ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್‌ಗೂ ಮುನ್ನ ಸಟ್ಟಾ ಬಜಾರ್ ಲೆಕ್ಕಾಚಾರ; ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಗೆ 18 ರಿಂದ 20 ಸ್ಥಾನ

ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್‌ಗೂ ಮುನ್ನ ಸಟ್ಟಾ ಬಜಾರ್ ಲೆಕ್ಕಾಚಾರ; ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಗೆ 18 ರಿಂದ 20 ಸ್ಥಾನ

ಲೋಕಸಭಾ ಚುನಾವಣೆ ಎಕ್ಸಿಟ್‌ ಪೋಲ್‌ಗೂ ಮುನ್ನ ಸಟ್ಟಾ ಬಜಾರ್ ಲೆಕ್ಕಾಚಾರ ಗಮನಸೆಳೆದಿದೆ. ಇದರಂತೆ, ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಗೆ 18 ರಿಂದ 20 ಸ್ಥಾನ ಸಿಗಲಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ ಏನು ಇಲ್ಲಿದೆ ವಿವರ.

ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್‌ಗೂ ಮುನ್ನ ಸಟ್ಟಾ ಬಜಾರ್ ಲೆಕ್ಕಾಚಾರ ಬಹಿರಂಗವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಗೆ 18 ರಿಂದ 20 ಸ್ಥಾನ ಎಂಬುದರ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್‌ಗೂ ಮುನ್ನ ಸಟ್ಟಾ ಬಜಾರ್ ಲೆಕ್ಕಾಚಾರ ಬಹಿರಂಗವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಗೆ 18 ರಿಂದ 20 ಸ್ಥಾನ ಎಂಬುದರ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ (Lok Sabha Poll Results) ದಿನಗಣನೆ ಶುರುವಾಗಿದೆ. ಚುನಾವಣೆ ಅಂತಿಮ ಘಟ್ಟಕ್ಕೆ ತಲುಪುತ್ತಿರುವಂತೆಯೇ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಂದು ಅವಧಿಗೆ ಕೇಂದ್ರದ ಅಧಿಕಾರ ಗದ್ದುಗೆ ಹಿಡಿಯಲಿದೆ ಎಂಬ ವಿಚಾರವಾಗಿ ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ಶುರುವಾಗಿದೆ.

ಟ್ರೆಂಡಿಂಗ್​ ಸುದ್ದಿ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದು, ಎನ್ ಡಿಎ ಮೈತ್ರಿಕೂಟ ನಾನೂರು ಸ್ಥಾನಗಳನ್ನು ಪಡೆಯಲಿದೆ ಎಂಬ ಮಾತು ಸಟ್ಟಾ ಬಜಾರ್‌ನಲ್ಲಿ ಚಾಲ್ತಿಯಲ್ಲಿದೆ. ಈ ಸಲದ ಬೆಟ್ಟಿಂಗ್‌ ಇದೇ ವಿಚಾರದ ಪರ ಮತ್ತು ವಿರುದ್ಧವಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಇಸ್ ಬಾರ್ ಚಾರ್ ಸೌ ಪಾರ್ ಎಂಬ ಘೋಷಣೆ ಸಂಚಲನ ಮೂಡಿಸಿದ್ದು, ಬೆಟ್ಟಿಂಗ್ ಬಜಾರ್‌ನಲ್ಲಿ ಕೂಡ ಇದುವೇ ಕೇಂದ್ರ ಬಿಂದುವಾಗಿರುವುದು ವಿಶೇಷ.

ಸಟ್ಟಾ ಬಜಾರ್‌ನಲ್ಲೂ ಬಿಜೆಪಿ ಪರ ಒಲವೇ ಹೆಚ್ಚು

ಲೋಕಸಭಾ ಚುನಾವಣೆ ಶುರುವಾದ ಅಂದಿನಿಂದಲೂ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಂದು ಅವಧಿಗೆ ಕೇಂದ್ರದ ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳಲಿದೆ ಎಂಬ ಮಾತು ಸಟ್ಟಾ ಬಜಾರ್‌ನಲ್ಲಿ ಚಾಲ್ತಿಯಲ್ಲಿದೆ. ಆದಾಗ್ಯೂ ಎಷ್ಟು ಸ್ಥಾನಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಗೆಲ್ಲಲಿವೆ ಎಂಬುದು ಬೆಟ್ಟಿಂಗ್‌ಗೆ ಸಿಕ್ಕಿರುವ ಮುಖ್ಯ ವಿಷಯ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ನೇತೃತ್ವದ ಎನ್.ಡಿ.ಎ ಕೇಂದ್ರದ ಅಧಿಕಾರ ಸೂತ್ರ ಹಿಡಿಯುತ್ತದೆ ಎಂಬ ಮಾತನ್ನು ಮುಂದಿಟ್ಟುಕೊಂಡು ಸಾವಿರಾರು ಕೋಟಿ ರೂಪಾಯಿಗಳ ಬೆಟ್ಟಿಂಗ್ ನಡೆಯುತ್ತಿವೆ. ಚೆನ್ನೈ, ಮುಂಬಯಿ, ಕೋಲ್ಕತ್ತ, ದೆಹಲಿಯನ್ನು ಕೇಂದ್ರಸ್ಥಾನವಾಗಿಟ್ಟುಕೊಂಡಿರುವ ಸಟ್ಟಾ ಬಜಾರ್ ಈಗ ಚುರುಕುಗೊಂಡಿದೆ ಎಂದು ಅದೇ ಮೂಲಗಳು ತಿಳಿಸಿವೆ.

ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 309 ಸ್ಥಾನಗಳಲ್ಲಿ ಗೆಲುವು ಗಳಿಸಲಿದ್ದು, ಎನ್‌ಡಿಎ ಮೈತ್ರಿಕೂಟ 400 ಸ್ಥಾನಗಳಲ್ಲಿ ವಿಜಯಿಯಾಗಲಿದೆ. ಸಟ್ಟಾ ಬಜಾರ್ ನಲ್ಲಿ ಚಲಾವಣೆಯಾಗುತ್ತಿರುವ ಈ ಮಾತಿನ ಪರ ಮತ್ತು ವಿರುದ್ಧವಾಗಿ ಬೆಟ್ಟಿಂಗ್ ನಡೆಯುತ್ತಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವಂತೆ ದೊಡ್ಡ ಪ್ರಮಾಣದ ಹಣವನ್ನು ಪಣಕ್ಕಿಡುತ್ತಿದ್ದಾರೆ ಎಂದು ಬೆಟ್ಟಿಂಗ್‌ಗೆ ಆಹ್ವಾನ ನೀಡುತ್ತಿರುವವರು ಹೇಳುತ್ತಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಗೆ 18 ರಿಂದ 20 ಸ್ಥಾನ

ವಿವಿಧ ರಾಜ್ಯಗಳ ರಾಜಕೀಯ ಸನ್ನಿವೇಶ, ಮತದಾನ ಪರಿಸ್ಥಿತಿಯನ್ನು ಆಧರಿಸಿ ಸಟ್ಟಾ ಬಜಾರ್‌ನಲ್ಲಿ ಬೆಟ್ಟಿಂಗ್ ನಡೆಯುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಕೂಟ 18 ರಿಂದ 20 ಕ್ಷೇತ್ರಗಳನ್ನು ಗೆಲ್ಲುವುದು ನಿಶ್ಚಿತ ಎಂಬ ವಿಚಾರಕ್ಕೆ ಆದ್ಯತೆ ಸಿಕ್ಕಿದೆ. ಕರ್ನಾಟಕದಲ್ಲಿ ಮೋದಿ ಅಲೆ ಪ್ರಬಲವಾಗಿದೆ. ಅಂತೆಯೇ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬಲಿಷ್ಠವಾಗಿದೆ. ಹೀಗಾಗಿ, ಬಿಜೆಪಿ ಮೈತ್ರಿಕೂಟ 18 ರಿಂದ 20 ಸ್ಥಾನಗಳಲ್ಲಿ ಗೆದ್ದೇ ಗೆಲ್ಲಲಿದೆ ಎಂಬುದು ಸಟ್ಟಾ ಬಜಾರ್‌ನ ಮಾತು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಹದಿನೈದಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಪ್ರತಿಪಾದಿಸುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದ ನಾಯಕರು ಇಪ್ಪತ್ತಕ್ಕಿಂತ ಹೆಚ್ಚು ಸ್ಥಾನಗಳ ಗೆಲುವು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಜೂನ್ 1 ಕ್ಕೆ ಕೊನೆಯ ಹಂತದ ಮತದಾನ ನಡೆಯಲಿದೆ. ಅಂದೇ ಎಕ್ಸಿಟ್ ಪೋಲ್ ಕೂಡ ಪ್ರಕಟವಾಗಲಿದೆ. ಈಗಾಗಲೇ ದೇಶದ ಪ್ರಮುಖ ನಗರಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವ ಬೆಟ್ಟಿಂಗ್ ದಂಧೆ ದಿನ ಕಳೆದಂತೆ ಮತ್ತಷ್ಟು ಚುರುಕಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಟಿ20 ವರ್ಲ್ಡ್‌ಕಪ್ 2024