಾವೇರಿಬಸವರಾಜ ಬೊಮ್ಮಾಯಿಆನಂದ ಗಡ್ಡದೇವರ ಮಠ 
11ಧಾರವಾಡಪ್ರಲ್ಹಾದ್ ಜೋಶಿವಿನೋದ್ ಅಸೂಟಿ 
12ಉತ್ತರ ಕನ್ನಡವಿಶ್ವೇಶ್ವರ ಹೆಗಡೆ ಕಾಗೇರಿಅಂಜಲಿ ನಿಂಬಾಳ್ಕರ್‌ 
13ದಾವಣಗೆರೆಗಾಯತ್ರಿ ಸಿದ್ಧೇಶ್ವರ್ಡಾ ಪ್ರಭಾ ಮಲ್ಲಿಕಾರ್ಜುನ 
14ಶಿವಮೊಗ್ಗಬಿವೈ ರಾಘವೇಂದ್ರ ಗೀತಾ ಶಿವರಾಜ್‌ಕುಮಾರ್ಕೆ ಎಸ್ ಈಶ್ವರಪ್ಪ
15ಉಡುಪಿ- ಚಿಕ್ಕಮಗಳೂರುಕೋಟ ಶ್ರೀನಿವಾಸ ಪೂಜಾರಿಡಾ. ಜಯಪ್ರಕಾಶ್ ಹೆಗ್ಡೆ 
16ಹಾಸನ ಪ್ರಜ್ವಲ್ ರೇವಣ್ಣ ಶ್ರೇಯಸ್ ಪಟೇಲ್‌ 
17ದಕ್ಷಿಣ ಕನ್ನಡಕ್ಯಾಪ್ಟನ್ ಬ್ರಿಜೇಶ್ ಚೌಟಪದ್ಮರಾಜ್ 
18ಚಿತ್ರದುರ್ಗ (ಎಸ್‌ಸಿ)ಎಂ. ಗೋವಿಂದ ಕಾರಜೋಳಬಿ.ಎನ್. ಚಂದ್ರಪ್ಪ 
19ತುಮಕೂರುವಿ.ಸೋಮಣ್ಣಎಸ್‌ ಪಿ ಮುದ್ದಹನುಮೇ ಗೌಡ 
20ಮಂಡ್ಯಹೆಚ್ ಡಿ ಕುಮಾರಸ್ವಾಮಿಸ್ಟಾರ್ ಚಂದ್ರು 
21ಮೈಸೂರುಯದುವೀರ್ ಒಡೆಯರ್ಎಂ ಲಕ್ಷ್ಮಣ್ 
22ಚಾಮರಾಜನಗರ (ಎಸ್‌ಸಿ)ಎಸ್ ಬಾಲರಾಜ್ಸುನಿಲ್ ಬೋಸ್‌ 
23ಬೆಂಗಳೂರು ಗ್ರಾಮಾಂತರಡಾ. ಸಿ.ಎಸ್ ಮಂಜುನಾಥಡಿಕೆ ಸುರೇಶ್ 
24ಬೆಂಗಳೂರು ಉತ್ತರಶೋಭಾ ಕರಂದ್ಲಾಜೆಪ್ರೊ.ರಾಜೀವ್ ಗೌಡ 
25ಬೆಂಗಳೂರು ಸೆಂಟ್ರಲ್ಪಿ.ಸಿ. ಮೋಹನ್ಮನ್ಸೂರ್ ಅಲಿ ಖಾನ್‌ 
26ಬೆಂಗಳೂರು ದಕ್ಷಿಣತೇಜಸ್ವಿ ಸೂರ್ಯ ಸೌಮ್ಯಾ ರೆಡ್ಡಿ 
27ಚಿಕ್ಕಬಳ್ಳಾಪುರಡಾ.ಕೆ.ಸುಧಾಕರ್‌ರಕ್ಷಾ ರಾಮಯ್ಯ 
28ಕೋಲಾರಆರ್‌ಸಿ ಮಲ್ಲೇಶ್ ಬಾಬುಕೆ ವಿ ಗೌತಮ್‌ 

ಜೆಡಿಎಸ್ ಪಕ್ಷದ ಮೂರು ಅಭ್ಯರ್ಥಿಗಳು, ಬಿಜೆಪಿಯ ಐದು, ಕಾಂಗ್ರೆಸ್ ಪಕ್ಷದ 4 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಷ್ಟೆ. ಬಹುತೇಕ 28 ಕ್ಷೇತ್ರಗಳಲ್ಲಿ ಮುಖಾಮುಖಿ ಸ್ಪರ್ಧೆ ಸಾಧ್ಯತೆಯೇ ಹೆಚ್ಚು.

IPL_Entry_Point